Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರೋಲ್​ಕಾಲ್ ಮಾಡಿದ್ದು ಸಾಬೀತು ಮಾಡಿದ್ರೆ ನೇಣು ಹಾಕಿಕೊಳ್ತಿನಿ’; ಸಂಬರ್ಗಿಗೆ ರೂಪೇಶ್​ ರಾಜಣ್ಣ ಸವಾಲ್

ಪ್ರಶಾಂತ್ ಸಂಬರ್ಗಿಗೆ ಸಾನ್ಯಾ ಐಯ್ಯರ್ ಮೊದಲ ವಾರವೇ ಕುತಂತ್ರಿ ಎಂಬ ಪಟ್ಟ ನೀಡಿದ್ದರು. ಅವರು ಸಿಕ್ಕಾಪಟ್ಟೆ ಡಬಲ್​​ ಗೇಮ್ ಆಡುತ್ತಾರೆ ಎಂಬ ಕಾರಣಕ್ಕೆ ಈ ರೀತಿ ಕರೆದಿದ್ದರು. ಇದೇ ವಿಚಾರವನ್ನು ರೂಪೇಶ್ ತೆಗೆದಿದ್ದಾರೆ.

‘ರೋಲ್​ಕಾಲ್ ಮಾಡಿದ್ದು ಸಾಬೀತು ಮಾಡಿದ್ರೆ ನೇಣು ಹಾಕಿಕೊಳ್ತಿನಿ’; ಸಂಬರ್ಗಿಗೆ ರೂಪೇಶ್​ ರಾಜಣ್ಣ ಸವಾಲ್
ಪ್ರಾಶಾಂತ್-ರೂಪೇಶ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Oct 13, 2022 | 2:34 PM

ಬಿಗ್ ಬಾಸ್ (Bigg Boss) ಮನೆಯಲ್ಲಿ ಪ್ರಶಾಂತ್ ಸಂಬರ್ಗಿ ಹಾಗೂ ರೂಪೇಶ್ ರಾಜಣ್ಣ ಮಧ್ಯೆ ನಿತ್ಯ ಒಂದಿಲ್ಲೊಂದು ವಿಚಾರಕ್ಕೆ ಕಿರಿಕ್ ಆಗುತ್ತಲೇ ಇದೆ. ಇಬ್ಬರೂ ಸದಾ ಹೊಸಹೊಸ ವಿಚಾರಕ್ಕೆ ಕಿತ್ತಾಡುತ್ತಾರೆ. ಇವರ ನಡುವಿನ ವಾಗ್ವಾದ ಕೆಲವೊಮ್ಮೆ ಮಿತಿಮೀರಿದ್ದೂ ಇದೆ. ಈಗ ರೂಪೇಶ್ ರಾಜಣ್ಣ ಹಾಗೂ ಪ್ರಶಾಂತ್ ಸಂಬರ್ಗಿ (Prashanth Sambargi) ಮಧ್ಯೆ ಮತ್ತೆ ಕಿತ್ತಾಟ ನಡೆದಿದೆ. ‘ರೂಪೇಶ್ ರಾಜಣ್ಣ ರೋಲ್​ಕಾಲ್ ಮಾಡಿ ದುಡ್ಡು ಮಾಡಿದ್ದಾರೆ’ ಎಂಬ ಆರೋಪವನ್ನು ಪ್ರಶಾಂತ್ ಮಾಡಿದ್ದಾರೆ. ಇದಕ್ಕೆ ರೂಪೇಶ್ ಕೂಡ ಸಿಟ್ಟಾಗಿದ್ದು, ಅವರಿಗೆ ತಿರುಗೇಟು ನೀಡಿದ್ದಾರೆ. ಇವರ ನಡುವಿನ ಜಗಳದಿಂದ ಬಿಗ್ ಬಾಸ್ ಮನೆಯಲ್ಲಿ ಕೆಲ ಹೊತ್ತು ಟೆನ್ಷನ್ ವಾತಾವರಣ ನಿರ್ಮಾಣ ಆಗಿತ್ತು.

ಪ್ರಶಾಂತ್ ಸಂಬರ್ಗಿಗೆ ಸಾನ್ಯಾ ಐಯ್ಯರ್ ಮೊದಲ ವಾರವೇ ಕುತಂತ್ರಿ ಎಂಬ ಪಟ್ಟ ನೀಡಿದ್ದರು. ಅವರು ಸಿಕ್ಕಾಪಟ್ಟೆ ಡಬಲ್​​ ಗೇಮ್ ಆಡುತ್ತಾರೆ ಎಂಬ ಕಾರಣಕ್ಕೆ ಈ ರೀತಿ ಕರೆದಿದ್ದರು. ಇದೇ ವಿಚಾರವನ್ನು ರೂಪೇಶ್ ತೆಗೆದಿದ್ದಾರೆ. ‘ಆಟವನ್ನು​ ಸರಿ ಆಡುವುದಿಲ್ಲ. ನಿಮಗೆ ಕುತಂತ್ರಿ ಎಂಬ ಪಟ್ಟ ಸರಿ ಇದೆ’ ಎಂಬ ಮಾತನ್ನು ರೂಪೇಶ್ ರಾಜಣ್ಣ ಹೇಳಿದರು. ಇದಕ್ಕೆ ಪ್ರಶಾಂತ್ ಟ್ರಿಗರ್ ಆದರು.

