ಗಿಲ್ಲಿ ಮೇಲೆ ಕೈ ಮಾಡಿದ ರಿಶಾ ಭವಿಷ್ಯ ನಿರ್ಧರಿಸಿದ ಮನೆ ಮಂದಿ: ಹೊರಗಾ-ಒಳಗಾ?
Bigg Boss Kannada 12: ಬಿಗ್ಬಾಸ್ ಮನೆಯಲ್ಲಿ ಯಾವುದೇ ಸ್ಪರ್ಧಿ ಮತ್ತೊಬ್ಬ ಸ್ಪರ್ಧಿಯ ಮೇಲೆ ಗಂಭೀರವಾಗಿ ಕೈ ಮಾಡಿದರೆ ಅವರನ್ನು ನಿರ್ದಯವವಾಗಿ ಹೊರಗೆ ಹಾಕಲಾಗುತ್ತದೆ. ಲಾಯರ್ ಜಗದೀಶ್ ಸ್ಪರ್ಧಿಯಾಗಿ ಹೋಗಿದ್ದಾಗ ಇದೇ ಕಾರಣಕ್ಕೆ ಕೆಲವರು ಹೊರಗೆ ಹಾಕಲಾಗಿತ್ತು. ಈ ಬಾರಿ ಸ್ಪರ್ಧಿ ರಿಶಾ ಅವರು ಗಿಲ್ಲಿ ಮೇಲೆ ಕೈ ಮಾಡಿದ್ದರು. ಈ ಬಗ್ಗೆ ಸುದೀಪ್ ವಿಚಾರಣೆ ನಡೆಸಿದರು. ರಿಶಾ ಅನ್ನು ಹೊರ ಹಾಕಲಾಯ್ತೆ ಇಲ್ಲವೇ?

ಬಿಗ್ಬಾಸ್ (Bigg Boss) ಮನೆಯಲ್ಲಿ ಕೆಲವು ನಿಯಮಗಳನ್ನು ಬಲು ಕಟ್ಟು ನಿಟ್ಟಾಗಿ ಪಾಲನೆ ಮಾಡಲಾಗುತ್ತದೆ. ಅದರಲ್ಲೂ ಯಾವುದೇ ಸ್ಪರ್ಧಿ ಮತ್ತೊಬ್ಬ ಸ್ಪರ್ಧಿಯ ಮೇಲೆ ಗಂಭೀರವಾಗಿ ಕೈ ಮಾಡಿದರೆ ಅವರನ್ನು ನಿರ್ದಯವವಾಗಿ ಹೊರಗೆ ಹಾಕಲಾಗುತ್ತದೆ. ಲಾಯರ್ ಜಗದೀಶ್ ಸ್ಪರ್ಧಿಯಾಗಿ ಹೋಗಿದ್ದಾಗ ಇದೇ ಕಾರಣಕ್ಕೆ ಕೆಲವರು ಹೊರಗೆ ಹಾಕಲಾಗಿತ್ತು. ಈ ಬಾರಿ ಸ್ಪರ್ಧಿ ರಿಶಾ ಅವರು ಗಿಲ್ಲಿ ಮೇಲೆ ಕೈ ಮಾಡಿದ್ದರು. ಒಂದು ಬಾರಿಯಲ್ಲ ಎರಡೆರಡು ಬಾರಿ. ಆದರೆ ರಿಶಾ ಅನ್ನು ಹೊರಗೆ ಹಾಕಿರಲಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಸಹ ನಡೆಯಿತು. ಇದೀಗ ಕೊನೆಗೂ ಸುದೀಪ್ ಅವರು ಆ ವಿಷಯವಾಗಿ ಚರ್ಚೆ ಮಾಡಿದ್ದಾರೆ.
ಈ ವಿಷಯವನ್ನು ಸುದೀಪ್ ಅವರೇ ಚರ್ಚೆ ಮಾಡುತ್ತಾರೆ ಎಂದು ವಾಹಿನಿಯವರೇ ಹೇಳಿದ್ದರು. ಅದರಂತೆ ಸುದೀಪ್ ಅವರು ಶನಿವಾರದ ಎಪಿಸೋಡ್ನಲ್ಲಿ ರಿಶಾ ಮತ್ತು ಗಿಲ್ಲಿ ನಡುವೆ ನಡೆದ ಗಲಾಟೆಯ ವಿಡಿಯೋ ತೋರಿಸಿ ಭಾನುವಾರ ಈ ವಿಷಯವನ್ನೇ ಮುಖ್ಯವಾಗಿ ಚರ್ಚಿಸಲಿದ್ದೇನೆ ಎಂದರು. ಅದರಂತೆ ಸುದೀಪ್ ಅವರು ಈ ವಿಷಯ ಚರ್ಚೆ ಮಾಡಿದರು. ರಿಶಾ ಅವರನ್ನು ಮಾತ್ರವಲ್ಲ, ಇಡೀ ಮನೆಯನ್ನು ತರಾಟೆಗೆ ತೆಗೆದುಕೊಂಡ ಸುದೀಪ್, ‘ಈ ಮನೆಯಲ್ಲಿ ಪರಸ್ಪರ ಹೊಡೆದು ಮಾತನಾಡುವುದು, ಏಕವಚನದಲ್ಲಿ ಮಾತನಾಡುವುದು ಬಹಳ ಸಾಮಾನ್ಯ ಎಂಬಂತೆ ಆಗಿಬಿಟ್ಟಿದೆ. ಗಂಭೀರವಾಗಿ ಒಬ್ಬರ ಮೇಲೆ ಹಲ್ಲೆ ಮಾಡಿದ ವಿಷಯವೂ ಸಹ ತಮಾಷೆಯಂತೆ ತೇಲಿ ಹೋಗಿದೆ’ ಎಂದರು.
