
‘ಬಿಗ್ ಬಾಸ್ ಕನ್ನಡ ಸೀಸನ್ 12’ರ (BBK 12) ಸ್ಪರ್ಧಿ ಡಾಗ್ ಸತೀಶ್ ಅವರು ಸದ್ಯ ಸುದ್ದಿಯಲ್ಲಿ ಇದ್ದಾರೆ. ಅವರು ಮೂರನೇ ವಾರವೇ ಹೊರ ಹೋದರು ಎಲ್ಲಾ ರೀತಿಯಲ್ಲೂ ಚರ್ಚೆಯಲ್ಲಿರುವ ಪ್ರಯತ್ನಮಾಡುತ್ತಿದ್ದಾರೆ. ಈಗ ಸತೀಶ್ ಅವರು ಫಿನಾಲೆ ದಿನ ಸುದೀಪ್ ಅವರು 12 ಬಾರಿ ಮಾತನಾಡಿಸಿದ್ದಾಗಿ ಹೇಳಿದ್ದಾರೆ. ಯಾವ ಸ್ಪರ್ಧಿಯನ್ನೂ ಅವರು ಇಷ್ಟು ಮಾತನಾಡಿಸಿಲ್ಲ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಈ ಮೂಲಕ ಸುದೀಪ್ ಅವರಿಗೆ ನಾನೇ ಫೇವರಿಟ್ ಸ್ಪರ್ಧಿ ಎಂಬರ್ಥದಲ್ಲಿ ಮಾತನಾಡಿದ್ದಾರೆ.
ಸತೀಶ್ ಅವರ ಕ್ಯಾರೆಕ್ಟರ್ ತುಂಬಾನೇ ವಿಚಿತ್ರ. ಅವರು ಯಾವುದೇ ವಿಷಯ ಸಿಕ್ಕರೂ ಅದರಿಂದ ಮೈಲೇಜ್ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಾರೆ. ಈಗ ಅವರು ಬಿಗ್ ಬಾಸ್ ಫಿನಾಲೆ ಬಗ್ಗೆ ಮಾತನಾಡಿದ್ದಾರೆ. ‘ಫಿನಾಲೆ ದಿನ ಬಿಗ್ ಬಾಸ್ ವೇದಿಕೆ ಮೇಲೆ ಸುದೀಪ್ ನನ್ನನ್ನು 18 ಬಾರಿ ಮಾತನಾಡಿಸಿದರು. ಉಳಿದ ಸ್ಪರ್ಧಿಗಳನ್ನು ಒಮ್ಮೆಯೂ ಮಾತನಾಡಿಸಿಲ್ಲ’ ಎಂದು ಹೇಳಿದ್ದಾರೆ.
ಸತೀಶ್ ಅವರು ಪಾರ್ಟಿ ಆಯೋಜನೆ ಮಾಡುತ್ತಿದ್ದಾರಂತೆ. ಗಿಲ್ಲಿಯನ್ನು ಈ ಪಾರ್ಟಿಗೆ ಅವರು ಕರೆಯೋದಿಲ್ಲವಂತೆ. ‘ನಾನು ಎಲ್ಲರಿಗೂ ಗೆಟ್ ಟುಗೆದರ್ ರೀತಿ ಪಾರ್ಟಿ ಆಯೋಜನೆ ಮಾಡುತ್ತಿದ್ದೇನೆ. ಗಿಲ್ಲಿನ ಇದಕ್ಕೆ ಕರೆಯಲ್ಲ. ಉಳಿದ ಸ್ಪರ್ಧಿಗಳು ಬರುತ್ತಾ ಬಿಡ್ತಾರೋ ಅವರಿಗೆ ಬಿಟ್ಟಿದ್ದು’ ಎಂದು ಸತೀಶ್ ಹೇಳಿದ್ದಾರೆ.
ಇದನ್ನೂ ಓದಿ: ಸುದೀಪ್ ವ್ಯಂಗ್ಯವಾಗಿ ಹೇಳಿದ್ದನ್ನೇ ಇಟ್ಟುಕೊಂಡು ಬಡಾಯಿಕೊಚ್ಚಿಕೊಂಡ ಸತೀಶ್
‘ನಿಮಗೆ ಶೇಕ್ಹ್ಯಾಂಡ್ ಮಾಡೋ ವಿಡಿಯೋ ಹಾಕಿದ್ರೆ ಲಕ್ಷ ಲಕ್ಷ ವೀವ್ಸ್ ಬರುತ್ತದೆ’ ಎಂದು ಸುದೀಪ್ ಹೇಳಿದ್ದರು. ಇದನ್ನು ಸುದೀಪ್ ಹೇಳಿದ್ದು ವ್ಯಂಗದ ರೀತಿಯಲ್ಲಿ. ಆದರೆ, ಇದನ್ನು ಸತೀಶ್ ಪಾಸಿಟಿವ್ ಆಗಿ ತೆಗೆದುಕೊಂಡಿದ್ದಾರೆ. ‘ಸುದೀಪ್ ನನ್ನ ಬಗ್ಗೆ ಹೀಗೆ ಹೇಳಿದ್ದಾರೆ’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.