‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಮೋಕ್ಷಿತಾ ಪೈ ಅವರು ಫಿನಾಲೆ ಸೇರಿದ್ದಾರೆ. ಮೋಕ್ಷಿತಾ ಅವರು ಜೀವನದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡವರು. ಈಗ ಮೋಕ್ಷಿತಾ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಅವರು ಮಕ್ಕಳನ್ನು ಕದ್ದು ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣ ಮುನ್ನೆಲೆಗೆ ಬಂದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಈಗ ದೊಡ್ಮನೆಯಲ್ಲಿ ಈ ವಿಚಾರ ಪರೋಕ್ಷವಾಗಿ ಚರ್ಚೆಗೆ ಬಂದಿತೇ ಎನ್ನುವ ಪ್ರಶ್ನೆ ಮೂಡಿದೆ.
ಮೋಕ್ಷಿತಾ ಅವರು ಟ್ಯೂಷನ್ ಹೇಳಿಕೊಡುವಾಗ ಮಗುವನ್ನು ಕಿಡ್ನ್ಯಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ವಿಚಾರ ಚರ್ಚೆಯ ಕೇಂದ್ರ ಬಿಂದು ಆಗಿತ್ತು. ಇದನ್ನು ಕೆಲವರು ಒಪ್ಪಿದರೆ, ಇನ್ನೂ ಕೆಲವರು ಅಲ್ಲಗಳೆದಿದ್ದಾರೆ. ಅಲ್ಲಿ ಆ ರೀತಿ ಆಗಿಯೇ ಇರಲಿಲ್ಲ ಎನ್ನುತ್ತಿದ್ದಾರೆ. ಈ ಬಗ್ಗೆ ಮೋಕ್ಷಿತಾ ಅವರೇ ಉತ್ತರ ನೀಡಬೇಕಿದೆ. ಹೀಗಿರುವಾಗಲೇ ದೊಡ್ಮನೆಗೆ ಬಂದಿರೋ ವಿದ್ಯಾಶಂಕರಾನಂದ ಸರಸ್ವತಿ ಅವರು ಮೋಕ್ಷಿತಾ ಮುಖವನ್ನು ನೋಡಿ ಸಾಕಷ್ಟು ವಿಚಾರ ಹೇಳಿದ್ದಾರೆ.
‘ಏನಾದರೂ ಕೇಳೋದಿದ್ದರೆ ಕೇಳಿ’ ಎಂದು ವಿದ್ಯಾಶಂಕರಾನಂದ ಸರಸ್ವತಿ ಕೇಳಿದರು. ಆದರೆ, ‘ಕೇಳೋಕೆ ಏನೂ ಇಲ್ಲ’ ಎಂದರು ಮೋಕ್ಷಿತಾ. ‘ನೋವು, ಅಪನಿಂದನೆ, ಅವಮಾನ ಇದೇ ಅಲ್ಲವ ನಿನಗೆ ಇಷ್ಟು ದಿನ ಸಿಕ್ಕಿದ್ದು’ ಎಂದು ಮೋಕ್ಷಿತಾಗೆ ಗುರೂಜಿ ಕೇಳಿದರು. ಮೋಕ್ಷಿತಾ ಮೌನದಿಂದ ಇದ್ದು ಹೌದೆಂಬಂತೆ ಸಮ್ಮತಿಸಿದರು. ಗುರೂಜಿ ‘ಅಪನಂಬಿಕೆ’ ಎಂಬ ಶಬ್ದವನ್ನು ಒತ್ತಿ ಹೇಳಿದ್ದನ್ನು ಅನೇಕರು ಗಮನಿಸಿದ್ದಾರೆ.
ಇದನ್ನೂ ಓದಿ: ‘ಈಗ ಶನಿ ದಶ, ಪ್ರೀತಿ-ಮೋಹವೇ ಅಪಾಯ’; ಭವ್ಯಾ ಬಗ್ಗೆ ಗುರೂಜಿ ಭವಿಷ್ಯ
‘ಇಷ್ಟು ದಿನ ಹುಡುಕಿದ್ದು ಸಿಕ್ಕಿಲ್ಲ. 2025 ತುಂಬಾ ಚೆನ್ನಾಗಿದೆ. ಈ ವರ್ಷ ಆಗಸ್ಟ್ ಬಳಿಕ ನಿನಗೆ ಮದುವೆ ಆಗುತ್ತದೆ. ಸ್ವಲ್ಪ ಹೆಚ್ಚು ಕಮ್ಮಿ ಆದರೂ ಸಾಕಷ್ಟು ಹೊಡೆತ ಬೀಳುತ್ತದೆ. ಯೋಗ ಹಾಗೂ ಯೋಗ್ಯತೆ ಎರಡೂ ಚೆನ್ನಾಗಿರಬೇಕು. ಇದನ್ನು ಅರ್ಥ ಮಾಡಿಕೊಂಡಿದ್ದೀಯಾ, ಇನ್ನಷ್ಟು ಅರ್ಥ ಮಾಡಿಕೊಳ್ಳಬೇಕಿದೆ. ಕರಿಯರ್ ಚೆನ್ನಾಗಿ ಆಗುತ್ತದೆ’ ಎಂದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.