ಇದನ್ನೂ ಓದಿ:ಬಿಗ್ಬಾಸ್ ಮನೆಯಿಂದ ಹೊರ ನಡೆದ ಚಂದ್ರಪ್ರಭ: ವಿಡಿಯೋ ನೋಡಿ
ಗಿಲ್ಲಿ ಮೇಲೆ ಕೈ ಮಾಡಿದ ರಿಶಾ ಅವರನ್ನು ಉಳಿಸಿಕೊಳ್ಳುವ ಅಥವಾ ಹೊರಗೆ ಕಳಿಸುವ ಅಧಿಕಾರವನ್ನು ಸುದೀಪ್ ಅವರು ಮನೆಯ ಸ್ಪರ್ಧಿಗಳಿಗೆ ನೀಡಿದರು. ಪ್ರತಿಯೊಬ್ಬರನ್ನೂ ಪ್ರತ್ಯೇಕವಾಗಿ ಸೀಕ್ರೆಟ್ ರೂಂಗೆ ಕರೆದ ಸುದೀಪ್ ಅಲ್ಲಿ, ಸ್ಪರ್ಧಿಗಳಿಗೆ ಎರಡು ಆಯ್ಕೆ ನೀಡಿದರು. ಕೆಂಪು ಹಾಗೂ ಹಳದಿ ಕಾರ್ಡುಗಳನ್ನು ಸ್ಪರ್ಧಿಗಳ ಮುಂದೆ ಇರಿಸಿ, ರಿಶಾಗೆ ಎಚ್ಚರಿಕೆ ಕೊಟ್ಟು ಉಳಿಸಿಕೊಳ್ಳಬೇಕು ಎಂದಾದರೆ ಹಳದಿ ಕಾರ್ಡ್ ತೋರಿಸುವುದು, ರಿಶಾ ಅವರನ್ನು ಮನೆಯಿಂದ ಹೊರಗೆ ಕಳಿಸಬೇಕು ಎಂದಾದರೆ ಕೆಂಪು ಕಾರ್ಡ್ ತೋರಿಸುವ ಆಯ್ಕೆಯನ್ನು ನೀಡಲಾಗಿತ್ತು.
ಅದರಂತೆ ಪ್ರಸ್ತುತ ಮನೆಯ ಕ್ಯಾಪ್ಟನ್ ಮಾಳು ಒಬ್ಬರನ್ನು ಹೊರತುಪಡಿಸಿ ಇನ್ನೆಲ್ಲರೂ ಸಹ ಹಳದಿ ಕಾರ್ಡ್ ತೋರಿಸಿ ರಿಶಾಗೆ ಇನ್ನೊಂದು ಅವಕಾಶ ಕೊಡಬೇಕು ಎಂದರು. ಸ್ವತಃ ಏಟು ತಿಂದ ಗಿಲ್ಲಿ ನಟ ಸಹ ರಿಶಾಗೆ ಇನ್ನೊಂದು ಅವಕಾಶ ಕೊಡಬೇಕು ಎಂದರು. ಅಂತಿಮವಾಗಿ ಸುದೀಪ್ ಅವರು ರಿಶಾ ಅವರಿಗೆ ಎಚ್ಚರಿಕೆ ಮತ್ತು ಶಿಕ್ಷೆ ನೀಡಿ ರಿಶಾ ಅನ್ನು ಮನೆಯಲ್ಲಿ ಉಳಿಸಿಕೊಂಡರು. ಶಿಕ್ಷೆಯಾಗಿ ನೇರವಾಗಿ ರಿಶಾ ಅನ್ನು ನಾಮಿನೇಟ್ ಮಾಡಿದ ಜೊತೆಗೆ ಒಂದು ದಿನ ಜೈಲು ಶಿಕ್ಷೆಯನ್ನು ಸಹ ವಿಧಿಸಿದರು. ರಿಶಾ ಸಹ ಎಲ್ಲರೆದುರು ಕಣ್ಣೀರು ಹಾಕುತ್ತಾ, ಗಿಲ್ಲಿಗೆ ಮತ್ತೊಮ್ಮೆ ಕ್ಷಮೆ ಸಹ ಕೇಳಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




