ಈ ವಾರವೂ ಅಶ್ವಿನಿಗೆ ಕಿಚ್ಚನ ಕ್ಲಾಸ್? ಜಾನ್ವಿ ಜೊತೆ ಸೇರಿ ಮಾಡಿದ್ದ ಸಂಚು ಬಯಲು

ಗೆಜ್ಜೆ ವಿವಾದದಿಂದ ಅಶ್ವಿನಿ ಗೌಡ ಮತ್ತು ಜಾನ್ವಿ ನಡುವೆ ವೈಮನಸ್ಸು ಉಂಟಾಗಿತ್ತು. ಇದರ ಹಿಂದಿನ ರಹಸ್ಯ ಬಯಲಾಗಿದೆ. ಇಬ್ಬರೂ ಜಗಳವಾಡಿದಂತೆ ನಟಿಸಲು ಡ್ರೆಸ್ಸಿಂಗ್ ರೂಂನಲ್ಲಿ ಮೈಕ್ ಇಲ್ಲದೆ ಸಂಚು ರೂಪಿಸಿದ್ದರು. ಇದೀಗ ಅಶ್ವಿನಿ ಗೌಡ ಸ್ವತಃ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಈ ನಿಯಮ ಉಲ್ಲಂಘನೆಗೆ ಸುದೀಪ್ ಅವರಿಂದ ಅಶ್ವಿನಿ ಮತ್ತು ಜಾನ್ವಿ ಇಬ್ಬರಿಗೂ ಈ ವಾರ ಕ್ಲಾಸ್ ಸಾಧ್ಯತೆ ಇದೆ.

ಈ ವಾರವೂ ಅಶ್ವಿನಿಗೆ ಕಿಚ್ಚನ ಕ್ಲಾಸ್? ಜಾನ್ವಿ ಜೊತೆ ಸೇರಿ ಮಾಡಿದ್ದ ಸಂಚು ಬಯಲು
ಬಿಗ್ ಬಾಸ್

Updated on: Nov 11, 2025 | 6:56 AM

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ (BBK 12) ಅಶ್ವಿನಿ ಗೌಡ  ಹಾಗೂ ಜಾನ್ವಿ ಒಳ್ಳೆಯ ಗೆಳೆಯರಾಗಿದ್ದರು. ಮೂರನೇ ವಾರದಲ್ಲಿ ಗೆಜ್ಜೆಯ ವಿಚಾರಕ್ಕೆ ಇಬ್ಬರೂ ಬೇರ್ಪಟ್ಟಿದ್ದು ಮೇಲ್ನೋಟಕ್ಕೆ ಕಾಣಿಸಿತ್ತು. ಈ ಸಮಯದಲ್ಲಿ ಹಾಸ್ಯ ಮಾಡಿದ್ದ ಗಿಲ್ಲಿ, ‘ಮನೆಯವರನ್ನು ಬಕ್ರಾ ಮಾಡೋಣ ಎಂದು ಇಬ್ಬರೂ ಮಾತನಾಡಿಕೊಂಡಿದ್ದಾರೆ’ ಎಂದು ಹೇಳಿದ್ದರು. ಈಗ ಅದುವೇ ನಿಜವಾಗಿದೆ. ಡ್ರೆಸ್ಸಿಂಗ್​ ರೂಂನಲ್ಲಿ ಮೈಕ್ ಇಲ್ಲದೆ ಮಾತನಾಡಿಕೊಂಡ ವಿಷಯವನ್ನು ಸ್ವತಃ ಅಶ್ವಿನಿ ರಿವೀಲ್ ಮಾಡಿದ್ದಾರೆ. ಹೀಗಾಗಿ, ಈ ವಾರವೂ ಅಶ್ವಿನಿಗೆ ಕ್ಲಾಸ್ ಮುಂದುವರಿಯೋ ಸಾಧ್ಯತೆ ಇದೆ.

