ಎಲಿಮಿನೇಷನ್ ನಡೆಸದೇ ಇದ್ದಿದ್ದೇಕೆ? ಸುದೀಪ್ ಕೊಟ್ಟ ಕಾರಣ ಒಪ್ಪಿಕೊಳ್ಳುವಂಥದ್ದೇ

ಎರಡನೇ ವಾರದಲ್ಲಿ ‘ಬಿಗ್ ಬಾಸ್​ ಕನ್ನಡ ಸೀಸನ್​ 11’ ಶೋನಲ್ಲಿ ಸ್ಪರ್ಧಿಗಳ ನಡುವೆ ಪೈಪೋಟಿ ಜೋರಾಗಿದೆ. ಸ್ವರ್ಗ ವರ್ಸಸ್​ ನರಕ ಎಂಬ ಕಾನ್ಸೆಪ್ಟ್ ಇತ್ತು. ಅದು ಈಗ ಇಲ್ಲ. ಕಳೆದ ವಾರ ಎಲಿಮಿನೇಷನ್ ಇಲ್ಲ. ಅದಕ್ಕೆ ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ.

ಎಲಿಮಿನೇಷನ್ ನಡೆಸದೇ ಇದ್ದಿದ್ದೇಕೆ? ಸುದೀಪ್ ಕೊಟ್ಟ ಕಾರಣ ಒಪ್ಪಿಕೊಳ್ಳುವಂಥದ್ದೇ
ಸುದೀಪ್
Follow us
|

Updated on: Oct 14, 2024 | 6:52 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಎರಡನೇ ವಾರ ಪೂರ್ಣಗೊಂಡಿದೆ. ಯಾರು ಎಲಿಮಿನೇಷನ್ ಆಗುತ್ತಾರೆ ಎನ್ನುವ ಪ್ರಶ್ನೆ ಈ ವಾರ ಮೂಡಿಯೇ ಇರಲಿಲ್ಲ. ಅದಕ್ಕೆ ಕಾರಣವೂ ಇತ್ತು. ಈ ವಾರ ವೋಟಿಂಗ್ ಲೈನ್ ತೆಗೆದಿರುವುದಿಲ್ಲ ಎಂದು ಎಪಿಸೋಡ್​ನಲ್ಲಿ ಮಾಹಿತಿ ನೀಡಲಾಗಿತ್ತು. ಆದರೆ, ಈ ವಿಚಾರ ಮನೆ ಮಂದಿಗೆ ಗೊತ್ತಿರಲಿಲ್ಲ. ಕೊನೆಯವರೆಗೂ ಟೆನ್ಷನ್ ಕೊಟ್ಟ ಕಿಚ್ಚ ಅಂತಿಮವಾಗಿ ಎಲಿಮಿನೇಷನ್ ಮಾಡುವುದಿಲ್ಲ ಎಂದು ಘೋಷಿಸಿದರು. ಆಗ ಮನೆ ಮಂದಿ ನಿಟ್ಟುಸಿರು ಬಿಟ್ಟರು.

ಕಳೆದ ವಾರ ಭವ್ಯಾ ಗೌಡ, ಧನರಾಜ್, ಧರ್ಮ ಕೀರ್ತಿರಾಜ್, ರಂಜಿತ್ ಕುಮಾರ್, ತ್ರಿವಿಕ್ರಂ, ಮಾನಸಾ, ಐಶ್ವರ್ಯಾ, ಗೋಲ್ಡ್ ಸುರೇಶ್, ಹಂಸಾ, ಲಾಯರ್ ಜಗದೀಶ್, ಅನುಷಾ ರೈ ನಾಮಿನೇಟ್ ಆಗಿದ್ದರು. ಶನಿವಾರದ (ಅಕ್ಟೋಬರ್ 12) ಎಪಿಸೋಡ್​ನಲ್ಲಿ ಸುದೀಪ್ ಯಾರನ್ನೂ ಸೇವ್ ಮಾಡಿರಲಿಲ್ಲ. ಭಾನುವಾರ ಒಬ್ಬೊಬ್ಬರನ್ನಾಗಿ ಸೇವ್ ಮಾಡುತ್ತಾ ಬಂದರು.

