AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಹೀಗೆ ಆದರೆ ಹೊರ ಹೋಗ್ತೀರಿ’; ಒಂದೇ ಎಪಿಸೋಡ್​ನಲ್ಲಿ ಗಿಲ್ಲಿಗೆ ಎರಡೆರಡು ಬಾರಿ ವಾರ್ನಿಂಗ್ ಕೊಟ್ಟ ಸುದೀಪ್

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಪ್ರಬಲ ಸ್ಪರ್ಧಿಯಾಗಿರುವ ಗಿಲ್ಲಿ ನಟರಿಗೆ ಸುದೀಪ್ ಭಾನುವಾರ ಪಾಠ ಹೇಳಿದ್ದಾರೆ. ಟಾಸ್ಕ್‌ನಲ್ಲಿ ಗಂಭೀರತೆ ಇಲ್ಲದಿರುವುದು ಮತ್ತು ಹೆಣ್ಣುಮಕ್ಕಳ ಖಾಸಗಿ ವಿಚಾರದಲ್ಲಿ ಹಸ್ತಕ್ಷೇಪದ ಬಗ್ಗೆ ಸುದೀಪ್ ಎಚ್ಚರಿಕೆ ನೀಡಿದ್ದಾರೆ. ಈ ತಪ್ಪುಗಳು ಮುಂದುವರಿದರೆ ಮನೆಯಿಂದ ಹೊರಹೋಗುವ ಸಾಧ್ಯತೆಯನ್ನೂ ಸೂಚಿಸಿದ್ದಾರೆ.

‘ಹೀಗೆ ಆದರೆ ಹೊರ ಹೋಗ್ತೀರಿ’; ಒಂದೇ ಎಪಿಸೋಡ್​ನಲ್ಲಿ ಗಿಲ್ಲಿಗೆ ಎರಡೆರಡು ಬಾರಿ ವಾರ್ನಿಂಗ್ ಕೊಟ್ಟ ಸುದೀಪ್
ಗಿಲ್ಲಿ-ಸುದೀಪ್
ರಾಜೇಶ್ ದುಗ್ಗುಮನೆ
|

Updated on: Nov 10, 2025 | 7:02 AM

Share

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಗೆಲ್ಲುವ ಕುದುರೆಯಾಗಿ ಗಿಲ್ಲಿ ನಟ ಕಾಣಿಸಿಕೊಂಡಿದ್ದಾರೆ. ಅವರು ರೇಸ್​ನಲ್ಲಿ ಮುಂಚೂಣಿಯಲ್ಲಿ ಇದ್ದಾರೆ. ಅವರು ಇಷ್ಟು ದಿನಗಳ ಕಾಲ ಸುದೀಪ್ ಅವರಿಂದ ಭೇಷ್ ಎನಿಸಿಕೊಳ್ಳುತ್ತಿದ್ದರು.  ಅವರಿಗೆ ಕಿಚ್ಚನ ಚಪ್ಪಾಳೆಯೂ ಸಿಕ್ಕಿದೆ. ಆದರೆ, ಈ ವಾರ ಅವರು ಸುದೀಪ್ ಕೈಯಿಂದ ಪಾಠ ಹೇಳಿಸಿಕೊಂಡಿದ್ದಾರೆ. ಈ ಮಧ್ಯೆ ಆಟ ಹೀಗೆಯೇ ಮುಂದುವರಿದರೆ ನೀವು ಮನೆಯಿಂದ ಹೊರ ಹೊಗೋದು ಪಕ್ಕಾ ಎಂಬ ಎಚ್ಚರಿಕೆಯೂ ಅವರಿಗೆ ಸಿಕ್ಕಿದೆ.