‘ರೋಲ್​ಕಾಲ್ ಮಾಡಿ ಯಾರು ಎಲ್ಲೆಲ್ಲಿ ಜೀವನ ಮಾಡಿದಾರೆ ಅನ್ನೋದು ಗೊತ್ತು. ಕನ್ನಡದ ಕಂದ ಹೇಡಿ. ಆಗದಿದ್ದವನು ಮೈ ಪರಚಿಕೊಂಡನಂತೆ’ ಎಂದು ಸಿಟ್ಟಲ್ಲೇ ಹೇಳಿದರು ಪ್ರಶಾಂತ್. ‘ಕೋಟಿಕೋಟಿ ವ್ಯವಹಾರ ಮಾಡುವ ಕುತಂತ್ರಿಗಳಲ್ಲ ನಾವು. ಹೆದರಿಕೊಂಡು ಓಡೋದು ನಮ್ಮ ಜಾಯಮಾನದಲ್ಲಾಗಲೀ, ಕನ್ನಡಿಗರ ಜಾಯಮಾನದಲ್ಲಾಗಲಿ ಇಲ್ಲ. ನಾನು ರೋಲ್​ಕಾಲ್ ಮಾಡಿದ್ದು ಪ್ರೂವ್ ಮಾಡಿದ್ರೆ ನೇಣು ಹಾಕಿಕೊಳ್ತಿನಿ’ ಎಂದು ಸಂಬರ್ಗಿಗೆ ಸವಾಲ್ ಹಾಕಿದರು ಅವರು.

ಇದನ್ನೂ ಓದಿ
Image
‘ಬಿಗ್ ಬಾಸ್ ಕನ್ನಡ ಸೀಸನ್ 9’ ಸೇರಿದ 18 ಸ್ಪರ್ಧಿಗಳು ಇವರೇ ನೋಡಿ; ಇಲ್ಲಿದೆ ಫೋಟೋ ಹಾಗೂ ವಿವರ
Image
ಬಿಗ್ ಬಾಸ್​ ಮನೆಗೆ ಎಂಟ್ರಿ ಕೊಟ್ಟ ಬೈಕ್ ರೇಸರ್ ಐಶ್ವರ್ಯಾ, ‘ಮಂಗಳಗೌರಿ ಮದುವೆ’ ಖ್ಯಾತಿಯ ಕಾವ್ಯಶ್ರೀ
Image
ಬಿಗ್ ಬಾಸ್​ಗೆ ಎಂಟ್ರಿ ಕೊಟ್ಟ ನೇಹಾ ಗೌಡ ಹಾಗೂ ವಿನೋದ್​; ಇವರ ವಿಶೇಷತೆಗಳೇನು?
Image
ಬಿಗ್ ಬಾಸ್ ಮನೆ ಸೇರಿದ ಒಟಿಟಿ ಸ್ಪರ್ಧಿಗಳು; ಇವರಿಗಿರುವ ಸವಾಲುಗಳು ಒಂದೆರಡಲ್ಲ

ಇದನ್ನೂ ಓದಿ: ‘ನೀವು ನನ್ನನ್ನು ಆ ದೃಷ್ಟಿಕೋನದಲ್ಲಿ ನೋಡಬೇಡಿ’; ಪ್ರಶಾಂತ್ ಸಂಬರ್ಗಿಗೆ ಸಾನ್ಯಾ ಐಯ್ಯರ್ ಮನವಿ

ಇಬ್ಬರ ಮಧ್ಯೆ ಚರ್ಚೆ ಕಾವೇರುತ್ತಿರುವುದನ್ನು ಗಮನಿಸಿದ ಮನೆ ಮಂದಿ ರೂಪೇಶ್ ರಾಜಣ್ಣ ಅವರನ್ನು ಸಮಾಧಾನ ಮಾಡಲು ನೋಡಿದರು. ನಂತರ ಅವರು ಕೊಂಚ ತಣ್ಣಗಾದರು. ಈ ಮೊದಲು ಭಾಷಾ ವಿಚಾರಕ್ಕೆ ಇವರ ಮಧ್ಯೆ ಕಿತ್ತಾಟ ನಡೆದಿತ್ತು. ‘ಕನ್ನಡ ಭಾಷೆಯ ಉಳಿಸುವ ವಿಚಾರ ಬಂದರೆ ಸಂಬರ್ಗಿ ಉರಿದುಕೊಳ್ತಾರೆ’ ಎಂದು ರೂಪೇಶ್ ರಾಜಣ್ಣ ಟೀಕೆ ಮಾಡಿದ್ದರು.

