Lakshana Serial: ಕೊನೆಗೂ ಪ್ರಖ್ಯಾತ್‌ನ ಸುಳಿವು ಪತ್ತೆಯಾಗಿದೆ, ಪ್ರೇಕ್ಷಕರ ಮುಂದೆ ಬಯಲಾಗಿದೆ ಡೆವಿಲ್ ಮುಖ

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 14, 2022 | 3:08 PM

ಚಂದ್ರಶೇಖರ್ ಹಾಗೂ ನಕ್ಷತ್ರಳ ಪಾಲಿಗೆ ವಿಲನ್ ಆಗಿದ್ದಂತಹ ಡೆವಿಲ್ ಮಹಿಳೆ ಯಾರಗಿರಬಹುದು ಎಂದು ವೀಕ್ಷಕರು ಕುತೂಹಲದಿಂದ ಕಾಯುತ್ತಿದ್ದರು. ಅನೇಕ ಸಂಚಿಕೆಗಳಿಂದ ಈ ಕಾಯುವಿಕೆ ಹಾಗೆಯೇ ಮುಂದುವರೆದಿತ್ತು. ಈ ಕಾಯುವಿಕೆಗೆ ನಿನ್ನೆಯ ಸಂಚಿಕೆಯಲ್ಲಿ ತೆರೆ ಬಿದ್ದಿದೆ.

Lakshana Serial: ಕೊನೆಗೂ ಪ್ರಖ್ಯಾತ್‌ನ ಸುಳಿವು ಪತ್ತೆಯಾಗಿದೆ, ಪ್ರೇಕ್ಷಕರ ಮುಂದೆ ಬಯಲಾಗಿದೆ ಡೆವಿಲ್ ಮುಖ
Follow us on

ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 8.30ಕ್ಕೆ ಪ್ರಸಾರವಾಗುವ ಲಕ್ಷಣ ಧಾರವಾಹಿಯು ತನ್ನ ವಿಭಿನ್ನ ಕಥೆಯ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಪ್ರಖ್ಯಾತ್‌ನನ್ನು ಹುಡುಕುತ್ತಿದ್ದ ಭೂಪತಿಗೆ ಕೊರಿಯರ್ ಮೂಲಕ ಒಂದು ಲೆಟರ್ ಕಳುಹಿಸಿಕೊಟ್ಟು, ಆತನನ್ನು ಕಾಪಾಡಬೇಕೆಂದರೆ ಬನಶಂಕರಿ ಗ್ರೌಂಡ್‌ಗೆ ಬರಬೇಕೆಂದು ಹೇಳಿರುತ್ತಾಳೆ. ಅದೇ ಸ್ಥಳದಲ್ಲಿ ಚಂದ್ರಶೇಖರ್ ವಿಜಯದಶಮಿಯ ಪೂಜೆಯನ್ನು ಆಯೋಜನೆ ಮಾಡಿರುತ್ತಾರೆ. ತಂದೆಯ ಪ್ರಾಣಕ್ಕೆ ಡೆವಿಲ್ ಕುತ್ತು ತರುತ್ತಾಳೆಂದು ಭಯಗೊಂಡು ನಕ್ಷತ್ರ ಮತ್ತು ಭೂಪತಿ ಆ ಜಾಗಕ್ಕೆ ತಕ್ಷಣ ತೆರಳುತ್ತಾರೆ.

ನೀವು ಜೋಪಾನವಾಗಿರಿ ಎಂದು ಹೇಳಲು ನಕ್ಷತ್ರ ಆಕೆಯ ತಂದೆಗೆ ಫೋನ್ ಕಾಲ್ ಮಾಡಿದಾಗ ಅವರು ಕಾಲ್ ರಿಸಿವ್ ಮಾಡಿರುವುದಿಲ್ಲ. ಇದರಿಂದ ನಕ್ಷತ್ರ ಇನ್ನಷ್ಟು ಭಯ ಪಡುತ್ತಾಳೆ. ಬನಶಂಕರಿ ಗ್ರೌಂಡ್‌ಗೆ ಬಂದ ನಕ್ಷತ್ರ ಮತ್ತು ಭೂಪತಿ ಮೊದಲಿಗೆ ಚಂದ್ರಶೇಖರ್ ಎಲ್ಲಿ ಎಂದು ಹುಡುಕಾಟ ನಡೆಸುತ್ತಾರೆ. ಕೊನೆಗೂ ಸಿ.ಎಸ್‌ನ್ನು ಹುಡುಕಿದ ನಕ್ಷತ್ರ ನಿಮ್ಮ ಪ್ರಾಣಕ್ಕೆ ಕುತ್ತು ಇದೇ ಎಂದು ಹೇಳುವ ಮೊದಲೇ ನಕ್ಷತ್ರ ಮತ್ತು ಭೂಪತಿಯನ್ನು ದೇವಿಗೆ ಪೂಜೆ ಮಾಡುವಂತೆ ಕರೆದುಕೊಂಡು ಹೋಗುತ್ತಾರೆ. ಪೂಜೆ ಮುಗಿದ ತಕ್ಷಣ ಈ ಕಡೆ ಬಂದ ಭೂಪತಿಯ ಬಳಿಗೆ ಇನ್‌ಸ್ಪೆಕ್ಟರ್ ಬಂದು ಒಂದಿಷ್ಟು ಪೋಲಿಸರನ್ನು ಸಿ.ಎಸ್ ಅವರ ರಕ್ಷಣೆ ಇರಲಿ ಎಂದು ಹೇಳುತ್ತಾರೆ. ಇದನ್ನು ಕೇಳಿ ಚಂದ್ರಶೇಖರ್ ಅವರಿಗೆ ಶಾಕ್ ಆಗುತ್ತದೆ.

