Kichcha Sudeep: ಸುದೀಪ್ಗೆ ಅವಮಾನ? ಬಿಗ್ ಬಾಸ್ ತೊರೆಯುವುದರ ಹಿಂದಿದೆ ಶಾಕಿಂಗ್ ವಿಚಾರ
ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ನಿರೂಪಣೆ ಮಾಡುತ್ತಿರುವುದು 11ನೇ ಸೀಸನ್. ಅವರು ‘ಬಿಗ್ ಬಾಸ್’ನ ತೊರೆಯುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಅವರು ಈ ಘೋಷಣೆ ಮಾಡುವುದರ ಹಿಂದೆ ಯಾವುದೋ ಒಂದು ಬಲವಾದ ಕಾರಣವೇ ಇದೆ ಎಂದು ಹೇಳಲಾಗುತ್ತಿದೆ.
ಕಿಚ್ಚ ಸುದೀಪ್ ಅವರು ಏಕಾಏಕಿ ‘ಬಿಗ್ ಬಾಸ್’ ನಿರೂಪಣೆಯಿಂದ ಕೆಳಕ್ಕೆ ಇಳಿಯೋ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರು ಅನೌನ್ಸ್ಮೆಂಟ್ ಸಾಕಷ್ಟು ಶಾಕಿಂಗ್ ಎನಿಸಿದೆ. ಅವರು ಏಕಾಏಕಿ ಬಿಗ್ ಬಾಸ್ ತೊರೆಯೋ ಹಿಂದೆ ಒಂದು ದೊಡ್ಡ ಕಾರಣ ಇದೆ ಎಂದು ವರದಿ ಆಗಿದೆ. ಈ ಬಗ್ಗೆ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರು ಟ್ವೀಟ್ ಮಾಡಿದ್ದಾರೆ.
ಕಿಚ್ಚ ಸುದೀಪ್ ಅವರು ಬಿಗ್ ಬಾಸ್ನ 10 ಸೀಸನ್ಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ಅವರು ಈಗ ನಿರೂಪಣೆ ಮಾಡುತ್ತಿರುವುದು 11ನೇ ಸೀಸನ್. ಅವರು ‘ಬಿಗ್ ಬಾಸ್’ನ ತೊರೆಯುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಅವರು ಈ ಘೋಷಣೆ ಮಾಡುವುದರ ಹಿಂದೆ ಯಾವುದೋ ಒಂದು ಬಲವಾದ ಕಾರಣವೇ ಇದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ರೂಪೇಶ್ ರಾಜಣ್ಣ ಟ್ವೀಟ್ ಮಾಡಿದ್ದಾರೆ.
‘ಬಿಗ್ ಬಾಸ್ ಎಂಬ ಕಾರ್ಯಕ್ರಮ ನಡೆಸುವ ಕೆಲವು ಕನ್ನಡ ದ್ರೋಹಿಗಳೆ ನಿಮ್ಮ ಆಟಕ್ಕೆ ಸುದೀಪ್ ನಿರೂಪಣೆ ನಿಲ್ಲಿಸಬೇಕಾಯಿತು. ಅವರಿಗೆ ಮಾಡಿದ ಅವಮಾನ ಸಹಿಸುವುದಿಲ್ಲ. ಮುಂಬೈ ಮರಾಠಿ ಹಾಗೂ ತಮಿಳು ನಿರ್ದೇಶಕರೇ ಮೊದಲು ಬಿಗ್ ಬಾಸ್ ಬಿಡಿ, ಇಲ್ಲ ಬಿಗ್ ಬಾಸ್ ನಿಲ್ಲಬೇಕು. ಅಸಲಿ ವಿಷಯ ನಾಳೆ ಮಾತಾಡ್ತೀನಿ’ ಎಂದು ರೂಪೇಶ್ ರಾಜಣ್ಣ ಹೇಳಿದ್ದಾರೆ.