VIDEO: ಗುಜರಾತ್ ಟೈಟಾನ್ಸ್​ ತಂಡಕ್ಕೆ ಸ್ಕೂಟರ್​ನಲ್ಲಿ ಸಿರಾಜ್ ಎಂಟ್ರಿ
VIDEO: ಗುಜರಾತ್ ಟೈಟಾನ್ಸ್​ ತಂಡಕ್ಕೆ ಸ್ಕೂಟರ್​ನಲ್ಲಿ ಸಿರಾಜ್ ಎಂಟ್ರಿ
ಹುಲಿಗೆಮ್ಮ ದೇವಸ್ಥಾನ ಹುಂಡಿ ಎಣಿಕೆ: 40 ದಿನಗಳಲ್ಲಿ 99 ಲಕ್ಷ ರೂ. ಸಂಗ್ರಹ
ಹುಲಿಗೆಮ್ಮ ದೇವಸ್ಥಾನ ಹುಂಡಿ ಎಣಿಕೆ: 40 ದಿನಗಳಲ್ಲಿ 99 ಲಕ್ಷ ರೂ. ಸಂಗ್ರಹ
ಯಾವ ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸುವುದಿಲ್ಲ ಅಂತ ನಿಮಗೆ ಗೊತ್ತಾ?
ಯಾವ ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸುವುದಿಲ್ಲ ಅಂತ ನಿಮಗೆ ಗೊತ್ತಾ?
ಚಂದ್ರ ಸಿಂಹ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಚಂದ್ರ ಸಿಂಹ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಕೆಟ್ಟು ಹೋದ ಸಾರಿಗೆ ಬಸ್​ ವೈಪರ್: ಮಳೆಯಲ್ಲಿ ಚಲಾಯಿಸಲು ಪರದಾಡಿದ ಚಾಲಕ
ಕೆಟ್ಟು ಹೋದ ಸಾರಿಗೆ ಬಸ್​ ವೈಪರ್: ಮಳೆಯಲ್ಲಿ ಚಲಾಯಿಸಲು ಪರದಾಡಿದ ಚಾಲಕ
ತುಂಬ ಸಮಯದ ಬಳಿಕ ಎಸಿ ಆನ್ ಮಾಡುತ್ತೀರಾ? ಒಳಗೆ ಹಾವಿರಬಹುದು ಎಚ್ಚರ!
ತುಂಬ ಸಮಯದ ಬಳಿಕ ಎಸಿ ಆನ್ ಮಾಡುತ್ತೀರಾ? ಒಳಗೆ ಹಾವಿರಬಹುದು ಎಚ್ಚರ!
ಮೃಗಾಲಯದ ಪ್ರಾಣಿಗಳಿಗೂ ತಟ್ಟಿದ ಬೇಸಿಗೆ ಬಿಸಿ: ಸ್ಪ್ರಿಂಕ್ಲರ್ ವ್ಯವಸ್ಥೆ
ಮೃಗಾಲಯದ ಪ್ರಾಣಿಗಳಿಗೂ ತಟ್ಟಿದ ಬೇಸಿಗೆ ಬಿಸಿ: ಸ್ಪ್ರಿಂಕ್ಲರ್ ವ್ಯವಸ್ಥೆ
ಕನ್ನಡ ಚಿತ್ರರಂಗದಲ್ಲಿ ಪುನೀತ್ ರೀತಿ ಡ್ಯಾನ್ಸ್ ಮಾಡೋರು ಯಾರೂ ಇಲ್ಲ: ರಕ್ಷಿತ
ಕನ್ನಡ ಚಿತ್ರರಂಗದಲ್ಲಿ ಪುನೀತ್ ರೀತಿ ಡ್ಯಾನ್ಸ್ ಮಾಡೋರು ಯಾರೂ ಇಲ್ಲ: ರಕ್ಷಿತ
ಬಜೆಟ್​ ಅಧಿವೇಶನ ಸಂದರ್ಭದಲ್ಲೇ ವಿಧಾನಸೌಧಕ್ಕೆ ಬಂದ ಬುಸ್​ ಬುಸ್ ನಾಗಪ್ಪ..!
ಬಜೆಟ್​ ಅಧಿವೇಶನ ಸಂದರ್ಭದಲ್ಲೇ ವಿಧಾನಸೌಧಕ್ಕೆ ಬಂದ ಬುಸ್​ ಬುಸ್ ನಾಗಪ್ಪ..!
ಯಾರ ಬಗ್ಗೆಯೂ ಪುನೀತ್ ನೆಗೆಟಿವ್ ಮಾತಾಡಿದ್ದು ನಾನು ಕೇಳಿಲ್ಲ: ಕೆ. ಕಲ್ಯಾಣ್
ಯಾರ ಬಗ್ಗೆಯೂ ಪುನೀತ್ ನೆಗೆಟಿವ್ ಮಾತಾಡಿದ್ದು ನಾನು ಕೇಳಿಲ್ಲ: ಕೆ. ಕಲ್ಯಾಣ್