AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಿಳಾ ಆಯೋಗದ ಆರೋಪಕ್ಕೆ ಬಿಗ್ ಬಾಸ್ ಸ್ಪರ್ಧಿಗಳಿಂದಲೇ ಉತ್ತರ ಕೊಡಿಸಿದ ಸುದೀಪ್

ಮಹಿಳಾ ಸ್ಪರ್ಧಿಗಳನ್ನು ನರಕದಲ್ಲಿ ಇಟ್ಟಿದ್ದಕ್ಕೆ ಕೆಲವರಿಂದ ವಿರೋಧ ವ್ಯಕ್ತವಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿತ್ತು. ಈಗ ನರಕವನ್ನು ತೆಗೆದುಹಾಕಲಾಗಿದೆ. ಆದರೆ ‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ಕಾರ್ಯಕ್ರಮದ ಮೇಲೆ ಕೇಳಿಬಂದ ಆರೋಪಕ್ಕೆ ಮಹಿಳಾ ಸ್ಪರ್ಧಿಗಳಿಂದಲೇ ಸುದೀಪ್​ ಅವರು ಸ್ಪಷ್ಟನೆ ಕೊಡಿಸಿದ್ದಾರೆ.

ಮಹಿಳಾ ಆಯೋಗದ ಆರೋಪಕ್ಕೆ ಬಿಗ್ ಬಾಸ್ ಸ್ಪರ್ಧಿಗಳಿಂದಲೇ ಉತ್ತರ ಕೊಡಿಸಿದ ಸುದೀಪ್
ಬಿಗ್​ ಬಾಸ್​ ಕನ್ನಡ ಸೀಸನ್​ 11
ಮದನ್​ ಕುಮಾರ್​
|

Updated on: Oct 13, 2024 | 10:02 PM

Share

‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ಶೋನಲ್ಲಿ ಸ್ವರ್ಗ ಮತ್ತು ನರಕ ಎಂಬ ಕಾನ್ಸೆಪ್ಟ್​ ಪರಿಚಯಿಸಲಾಗಿತ್ತು. ನರಕದಲ್ಲಿ ಇದ್ದ ಮಹಿಳಾ ಸ್ಪರ್ಧಿಗಳಿಗೆ ಶೌಚಾಲಯ, ಕುಡಿಯುವ ನೀರು ಸೇರಿದಂತೆ ಕೆಲವು ಬೇಸಿಕ್​ ಸೌಕರ್ಯಗಳನ್ನು ನೀಡಿಲ್ಲ ಎಂಬ ಆರೋಪ ಕೆಲವರಿಂದ ಕೇಳಿಬಂದಿತ್ತು. ಅಲ್ಲದೇ, ಈ ಬಗ್ಗೆ ಮಹಿಳಾ ಆಯೋಗಕ್ಕೂ ದೂರು ನೀಡಲಾಗಿತ್ತು. ಬಿಗ್​ ಬಾಸ್​ ಕಾರ್ಯಕ್ರಮದ ಮೇಲೆ ಕೇಳಿಬಂದ ಈ ಆರೋಪದ ಬಗ್ಗೆ ಭಾನುವಾರದ (ಅ.13) ಎಪಿಸೋಡ್​ನಲ್ಲಿ ನಿರೂಪಕ ಕಿಚ್ಚ ಸುದೀಪ್​ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೇ, ಮಹಿಳಾ ಸ್ಪರ್ಧಿಗಳಿಂದಲೂ ಅವರು ಉತ್ತರ ಕೊಡಿಸಿದ್ದಾರೆ.

‘ಸೂಪರ್​ ಸಂಡೇ ವಿತ್ ಸುದೀಪ’ ಸಂಚಿಕೆಯನ್ನು ಆರಂಭಿಸುವಾಗಲೇ ಸುದೀಪ್ ಅವರು ಒಂದು ಪ್ರಶ್ನೆ ಕೇಳಿದರು. ‘ನರಕದಲ್ಲಿ ಇದ್ದಾಗ ಎಷ್ಟು ಖುಷಿ ಇತ್ತು? ಇದು ತುಂಬ ಮುಖ್ಯವಾದ ಪ್ರಶ್ನೆ. ಮಹಿಳಾ ಆಯೋಗದವರು ಆರೋಪ ಮಾಡಿದ್ದಾರೆ. ಅನ್ಯಾಯ, ಅನಾನುಕೂಲ ಆಗಿದೆ ಅಂತ ಹೇಳಿದ್ದಾರೆ. ಈ ಬಗ್ಗೆ ಉತ್ತರ ನೀವು ನೀಡಿ’ ಎಂದು ಕಿಚ್ಚ ಸುದೀಪ್​ ಹೇಳಿದ್ದಾರೆ.

