
ಅಶ್ವಿನಿ ಗೌಡ (Ashwini Gowda) ಅವರ ಬಿಗ್ ಬಾಸ್ ಪ್ರಯಾಣ ಸಾಕಷ್ಟು ಏರಿಳಿತಗಳಿಂದ ಕೂಡಿತ್ತು. ಬಿಗ್ ಬಾಸ್ನಿಂದ ಹೊರ ಬಂದ ಬಳಿಕವೂ ಅಶ್ವಿನಿ ಅವರು ಹೇಳಿಕೆ ನೀಡೋದನ್ನು ಮುಂದುವರಿಸಿದ್ದಾರೆ. ನಿಜವಾದ ವೋಟ್ ತೋರಿಸಿದ್ರೆ ನಾನೇ ಗೆಲ್ತಿದ್ದೆ ಎಂಬ ಹೇಳಿಕೆ ಚರ್ಚೆಗೆ ಕಾರಣ ಆಗಿದೆ. ‘ನನ್ನಷ್ಟು ಸ್ಟ್ರಾಂಗ್ ಸ್ಪರ್ಧಿ ಈವರೆಗೆ ಬಂದಿಲ್ಲ’ ಎಂದ ಅಶ್ವಿನಿಗೆ ವೀಕ್ಷಕರು ಸಂಗೀತಾ ಶೃಂಗೇರಿ ಅವರನ್ನು ನೆನಪಿಸಿದ್ದಾರೆ.
ಅಶ್ವಿನಿ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ಸ್ಟ್ರಾಂಗ್ ಸ್ಪರ್ಧಿ ಆಗಿದ್ದರು ಎಂಬುದರಲ್ಲಿ ಅನುಮಾನವೇ ಇಲ್ಲ. ಮಾತಿನ ವಿಷಯ ಬಂದಾಗ ಏರು ಧ್ವನಿಯಲ್ಲಿ ಮಾತನಾಡುತ್ತಿದ್ದರು. ಯಾರ ಮಾತಿಗೂ ಬಗ್ಗುತ್ತಿರಲಿಲ್ಲ. ಟಾಸ್ಕ್ ಕೂಡ ಉತ್ತಮವಾಗಿ ಆಡುತ್ತಿದ್ದರು. ಗಿಲ್ಲಿ ಅನೇಕ ಬಾರಿ ಕಾಲೆಳೆದಾಗ ಅಶ್ವಿನಿ ಅತ್ತಿದ ಉದಾಹರಣೆ ಇದೆ. ಆದಾಗ್ಯೂ ಹೊರಕ್ಕೆ ಬಂದ ಬಳಿಕ ‘ನನ್ನಷ್ಟು ಸ್ಟ್ರಾಂಗ್ ಸ್ಪರ್ಧಿ ಮತ್ತೊಬ್ಬರಿಲ್ಲ’ ಎಂದು ಅವರು ಹೇಳುತ್ತಿದ್ದಾರೆ. ಜನರಿಗೆ ಸಂಗೀತಾ ನೆನಪಾಗಿದ್ದಾರೆ.
Sangeetha yaar gottha❤️🔥#BBK10 #BBK12 #sangeethasringeri pic.twitter.com/a3pX27eJVR
— angelbyheart🌝 (@AAmmi17700) January 21, 2026
‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ಸ್ಪರ್ಧಿಸಿ ಗಮನ ಸೆಳೆದವರು ಸಂಗೀತಾ ಶೃಂಗೇರಿ. ಅವರು ವಿನಯ್ ಗೌಡ, ರಜತ್ ಅಂತಹ ಸ್ಟ್ರಾಂಗ್ ಸ್ಪರ್ಧಿಗಳನ್ನು ಎದುರು ಹಾಕಿಕೊಂಡರು. ಅವರ ವಿರುದ್ಧ ಹೆದರಿಕೆ ಇಲ್ಲದೆ ಮಾತಿಗೆ ಇಳಿದರು. ಅವರ ಗತ್ತು ಬೇರೆಯದೇ ಇತ್ತು ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ. ಸಂಗೀತಾನ ಫ್ಯಾನ್ಸ್ ಪ್ರೀತಿಯಿಂದ ಸಿಂಹಿಣಿ ಎನ್ನುತ್ತಿದ್ದರು.
ಇದನ್ನೂ ಓದಿ: ‘ವೋಟ್ ನಂಬರ್ ಆಚೆ ಬಂದ್ರೆ ನಾನೇ ವಿನ್ನರ್’; ಅಶ್ವಿನಿ ಗೌಡ ನೇರ ಮಾತು
ಸಂಗೀತಾ ಶೃಂಗೇರಿಗೆ ಟಾಸ್ಕ್ ಆಡುವಾಗ ಕಣ್ಣಿಗೆ ಸೋಪಿನ ನೀರು ಹಾಕಿದ್ದರಿಂದ ಸಾಕಷ್ಟು ತೊಂದರೆ ಆಗಿತ್ತು. ಅವರು 2-3 ದಿನ ಆಸ್ಪತ್ರೆ ಸೇರಬೇಕಾಯಿತು. ಆಸ್ಪತ್ರೆಯಿಂದ ಮರಳುವಾಗ ಅವರು ಕರಿ ಬಣ್ಣದ ಕನ್ನಡಕ ಹಾಕಿ ಬಂದಿದ್ದರು. ಈ ಎಪಿಸೋಡ್ ಗಮನ ಸೆಳೆದಿತ್ತು. ತಾವೆಷ್ಟು ಸ್ಟ್ರಾಂಗ್ ಎಂಬುದನ್ನು ಅವರು ಇಲ್ಲಿ ಸಾಬೀತು ಮಾಡಿದ್ದರು. ಹೀಗಾಗಿ, ಎಲ್ಲರೂ ಅಶ್ವಿನಿಗಿಂತ ಸಂಗೀತಾ ಅವರೇ ಸ್ಟ್ರಾಂಗ್ ಸ್ಪರ್ಧಿ ಎಂದು ಹೇಳುತ್ತಿದ್ದಾರೆ. ಇದನ್ನು ಬಹುತೇಕರು ಒಪ್ಪಿದ್ದಾರೆ. ಗಿಲ್ಲಿ ಗೆಲುವನ್ನು ಅಶ್ವಿನಿ ಗೌಡ ಅವರು ಒಪ್ಪುತ್ತಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.