ಕೊನೆಯಲ್ಲಿ ಅನುಷಾ ರೈ, ತ್ರಿವಿಕ್ರಂ ಹಾಗೂ ರಂಜಿತ್ ಉಳಿದರು. ಈ ಮೂವರಲ್ಲಿ ಮೊದಲು ಅನುಷಾ ಅವರನ್ನು ಸೇವ್ ಮಾಡಿದರು. ಕೊನೆಯಲ್ಲಿ ತ್ರಿವಿಕ್ರಂ ಹಾಗೂ ರಂಜಿತ್ ಉಳಿದರು. ಇಬ್ಬರೂ ದೊಡ್ಮನೆಯಲ್ಲಿ ಸ್ಟ್ರಾಂಗ್ ಎನಿಸಿಕೊಂಡಿದ್ದಾರೆ. ಯಾರೇ ಹೋದರೂ ಅದು ಬಿಗ್ ಬಾಸ್ ಆಟಕ್ಕೆ ಆಗುವ ನಷ್ಟವೇ. ಹೀಗಾಗಿ, ಎಲ್ಲರಲ್ಲೂ ಟೆನ್ಷನ್ ಮೂಡಿತ್ತು.

‘ತ್ರಿವಿಕ್ರಂ ಬ್ಯಾಡ್​ಲಕ್​’ ಎಂದರು ಸುದೀಪ್. ಬಿಗ್ ಬಾಸ್​ ಮನೆಯಲ್ಲಿ ಒಮ್ಮೆ ಮೌನ ಆವರಿಸಿತು. ಯಾರೂ ತುಟಿ ಪಿಟಕ್ ಎನ್ನಲಿಲ್ಲ. ಕೊನೆಗೆ ಸುದೀಪ್ ಅವರು, ‘ಇಬ್ಬರೂ ಹೋಗುತ್ತಿಲ್ಲ, ಅಭಿನಂದನೆಗಳು’ ಎಂದರು. ಈ ವಿಚಾರ ಕೇಳಿ ಎಲ್ಲರೂ ಖುಷಿಪಟ್ಟರು.

