ಹೊಂಗನಸು: ಗೌತಮ್‌ಗೆ ಲೈಬ್ರರಿಯಲ್ಲಿ ರಿಷಿ-ವಸುಧರಾ ಮಧ್ಯೆ ಏನ್ ನಡೀತು ಎನ್ನುವುದೇ ಯೋಚನೆ

Honganasu Kannada Serial: ಲೈಬ್ರರಿಯಲ್ಲಿ ಏನ್ ನಡೆಯಿತು ಎಂದು ಯೋಚಿಸುತ್ತಾ ಗೌತಮ್‌ ಕುಳಿತಿದ್ದ. ಆಗ ರಿಷಿ ಎಂಟ್ರಿ ಕೊಟ್ಟ. ಗೌತಮ್‌ನನ್ನು ಮಾತಾಡಿಸಬೇಕು ಎನ್ನುವಷ್ಟರಲ್ಲಿ ಪೇಂಟಿಂಗ್ ಮಾಯವಾಗಿದ್ದನ್ನು ಗಮನಿಸಿದ.

ಹೊಂಗನಸು: ಗೌತಮ್‌ಗೆ ಲೈಬ್ರರಿಯಲ್ಲಿ ರಿಷಿ-ವಸುಧರಾ ಮಧ್ಯೆ ಏನ್ ನಡೀತು ಎನ್ನುವುದೇ ಯೋಚನೆ
ಹೊಂಗನಸು ಸೀರಿಯಲ್
Follow us
TV9 Web
| Updated By: ಮದನ್​ ಕುಮಾರ್​

Updated on: Oct 13, 2022 | 9:45 AM

ಲೈಬ್ರರಿಯೊಳಗೆ ರಿಷಿ ಮಾತ್ರ ಲಾಕ್ ಆಗಿದ್ದಾನೆ ಎಂದುಕೊಂಡಿದ್ದ ಗೌತಮ್‌ಗೆ ವಸೂಧರಾಳನ್ನು ನೋಡಿ ಶಾಕ್ ಆಯ್ತು. ನೀನೇನಿಲ್ಲಿ ಎಂದು ಪ್ರಶ್ನೆ ಮಾಡಿದ. ಗೌತಮ್ ಪ್ರಶ್ನೆಗೆ ಉತ್ತರಿಸಿದ ರಿಷಿ ‘ನಾವಿಬ್ಬರೂ ಲೈಬ್ರರಿಯಲ್ಲಿ ಲಾಕ್ ಆಗಿದ್ವಿ, ಲೈಬ್ರರಿಯನ್ ನೋಡದೆ ಲಾಕ್ ಮಾಡಿ ಹೋಗಿದ್ದಾನೆ’ ಎಂದು ವಿವರಣೆ ನೀಡಿದ. ವಸೂಧರಾಳಿಗೆ ಭಯ ಆಯಿತಾ ಎಂದು ಗೌತಮ್ ವಿಚಾರಿಸಿದ. ಆದರೆ ವಸು, ‘ರಿಷಿ ಸರ್ ಜೊತೆಯಲ್ಲೇ ಇರುವಾಗ ಭಯ ಯಾಕೆ’ ಎಂದು ಹೇಳಿ ಗೌತಮ್ ಬಾಯಿ ಮುಚ್ಚಿಸಿದಳು. ಈ ವಿಚಾರವನ್ನು ಇಲ್ಲಿಗೆ ಬಿಡಿ ಇದನ್ನು ದೊಡ್ಡದು ಮಾಡಬೇಡಿ ಎಂದು ಲೈಬ್ರರಿಯನ್ ಮತ್ತು ಗೌತಮ್ ಬಳಿ ರಿಷಿ ಕೇಳಿಕೊಂಡ. ಎಲ್ಲರೂ ಕಾಲೇಜಿನಿಂದ ಹೊರಟರು. ಆದರೆ ಗೌತಮ್‌ಗೆ ಇಬ್ಬರೂ ಲೈಬ್ರರಿಯಲ್ಲಿ ಏನು ಮಾಡುತ್ತಿದ್ರು, ಏನ್ ಮಾತನಾಡಿರಬಹುದು ಎನ್ನುವುದೇ ಚಿಂತೆ. ಇಂಥ ಗೋಲ್ಡನ್ ಅವಕಾಶ ನನಗೆ ಯಾಕೆ ಸಿಗ್ತಿಲ್ಲ ಎಂದು ನೊಂದುಕೊಳ್ಳುತ್ತಾ ರಿಷಿ ಬಳಿ ತನ್ನ ನೋವವನ್ನು ತೋಡಿಕೊಂಡ.

