AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೀ ಕನ್ನಡದಲ್ಲಿ ಆರಂಭ ಆಗ್ತಿದೆ ಎರಡು ಹೊಸ ಧಾರಾವಾಹಿ; ಮುಗಿಯೋ ಸೀರಿಯಲ್​​ಗಳು ಯಾವವು?

ಜೀ ಕನ್ನಡದಲ್ಲಿ `ಕೃಷ್ಣ ರುಕ್ಕು` ಮತ್ತು `ಜಗದ್ಧಾತ್ರಿ` ಎಂಬ ಎರಡು ಹೊಸ ಧಾರಾವಾಹಿಗಳು ಬರಲಿವೆ. ಪ್ರೇಕ್ಷಕರ ಮೆಚ್ಚುಗೆ ಗಳಿಸಿರುವ ಎರಡು ಧಾರಾವಾಹಿಗಳು ಶೀಘ್ರದಲ್ಲೇ ಕೊನೆಗೊಳ್ಳುವ ಸಾಧ್ಯತೆ ಇದೆ. ಜೀ ಕನ್ನಡದ ಈ ಬದಲಾವಣೆಗಳು ಪ್ರೇಕ್ಷಕರಲ್ಲಿ ಹೊಸ ಕುತೂಹಲ ಮೂಡಿಸಿವೆ, ವಾಹಿನಿಯಿಂದ ಅಧಿಕೃತ ಮಾಹಿತಿ ನಿರೀಕ್ಷಿಸಲಾಗಿದೆ.

ಜೀ ಕನ್ನಡದಲ್ಲಿ ಆರಂಭ ಆಗ್ತಿದೆ ಎರಡು ಹೊಸ ಧಾರಾವಾಹಿ; ಮುಗಿಯೋ ಸೀರಿಯಲ್​​ಗಳು ಯಾವವು?
ಹೊಸ ಧಾರಾವಾಹಿ
 ಶ್ರೀಲಕ್ಷ್ಮೀ ಎಚ್
| Edited By: |

Updated on:Jan 27, 2026 | 7:50 AM

Share

ಜೀ ಕನ್ನಡ ವಾಹಿನಿಯು ಹೊಸ ಹೊಸ ಧಾರಾವಾಹಿಗಳು ಹಾಗೂ ಶೋಗಳನ್ನು ಪ್ರೇಕ್ಷಕರ ಎದುರು ಇಡುತ್ತಲೇ ಬರುತ್ತಿದೆ. ಈಗ ಜೀ ಕನ್ನಡದಲ್ಲಿ ಸಾಕಷ್ಟು ಉತ್ತಮ ಧಾರಾವಾಹಿಗಳು ಪ್ರಸಾರ ಕಾಣುತ್ತಿದ್ದು, ಟಿಆರ್​​ಪಿಯಲ್ಲಿ ಮೊದಲ ಸ್ಥಾನವನ್ನು ಗಳಿಸಿಕೊಳ್ಳುತ್ತಿವೆ. ಹೀಗಿರುವಾಗಲೇ ಎರಡು ಹೊಸ ಧಾರಾವಾಹಿಗಳು ಪ್ರಸಾರ ಕಾಣಲು ರೆಡಿ ಆಗಿವೆ. ಆ ಧಾರಾವಾಹಿಗಳು ಯಾವವು? ಮುಗಿಯುವ ಧಾರಾವಾಹಿಗಳು ಯಾವವು ಎಂಬುದನ್ನು ಇಲ್ಲಿ ನೋಡೋಣ.

