ಆರ್ಯವರ್ಧನ್ ಗೆಟಪ್​​ನಲ್ಲಿ ಆಫೀಸ್​ಗೆ ಬಂದ ಸಂಜು; ಎಲ್ಲರಿಗೂ ಹೆಚ್ಚಾಯ್ತು ಅನುಮಾನ

ಸಂಜು ಪ್ಲ್ಯಾನ್ ಮಾಡಿ ಮನೆಯಲ್ಲೇ ಉಳಿದುಕೊಂಡಿದ್ದು ನೋಡಿದರೆ ಇದರ ಹಿಂದೆ ಏನೋ ಇದೆ ಎಂದು ಹರ್ಷನ ಪತ್ನಿ ಮಾನ್ಸಿ ಊಹಿಸಿದ್ದಳು. ಕಾಕತಾಳೀಯ ಎಂಬಂತೆ ಅದು ನಿಜವಾಗಿದೆ.

ಆರ್ಯವರ್ಧನ್ ಗೆಟಪ್​​ನಲ್ಲಿ ಆಫೀಸ್​ಗೆ ಬಂದ ಸಂಜು; ಎಲ್ಲರಿಗೂ ಹೆಚ್ಚಾಯ್ತು ಅನುಮಾನ
Follow us
TV9 Web
| Updated By: ಮದನ್​ ಕುಮಾರ್​

Updated on:Oct 14, 2022 | 10:10 AM

ಆರ್ಯವರ್ಧನ್ (Aryvardhan) ಯಾವಾಗಲೂ ಕೋಟ್ ಹಾಕಿ ಕಚೇರಿಗೆ ಬರುತ್ತಿದ್ದ. ಇದು ಆತನ ಟ್ರೇಡ್​ಮಾರ್ಕ್ ಆಗಿತ್ತು. ಆದರೆ, ಈಗ ಆತ ನಿಧನ ಹೊಂದಿದ್ದಾನೆ ಎಂದು ಎಲ್ಲರೂ ಭಾವಿಸಿದ್ದಾರೆ. ಆತ ಇಲ್ಲದೆ ಕಂಪನಿ ಬಡವಾಗಿದೆ. ಎಲ್ಲರೂ ಆರ್ಯವರ್ಧನ್​ನ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಅಪಘಾತದ ವೇಳೆ ಆತನಿ​ಗೆ ನೆನಪೆಲ್ಲವೂ ಅಳಿಸಿ ಹೋಗಿದೆ. ಈಗ ಸಂಜು ಆಗಿ ಆರ್ಯವರ್ಧನ್ ಮತ್ತೆ ರಾಜ ನಂದಿನಿ ನಿವಾಸಕ್ಕೆ ಬಂದಿದ್ದಾನೆ. ಆತನಿಗೆ ನಿಧಾನವಾಗಿ ಹಳೆಯ ನೆನಪುಗಳು ಬರುತ್ತಿವೆ. ಹೀಗಿರುವಾಗಲೇ ಆರ್ಯವರ್ಧನ್ ಗೆಟಪ್​ನಲ್ಲಿ ಸಂಜು ಆಫೀಸ್​ಗೆ ಬಂದಿದ್ದಾನೆ. ಆತನನ್ನು ನೋಡಿ ಪಿ.ಎ. ಮೀರಾ ಹೆಗಡೆ ಅಚ್ಚರಿಗೊಂಡಿದ್ದಾಳೆ. ಈ ಗೆಟಪ್​ನಲ್ಲಿ ಸಂಜು ಬಂದಿದ್ದು ಏಕೆ ಮತ್ತು ಹೇಗೆ ಎಂಬ ಪ್ರಶ್ನೆ ಅನೇಕರಲ್ಲಿ ಮೂಡಿದೆ.

