ರಕ್ಷಿತಾ ಬೆಕ್ಕಿನ ರೀತಿ ಇದ್ರು, ಹುಲಿ ಮಾಡಿದ್ದು ನೀವು ಎಂದು ಅಶ್ವಿನಿಗೆ ಹೇಳಿದ ಸುದೀಪ್
ಅಶ್ವಿನಿ ಗೌಡ ಅವರು ಮೂರನೇ ವಾರದಿಂದ ಪದೇ ಪದೇ ರಕ್ಷಿತಾನ ಕೆಣಕಿದರು. ಆರಂಭದಲ್ಲಿ ಇದನ್ನು ತಡೆದುಕೊಂಡಿದ್ದ ರಕ್ಷಿತಾ ಅವರು ನಂತರ ಸಿಟ್ಟಾಗಿ ಅಶ್ವಿನಿ ವಿರುದ್ಧ ತಿರುಗಿಬಿದ್ದರು. ಇಬ್ಬರ ಮಧ್ಯೆ ಆ ಬಿಸಿ ಈಗಲೂ ಇದೆ. ಅಶ್ವಿನಿ ಗೌಡ ಹಾಗೂ ರಕ್ಷಿತಾ ಮಧ್ಯೆ ಕಿತ್ತಾಟ ಈಗಲೂ ಮುಂದುವರಿದಿದೆ. ಈ ವಿಚಾರವನ್ನು ಸುದೀಪ್ ಪ್ರಸ್ತಾಪ ಮಾಡಿದರು

‘ಬಿಗ್ ಬಾಸ್ ಕನ್ನಡ ಸೀಸನ್ 12’ರ (BBk 12) ಹೋಸ್ಟ್ ಸುದೀಪ್ ಅವರು ನೇರ ಮಾತುಗಳಲ್ಲಿ ಎಲ್ಲವನ್ನೂ ಹೇಳುತ್ತಾರೆ. ಸುದೀಪ್ ವೇದಿಕೆ ಮೇಲೆ ಬಂದಾಗ ಅವರು ಮಾತನಾಡುವುದನ್ನು ನೋಡಲು ಎಲ್ಲರೂ ಕಾಯುತ್ತಾರೆ. ಈಗ ಸುದೀಪ್ ಅವರು ಅಶ್ವಿನಿ ಗೌಡ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಪದೇ ಪದೇ ರಕ್ಷಿತಾನ ಕೆಣಕಿ ಅವರು ರೌದ್ರಾವತಾರ ತಾಳುವಂತೆ ಮಾಡಿದ್ದು ಇದೇ ಅಶ್ವಿನಿ ಅವರು. ಹೀಗಾಗಿ, ಅವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡರು.
ಅಶ್ವಿನಿ ಗೌಡ ಅವರು ಮೂರನೇ ವಾರದಿಂದ ಪದೇ ಪದೇ ರಕ್ಷಿತಾನ ಕೆಣಕಿದರು. ಆರಂಭದಲ್ಲಿ ಇದನ್ನು ತಡೆದುಕೊಂಡಿದ್ದ ರಕ್ಷಿತಾ ಅವರು ನಂತರ ಸಿಟ್ಟಾಗಿ ಅಶ್ವಿನಿ ವಿರುದ್ಧ ತಿರುಗಿಬಿದ್ದರು. ಇಬ್ಬರ ಮಧ್ಯೆ ಆ ಬಿಸಿ ಈಗಲೂ ಇದೆ. ಅಶ್ವಿನಿ ಗೌಡ ಹಾಗೂ ರಕ್ಷಿತಾ ಮಧ್ಯೆ ಕಿತ್ತಾಟ ಈಗಲೂ ಮುಂದುವರಿದಿದೆ. ಈ ವಿಚಾರವನ್ನು ಸುದೀಪ್ ಪ್ರಸ್ತಾಪ ಮಾಡಿದರು ಮತ್ತು ಈ ಪರಿಸ್ಥಿತಿಗೆ ಅಶ್ವಿನಿ ಗೌಡ ಅವರೇ ಕಾರಣ ಎಂದು ವಿವರಿಸಿದರು.
‘ವಯಸ್ಸಿನಲ್ಲಿ ನಿಮಗಿಂತ ಸುಮಾರು 15 ವರ್ಷ ಸಣ್ಣವರಮೇಲೆ ಮುಗಿಬಿದ್ದಿದ್ದೀರಿ. ಹಾಸ್ಯ ಮಾಡಬೇಕು ಎಂದು ಶುರು ಮಾಡಿದ್ದು ನೀವು. ನಂತರ ಅದು ಗಂಭೀರ ಸ್ವರೂಪ ಪಡೆದುಕೊಂಡಿತು. ಇದಕ್ಕೆ ಕಾರಣ ಆದವರು ನೀವೇ. ಹೀಗಿರುವಾಗ ಅದನ್ನು ನೀವೇ ನಿಲ್ಲಿಸಬೇಕಿತ್ತು. ಆದರೆ, ಆ ರೀತಿ ಮಾಡಲೇ ಇಲ್ಲ. ನಿರಂತರವಾಗಿ ಇದನ್ನು ಮುಂದುವರಿಸಿದಿರಿ’ ಎಂದು ಸುದೀಪ್ ಅವರು ಹೇಳಿದರು.
ಇದನ್ನೂ ಓದಿ: ರಕ್ಷಿತಾ ಶೆಟ್ಟಿಗೆ ವಿಶೇಷ ಅಧಿಕಾರ ಕೊಟ್ಟ ಸುದೀಪ್
‘ಒಂದು ಬೆಕ್ಕು ಏನು ಮಾಡಲ್ಲ ಎಂದು ಅದರ ಮೇಲೆ ತಮಾಷೆ ಮಾಡಲು ಹೋದಂತೆ ಕಂಡಿತು. ಒಂದು, ಎರಡು ಎಂದು ಹೋಗಿ ಕೌಂಟ್ ಜಾಸ್ತಿ ಆಗಿ ಅದಕ್ಕೂ ತಡೆದುಕೊಳ್ಳಲು ಆಗಲಿಲ್ಲ. ಬೆಕ್ಕಿಗೆ ಗೊತ್ತಿರೋದು ಏನು? ಪಂಜು ಎತ್ತೋದು, ಹೊಡೆಯೋದು. ರಕ್ಷಿತಾ ಮಾಡಿದ್ದೂ ಅದನ್ನೇ. ಅದು ಬೆಕ್ಕೇ. ಆದರೆ, ಪದೇ ಪದೇ ಈ ರೀತಿ ಆದಾಗ ಅದು ಹುಲಿ ರೀತಿ ಕಾಣಿಸುತ್ತದೆ’ ಎಂದರು ಸುದೀಪ್. ಇದು ಎಲ್ಲರಿಗೂ ಹೌದು ಎನಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