ಬಿಗ್​ ಬಾಸ್​ ಮನೆಗೆ ಕಾಲಿಟ್ಟ ಮಹಿಳಾ ಸ್ಪರ್ಧಿಗಳ ಪೈಕಿ ಚೈತ್ರಾ ಕುಂದಾಪುರ, ಮಾಸನಾ, ಮೋಕ್ಷಿತಾ ಪೈ, ಅನುಷಾ ರೈ, ಐಶ್ವರ್ಯಾ ಸಿಂಧೋಗಿ ಅವರು ನರಕವಾಸ ಅನುಭವಿಸಿದ್ದರು. ಅವರೆಲ್ಲ ಈ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ‘ಊಟದ್ದು ಬಿಟ್ಟರೆ ಬೇರೆ ಏನೂ ಸಮಸ್ಯೆ ಇರಲಿಲ್ಲ’ ಎಂದು ಮಾನಸಾ ಹೇಳಿದರು. ‘ದೊಡ್ಡ ಸಮಸ್ಯೆ ಏನೂ ಇರಲಿಲ್ಲ’ ಎಂದು ಚೈತ್ರಾ, ಮೋಕ್ಷಿತಾ, ಅನುಷಾ ಹೇಳಿದರು.

ಇದನ್ನೂ ಓದಿ: ‘ಸೋಲೋಕೆ ಬರ್ತೀರಿ, ನಾಚಿಕೆ ಆಗಬೇಕು’: ಬಿಗ್​ ಬಾಸ್​ ಸ್ಪರ್ಧಿಗಳಿಗೆ ಕ್ಲಾಸ್​ ತೆಗೆದುಕೊಂಡ ಜಗದೀಶ್

‘ನಾನು ನರಕದಲ್ಲಿ ತೊಂದರೆ ಅನುಭವಿಸಿಲ್ಲ. ನಮಗೆ ವಾಶ್​ ರೂಮ್​ ಬೇಕು ಎಂದು ಬಿಗ್​ ಬಾಸ್​ ಬಳಿ ಮನವಿ ಮಾಡಿದ ಕೂಡಲೇ ನರಕದ ಹೆಣ್ಮಕ್ಕಳು ಯಾವಾಗ ಬೇಕಿದ್ದರೂ ಸ್ವರ್ಗದ ವಾಶ್​ ರೂಮ್​ ಬಳಸಬಹುದು ಅಂತ ಅನುಮತಿ ಕೊಟ್ಟಿದ್ದರು. ಅಷ್ಟರಮಟ್ಟಿಗೆ ಸೂಕ್ಷ್ಮತೆಯಿಂದ ಸ್ಪಂದಿಸಿದ್ದಾರೆ’ ಎಂದು ಚೈತ್ರಾ ಕುಂದಾಪುರ ಹೇಳಿದ್ದಾರೆ. ಆ ಮೂಲಕ ತಮಗೆ ಯಾವುದೇ ತೊಂದರೆ ಆಗಿಲ್ಲ ಎಂದು ಎಲ್ಲ ಸ್ಪರ್ಧಿಗಳು ಹೇಳಿದ್ದಾರೆ. ‘ನಮ್ಮ ಶೋನಲ್ಲಿ ಇರುವ ಹೆಣ್ಮಕ್ಕಳ ಬಗ್ಗೆ ಕಾಳಜಿ ಇಟ್ಟಿದ್ದಕ್ಕೆ ಮಹಿಳಾ ಆಯೋಗಕ್ಕೆ ಧನ್ಯವಾದಗಳು’ ಎಂದಿದ್ದಾರೆ ಸುದೀಪ್​.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು