AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆ ಒಂದು ಕಾರಣಕ್ಕೆ ಕುಗ್ಗಿಹೋದ ಚಂದ್ರಪ್ರಭ? ಬಿಗ್ ಬಾಸ್​ನಿಂದ ಹೊರ ಹೋಗಿದ್ದೇಕೆ?

Chandraprabha Elimination: ಬಿಗ್ ಬಾಸ್ ಮನೆಯಿಂದ ಹೊರಹೋಗಲು ಹಾಸ್ಯನಟ ಚಂದ್ರಪ್ರಭ ನಿರ್ಧರಿಸಿದ್ದರು. ಕಾವ್ಯಾ ಹಾಗೂ ರಿಷಾ ಜೊತೆಗಿನ ಅವರ ವರ್ತನೆ ಬಗ್ಗೆ ಸುದೀಪ್ ಪ್ರಶ್ನಿಸಿದಾಗ, ಚಂದ್ರಪ್ರಭ ತೀವ್ರ ಬೇಸರಗೊಂಡರು. ‘ಊಸರವಳ್ಳಿ’ ಟ್ಯಾಗ್ ಸಿಕ್ಕಿದ್ದರಿಂದಲೂ ಅವರು ಅಸಮಾಧಾನಗೊಂಡರು. ತಾವೇ ಹೊರಹೋಗೋದಾಗಿ ಅವರು ಹೇಳಿದರು.

ಆ ಒಂದು ಕಾರಣಕ್ಕೆ ಕುಗ್ಗಿಹೋದ ಚಂದ್ರಪ್ರಭ? ಬಿಗ್ ಬಾಸ್​ನಿಂದ ಹೊರ ಹೋಗಿದ್ದೇಕೆ?
ಚಂದ್ರಪ್ರಭ
ರಾಜೇಶ್ ದುಗ್ಗುಮನೆ
|

Updated on:Nov 10, 2025 | 7:58 AM

Share

ಬಿಗ್ ಬಾಸ್ (Bigg Boss) ಮನೆಯಲ್ಲಿ ನಾನಾ ರೀತಿಯ ಎಲಿಮಿನೇಷನ್ ನಡೆದಿದೆ. ಕೆಲವು ಸ್ಪರ್ಧಿಗಳಿಗೆ ಒಂದು ಹಂತ ಆದ ಬಳಿಕ ಬಿಗ್ ಬಾಸ್ ಮನೆಯಲ್ಲಿ ಇರಲೇಬಾರದು ಎಂದು ಅನಿಸಿ ಮನೆಯಿಂದ ಹೊರ ಹೋಗುವ ನಿರ್ಧಾರಕ್ಕೆ ಬಂದು ಬಿಡುತ್ತಾರೆ. ಮನೆಯ ಒಳಗೆ ಬರೋಕೆ ಸುಲಭದಲ್ಲಿ ಬರಬಹುದು. ಆದರೆ, ಹೊರ ಹೋಗೋದು ಜನರು ಕಡಿಮೆ ವೋಟ್ ಮಾಡಿದ ವಾರವರೇ. ಆದಾಗ್ಯೂ ಹಾಸ್ಯನಟ ಚಂದ್ರಪ್ರಭ ಅವರು ದೊಡ್ಮನೆಯಿಂದ ಹೊರ ಹೋಗೋದಾಗಿ ಹೇಳಿ ಹಠ ಹಿಡಿದಿದ್ದರು. ಇದಕ್ಕೆ ಒಂದು ಘಟನೆ ಕಾರಣ ಆಯಿತಾ ಎಂಬ ಪ್ರಶ್ನೆ ಮೂಡಿದೆ.

ಕಾವ್ಯಾ ಶೈವ ಹಾಗೂ ಗಿಲ್ಲಿ ನಟನ ಗೆಳೆತನದ ಬಗ್ಗೆ ಈ ಮೊದಲು ಚಂದ್ರಪ್ರಭ ಕೆಟ್ಟದಾಗಿ ಮಾತನಾಡಿದ್ದರು. ಮಾತು ಮಿತಿಮೀರಿತ್ತು. ಈ ಪದಗಳು ಕಾವ್ಯಾಗೆ ಬೇಸರ ಮೂಡಿಸಿದ್ದವು. ಇದು ಸರಿ ಅಲ್ಲ ಎಂದು ಕಾವ್ಯಾ ಅವರು ಚಂದ್ರಪ್ರಭಗೆ ಹೇಳಿದ್ದರೂ ಅದನ್ನೂ ಕೇಳಲಿಲ್ಲ. ಶನಿವಾರ ಈ ವಿಚಾರ ಚರ್ಚೆಗೆ ಬಂದಿದೆ. ಸುದೀಪ್ ಇದನ್ನು ಚಂದ್ರಪ್ರಭ ಬಳಿ ಪ್ರಶ್ನೆ ಮಾಡಿದ್ದರು.

‘ಚಂದ್ರಪ್ರಭ ಅವರೇ ಸರಿಯಾಗಿ ಇರಬೇಕು ಎಂದು ನುಡಿಯುವ ನೀವು, ರಿಷಾ ಜೊತೆ ಇದೇ ರೀತಿ ನಡೆದುಕೊಳ್ಳುತ್ತಿದ್ದೀರಲ್ಲ’ ಎಂದು ಪ್ರಶ್ನೆ ಮಾಡಿದರು. ರಿಷಾ ಜೊತೆ ಅವರು ಹೇಗೆ ನಡೆದುಕೊಳ್ಳುತ್ತಿದ್ದಾರೆ ಎಂಬುದರ ವಿಡಿಯೋನ ಕೂಡ ಹಾಕಿದರು. ಈ ವಿಚಾರ ಚಂದ್ರಪ್ರಭಗೆ ಸಾಕಷ್ಟು ಬೇಸರ ಮೂಡಿಸಿತು. ಆ ಬಳಿಕ ಅವರು ತುಂಬಾನೇ ಸೈಲೆಂಟ್ ಆಗಿ ಬಿಟ್ಟರು.

ಭಾನುವಾರದ ಎಪಿಸೋಡ್​ನಲ್ಲೂ ಚಂದ್ರಪ್ರಭ ಅವರಿಗೆ ಊಸರವಳ್ಳಿ ರೀತಿಯ ಟ್ಯಾಗ್​ಗಳು ಸಿಕ್ಕವು. ಇದು ಅವರಿಗೆ ಬೇಸರ ಮೂಡಿಸಿದೆ. ಈ ಚಟುವಟಿಕೆ ಮುಗಿಯುತ್ತಿದ್ದಂತೆ ಬಿಗ್ ಬಾಸ್​ನ ಮುಖ್ಯದ್ವಾರದಿಂದ ಹೊರ ಹೋಗುವ ಪ್ರಯತ್ನ ಮಾಡಿದರು. ಆದರೆ, ಅದು ಸಾಧ್ಯ ಆಗಲಿಲ್ಲ.

ಇದನ್ನೂ ಓದಿ: ‘ಹೀಗೆ ಆದರೆ ಹೊರ ಹೋಗ್ತೀರಿ’; ಒಂದೇ ಎಪಿಸೋಡ್​ನಲ್ಲಿ ಗಿಲ್ಲಿಗೆ ಎರಡೆರಡು ಬಾರಿ ವಾರ್ನಿಂಗ್ ಕೊಟ್ಟ ಸುದೀಪ್

ಅಂತಿಮವಾಗಿ ಸುಧಿ ಹಾಗೂ ಚಂದ್ರಪ್ರಭ ಅವರು ಲಿಸ್ಟ್​ನಲ್ಲಿ ಇದ್ದರು. ಸುಧಿ ಅವರು ತಮ್ಮ ವಿಶೇಷ ಅಧಿಕಾರ ಸೇವ್ ಆದರೆ, ಚಂದ್ರಪ್ರಭ ಅವರು ಔಟ್ ಆದರು. ಅವರು ಈ ವಾರ ಉತ್ತಮ ಕೂಡ ಪಡೆದಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:29 am, Mon, 10 November 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