ಇದನ್ನೂ ಓದಿ: ಎಲಿಮಿನೇಷನ್ ನಡೆಸದೇ ಇದ್ದಿದ್ದೇಕೆ? ಸುದೀಪ್ ಕೊಟ್ಟ ಕಾರಣ ಒಪ್ಪಿಕೊಳ್ಳುವಂಥದ್ದೇ
ಬಿಗ್ ಬಾಸ್ ಎಂಬ ಕಾರ್ಯಕ್ರಮ ನಡೆಸುವ ಕೆಲವು ಕನ್ನಡ ದ್ರೋಹಿಗಳ ನಿಮ್ಮ ಕಿತ್ತೋದ್ ಆಟಕ್ಕೆ @KicchaSudeep ಬಿಗ್ ಬಾಸ್ ನಿರೂಪಕರಾಗಿ ನಿಲ್ಲಿಸಬೇಕಾಗಿದೆ. ಅವರಿಗೆ ಮಾಡಿದ ಅವಮಾನ ಸಹಿಸೋಲ್ಲ ಎ ಮುಂಬೈ ಮರಾಠಿ ಹಾಗೂ ತಮಿಳ್ ನಿರ್ದೇಶಕ ಮೊದಲು ಬಿಗ್ ಬಾಸ್ ಬಿಡಿ ಇಲ್ಲ ಬಿಗ್ ಬಾಸ್ ನಿಲ್ಲಬೇಕು ಅಸಲಿ ವಿಷಯ ನಾಳೆ ಮಾತಾಡ್ತೀನಿ.@Chakravarthy_dj
— ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) October 13, 2024
ರೂಪೇಶ್ ರಾಜಣ್ಣ ಅವರು ಕನ್ನಡ ಪರ ಹೋರಾಟಗಾರ. ಕನ್ನಡದ ಪರವಾಗಿ ಅವರು ಧ್ವನಿ ಎತ್ತುತ್ತಾರೆ. ಅವರು ಈ ಮೊದಲು ಬಿಗ್ ಬಾಸ್ಗೂ ಹೋಗಿ ಬಂದಿದ್ದಾರೆ. ಹೀಗಾಗಿ, ಅವರ ಜನಪ್ರಿಯತೆ ಹೆಚ್ಚಿದೆ. ಅಸಲಿಗೆ ಬಿಗ್ ಬಾಸ್ನಲ್ಲಿ ಏನಾಯ್ತು? ಅಲ್ಲಿ ನಡೆದ ಘಟನೆ ಏನು ಎನ್ನುವ ಬಗ್ಗೆ ಕುತೂಹಲ ಮೂಡಿದೆ. ಇಂದು (ಅಕ್ಟೋಬರ್ 14) ರೂಪೇಶ್ ರಾಜಣ್ಣ ಈ ಬಗ್ಗೆ ಘೋಷಣೆ ಮಾಡೋ ಸಾಧ್ಯತೆ ಇದೆ.
ಸುದೀಪ್ ಅವರು ಬಿಗ್ ಬಾಸ್ನ ಅತಿಯಾಗಿ ಪ್ರೀತಿಸುತ್ತಾರೆ. ಅವರು ಶೋನ ತೊರೆದಿದ್ದು ಏಕೆ ಎನ್ನುವ ಪ್ರಶ್ನೆ ಅನೇಕರಿಗೆ ಮೂಡಿತ್ತು. ಒಂದೊಮ್ಮೆ ಅವರು ಈ ಘೋಷಣೆ ಮಾಡುವುದಿದ್ದರೂ ಸೀಸನ್ ಕೊನೆಯಲ್ಲಿ ಮಾಡಬೇಕಿತ್ತು. ಅವರು ಈ ರೀತಿ ಮಾಡಿರುವ ಟ್ವೀಟ್ ಸಾಕಷ್ಟು ಅಚ್ಚರಿ ತಂದಿದೆ. ಇದರ ಹಿಂದೆ ಯಾವುದೋ ದೊಡ್ಡ ಘಟನೆ ನಡೆದಿದೆ ಎಂದು ಊಹಿಸಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:44 am, Mon, 14 October 24