ರಿಷಿ ಇನ್ನೂ ಮನೆಗೆ ಬಂದಿಲ್ಲ ಎಂದು ದೇವಯಾನಿ ಮಹೇಂದ್ರ ಬಳಿ ವಿಚಾರಿಸಿದಿಯಾ ಅಂತ ಕೇಳಿದಳು. ಆದರೆ ಮಹೇಂದ್ರ ‘ಅವನಿನ್ನೂ ಚಿಕ್ಕವನಲ್ಲ, ಬರ್ತಾನೆ ಬಿಡಿ’ ಎಂದು ಅತ್ತಿಗೆಗೆ ಟಾಂಗ್ ಕೊಟ್ಟ. ಅಷ್ಟರಲ್ಲೇ ರಿಷಿ ಮತ್ತು ಗೌತಮ್ ಇಬ್ಬರೂ ಮನೆಗೆ ಎಂಟ್ರಿ ಕೊಟ್ಟರು. ಮಹೇಂದ್ರನ ಮುಂದೆ ದೇವಯಾನಿ ಬೇಕಂತಲೇ ರಿಷಿ ಮೇಲೆ ಅತಿಯಾದ ಪ್ರೀತಿ ತೋರಿಸುವ ನಾಟಕ ಆಡಿದಳು. ಇತ್ತ ಗೌತಮ್‌ಗೆ ಲೈಬ್ರರಿಯಲ್ಲಿ ಏನಾಯಿತು ಎಂದು ತಿಳಿದುಕೊಳ್ಳುವ ಕುತೂಹಲ ತಡೆಯಲಾಗದೆ ವಸೂಧರಾಗೆ ಫೋನ್ ಮಾಡಿದ. ಲೈಬ್ರರಿಯಲ್ಲಿ ಏನಾಯಿತು ಎಂದು ವಿಚಾರಿಸುತ್ತಿದ್ದ ಅಷ್ಟರಲ್ಲೇ ಜಗತಿ ವಸು ರೂಮಿಗೆ ಎಂಟ್ರಿ ಕೊಟ್ಟಳು. ಬಳಿಕ ಗೌತಮ್ ಲೈಬ್ರರಿ ವಿಷಯವನ್ನು ಜಗತಿಗೆ ತಿಳಿಸಿದ. ಈ ವಿಚಾರ ಯಾಕೆ ಹೇಳಿಲ್ಲ ಎಂದು ಜಗತಿ ವಸುನಾ ಕೇಳಿದಳು. ಬಳಿಕ ವಸು ಎಲ್ಲಾ ವಿಚಾರವನ್ನು ಜಗತಿ ಮೇಡಮ್ಗೆ ವಿವರಿಸಿದಳು. ವಸು ಹೇಳುತ್ತಿದ್ದಂತೆ ರಿಷಿಗೆ ಫೋನ್ ಮಾಡು ಎಂದು ಜಗತಿ ಹೇಳಿದಳು. ಯಾಕಿರಬಹುದೆಂದು ವಸುಧರಾ ಗಾಬರಿಯಲ್ಲೇ ಫೋನ್ ಮಾಡಿದಳು.

ರಿಷಿ ಫೋನ್ ರಿಸೀವ್ ಮಾಡುತ್ತಿದ್ದಂತೆ ಜಗತಿ ಧನ್ಯವಾದ ತಿಳಿಸಿದಳು. ಅಚ್ಚರಿಯಾದ ರಿಷಿ ಯಾಕೆಂದು ಕೇಳುವಷ್ಟರಲ್ಲಿ ಲೈಬ್ರರಿಯಲ್ಲಿ ವಸುಧರಾಳನ್ನು ಸೇವ್ ಮಾಡಿದ್ದಕ್ಕೆ ಧನ್ಯವಾದ ಎಂದು ಜಗತಿ ಹೇಳಿದಳು. ವಸುಧರಾ ಎಲ್ಲಾ ವಿಚಾರವನ್ನು ಜಗತಿಗೆ ಯಾಕೆ ಹೇಳಿದಳೆಂದು ರಿಷಿ ಕೋಪಿಸಿಕೊಂಡ. ವಸು ಮೇಲೆ ಕೂಗಾಡಿದ. ಈ ವಿಚಾರ ಹೇಳಿದ್ದು ನಾನಲ್ಲ ಎಂದು ವಸು ಹೇಳಿದರೂ ಸಹ ರಿಷಿ ಕೇಳಿಸಿಕೊಂಡಿಲ್ಲ. ಮಾತಿನ ಭರದಲ್ಲಿ ರಿಷಿ ಈ ಹಿಂದೆ ವಸುಧರಾಳನ್ನು ಹಾಸ್ಟೆಲ್‌ಗೆ ಸೇರಿಸುವಂತೆ ಹೇಳಿದ್ದ ವಿಚಾರವನ್ನು ಬಾಯ್ಬಿಟ್ಟ. ವಸುಧರಾ ಹಾಸ್ಟೆಲ್ ವಿಷಯ ಏನೆಂದು ಕೇಳುತ್ತಿದ್ದಂತೆ ರಿಷಿ ಫೋನ್ ಕಟ್ ಮಾಡಿದ.

