ಸುದೀಪ್ ವ್ಯಂಗ್ಯವಾಗಿ ಹೇಳಿದ್ದನ್ನೇ ಇಟ್ಟುಕೊಂಡು ಬಡಾಯಿಕೊಚ್ಚಿಕೊಂಡ ಸತೀಶ್
ಬಿಗ್ ಬಾಸ್ ಕನ್ನಡದಿಂದ ಹೊರಬಂದ ಸತೀಶ್ ತಮ್ಮ ಬಡಾಯಿಕೊಚ್ಚಿಕೊಳ್ಳುವಿಕೆಯಿಂದ ಸುದ್ದಿಯಲ್ಲಿದ್ದಾರೆ. ಸುದೀಪ್ ಫಿನಾಲೆಯಲ್ಲಿ ವ್ಯಂಗ್ಯವಾಗಿ ಮಾತನಾಡಿದ್ದನ್ನು ಸತೀಶ್ ಗಂಭೀರವಾಗಿ ಸ್ವೀಕರಿಸಿದ್ದಾರೆ. ಸುದೀಪ್ ತಮ್ಮ ಗ್ಲಾಸ್ ಕೇಳಿದ್ದಾಗ ನಿರಾಕರಿಸಿದ್ದಾಗಿ ಹೇಳಿದ್ದಾರೆ. ಸತೀಶ್ ಅವರ ಈ ಮಾತುಗಳು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆ ಮತ್ತು ಟೀಕೆಗೆ ಗುರಿಯಾಗಿವೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ (Bigg Boss) ಮೂರನೇ ವಾರವೇ ಹೊರ ಬಂದ ಸತೀಶ್ ಸದಾ ಸುದ್ದಿಯಲ್ಲಿರೋ ಪ್ರಯತ್ನ ಮಾಡುತ್ತಿದ್ದಾರೆ. ಬಡಾಯಿಕೊಚ್ಚಿಕೊಳ್ಳುವುದರಲ್ಲಿ ಅವರು ಮುಂದು. ಇದು ಸುದೀಪ್ ಕಿವಿಗೂ ಬಿದ್ದಿದೆ. ಹೀಗಾಗಿ, ಬಿಗ್ ಬಾಸ್ ಫಿನಾಲೆಯಲ್ಲಿ ಸುದೀಪ್ ಅವರು ಈ ವಿಷಯವನ್ನು ವ್ಯಂಗ್ಯವಾಗಿ ಹೇಳಿದ್ದರು. ಆದರೆ, ಸತೀಶ್ ಗಂಭೀರವಾಗಿ ಸ್ವಿಕರಿಸಿಬಿಟ್ಟಿದ್ದಾರೆ. ಟಿವಿ9 ಕನ್ನಡದ ಜೊತೆ ಮಾತನಾಡುವಾಗ ಅವರು ಒಂದಷ್ಟು ವಿಷಯ ಹಂಚಿಕೊಂಡಿದ್ದಾರೆ.
ಬಿಗ್ ಬಾಸ್ ಫಿನಾಲೆ ವೇದಿಕೆ ಮೇಲೆ ಸುದೀಪ್ ಅವರು ವ್ಯಂಗ್ಯವಾಗಿ ಮಾತನಾಡಿದ್ದರು. ಸತೀಶ್ ಧರಿಸೋ ಗ್ಲಾಸ್ ಹಾಗೂ ಬಟ್ಟೆಗಳ ಬೆಲೆ ಲಕ್ಷಾಂತರ ರೂಪಾಯಿ ಇರುತ್ತದೆ. ಅವರಿಗೆ ನಾನು ಶೇಕ್ಹ್ಯಾಂಡ್ ಮಾಡಿದರೆ ಲಕ್ಷ ಲಕ್ಷ ವೀವ್ಸ್ ಬರುತ್ತದೆ. ಕಲರ್ಸ್ಗೆ ಮಿಲಿಯನ್ ವೀವ್ಸ್ ಹೆಚ್ಚು ಬರೋಕೆ ಅವರೇ ಕಾರಣ ಎಂದೆಲ್ಲ ಹೇಳಿ ಕಾಲು ಎಳೆದಿದ್ದರು. ಇದು ವ್ಯಂಗ್ಯವಾಗಿ ಹೇಳಿದ್ದು ಎಂದು ವೀಕ್ಷಕರಿಗೆ ಗೊತ್ತಾಗಿದೆ. ಆದರೆ, ಸತೀಶ್ಗೆ ಮಾತ್ರ ಇದು ಅರ್ಥವಾಗಿಯೇ ಇಲ್ಲ.