ಅನು ಸಿರಿಮನೆ ಗರ್ಭಿಣಿ. ಈ ಕಾರಣಕ್ಕೆ ಅವಳ ಮನೆಯಲ್ಲಿ ಉಡಿತುಂಬುವ ಶಾಸ್ತ್ರ ನಡೆಯುತ್ತಿತ್ತು. ಈ ಕಾರಣಕ್ಕೆ ಎಲ್ಲರೂ ಅಲ್ಲಿಗೆ ತೆರಳಿದ್ದರು. ಆದರೆ, ಸಂಜು ಮಾತ್ರ ಮನೆಯಲ್ಲೇ ಉಳಿದುಕೊಂಡಿದ್ದ. ಯಾರು ಎಷ್ಟೇ ಹೇಳಿದರೂ ಆತ ಹೊರಡೋಕೆ ರೆಡಿ ಇರಲಿಲ್ಲ. ಹೀಗೇಕೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು. ಪ್ಲ್ಯಾನ್ ಮಾಡಿ ಮನೆಯಲ್ಲೇ ಉಳಿದುಕೊಂಡಿದ್ದು ನೋಡಿದರೆ ಇದರ ಹಿಂದೆ ಏನೋ ಇದೆ ಎಂದು ಹರ್ಷನ ಪತ್ನಿ ಮಾನ್ಸಿ ಊಹಿಸಿದ್ದಳು. ಕಾಕತಾಳೀಯ ಎಂಬಂತೆ ಅದು ನಿಜವಾಗಿದೆ.

‘ನಾನು ಹೊರಗೆ ಹೋಗಿ ಬರ್ತೀನಿ’ ಎಂದು ಹೇಳಿ ಹೊರಟ ಸಂಜು ನೇರವಾಗಿ ಹೋಗಿದ್ದು ಕಚೇರಿಗೆ. ಅಚ್ಚರಿ ಎಂದರೆ ಆರ್ಯವರ್ಧನ್​ ಸ್ಟೈಲ್​ನಲ್ಲೇ ಆತ ಕಚೇರಿಗೆ ತೆರಳಿದ್ದ. ಆತ ಬರುತ್ತಿರುವುದನ್ನು ನೋಡಿದ ಅಲ್ಲಿನ ಸಿಬ್ಬಂದಿ ತಡೆದಿದ್ದಳು. ‘ನೀವು ಯಾರು? ಇಲ್ಲಿಗೆ ಏಕೆ ಬಂದ್ರಿ’ ಎಂದು ಪ್ರಶ್ನೆ ಮಾಡಿದ್ದಳು. ಈ ಪ್ರಶ್ನೆಗಳನ್ನು ಕೇಳಿ ಸಂಜುಗೆ ಏನು ಉತ್ತರಿಸಬೇಕು ಎಂಬುದೇ ತಿಳಿದಿಲ್ಲ. ಹೀಗಾಗಿ, ‘ನಾನು ಆರ್ಯವರ್ಧನ್​ಗೆ ಹತ್ತಿರವಾದವನು. ದಯವಿಟ್ಟು ಒಳಗೆ ಹೋಗೋಕೆ ಅವಕಾಶ ನೀಡಿ’ ಎಂದು ಕೋರಿಕೊಂಡಿದ್ದಾನೆ. ಆ ಟೈಮ್​ಗೆ ಸರಿಯಾಗಿ ಮೀರಾ ಹೆಗಡೆ ಬಂದಿದ್ದಾಳೆ.

ಇದನ್ನೂ ಓದಿ
Image
ದೊಡ್ಡ ರಹಸ್ಯ ಬಯಲು ಮಾಡಲು ಹೋಗಿ ಗೊಂದಲಕ್ಕೆ ತುತ್ತಾದ ಝೇಂಡೆ; ತಿಳಿಯಿತು ಹಲವು ವಿಚಾರ
Image
‘ಅವರನ್ನು ಸುಮ್ಮನೆ ಬಿಡಲ್ಲ’; ಶಪಥ ಮಾಡಿ ಮನೆ ಒಳಗೆ ಬಂದ ಅನು ಸಿರಿಮನೆ
Image
Megha Shetty: ಮಹೇಶ್ ಬಾಬು ಭೇಟಿ ಹಿಂದಿನ ಉದ್ದೇಶ ತಿಳಿಸಿದ ನಟಿ ಮೇಘಾ ಶೆಟ್ಟಿ
Image
Megha Shetty: ಕಲರ್ಸ್​ ಕನ್ನಡದಲ್ಲಿ ಹೊಸ ಪ್ರಯತ್ನಕ್ಕೆ ಮುಂದಾದ ನಟಿ ಮೇಘಾ ಶೆಟ್ಟಿ

