AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾವ್ಯಾ ಕಳ್ಳತನ ಮಾಡಿದ್ದಾಳೆ, ಮನೆಯಿಂದ ಓಡಿಸಲು ಇಷ್ಟೆಲ್ಲಾ ನಾಟಕ; ನಟಿ ಮೇಲೆಯೇ ಕುಟುಂಬದವರ ಆರೋಪ

ನಟಿ ಕಾವ್ಯಾ ಗೌಡ ಕುಟುಂಬ ಕಲಹದ ಕುರಿತು ಸೋಮಶೇಖರ್ ಸಹೋದರನ ಪತ್ನಿ ಪ್ರೇಮಾ ತಿರುಗೇಟು ನೀಡಿದ್ದಾರೆ. ಕಾವ್ಯಾ ಆಸ್ತಿ ಕಬಳಿಸಲು ಈ ನಾಟಕವಾಡುತ್ತಿದ್ದಾರೆ, ಹಲ್ಲೆ ಆರೋಪ ಸುಳ್ಳು ಎಂದಿದ್ದಾರೆ. ನಮ್ಮ ಮನೆಯಿಂದ ವಸ್ತು ಕದ್ದಿದ್ದಾರೆ, ಕಿರುಕುಳ ನೀಡಿದ್ದಾರೆ. ಸೋಮಶೇಖರ್ ನನ್ನ ತಂದೆಗೆ ಅವಾಚ್ಯವಾಗಿ ಬೈದಿದ್ದಾರೆ ಎಂದು ಆರೋಪಿಸಿದ್ದಾರೆ.

ಕಾವ್ಯಾ ಕಳ್ಳತನ ಮಾಡಿದ್ದಾಳೆ, ಮನೆಯಿಂದ ಓಡಿಸಲು ಇಷ್ಟೆಲ್ಲಾ ನಾಟಕ; ನಟಿ ಮೇಲೆಯೇ ಕುಟುಂಬದವರ ಆರೋಪ
ನಂದೀಶ್ ಪ್ರೇಮಾ ದಂಪತಿ-ಸೋಮಶೇಖರ್​-ಕಾವ್ಯಾ ದಂಪತಿ
ರಾಚಪ್ಪಾಜಿ ನಾಯ್ಕ್
| Edited By: |

Updated on: Jan 27, 2026 | 3:10 PM

Share

‘ನಮ್ಮ ಮೇಲೆ ಹಲ್ಲೆ ನಡೆದಿದೆ’ ಎಂದು ಕಿರುತೆರೆ ನಟಿ ಕಾವ್ಯಾ ಗೌಡ ಹಾಗೂ ಅವರ ಪತಿ ಸೋಮಶೇಖರ್ ಆರೋಪಿಸಿದ್ದರು. ಸೋಮಶೇಖರ್ ಅರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿ ಆಗಿತ್ತು. ಸಹೋದರ ಸಂಬಂಧಿ ಕಡೆಯಿಂದಲೇ ಈ ಹಲ್ಲೆ ಆಗಿದೆ ಎನ್ನಲಾಗಿತ್ತು. ಈ ಬೆನ್ನಲ್ಲೇ ಸೋಮಶೇಖರ್ ಸಹೋದರ ನಂದೀಶ್ ಪತ್ನಿ ಪ್ರೇಮಾ ತಮ್ಮ ಭಾಗದ ಕಥೆ ತೆರೆದಿಟ್ಟಿದ್ದಾರೆ. ಕಾವ್ಯಾ ಈ ನಾಟಕವಾಡಲು ಕಾರಣ ತಿಳಿಸಿದ್ದಾರೆ.