ಇದನ್ನೂ ಓದಿ
Image
Honganasu: ಅಪ್ಪನ ಸಂತೋಷಕ್ಕಾಗಿ ಜಗತಿಯನ್ನು ಮನೆಗೆ ಕರೆಯಲು ನಿರ್ಧರಿಸಿದ ರಿಷಿ; ದೇವಯಾನಿ ಒಪ್ಪಿಕೊಳ್ತಾಳಾ?
Image
ಹೊಂಗನಸು: ಮಹೇಂದರ್‌‌ಗೆ ಹೃದಯಾಘಾತ; ಪತಿಯ ಸ್ಥಿತಿ ನೋಡಿ ಬಿಕ್ಕಿಬಿಕ್ಕಿ ಅಳುತ್ತಿರುವ ಜಗತಿ
Image
Honganasu: ಲವ್‌ಲೆಟರ್ ಬರೆದು ಪೇಚಿಗೆ ಸಿಲುಕಿದ ರಿಷಿ; ಯಾರೆಂದು ಗೊತ್ತಾಗೋವರೆಗೂ ಬಿಡಲ್ಲ ಅಂತ ಪಟ್ಟುಹಿಡಿದ ವಸು
Image
Honganasu; ಜಗತಿ ಕೈ ಸೇರಿದ ಮಗನ ಲವ್ ಲೆಟರ್; ರಿಷಿನೆ ಬರೆದಿದ್ದೆಂದು ವಸುಧರಗೆ ಗೊತ್ತಾಗೋಯ್ತಾ?

ಇತ್ತ ಗೌತಮ್‌ ಲೈಬ್ರರಿಯಲ್ಲಿ ಏನ್ ನಡೆಯಿತು ಎಂದು ಯೋಚಿಸುತ್ತಾ ಕುಳಿತಿದ್ದ. ಅಷ್ಟೊತ್ತಿಗೆ ರಿಷಿ ರೂಮಿಗೆ ಎಂಟ್ರಿ ಕೊಟ್ಟ. ಗೌತಮ್‌ನನ್ನು ಮಾತಾಡಿಸಬೇಕು ಎನ್ನುವಷ್ಟೊತ್ತಿಗೆ ವಸುಧರಾ ಪೇಂಟಿಂಗ್ ಮಾಯವಾಗಿದ್ದನ್ನು ಗಮನಿಸಿದ. ಎಲ್ಲಿ ಎಂದು ಗೌತಮ್‌ನ ಕೇಳಿದ, ಆದರೆ ಗೊತ್ತಿಲ್ಲ ಎಂದು ಹೇಳಿ ಗೌತಮ್ ಮಲಗಿದ. ಕಾಲೇಜಿನಲ್ಲಿ ಮಹೇಂದ್ರ ಎಲ್ಲಾ ಚಾಟ್ ಓಪನ್ ಮಾಡಿ ನೋಡುತ್ತಿದ್ದ. ಗೌತಮ್ ಮಿಸ್ ಆಗಿದ್ದ ಪೇಂಟಿಂಗ್ ಅನ್ನು ಹುಡುಕುತ್ತಾ ಮಹೇಂದ್ರ ಬಳಿ ಬಂದು ಕುಳಿತ. ಮಹೇಂದ್ರ ಬಳಿ ಇದ್ದ ಚಾಟ್‌ಗಳನ್ನು ನೋಡಿ ವಸುಧರಾ ಪೇಂಟಿಂಗ್ ತೆಗೆದುಕೊಂಡು ಹೊರಟ. ಗೌತಮ್ ನಡವಳಿಕೆ ಮಹೇಂದ್ರನಿಗೆ ಅನುಮಾನ ಮೂಡಿಸಿತು. ಗೌತಮ್ ಏನೋ ಕುಚೇಷ್ಟೆ ಮಾಡುತ್ತಿದ್ದಾನೆ. ಅದನ್ನು ಕಂಡು ಹಿಡಿಯಬೇಕೆಂದು ಯೋಚಿಸಿದ. ಗೌತಮ್ ಪ್ರೀತಿಯ ವಿಚಾರ ಮಹೇಂದ್ರನಿಗೆ ಗೊತ್ತಾಗುತ್ತಾ? ವಸುಧರಾಳಿಗೆ ಗೌತಮ್ ಪ್ರಪೋಸ್ ಮಾಡ್ತಾನಾ ಎನ್ನುವುದು ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