ಜೀ ಕನ್ನಡ ವಾಹಿನಿಯು ಎರಡು ಹೊಸ ಧಾರಾವಾಹಿಗಳ ಪ್ರೋಮೋನ ಹಂಚಿಕೊಂಡಿದೆ. ‘ಕೃಷ್ಣ ರುಕ್ಕು’ ಎಂಬುದು ಧಾರಾವಾಹಿಯ ಹೆಸರು. ಇದರಲ್ಲಿ ಯಾರು ನಟಿಸುತ್ತಿದ್ದಾರೆ ಎಂಬಿತ್ಯಾದಿ ಮಾಹಿತಿ ರಿವೀಲ್ ಆಗಿಲ್ಲ. ಜಗದ್ಧಾತ್ರಿ ಹೆಸರಿನ ಧಾರಾವಾಹಿ ಕೂಡ ಬರುತ್ತಿದೆ. ಈ ಧಾರಾವಾಹಿ ಪ್ರೋಮೋಗೆ ‘ಇವಳು ಮನೆ ಬೆಳಗೋ ದೀಪವೂ ಹೌದು, ಅಧರ್ಮಕ್ಕೆ ಅಂತ್ಯ ಹಾಡೋ ಜ್ವಾಲೆಯೂ ಹೌದು’ ಎಂಬ ಕ್ಯಾಪ್ಶನ್ ನೀಡಲಾಗಿದೆ. ಈ ಧಾರಾವಾಹಿಯಲ್ಲಿ ಮಹಿಳೆ ಪಾತ್ರ ಪ್ರಾಮುಖ್ಯತೆ ಪಡೆದುಕೊಳ್ಳುವ ಸಾಧ್ಯತೆ ಇದೆ. ಇದು ಹೊಸ ರೀತಿಯ ಪ್ರಯೋಗ ಇದ್ದರೂ ಇರಬಹುದು ಎನ್ನಲಾಗುತ್ತಿದೆ.

View this post on Instagram

A post shared by Zee Kannada (@zeekannada)

View this post on Instagram

A post shared by Zee Kannada (@zeekannada)

ಇನ್ನು, ಎರಡು ಧಾರಾವಾಹಿಗಳು ಪೂರ್ಣಗೊಳ್ಳುತ್ತಿವೆ ಎಂದಾಗ ಎರಡು ಹೊಸ ಧಾರಾವಾಹಿಗಳು ಪೂರ್ಣಗೊಳ್ಳಬಹುದು. ಅವು ಯಾವವವು ಎಂಬ ಪ್ರಶ್ನೆ ಮೂಡಿದೆ. ಈಗಾಗಲೇ ‘ಅಮೃತಧಾರೆ’ ಧಾರಾವಾಹಿ ಕ್ಲೈಮ್ಯಾಕ್ಸ್ ಹಂತ ತಲುಪೋ ರೀತಿ ಕಾಣುತ್ತಿದೆ. ಗೌತಮ್ ಹಾಗೂ ಭೂಮಿಕಾ ಒಂದಾಗಿ ಆಗಿದೆ. ಇನ್ನು, ಜಯದೇವ್ ಹಾಗೂ ತಂಡಕ್ಕೆ ಪಾಠ ಕಲಿಸಿದರೆ ಮುಗಿಯಿತು. ಹೀಗಾಗಿ, ಧಾರಾವಾಹಿ ಪೂರ್ಣಗೊಳ್ಳುವ ಎಲ್ಲಾ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಮುರಿದು ಬಿತ್ತು ‘ರಾಧಾ ರಮಣ’ ಧಾರಾವಾಹಿ ನಟಿ ಅನುಷಾ ಹೆಗಡೆ ದಾಂಪತ್ಯ

‘ಪುಟ್ಟಕ್ಕನ್ನ ಮಕ್ಕಳು’ ಧಾರಾವಾಹಿ ಕೂಡ ಪ್ರಸಾರ ಆರಂಭಿಸಿ ಹಲವು ವರ್ಷಗಳು ಕಳೆದಿವೆ. ಸಾವಿರಾರು ಎಪಿಸೋಡ್ ಪ್ರಸಾರಕಂಡಿದೆ. ಈ ಕಾರಣದಿಂದ ಈ ಧಾರಾವಾಹಿ ಕೂಡ ಪೂರ್ಣಗೊಂಡರೂ ಅಚ್ಚರಿ ಏನಿಲ್ಲ ಬಿಡಿ. ಹೀಗಾಗಿ. ಇದೆರಡು ಧಾರಾವಾಹಿಗಳು ಕೊನೆಗೊಳ್ಳಬಹುದು ಎಂಬುದು ಅನೇಕರ ಊಹೆ. ಈ ಬಗ್ಗೆ ವಾಹಿನಿ ಕಡೆಯಿಂದ ಮಾಹಿತಿ ಸಿಗಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:50 am, Tue, 27 January 26