ಇದನ್ನು ಓದಿ: ಸಾನಿಯಾಗೆ ನಡುಕ ಹುಟ್ಟಿಸಿದ ಭುವಿ; ಸೈಲೆಂಟ್ ಆದ್ಲು ಕ್ರಿಮಿನಲ್ ಲೇಡಿ

ನಮ್ಮ ಕಾರಣದಿಂದ ಪ್ರಖ್ಯಾತ್ ಪ್ರಾಣಕ್ಕೆ ಕುತ್ತು ಬರಬಾರದೆಂದು ಪೋಲಿಸರ ಜೊತೆ ಸೇರಿ ನಕ್ಷತ್ರ ಮತ್ತು ಭೂಪತಿ ಆತನನ್ನು ಜನಜಂಗುಳಿಯ ಮಧ್ಯೆ ಹುಡುಕಲು ಪ್ರಾರಂಬಿಸುತ್ತಾರೆ. ಈ ಮಧ್ಯೆ ಒಬ್ಬ ವ್ಯಕ್ತಿ ನಕ್ಷತ್ರಳ ಕೈಗೆ ಒಂದು ಲೆಟರ್ ಕೊಟ್ಟು ಓಡಿ ಹೋಗುತ್ತಾನೆ. ಆ ಲೆಟರ್‌ನ್ನು ಭೂಪತಿ ಓದುತ್ತಾನೆ. ಸಮಯ ಓಡುತ್ತಿದೆ, ಸಾವಿಗೆ ಮುಹೂರ್ತ ಇಟ್ಟಾಗಿದೆ, ನಿನ್ನ ಬಳಿ ಕೇವಲ ಐದು ನಿಮಿಷಗಳ ಕಾಲಾವಕಾಶವಿದೆ. ಸಾಧ್ಯವಾದರೆ ಪ್ರಖ್ಯಾತ್‌ನನ್ನು ಕಾಪಾಡಿಕೋ’ ಎಂದು ಬರೆದಿತ್ತು. ಈಗ ಇವರಿಗೆ ಗೊತ್ತಾಗುತ್ತದೆ ಡೆವಿಲ್ ಮಹಿಳೆಯ ಟಾರ್ಗೆಟ್ ಸಿ.ಎಸ್ ಅಲ್ಲ, ಪ್ರಖ್ಯಾತ್ ಎಂದು.