‘ನೀವು ಆಫೀಸ್​ಗೆ ಬರ್ತೀರಾ ಅನ್ನೋದು ಗೊತ್ತಿತ್ತು. ಆದರೆ, ಇವತ್ತೇ ಬರ್ತೀರಾ ಎಂದುಕೊಂಡಿರಲಿಲ್ಲ’ ಎಂಬ ಮಾತನ್ನು ಮೀರಾ ಹೇಳಿದಳು. ಸಂಜುಗೆ ಕಚೇರಿ ಒಳಗೆ ಬರುತ್ತಿದ್ದಂತೆ ಹಳೆಯ ನೆನಪುಗಳು ಅತಿಯಾಗಿ ಕಾಡಿವೆ. ಹೀಗಾಗಿ ಆತ ಸಂಪೂರ್ಣ ಗೊಂದಲಕ್ಕೆ ಒಳಗಾಗಿದ್ದಾನೆ. ಏನು ಹೇಳಬೇಕು ಎಂಬುದೇ ಆತನಿಗೆ ಗೊತ್ತಾಗಿಲ್ಲ. ನಂತರ ಅನು ಮನೆಗೆ ಸಂಜುನ ಬಿಟ್ಟು ಬಂದಿದ್ದಾಳೆ ಮೀರಾ.

ಅನು ಮನೆಯಲ್ಲಿ ಸಂಜುನ ನೋಡಿ ಎಲ್ಲರಿಗೂ ಅಚ್ಚರಿ ಆಗಿದೆ. ಅಷ್ಟೇ ಅಲ್ಲ ಆತ ಧರಿಸಿದ್ದ ಬಟ್ಟೆ ನೋಡಿ ಹಲವರು ಅಚ್ಚರಿಗೊಂಡಿದ್ದಾರೆ. ಏಕೆಂದರೆ ಆರ್ಯವರ್ಧನ್ ಕೂಡ ಇದೇ ಮಾದರಿಯ ಬಟ್ಟೆ ಹಾಕುತ್ತಿದ್ದ. ಈ ಎಲ್ಲಾ ಕಾರಣದಿಂದ ಅನು ಕುಟುಂಬದವರಿಗೆ ಅಚ್ಚರಿ ಹಾಗೂ ಶಾಕ್ ಆಗಿದೆ. ಸಂಜುನ ನೋಡಿದ ತಕ್ಷಣ ಅನುಗೆ ಆರ್ಯವರ್ಧನ್ ನೆನಪಿಗೆ ಬಂದಿದ್ದಾನೆ.

