ಬಿಗ್ಬಾಸ್ ಎಲಿಮಿನೇಷನ್: ವಿಶೇಷ ಅಧಿಕಾರ ಬಳಸಿದ ಸುಧಿ, ಹೊರಬಂದಿದ್ದು ಯಾರು?
Bigg Boss Kannada 12: ಪ್ರತಿ ಭಾನುವಾರ ಬಿಗ್ಬಾಸ್ ಮನೆಯಿಂದ ಒಬ್ಬರು ಹೊರ ಹೋಗುತ್ತಾರೆ. ಕಳೆದ ಭಾನುವಾರ ಮಲ್ಲಮ್ಮ ಎಲಿಮಿನೇಟ್ ಆಗಿ ಹೊರಬಂದಿದ್ದರು. ಮಲ್ಲಮ್ಮ ಹೊರಗೆ ಬಂದಿದ್ದು ಹಲವು ವೀಕ್ಷಕರಿಗೆ ಬೇಸರ ತರಿಸಿತ್ತು. ಅದರಿಂದ ಸಾವರಿಸಿಕೊಳ್ಳುವ ಮುಂಚೆಯೇ ಇದೀಗ ಮತ್ತೊಂದು ಎಲಿಮಿನೇಷನ್ ಬಿಗ್ಬಾಸ್ ಮನೆಯಲ್ಲಿ ಆಗಿದೆ. ಆದರೆ ಈ ಬಾರಿಯ ಎಲಿಮಿನೇಷನ್ಗೆ ಸಖತ್ ಟ್ವಿಸ್ಟ್ ಸಹ ಇತ್ತು ಎಂಬುದು ವಿಶೇಷ.

ಬಿಗ್ಬಾಸ್ ಕನ್ನಡ ಸೀಸನ್ 12ರಲ್ಲಿ (Bigg Boss Kannada) ಕಳೆದ ಭಾನುವಾರದ ಎಪಿಸೋಡ್ನಲ್ಲಿ ಮಲ್ಲಮ್ಮ ಎಲಿಮಿನೇಟ್ ಆಗಿ ಹೊರಬಂದಿದ್ದರು. ಮಲ್ಲಮ್ಮ ಹೊರಗೆ ಬಂದಿದ್ದು ಹಲವು ವೀಕ್ಷಕರಿಗೆ ಬೇಸರ ತರಿಸಿತ್ತು. ಅದರಿಂದ ಸಾವರಿಸಿಕೊಳ್ಳುವ ಮುಂಚೆಯೇ ಇದೀಗ ಮತ್ತೊಂದು ಎಲಿಮಿನೇಷನ್ ಬಿಗ್ಬಾಸ್ ಮನೆಯಲ್ಲಿ ಆಗಿದೆ. ಆದರೆ ಈ ಬಾರಿಯ ಎಲಿಮಿನೇಷನ್ಗೆ ಸಖತ್ ಟ್ವಿಸ್ಟ್ ಸಹ ಇತ್ತು ಎಂಬುದು ವಿಶೇಷ.
ಈ ವಾರ ನಾಮಿನೇಟ್ ಆದವರಲ್ಲಿ ಅಶ್ವಿನಿ, ರಕ್ಷಿತಾ ಇನ್ನೂ ಕೆಲವರು ನಿನ್ನೆಯ ಎಪಿಸೋಡಿನಲ್ಲೇ ಪಾರಾಗಿದ್ದರು. ಭಾನುವಾರದ ಎಪಿಸೋಡ್ನಲ್ಲಿ ಸ್ಪಂದನ, ಧನುಶ್, ರಾಶಿಕಾ ಇನ್ನೂ ಕೆಲವರು ಸೇಫ್ ಆದರು. ಕೊನೆಯದಾಗಿ ಕಾಕ್ರೂಚ್ ಸುಧಿ ಮತ್ತು ಚಂದ್ರಪ್ರಭ ಉಳಿದುಕೊಂಡರು. ಆ ಸಮಯದಲ್ಲಿ ಕಾಕ್ರೂಚ್ ಸುಧಿ ತಮ್ಮಲ್ಲಿದ್ದ ವಿಶೇಷ ಅಧಿಕಾರ ಬಳಸಿದರು. ಆ ಅಧಿಕಾರ ಬಳಸುವ ಮೂಲಕ ಬಿಗ್ಬಾಸ್ ಮನೆಯಲ್ಲೇ ಉಳಿದುಕೊಂಡರು. ಚಂದ್ರಪ್ರಭಾ ಅವರು ಮತಗಳ ಲೆಕ್ಕಾಚಾರವಿಲ್ಲದೆ ಹೊರಗೆ ಬರಲೇ ಬೇಕಾಯ್ತು.