ಸುದೀಪ್ ಅವರು ಸತೀಶ್ ಅವರ ಗ್ಲಾಸ್ ಕೇಳಿದರಂತೆ. ‘ಬಿಗ್ ಬಾಸ್ ಫಿನಾಲೆ ಮುಗಿದ ಬಳಿಕ ನಡೆದ ಪಾರ್ಟಿಯಲ್ಲಿ ನಾನೂ ಇದ್ದೆ. ಅಲ್ಲಿ ನನ್ನ ಗ್ಲಾಸ್ ಬಗ್ಗೆಯೇ ಮಾತುಕತೆ ನಡೆಯಿತು. ಸುದೀಪ್ ಅವರು ಗ್ಲಾಸ್ ಕೊಡಿ ಎಂದು ನನಗೆ ಹೇಳಿದರು. ಆದರೆ, ನಾನು ಕೊಡಲ್ಲ ಎಂದೆ. ನನ್ನ ತೋರಿಸಿದ್ರೆ ಮಿಲಿಯನ್ ವೀವ್ಸ್ ಬರುತ್ತದೆ ಎಂದು ಸುದೀಪ್ ಅವರೇ ಹೇಳಿದ್ದಾರೆ’ ಎಂಬುದಾಗಿ ಸತೀಶ್ ಬಡಾಯಿ ಕೊಚ್ಚಿಕೊಂಡಿದ್ದಾರೆ.
‘ತುಕಾಲಿ ಸಂತೋಷ್ ನನ್ನ ಪಾತ್ರ ಮಾಡಿದ್ದರು. ಮೂರು ದಿನ ಬಿಟ್ಟು ಕರೆ ಮಾಡಿದ್ದರು. ಬಿಗ್ ಬಾಸ್ ಶೋ ಮಾಡಿದ್ದೇನೆ, ಸಾಕಷ್ಟು ಶೋ ಮಾಡಿದ್ದೇನೆ. ಆದರೆ, ಯಾವಾಗಲೂ ಇಷ್ಟು ರೆಕಗ್ನೈಸೇಷನ್ ಸಿಕ್ಕಿರಲಿಲ್ಲ ಎಂದರು. ನನ್ನ ಪಾತ್ರ ಮಾಡಿದ ಬಳಿಕವೇ ಅವರಿಗೆ ಹೆಚ್ಚು ಜನಪ್ರಿಯತೆ ಸಿಕ್ಕಿತಂತೆ’ ಎಂದು ಸತೀಶ್ ವಿವರಿಸಿದರು.
ಇದನ್ನೂ ಓದಿ: ಬಿಗ್ ಬಾಸ್ ಸತೀಶ್ಗೆ ಕೊಲೆ ಬೆದರಿಕೆ ಹಾಕಿದ ಗಿಲ್ಲಿ ಫ್ಯಾನ್ಸ್ ಅರೆಸ್ಟ್: 80 ಜನರ ಮೇಲೆ ಕೇಸ್
ಸದ್ಯ ಸತೀಶ್ ಮಾತು ಸಾಕಷ್ಟು ಚರ್ಚೆ ಆಗುತ್ತಿದೆ. ಜೀವನದಲ್ಲಿ ಅವರು ನಿಜ ಹೇಳಲೇಬಾರದು ಎಂದು ನಿರ್ಧರಿಸಿದಂತಿದೆ ಎಂದು ಕೆಲವರು ಟೀಕೆ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:04 am, Tue, 27 January 26