ಆಟದಲ್ಲಿ ಇಲ್ಲ ಗಂಭೀರತೆ

ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಅವರು ಯಾವಾಗಲೂ ಫನ್ ಮಾಡುತ್ತಾ ಇರುತ್ತಾರೆ. ಟಾಸ್ಕ್ ಆಡುವಾಗ ಕೆಲವು ನಿಯಮಗಳನ್ನು ಮುರಿದು ಫನ್ ಮಾಡಲು ಹೊಗಿದ್ದರು ಗಿಲ್ಲಿ. ಅಲ್ಲದೆ, ಅವರ ತಪ್ಪಿನಿಂದ ಇಡೀ ತಂಡ ತೊಂದರೆ ಅನುಭವಿಸಬೇಕಾಯಿತು. ಹೀಗಾಗಿ, ಸುದೀಪ್ ಅವರು ಈ ಬಗ್ಗೆ ಎಚ್ಚರಿಸಿದರು. ಈ ತಪ್ಪು ಮುಂದುವರಿದರೆ ನೀವು ಶೀಘ್ರವೇ ವೇದಿಕೆ ಮೇಲೆ ಇರ್ತೀರಾ ಎಂದು ಎಚ್ಚರಿಸಿದರು. ಮುಂದಿನ ದಿನಗಳಲ್ಲಿ ಟಾಸ್ಕ್​ನ ಗಂಭಿರವಾಗಿ ಆಡುವಂತೆ ಸೂಚಿಸಿದರು.

ಬಟ್ಟೆ ಮುಟ್ಟಿದ್ದಕ್ಕೆ ಎಚ್ಚರಿಕೆ

ಹೆಣ್ಣುಮಕ್ಕಳ ಬಟ್ಟೆ ಮುಟ್ಟಿದ ವಿಚಾರದಲ್ಲೂ ಸುದೀಪ್ ಅವರು ಗಿಲ್ಲಿಗೆ ಎಚ್ಚರಿಕೆ ನೀಡಿದ್ದಾರೆ. ಗಿಲ್ಲಿ ನಟ ಅವರು ರಿಷಾ ನೀರು ಕೊಟ್ಟಿಲ್ಲ ಎಂಬ ಕಾರಣಕ್ಕೆ ಅವರ ಬಟ್ಟೆಯನ್ನು ತೆಗೆದುಕೊಂಡು ಹೋಗಿ ಬಾತ್​​ರೂಂ ಹೊರ ಭಾಗದಲ್ಲಿ ಇಟ್ಟಿದ್ದರು. ಇದರಿಂದ ಸಿಟ್ಟಾದ ರಿಷಾ ಅವರು ಗಿಲ್ಲಿಗೆ ಹೊಡೆದಿದ್ದರು. ರಿಷಾ ಮಾಡಿದ್ದು ಹೇಗೆ ತಪ್ಪೋ, ಗಿಲ್ಲಿ ಮಾಡಿದ್ದು ಕೂಡ ತಪ್ಪೇ ಎಂದರು ಸುದೀಪ್.

ಇದನ್ನೂ ಓದಿ: ನಾನು ಹೇಳಿದ್ದೇ ಹೌದಾದ್ರೆ ಬಿಗ್ ಬಾಸ್​ನಿಂದ ಹೋಗ್ತೀನಿ ಎಂದ ಅಶ್ವಿನಿ; ವಿಟಿ ತೋರಿಸಿದಮೇಲೆ ಗಪ್ ಚುಪ್

‘ನಮ್ಮ ಮನೆಯಲ್ಲಿ ನಾವು ಹೆಣ್ಣುಮಕ್ಕಳ ಬಟ್ಟೆ ಮುಟ್ಟೋಕೆ ಹೋಗೋದಿಲ್ಲ. ಅದು ಅವರ ಖಾಸಗಿ ವಿಚಾರ. ಅದನ್ನು ಮುಟ್ಟುವ ಅಧಿಕಾರ ನಮಗೆ ಇರೋದಿಲ್ಲ’ ಎಂದು ಸುದೀಪ್ ಅವರು ಗಿಲ್ಲಿಗೆ ಹೇಳಿದರು. ಇದು ಕಾಳಜಿಯಿಂದ ನಿಮಗೆ ಹೇಳುತ್ತಿರಿವುದು ಎಂದರು ಕಿಚ್ಚ. ಆ ಬಳಿಕ ಗಿಲ್ಲಿ ಅವರು ಈ ವಿಚಾರವನ್ನು ತಿದ್ದಿಕೊಳ್ಳೋದಾಗಿ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್