ಅನುಗೆ ಚುಚ್ಚು ಮಾತು

ಅನು ಗರ್ಭಿಣಿ ಆದ ಕಾರಣ ಉಡಿ ತುಂಬುವ ಶಾಸ್ತ್ರ ನಡೆಯುತ್ತಿತ್ತು. ಅವಳಿಗೆ ಗಂಡ ಸತ್ತು ಹೋಗಿದ್ದಾನೆ ಎನ್ನುವ ಕಾರಣಕ್ಕೆ ಅಕ್ಕ ಪಕ್ಕದ ಮನೆಯವರು ಚುಚ್ಚಿ ಮಾತನಾಡಿದ್ದರು. ‘ಗಂಡ ಸತ್ತವಳಿಗೆ ಅರಿಷಿಣ-ಕುಂಕುಮ ಇಡಬಹುದೇ? ಬಳೆ ತೊಡಿಸಬಹುದೇ’ ಎಂದು ಕೆಲವರು ಪ್ರಶ್ನೆ ಮಾಡಿದ್ದರು. ಇದರಿಂದ ಸಿಟ್ಟಾದ ಆರ್ಯವರ್ಧನ್ ತಾಯಿ ಪ್ರಿಯಾ, ‘ಆರ್ಯವರ್ಧನ್ ಎಲ್ಲಿಯೂ ಹೋಗಿಲ್ಲ. ಇಲ್ಲಿಯೇ ಇದ್ದಾನೆ. ಶೀಘ್ರವೇ ಆತ ಬರುತ್ತಾನೆ’ ಎಂಬ ಭರವಸೆ ನೀಡಿದ್ದಾಳೆ. ಇದನ್ನು ಕೇಳಿ ಅನುಗೆ ಖುಷಿ ಆಗಿದೆ.

Published On - 9:56 am, Fri, 14 October 22

ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ
ಆಂತರಿಕ ವಿಷಯಗಳ ಬಗ್ಗೆ ಮಾತಾಡಬಾರದೆಂದು ಸಮಿತಿ ಹೇಳಿದೆ: ಬಸನಗೌಡ ಯತ್ನಾಳ್
ಆಂತರಿಕ ವಿಷಯಗಳ ಬಗ್ಗೆ ಮಾತಾಡಬಾರದೆಂದು ಸಮಿತಿ ಹೇಳಿದೆ: ಬಸನಗೌಡ ಯತ್ನಾಳ್
ಶಿವಕುಮಾರ್ ಧೋರಣೆ ಬೇರೆ ಪಕ್ಷಗಳ ನಾಯಕರಿಗೆ ಮಾದರಿಯಾಗಬಹುದು!
ಶಿವಕುಮಾರ್ ಧೋರಣೆ ಬೇರೆ ಪಕ್ಷಗಳ ನಾಯಕರಿಗೆ ಮಾದರಿಯಾಗಬಹುದು!
ಹಾಸನದಲ್ಲಿ ಜೆಡಿಎಸ್ ಪ್ರಭಾವ ಸಂಪೂರ್ಣವಾಗಿ ತಗ್ಗಿಸಲು ಕಾಂಗ್ರೆಸ್ ಹುನ್ನಾರ
ಹಾಸನದಲ್ಲಿ ಜೆಡಿಎಸ್ ಪ್ರಭಾವ ಸಂಪೂರ್ಣವಾಗಿ ತಗ್ಗಿಸಲು ಕಾಂಗ್ರೆಸ್ ಹುನ್ನಾರ
ವಿಜಯೇಂದ್ರ ತಂಡದಿಂದ ಕಲ್ಯಾಣ ಕರ್ನಾಟಕದಲ್ಲಿ ರೈತರ ಪರ ಹೋರಾಟ ಬೇಕಿತ್ತಾ?
ವಿಜಯೇಂದ್ರ ತಂಡದಿಂದ ಕಲ್ಯಾಣ ಕರ್ನಾಟಕದಲ್ಲಿ ರೈತರ ಪರ ಹೋರಾಟ ಬೇಕಿತ್ತಾ?
ಲಕ್ಷ್ಮಿದೇವಿ ಸಮುದಾಯ ಭವನ ಉದ್ಘಾಟಿಸಿದ ಸಿದ್ದರಾಮಯ್ಯ
ಲಕ್ಷ್ಮಿದೇವಿ ಸಮುದಾಯ ಭವನ ಉದ್ಘಾಟಿಸಿದ ಸಿದ್ದರಾಮಯ್ಯ
"ಇಸ್ಪೀಟ್ ಆಟ ಆಡಲೇಬೇಕಾ ಸರ್​"? ಪೊಲೀಸರಿಗೆ ಮಕ್ಕಳ ಪ್ರಶ್ನೆ