ಅಸಲಿಗೆ ಚಂದ್ರಪ್ರಭ ಅವರಿಗೂ ಸಹ ಅದೇ ಬೇಕಿತ್ತು. ಚಂದ್ರಪ್ರಭ ಅವರು ಬಿಗ್ಬಾಸ್ ಮನೆಯಿಂದ ಹೊರಗೆ ಬರಬೇಕೆಂದು ಮೊದಲೇ ನಿಶ್ಚಯ ಮಾಡಿದ್ದರು. ವಾರದ ಪಂಚಾಯಿತಿ ನಡೆಯುವ ಸಂದರ್ಭದಲ್ಲಿ ಬ್ರೆಕ್ ಬಿಟ್ಟಾಗ ಚಂದ್ರಪ್ರಭಾ ಅವರು ಯಾರಿಗೂ ಹೇಳದೆ ಬಿಗ್ಬಾಸ್ ಮನೆಯಿಂದ ಹೊರಗೆ ಹೋಗುವ ಪ್ರಯತ್ನ ಸಹ ಮಾಡಿದ್ದರು. ಬಿಗ್ಬಾಸ್ ಬಾಗಿಲು ತೆರೆದು, ಗೇಟು ಡೋರನ್ನು ಬಡಿಯುತ್ತಾ ಬಾಗಿಲು ತೆಗೆಯುವಂತೆ ಕೇಳಿ ಕೊಳ್ಳುತ್ತಿದ್ದರು. ಗಿಲ್ಲಿ ಸೇರಿದಂತೆ ಇನ್ನೂ ಕೆಲವರು ಹೋಗಿ ಅವರನ್ನು ಮತ್ತೆ ಒಳಗೆ ಕರೆದುಕೊಂಡು ಬಂದರು. ಆದರೆ ಅಂತಿಮವಾಗಿ ಅವರು ಬಯಸಿದಂತೆ ಅವರೇ ಹೊರಗೆ ಬಂದರು.
ಇದನ್ನೂ ಓದಿ:ಬಿಗ್ಬಾಸ್ ವೇದಿಕೆ ಮೇಲೆ ಪ್ರಿಯಾ ಸುದೀಪ್: ಸೊಸೆಯ ಬಗ್ಗೆ ಕಿಚ್ಚನ ತಂದೆಯ ಭಾವುಕ ಮಾತು
ಹೊರಗೆ ಬಂದ ಬಳಿಕವೂ ಸಹ ಅವರು ಖುಷಿಯಾಗಿರಲಿಲ್ಲ. ನನಗೆ ಬಿಗ್ಬಾಸ್ ಮನೆಯಲ್ಲಿ ಹೇಗಿರಬೇಕು ಎಂಬುದೇ ಗೊತ್ತಾಗುತ್ತಿಲ್ಲ ಎಂದರು. ಅಲ್ಲದೆ ಇದೇ ದಿನ ಸುದೀಪ್ ಆಡಿಸಿದ ಒಂದು ಚಟುವಟಿಕೆಯಲ್ಲಿ ಚಂದ್ರಪ್ರಭ ಅವರಿಗೆ ಊಸರವಳ್ಳಿ ಎಂಬ ಬಿರುದನ್ನು ಸ್ಪರ್ಧಿ ಒಬ್ಬರು ನೀಡಿದರು. ಅದು ಸಹ ಅವರಿಗೆ ಬಹಳ ಬೇಸರ ತರಿಸಿತು. ಒಟ್ಟಾರೆಯಾಗಿ ಬೇಸರದಿಂದಲೇ ಬಿಗ್ಬಾಸ್ ಮನೆಯಿಂದ ಚಂದ್ರಪ್ರಭ ಅವರು ಹೊರಗೆ ಬಂದರು. ವಿಶೇಷತೆ ಏನೆಂದರೆ ಇದೇ ವಾರ ಅವರು ಮನೆ ಮಂದಿಯಿಂದ ಉತ್ತಮ ಎನಿಸಿಕೊಂಡಿದ್ದರು. ಆದರೆ ಇದೇ ವಾರವೇ ಅವರು ಬಿಗ್ಬಾಸ್ ಮನೆಯಿಂದ ಎಲಿಮಿನೇಟ್ ಸಹ ಆಗಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