‘ನಮ್ಮ ಮಾವನ ಮನೆಯಲ್ಲಿ ನಾವೆಲ್ಲರೂ ಇದ್ದೇವೆ. ಕೆಳ ಮಹಡಿಯಲ್ಲಿ ನಮ್ಮ ಮಾವ ವಾಸವಿದ್ದಾರೆ. ಮೊದಲ ಮಹಡಿಯಲ್ಲಿ ನಾವು, ಎರಡನೇ ಮಹಡಿಯಲ್ಲಿ ಕಾವ್ಯ ಕುಟುಂಬ ವಾಸವಿದೆ. ಅವರವರ ಮನೆಯಲ್ಲಿ ಅವರವರು ಇರಿ ಎಂದು ಮಾವ ಎಲ್ಲರಿಗೂ ತಿಳಿಸಿದ್ದಾರೆ. ಈಗ ನಮ್ಮ ಮನೆ ಕಬಳಿಸಲು ಕಾವ್ಯ ಗೌಡ ಈ ರೀತಿ ಕಿರಿಕ್ ಮಾಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ ಪ್ರೇಮಾ.

‘ಸದ್ಯ ನಡೆದಿರುವ ವಿಷಯವನ್ನು ಮಾವನ ಗಮನಕ್ಕೆ ತಂದಿದ್ದೆವು. ಅವರು ಬುದ್ಧಿ ಮಾತು ಹೇಳಿ ಕಳಿಸಿದ್ದರು. ಸಂಬಂಧದಲ್ಲೇ ನಾನು ಮದುವೆ ಆಗಿರೋದು. ಹಾಗಾಗಿ ನನ್ನ ಮಾವನ ಮಾತಿಗೆ ತಲೆ ಬಾಗಿದ್ದೇನೆ. ಇಷ್ಟು ದಿನ ತಾಳ್ಮೆಯಿಂದಲೇ ಇದ್ದೆ.ಆದರೆ ಇವತ್ತು ತಾಳ್ಮೆ ಕಳೆದುಕೊಳ್ಳುವ ಪರಿಸ್ಥಿತಿ ಬಂದಿದೆ’ ಎಂದು ಪ್ರೇಮಾ ಹೇಳಿದ್ದಾರೆ.

‘ಕಾವ್ಯಾ ಮನೆಯ ಕುಕ್ ನಮ್ಮ ಅಡುಗೆ ಮನೆಗೆ ಬಂದಿದ್ದರು. ಯಾಕಮ್ಮ ಇಲ್ಲಿ ಬಂದಿದ್ದೀಯಾ ಎಂದು ಕೇಳಿದೆ. ಆದರೆ, ಆಕೆ ಏನೂ ಹೇಳದೆ ಹೋದಳು. ನಂತರ ಕಾವ್ಯಾ ಬಂದು ಇದು ನಮ್ಮ ಮನೆ ಹೊರಗೆ ಹೋಗಿ ಎಂದು ಹೇಳಿ ಗಲಾಟೆ ಮಾಡಿದ್ದಾಳೆ’ ಎಂದು ಕಾವ್ಯಾ ಮೇಲೆಯೇ ಪ್ರೇಮಾ ಗಂಭೀರ ಆರೋಪ ಮಾಡಿದ್ದಾರೆ.

‘ಅದು ನಮ್ಮ ಮಾವ ಕಟ್ಟಿರುವ ಮನೆ. ಅವಳಷ್ಟೇ ಹಕ್ಕು ನನಗೂ ಇದೆ. ಭಾವ ಎಂದು ನೋಡದೆ ನಂದೀಶ್ ಅವರನ್ನು ಕಾವ್ಯಾ ಟ್ರಿಗರ್ ಮಾಡಿದ್ದಾರೆ. ಸೋಮಶೇಖರ್ ಕೂಡ ಬಂದು ಗಲಾಟೆ ಮಾಡಿದ್ದಾರೆ. ಆ ಮನೆ ನಮ್ಮದಲ್ಲ ನಿಜ, ಆದರೆ,ನಮ್ಮ ಮಾವನ ಮನೆ. ಪ್ರೀತಿಯಿಂದ ನಮ್ಮ ಮನೆ ಎಂದು ಹೇಳಿಕೊಳ್ಳುತ್ತೇವೆ. ಮನೆ ಗೃಹ ಪ್ರವೇಶವಾಗಿ ಎರಡೂವರೆ ವರ್ಷ ಆಗಿದೆ. ನಮ್ಮನ್ನು ಮನೆಯಿಂದ ಹೊರಹಾಕಲು ಕಾವ್ಯಾ ಸಣ್ಣ ವಿಚಾರಕ್ಕೂ ಗಲಾಟೆ ಮಾಡ್ತಾಳೆ’ ಎಂಬುದು ಪ್ರೇಮಾ ಆರೋಪ.