ಈಗ ಇನ್ನೂ ಚುರುಕಾಗಿ ಪ್ರಖ್ಯಾತ್‌ನ ಹುಡುಕಾಟ ಆರಂಭವಾಗುತ್ತದೆ. ಹುಡುಕಾಟ ನಡೆಸುತ್ತಿರುವಾಗ ಎಲ್ಲಿಂದಲೋ ಭೂಪತಿ… ನಕ್ಷತ್ರ… ಎಂದು ಜೋರಾಗಿ ಕಿರಿಚಾಡುವ ಸದ್ದು ಕೇಳುತ್ತದೆ. ಅತ್ತ ಕಡೆ ಕಣ್ಣು ಹಾಯಿಸಿ ನೋಡಿದಾಗ ಪ್ರಖ್ಯಾತ್‌ನನ್ನು ವಿಜಯ ದಶಮಿಯಂದು ಸುಡುವ ರಾವಣನ ಹಿಂದೆ ಕಟ್ಟಿ ಹಾಕಲಾಗಿತ್ತು. ಇದನ್ನು ನೋಡಿದ ಭೂಪತಿ ಮತ್ತು ನಕ್ಷತ್ರ ಅವನನ್ನು ಹೇಗಾದರೂ ಮಾಡಿ ಕಾಪಾಡಬೇಕೆಂದು ಪೋಲಿಸರ ಜೊತೆಗೆ ಅಲ್ಲಿಗೆ ಹೋಗುತ್ತಾರೆ. ಅಷ್ಟರಲ್ಲಿ ಡೆವಿಲ್ ಹೆಂಗಸು ಬೆಂಕಿಯ ಬಾಣದಿಂದ ರಾವಣನನ್ನು ಸುಡುತ್ತಾಳೆ. ಪ್ರಖ್ಯಾತ್‌ನನ್ನು ಡೆವಿಲ್‌ನ ಚಕ್ರವ್ಯೂಹದಿಂದ ಭೂಪತಿ ನಕ್ಷತ್ರ ಕಾಪಾಡುತ್ತಾರ ಎಂದು ಮುಂದೆ ನೋಡಬೇಕಾಗಿದೆ.

ಡೆವಿಲ್ ಯಾರೆಂಬುದು ಪ್ರೇಕ್ಷಕರ ಮುಂದೆ ಬಯಲಾಗಿದೆ

ಚಂದ್ರಶೇಖರ್ ಹಾಗೂ ನಕ್ಷತ್ರಳ ಪಾಲಿಗೆ ವಿಲನ್ ಆಗಿದ್ದಂತಹ ಡೆವಿಲ್ ಮಹಿಳೆ ಯಾರಗಿರಬಹುದು ಎಂದು ವೀಕ್ಷಕರು ಕುತೂಹಲದಿಂದ ಕಾಯುತ್ತಿದ್ದರು. ಅನೇಕ ಸಂಚಿಕೆಗಳಿಂದ ಈ ಕಾಯುವಿಕೆ ಹಾಗೆಯೇ ಮುಂದುವರೆದಿತ್ತು. ಈ ಕಾಯುವಿಕೆಗೆ ನಿನ್ನೆಯ ಸಂಚಿಕೆಯಲ್ಲಿ ತೆರೆ ಬಿದ್ದಿದೆ. ಕಥೆಯ ನಿಜವಾದ ವಿಲನ್ ಯಾರೆಂಬುವುದು ವೀಕ್ಷಕರ ಮುಂದೆ ರಿವೀಲ್ ಆಗಿದೆ. ಅದು ಬೇರೆ ಯಾರು ಅಲ್ಲ ಚಂದ್ರಶೇಖರ್ ಅವರ ಸಹೋದರಿ ಭಾರ್ಗವಿ.

ಜೊತೆಯಲ್ಲೇ ಇದ್ದು ತನ್ನ ಸ್ವಂತ ಅಣ್ಣನ ಮೇಲೆ ಇವರಿಗೇಕೆ ಇಷ್ಟು ಕೋಪ, ಮಗಳು ಮಿಲ್ಲಿಯನ್ನು ಏಕೆ ತನ್ನ ಮಗಳೆಂದು ಯಾರಿಗೂ ಹೇಳಿಲ್ಲ ಹಾಗೂ ಕಥೆಯ ನಿಜವಾದ ವಿಲನ್ ತನ್ನ ತಂಗಿಯೇ ಎಂದು ಚಂದ್ರಶೇಖರ್ ಅವರಿಗೆ ಗೊತ್ತಾಗುತ್ತಾ ಇವೆಲ್ಲವೂ ಮುಂದೆ ಬರುವ ಸಂಚಿಕೆಯಲ್ಲಿ ಗೊತ್ತಾಗಬೇಕಾಗಿದೆ. ಅನೇಕ ಜನರು ಸೋಷಿಯಲ್ ಮೀಡಿಯಾದಲ್ಲಿ ಭಾರ್ಗವಿಯವರೇ ಡೆವಿಲ್ ಮಹಿಳೆಯಾಗಿರಬಹುದು ಎಂದು ತಮ್ಮ ಕಮೆಂಟ್‌ಗಳ ಮೂಲಕ ತಿಳಿಸುತ್ತಿದ್ದರು. ಅವರ ಊಹೆ ಸರಿಯಾಗಿದೆ. ಕಥೆಯ ನಿಜವಾದ ಡೆವಿಲ್ ವಿಲನ್ ಭಾರ್ಗವಿ.

ಮಧುಶ್ರೀ

Published On - 3:08 pm, Fri, 14 October 22