AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು ಹೇಳಿದ್ದೇ ಹೌದಾದ್ರೆ ಬಿಗ್ ಬಾಸ್​ನಿಂದ ಹೋಗ್ತೀನಿ ಎಂದ ಅಶ್ವಿನಿ; ವಿಟಿ ತೋರಿಸಿದಮೇಲೆ ಗಪ್ ಚುಪ್

ಬಿಗ್ ಬಾಸ್ ಮನೆಯಲ್ಲಿ ಲೆಟರ್ ಬಂದಿತ್ತು. ರಾಶಿಕಾ ಹಾಗೂ ರಕ್ಷಿತಾ ಮಧ್ಯೆ ಒಬ್ಬರಿಗೆ ಈ ಲೆಟರ್ ಸೇರಬೇಕಿತ್ತು. ಈ ಲೆಟರ್ ಯಾರಿಗೆ ನೀಡಬೇಕು ಎಂಬ ವಿಚಾರ ಬಂದಾಗ ಅಶ್ವಿನಿ ಗೌಡ ಅವರು ವೈಯಕ್ತಿಕವಾಗಿ ತೆಗೆದುಕೊಂಡು, ರಕ್ಷಿತಾಗೆ ಲೆಟರ್ ಸಿಗಲೇಬಾರದು ಎಂದು ವಾದಿಸಿದ್ದರು. ಆದರೆ, ಇದನ್ನು ಅಶ್ವಿನಿ ಅವರು ಒಪ್ಪಲೇ ಇಲ್ಲ.

ನಾನು ಹೇಳಿದ್ದೇ ಹೌದಾದ್ರೆ ಬಿಗ್ ಬಾಸ್​ನಿಂದ ಹೋಗ್ತೀನಿ ಎಂದ ಅಶ್ವಿನಿ; ವಿಟಿ ತೋರಿಸಿದಮೇಲೆ ಗಪ್ ಚುಪ್
Ashwini - Sudeep
 ಶ್ರೀಲಕ್ಷ್ಮೀ ಎಚ್
| Edited By: |

Updated on: Nov 09, 2025 | 9:55 AM

Share

‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಈ ವಾರದ ವೀಕೆಂಡ್ ಎಪಿಸೋಡ್​ನಲ್ಲಿ ಸುದೀಪ್ ಅವರು ಅನೇಕ ವಿಚಾರಗಳ ಬಗ್ಗೆ ಮಾತನಾಡಿದರು ಮತ್ತು ಪ್ರತಿ ವಿಷಯದಲ್ಲಿ ಅಶ್ವಿನಿ ಗೌಡ ಅವರು ಇದ್ದೇ ಇರುತ್ತಿದ್ದರು. ಅಶ್ವಿನಿ ಗೌಡ ಅವರಿಗೆ ಪಾಠ ಹೇಳುವಾಗ ಸುದೀಪ್ ಅವರು ಸುಸ್ತಾಗಿ ಹೋದರು. ಈ ವೇಳೆ ಅಶ್ವಿನಿ ಗೌಡ ಅವರು ತಾವು ಹೇಳಿದ್ದೊಂದನ್ನು ಹೇಳೇ ಇಲ್ಲ ಎಂದು ವಾದಿಸುತ್ತಾ ಬಂದರು. ಆಗ ಸುದೀಪ್ ವಿಟಿ ತೋರಿಸಿದರು. ಆ ಬಳಿಕ ಅಶ್ವಿನಿ ಗಪ್ ಚುಪ್ ಆದರು.