ಬಿಗ್ ಬಾಸ್ ಮನೆಯಲ್ಲಿ ಮೈಕ್ ಇಲ್ಲದೆ ಏನನ್ನೂ ಹೇಳುವಂತೆ ಇಲ್ಲ. ಅದು ನಿಯಮಕ್ಕೆ ವಿರುದ್ಧವಾಗಿದೆ. ಈ ಕಾರಣದಿಂದಲೇ ಎಲ್ಲರೂ ಕಡ್ಡಾಯವಾಗಿ ಮೈಕ್ ಧರಿಸಬೇಕು. ಮೈಕ್ ಇಲ್ಲದೆ ಹೋಗಬೇಕಾದ ಜಾಗದಲ್ಲಿ ಒಬ್ಬರೇ ಹೋಗಬೇಕು ಎಂಬ ನಿಯಮ ಇದೆ. ಡ್ರೆಸ್ಸಿಂಗ್ ರೂಂಗೂ ಇದು ಅನ್ವಯ. ಆದರೆ, ಕೆಲವೊಮ್ಮೆ ಮಹಿಳೆಯರಿಗೆ ಸೀರೆ ಉಟ್ಟುಕೊಳ್ಳುವಾಗ ಸಹಾಯಕ್ಕೆ ಒಬ್ಬರು ಬೇಕಾಗುತ್ತಾರೆ. ಆಗ ಇನ್ನೊಬ್ಬರು ಹೋಗಲೇಬೇಕಾಗುತ್ತದೆ. ಈ ರೀತಿ ಹೋದಾಗ ಜಾನ್ವಿ ಹಾಗೂ ಅಶ್ವಿನಿ ಒಂದು ಸಂಚು ಮಾಡಿದ್ದರು.

ದೊಡ್ಮನೆಯಲ್ಲಿ ಗೆಜ್ಜೆ ವಿಚಾರಕ್ಕೆ ಜಗಳ ನಡೆದ ಬಳಿಕ ಇಬ್ಬರೂ ಮನೆಯವರ ಎದುರು ಮಾತು ಬಿಟ್ಟುಕೊಳ್ಳೋಣ ಎಂದಿದ್ದರಂತೆ. ಈ ಮಾತುಕತೆ ನಡೆದಿದ್ದು ಡ್ರೆಸ್ಸಿಂಗ್ ರೂಂನಲ್ಲಿ. ಆಗ ಯಾವುದೇ ಮೈಕ್ ಹಾಕಿರಲಿಲ್ಲ. ಜಾನ್ವಿ ಜೊತೆಗಿನ ವೈರತ್ವ ಹೆಚ್ಚಿದ ಬಳಿಕ ಅಶ್ವಿನಿ ಗೌಡ ಅವರು ಈ ವಿಚಾರ ರಿವೀಲ್ ಮಾಡಿದ್ದಾರೆ. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

ಇದನ್ನೂ ಓದಿ: ಆ ಒಂದು ಕಾರಣಕ್ಕೆ ಕುಗ್ಗಿಹೋದ ಚಂದ್ರಪ್ರಭ? ಬಿಗ್ ಬಾಸ್​ನಿಂದ ಹೊರ ಹೋಗಿದ್ದೇಕೆ?

ಕಳೆದ ವಾರ ಸುದೀಪ್ ಮಾತನಾಡುವಾಗ, ಗಜ್ಜೆ ಆಡಿಸಿ ರಕ್ಷಿತಾಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಜಾನ್ವಿ ಹಾಗೂ ಅಶ್ವಿನಿ ಗೌಡ ಇಬ್ಬರದ್ದೂ ತಪ್ಪಿದೆ. ಆದರೆ, ಹೆಚ್ಚು ಹೈಲೈಟ್ ಆಗಿದ್ದು ಅಶ್ವಿನಿ ಗೌಡ. ಜಾನ್ವಿ ತಪ್ಪಿಸಿಕೊಂಡರು ಎಂದಿದ್ದರು. ಈ ವಿಚಾರದಲ್ಲಿ ಅಶ್ವಿನಿ ಗೌಡ ಅವರಿಗೆ ಬೇಸರ ಉಂಟಾದಂತೆ ಇದೆ. ಈ ಕಾರಣದಿಂದ ಅವರು ಕದ್ದುಮುಚ್ಚಿ ನಡೆದ ಮಾತುಕತೆಯನ್ನು ರಿವೀಲ್ ಮಾಡಿದ್ದಾರೆ. ಈ ವಾರ ಅಶ್ವಿನಿ ಜೊತೆಗೆ ಜಾನ್ವಿಗೂ ಕ್ಲಾಸ್ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:56 am, Tue, 11 November 25