ಇದನ್ನೂ ಓದಿ: ಬಿಗ್ ಬಾಸ್ ತೊರೆಯಲು ಸುದೀಪ್ ನಿರ್ಧಾರ: ಇದೇ ಕೊನೆಯ ಸೀಸನ್; ಅಧಿಕೃತ ಘೋಷಣೆ

‘ಈ ವಾರ ನಿಯಮಗಳನ್ನು ಸಾಕಷ್ಟು ಬ್ರೇಕ್ ಮಾಡಿದ್ದೀರಿ, ಬಿಗ್ ಬಾಸ್ ಮನೆಯ ನಿಯಮಗಳಿಗೆ ಯಾರೂ ಗೌರವ ನೀಡಲೇ ಇಲ್ಲ. ಈ ಕಾರಣದಿಂದಲೇ ಬಿಗ್ ಬಾಸ್ ನೀಡಿದ್ದ ಪನಿಶ್​ಮೆಂಟ್,​ ನಾಮಿನೇಷನ್. ಎಲ್ಲರೂ ನಾಮಿನೇಟ್ ಆದಾಗ ಕೆಲವೊಮ್ಮೆ ಅರ್ಹವಲ್ಲದ ವ್ಯಕ್ತಿ ಹೋಗಿ ಬಿಡುತ್ತಾರೆ’ ಎಂದರು ಸುದೀಪ್. ಈ ವಾರ ಎಲಿಮಿನೇಟ್ ಮಾಡದಿರಲು ಇದುವೇ ಕಾರಣ. ಇದನ್ನು ಅನೇಕರು ಇಪ್ಪಿದ್ದಾರೆ. ‘ಅನಿರೀಕ್ಷಿತಗಳಿಗೆ ರೆಡಿ ಆಗಿ’ ಎಂದು ಸುದೀಪ್ ಎಚ್ಚರಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮನೆ ಅಂಗಳಕ್ಕೆ ಎಂಟ್ರಿ ಕೊಟ್ಟ ಕರಿ ಚಿರತೆ; ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ
ಮನೆ ಅಂಗಳಕ್ಕೆ ಎಂಟ್ರಿ ಕೊಟ್ಟ ಕರಿ ಚಿರತೆ; ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ
ಸಿದ್ರಾಮಯ್ಯ ಕಾರು ಬರ್ತಿದ್ದಂತೆ ನುಗ್ಗಿಬಂದ ವ್ಯಕ್ತಿ; ವಶಕ್ಕೆ ಪಡೆದ ಪೊಲೀಸ್
ಸಿದ್ರಾಮಯ್ಯ ಕಾರು ಬರ್ತಿದ್ದಂತೆ ನುಗ್ಗಿಬಂದ ವ್ಯಕ್ತಿ; ವಶಕ್ಕೆ ಪಡೆದ ಪೊಲೀಸ್
ಹಂಸಾ, ಜಗದೀಶ್ ಬಗ್ಗೆ ನೇರವಾಗಿ ಮಾತಾಡಿದ ಧನರಾಜ್; ಕಿಚ್ಚ ಸುದೀಪ್​ಗೂ ಶಾಕ್
ಹಂಸಾ, ಜಗದೀಶ್ ಬಗ್ಗೆ ನೇರವಾಗಿ ಮಾತಾಡಿದ ಧನರಾಜ್; ಕಿಚ್ಚ ಸುದೀಪ್​ಗೂ ಶಾಕ್
ಎಡಿಜಿಪಿ ಚಂದ್ರಶೇಖರ್ ದಾಖಲಿಸಿದ ದೂರಿನ ಬಗ್ಗೆ ಕುಮಾರಸ್ವಾಮಿ ಖಡಕ್ ಮಾತು
ಎಡಿಜಿಪಿ ಚಂದ್ರಶೇಖರ್ ದಾಖಲಿಸಿದ ದೂರಿನ ಬಗ್ಗೆ ಕುಮಾರಸ್ವಾಮಿ ಖಡಕ್ ಮಾತು
ಐಶ್ವರ್ಯಾ, ಧರ್ಮ, ಅನುಷಾ ಲವ್ ಸ್ಟೋರಿ ಚರ್ಚೆ; ಹಳೇ ವಿಷಯ ತೆಗೆದ ಸುರೇಶ್
ಐಶ್ವರ್ಯಾ, ಧರ್ಮ, ಅನುಷಾ ಲವ್ ಸ್ಟೋರಿ ಚರ್ಚೆ; ಹಳೇ ವಿಷಯ ತೆಗೆದ ಸುರೇಶ್
ಕರ್ನಾಟಕದ ಹುಲಿ ಕುಣಿತ ಕಂಡು ತಲೆ ದೂಗಿದ ಬಾಲಿವುಡ್ ಬಾಬ ಸಂಜಯ್ ದತ್
ಕರ್ನಾಟಕದ ಹುಲಿ ಕುಣಿತ ಕಂಡು ತಲೆ ದೂಗಿದ ಬಾಲಿವುಡ್ ಬಾಬ ಸಂಜಯ್ ದತ್
ಜಗದೀಶ್-ಹಂಸಾ ಡುಯೆಟ್, ವಕೀಲರ ಮನಸು ಗೆಲ್ಲೋ ಪ್ರಯತ್ನದಲ್ಲಿ ಹಂಸಾ
ಜಗದೀಶ್-ಹಂಸಾ ಡುಯೆಟ್, ವಕೀಲರ ಮನಸು ಗೆಲ್ಲೋ ಪ್ರಯತ್ನದಲ್ಲಿ ಹಂಸಾ
ಬಳ್ಳಾರಿ: ಉತ್ಸವ ಮೂರ್ತಿಗಾಗಿ ಪರಸ್ಪರ ಬಡಿದಾಟ, ಹರಿದ ನೆತ್ತರು
ಬಳ್ಳಾರಿ: ಉತ್ಸವ ಮೂರ್ತಿಗಾಗಿ ಪರಸ್ಪರ ಬಡಿದಾಟ, ಹರಿದ ನೆತ್ತರು
ಕೊಪ್ಪಳ: ಬೀಡಿ ಸೇದುತ್ತ ಕೆಎಸ್​ಆರ್​ಟಿಸಿ ಬಸ್ ಓಡಿಸಿದ ಚಾಲಕ, ವಿಡಿಯೋ ವೈರಲ್
ಕೊಪ್ಪಳ: ಬೀಡಿ ಸೇದುತ್ತ ಕೆಎಸ್​ಆರ್​ಟಿಸಿ ಬಸ್ ಓಡಿಸಿದ ಚಾಲಕ, ವಿಡಿಯೋ ವೈರಲ್
ದಾವಣಗೆರೆ: ಎಳೆಹೊಳೆ ಗ್ರಾಮದಲ್ಲಿ ಕ್ರಿಶ 1271ರ ಶಾಸನ ಪತ್ತೆ
ದಾವಣಗೆರೆ: ಎಳೆಹೊಳೆ ಗ್ರಾಮದಲ್ಲಿ ಕ್ರಿಶ 1271ರ ಶಾಸನ ಪತ್ತೆ