ಬಿಗ್ ಬಾಸ್ ಮನೆಯಲ್ಲಿ ಲೆಟರ್ ಬಂದಿತ್ತು. ರಾಶಿಕಾ ಹಾಗೂ ರಕ್ಷಿತಾ ಮಧ್ಯೆ ಒಬ್ಬರಿಗೆ ಈ ಲೆಟರ್ ಸೇರಬೇಕಿತ್ತು. ಈ ಲೆಟರ್ ಯಾರಿಗೆ ನೀಡಬೇಕು ಎಂಬ ವಿಚಾರ ಬಂದಾಗ ಅಶ್ವಿನಿ ಗೌಡ ಅವರು ವೈಯಕ್ತಿಕವಾಗಿ ತೆಗೆದುಕೊಂಡು, ರಕ್ಷಿತಾಗೆ ಲೆಟರ್ ಸಿಗಲೇಬಾರದು ಎಂದು ವಾದಿಸಿದ್ದರು. ಆದರೆ, ಇದನ್ನು ಅಶ್ವಿನಿ ಅವರು ಒಪ್ಪಲೇ ಇಲ್ಲ. ಈ ವಿಚಾರವನ್ನು ಸೂರಜ್ ಪ್ರಸ್ತಾಪಿಸಿದರು.

‘ನನ್ಯ ವ್ಯಕ್ತಿತ್ವಕ್ಕೆ ರಕ್ಷಿತಾ ಮಸಿ ಬಳಿದಿದ್ದಾಳೆ. ಹೀಗಾಗಿ, ಅವಳಿಗೆ ಈ ಪತ್ರ ಸಿಗಲೇಬಾರದು ಎಂದು ಎಲ್ಲರ ಎದುರು ಅಶ್ವಿನಿ ಹೇಳಿದ್ದರು. ಇದಕ್ಕಾಗಿ ರಕ್ಷಿತಾಗೆ ಲೆಟರ್ ಕೈ ತಪ್ಪಿದೆ’ ಎಂದು ಸೂರಜ್ ಹೇಳಿದರು. ಆದರೆ, ಇದನ್ನು ಕೇಳುವ ಸ್ಥಿತಿಯಲ್ಲಿ ಅಶ್ವಿನಿ ಇರಲೇ ಇಲ್ಲ. ‘ನಾನು ಆ ರೀತಿ ಹೇಳೇ ಇಲ್ಲ. ಬೇಕಿದ್ದರೆ ವಿಡಿಯೋ ಹಾಕಿ. ಅದು ನಿಜವಾಗಿದ್ದರೆ ನಾನು ಇಲ್ಲಿಂದ ಹೊರಟು ಹೋಗುತ್ತೇನೆ’ ಎಂದು ವಾದಿಸಿದರು.

ಇದನ್ನೂ ಓದಿ: ರಕ್ಷಿತಾ ಶೆಟ್ಟಿಗೆ ವಿಶೇಷ ಅಧಿಕಾರ ಕೊಟ್ಟ ಸುದೀಪ್

ಆ ಬಳಿಕ ಸುದೀಪ್ ವಿಡಿಯೋ ಹಾಕುವಂತೆ ಹೇಳಿದರು. ಆದರೆ, ಅಲ್ಲಿ ವಿಡಿಯೋದಲ್ಲಿ ಅಶ್ವಿನಿ ಹಾಗೆಯೇ ಹೇಳಿದರು. ಮನೆಯಿಂದ ಹೊರ ಹೋಗ್ತೀನಿ ಎಂದು ಹೇಳಿದ್ದ ಅಶ್ವಿನಿ ಗೌಡ ಅವರು ಆ ಬಳಿಕ ಸೈಲೆಂಟ್ ಆದರು. ನಂತರ ಸುದೀಪ್ ಪ್ರಶ್ನೆ ಮಾಡಿದಾಗ, ‘ನಾನು ಉದ್ದೇಶಪೂರ್ವಕವಾಗಿಯೇ ಹಾಗೆ ಮಾಡಿದ್ದು’ ಎಂದರು. ನಾನು ಮೊದಲು ಕೇಳಿದಾಗಲೇ ಈ ಮಾತನ್ನು ಹೇಳಿದ್ದರೆ ನಾನು ಚಪ್ಪಾಳೆ ಹೊಡೆಯುತ್ತಿದ್ದೆ ಎಂದರು ಸುದೀಪ್. ಮನೆಯಿಂದ ಹೋಗ್ತೀನಿ ಎಂದವರು ನಂತರ ಸುಮ್ಮನಾದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್