ಸಚಿವರಿಂದ ಗಣರಾಜ್ಯೋತ್ಸವದ ಧ್ವಜಾರೋಹಣದ ವೇಳೆ ಬಿದ್ದ ಧ್ವಜಸ್ತಂಭ!
ಸಚಿವರಿಂದ ಗಣರಾಜ್ಯೋತ್ಸವದ ಧ್ವಜಾರೋಹಣದ ವೇಳೆ ಬಿದ್ದ ಧ್ವಜಸ್ತಂಭ!
ಆಟೋದಿಂದ ಹಾರಿದ 4 ಗೆಳತಿಯರು; ಒಬ್ಬಳ ದುರಂತ ಸಾವಿಗೆ ಕಾರಣ ಯಾರು?
ಆಟೋದಿಂದ ಹಾರಿದ 4 ಗೆಳತಿಯರು; ಒಬ್ಬಳ ದುರಂತ ಸಾವಿಗೆ ಕಾರಣ ಯಾರು?
ಆರ್​ಸಿಬಿ ವಿರುದ್ಧ ಐತಿಹಾಸಿಕ ಶತಕ ಬಾರಿಸಿದ ನ್ಯಾಟ್ ಸಿವರ್-ಬ್ರಂಟ್
ಆರ್​ಸಿಬಿ ವಿರುದ್ಧ ಐತಿಹಾಸಿಕ ಶತಕ ಬಾರಿಸಿದ ನ್ಯಾಟ್ ಸಿವರ್-ಬ್ರಂಟ್
ಗಣರಾಜ್ಯೋತ್ಸವ ಪರೇಡ್​​ನಲ್ಲಿ ಗಮನ ಸೆಳೆದ ಆಪರೇಷನ್ ಸಿಂಧೂರ್‌ ವಿಜಯೋತ್ಸವ
ಗಣರಾಜ್ಯೋತ್ಸವ ಪರೇಡ್​​ನಲ್ಲಿ ಗಮನ ಸೆಳೆದ ಆಪರೇಷನ್ ಸಿಂಧೂರ್‌ ವಿಜಯೋತ್ಸವ
ವೋಟ್ ಹಾಕಿದ ಪೊಲೀಸರಿಗೂ ಧನ್ಯವಾದ ಹೇಳಿದೆ ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ
ವೋಟ್ ಹಾಕಿದ ಪೊಲೀಸರಿಗೂ ಧನ್ಯವಾದ ಹೇಳಿದೆ ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ
ಅಟ್ಟಾರಿ-ವಾಘಾ ಗಡಿಯಲ್ಲಿ 'ಬೀಟಿಂಗ್ ರಿಟ್ರೀಟ್'
ಅಟ್ಟಾರಿ-ವಾಘಾ ಗಡಿಯಲ್ಲಿ 'ಬೀಟಿಂಗ್ ರಿಟ್ರೀಟ್'
ಟ್ರಾಫಿಕ್ ಜಾಮ್, ಹಿಮಪಾತದಿಂದ 24 ಗಂಟೆ ಕಾರಲ್ಲೇ ಕುಳಿತ ಮನಾಲಿ ಪ್ರವಾಸಿಗರು!
ಟ್ರಾಫಿಕ್ ಜಾಮ್, ಹಿಮಪಾತದಿಂದ 24 ಗಂಟೆ ಕಾರಲ್ಲೇ ಕುಳಿತ ಮನಾಲಿ ಪ್ರವಾಸಿಗರು!
ಗಿಲ್ಲಿ ಮೇಲಿನ ಅಭಿಮಾನದಿಂದ ವೇದಿಕೆಗೆ ನುಗ್ಗಿದ ಫ್ಯಾನ್ಸ್; ವಿಡಿಯೋ ನೋಡಿ
ಗಿಲ್ಲಿ ಮೇಲಿನ ಅಭಿಮಾನದಿಂದ ವೇದಿಕೆಗೆ ನುಗ್ಗಿದ ಫ್ಯಾನ್ಸ್; ವಿಡಿಯೋ ನೋಡಿ
ಪತಿಯ ಹಣದಾಹಕ್ಕೆ ಪತ್ನಿ ಕಳೆದುಕೊಂಡಳಾ ಜೀವ?: ಯುವತಿ ಕುಟುಂಬಸ್ಥರಿಂದ ಆರೋಪ
ಪತಿಯ ಹಣದಾಹಕ್ಕೆ ಪತ್ನಿ ಕಳೆದುಕೊಂಡಳಾ ಜೀವ?: ಯುವತಿ ಕುಟುಂಬಸ್ಥರಿಂದ ಆರೋಪ
ಮನೆ ಮುಂದೇ ಓಡಾಡ್ತಿತ್ತು ಚಿರತೆ! ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಮನೆ ಮುಂದೇ ಓಡಾಡ್ತಿತ್ತು ಚಿರತೆ! ಸಿಸಿಟಿವಿಯಲ್ಲಿ ದೃಶ್ಯ ಸೆರೆ