ಲಾಯರ್ ಜಗದೀಶ್ ಅವರಿಗೆ ಬಿಗ್ ಬಾಸ್ ಆಟ ಹೇಳಿ ಮಾಡಿಸಿದಂತಿದೆ. ಆರಂಭದಿಂದಲೂ ಅವರು ಸಖತ್ ಸದ್ದು ಮಾಡುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಅವರು ಎಲ್ಲರ ಜೊತೆಗೂ ಕಿರಿಕ್ ಮಾಡಿಕೊಂಡಿದ್ದಾರೆ. ಆದರೆ ಹೆಚ್ಚು ಜಗಳ ಮಾಡಿದ್ದು ನಟಿ ಹಂಸಾ ಜೊತೆ. ಹಾಗಂತ ಆ ಜಗಳ ಹಾಗೆಯೇ ಮುಂದುವರಿದಿಲ್ಲ. ಹಂಸಾ ಜೊತೆ ಜಗದೀಶ್ ಎಷ್ಟು ಜಗಳ ಮಾಡಿದ್ದಾರೋ ಅಷ್ಟೇ ಸ್ನೇಹ ಕೂಡ ಬೆಳೆಸಿದ್ದಾರೆ. ಸೋಮವಾರದ (ಅಕ್ಟೋಬರ್ 14) ಸಂಚಿಕೆಯಲ್ಲಿ ಜಗದೀಶ್ ಅವರು ಲಿಪ್ಸ್ಟಿಕ್ ಕಲೆ ಬಗ್ಗೆ ವಿಷಯ ಪ್ರಸ್ತಾಪ ಮಾಡಿದ್ದಾರೆ.
ಲಿವಿಂಗ್ ಏರಿಯಾದಲ್ಲಿ ಎಲ್ಲರೂ ಮಾತನಾಡುತ್ತಾ ಕುಳಿತಿದ್ದಾಗ ಜಗದೀಶ್ ಅವರು ಎಂಟ್ರಿ ನೀಡಿದರು. ಅವರು ಬಿಳಿ ಬಣ್ಣದ ಶರ್ಟ್ ಹಾಕಿಕೊಂಡು ಬಂದರು. ತಮ್ಮ ಶರ್ಟ್ ಮೇಲೆ ಲಿಪ್ಸ್ಟಿಕ್ ಗುರುತು ಇದೆ ಎಂದು ಅವರು ಹೇಳಿದರು. ‘ನನ್ನ ಶರ್ಟ್ ಮೇಲೆ ನಿಮ್ಮ ಲಿಪ್ ಸ್ಟಿಕ್ ಕಲೆ ಇದೆ’ ಎಂದು ನೇರವಾಗಿ ಹಂಸಾ ಬಳಿಯೇ ಜಗದೀಶ್ ಹೇಳಿದರು. ಅದನ್ನು ಹಂಸಾ ಕೂಡ ಅಲ್ಲ ಎನ್ನಲಿಲ್ಲ.
‘ನಿನ್ನೆ ಹಗ್ ಮಾಡಿದಾಗ ಈ ಕಲೆ ಆಗಿದ್ದು’ ಎಂದು ಹಂಸಾ ಅವರು ಹೇಳಿದರು. ಅಲ್ಲದೇ, ‘ಬೇಕಿದ್ದರೆ ವಾಶ್ ಮಾಡಿ ಕೊಡುವೆ’ ಎಂದು ಕೂಡ ಅವರು ಹೇಳಿದರು. ಜಗದೀಶ್ ಹಾಗೂ ಹಂಸಾ ಅವರ ನಡುವಿನ ಸ್ನೇಹ-ಜಗಳ ಎಲ್ಲರಿಗೂ ಗೊಂದಲ ಮೂಡಿಸುವ ರೀತಿಯಲ್ಲಿ ಇದೆ. ಹಂಸಾ ಅವರು ಕ್ಯಾಪ್ಟನ್ ಆದಾಗ ಜಗದೀಶ್ ಸಿಕ್ಕಾಪಟ್ಟೆ ಕಾಟ ಕೊಟ್ಟಿದ್ದರು. ಏಕವಚನದಲ್ಲಿ ಬೈಯ್ದುಕೊಳ್ಳುವ ಮಟ್ಟಕ್ಕೆ ಕಿತ್ತಾಡಿದ್ದರು. ಆದರೆ ಆ ಘಟನೆಗಳ ಬಳಿಕ ಅವರಿಬ್ಬರ ನಡುವಿನ ಸ್ನೇಹ ಇನ್ನಷ್ಟು ಹೆಚ್ಚಾಯಿತು.
ಇದನ್ನೂ ಓದಿ: ಬಿಗ್ ಬಾಸ್ ತೊರೆಯಲು ಸುದೀಪ್ ನಿರ್ಧಾರ: ಇದೇ ಕೊನೆಯ ಸೀಸನ್; ಅಧಿಕೃತ ಘೋಷಣೆ
ಹಾಗಾದ್ರೆ ಈ ಲಿಪ್ಸ್ಟಿಕ್ ಹತ್ತಿದ್ದು ಯಾವಾಗ? ಭಾನುವಾರದ ಸಂಚಿಕೆಯಲ್ಲಿ ‘ಅನಿಸುತಿದೆ ಯಾಕೋ ಇಂದು..’ ಹಾಡಿಗೆ ಹಂಸಾ ಮತ್ತು ಜಗದೀಶ್ ಅವರು ಡ್ಯಾನ್ಸ್ ಮಾಡಿ ಎಲ್ಲರನ್ನೂ ರಂಜಿಸಿದ್ದರು. ಅವರಿಬ್ಬರ ಉತ್ಸಾಹಕ್ಕೆ ಸುದೀಪ್ ಕೂಡ ಭೇಷ್ ಎಂದಿದ್ದರು. ವೀಕೆಂಡ್ ಸಂಚಿಕೆ ಆದ್ದರಿಂದ ಹಂಸಾ ಅವರು ಚೆನ್ನಾಗಿ ಮೇಕಪ್ ಮಾಡಿಕೊಂಡಿದ್ದರು. ಖುಷಿಯಿಂದ ಡ್ಯಾನ್ಸ್ ಮಾಡುವಾಗ ಅವರ ಲಿಪ್ಸ್ಟಿಕ್ ಬಣ್ಣ ಜಗದೀಶ್ ಶರ್ಟ್ಗೆ ಅಂಟಿತ್ತು ಅಷ್ಟೇ.
ಇಂಥ ಹಲವು ಘಟನೆಗಳಿಂದಾಗಿ ಜಗದೀಶ್ ಅವರಿಗೆ ಹೆಚ್ಚು ಸ್ಕ್ರೀನ್ ಸ್ಪೇಸ್ ಸಿಗುತ್ತಿದೆ. ಅನೇಕ ಬಾರಿ ಅವರು ಬಿಗ್ ಬಾಸ್ ಮನೆಯ ನಿಯಮ ಮುರಿದಿದ್ದರು. ಬಿಗ್ ಬಾಸ್ ಕಾರ್ಯಕ್ರಮದ ಬಗ್ಗೆಯೂ ಅವರು ಹಗುರಾಗಿ ಮಾತನಾಡಿದ್ದರು. ಹಾಗಿದ್ದರೂ ಕೂಡ ಅವರ ಮೇಲೆ ಕ್ರಮ ತೆಗೆದುಕೊಂಡಿಲ್ಲ. ಇದರಿಂದಾಗಿ ಅವರಿಗೆ ಇನ್ನಷ್ಟು ಪ್ರೋತ್ಸಾಹ ಸಿಕ್ಕಂತೆ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.