ಇದನ್ನೂ ಓದಿ: ಸಂಬಂಧಿಯಿಂದಲೇ ನಟಿ ಕಾವ್ಯಾ ಗೌಡಗೆ ಬಂತು ರೇಪ್ ಬೆದರಿಕೆ; ಪತಿಯ ಮೇಲೆ ಹಲ್ಲೆ

‘ನಾನು ಇಲ್ಲದಿದ್ದಾಗ ನಮ್ಮ ಮನೆಗೆಲ್ಲ ಬಂದು ಕಾವ್ಯಾ ದಂಪತಿ ಬೀಗ ಕದ್ದಿದ್ದಾರೆ. ಮನೆಗೆ ಬಂದುಫೋಟೊ ಶೂಟ್ ಮಾಡಿದ್ದಾರೆ. ಕೆಲ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ. ಆಕೆ ಕಲಾವಿದೆ. ಏನೇ ಹೇಳಿದರೂ ಜನರು ನಂಬುತ್ತಾರೆ ಎಂದು ಹೀಗೆಲ್ಲ ಹೇಳಿದ್ದಾಳೆ. ಪ್ಯಾಂಟ್ ಎಲ್ಲಾ ತೆಗೆದು ಸೋಮಶೇಖರ್ ಅಸಹ್ಯವಾಗಿ ವರ್ತಿಸಿದ್ದಾರೆ. ಭವ್ಯಾ ಗೌಡ ನನ್ನ ಪತಿ ಮೇಲೆ ಹಲ್ಲೆ ಮಾಡಿದ್ದಾಳೆ. ನನ್ನ ಕತ್ತಿನ ತಾಳಿಸರ ಕಿತ್ತು ಹಾಕಿದ್ದಾರೆ’ ಎಂದು ಕಾವ್ಯಾ ಸಹೋದರಿಯ ಮೇಲೂ ಪ್ರೇಮಾ ಆರೋಪ ಹೊರಿಸಿದ್ದಾರೆ.

‘ಕಾವ್ಯಾ, ಸೋಮಶೇಖರ್, ಭವ್ಯಾ ಮೇಲೆ ದೂರು ನೀಡಿದ್ದೇನೆ. ಸೋಮವಾರ (ಜನವರಿ 26) ರಾತ್ರಿ ಎಫ್ಐಆರ್ ದಾಖಲಿಸಿದ್ದೇವೆ. ನಮ್ಮ ಮಾವನ ಮರ್ಯಾದೆಗಾಗಿ ಇಷ್ಟು ದಿನ ಸುಮ್ಮನಿದ್ದೆ. ಆದರೆ ಆಕೆ ಆರೋಪ ಮಾಡಿದ್ದರಿಂದ ಮಾತಾಡೋ ಹಾಗೆ ಆಗಿದೆ. ಸೋಮಶೇಖರ್ ನನ್ನ ತಂದೆಗೆ ಕರೆ ಮಾಡಿ ಅವಾಚ್ಯವಾಗಿ ಬೈದಿದ್ದಾರೆ. ಚಾಕುವಿಂದ ಹಲ್ಲೆ ಅನ್ನೋದು ಸುಳ್ಳು ಆರೋಪ. ತಾಳ್ಮೆ‌ಯಿಂದ ಇದ್ದಿದ್ದಕ್ಕೆ ಹೀಗೆಲ್ಲ ಮಾಡ್ತಿದ್ದಾರೆ’ ಎಂದು ಪ್ರೇಮಾ ದೂರುಗಳ ಸರಮಾಲೆಯನ್ನೇ ಇಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
RSS ಶಾಖೆಯಲ್ಲಿ ಸಂಘದ ಗೀತೆ ಬಿಟ್ಟು ರಾಷ್ಟ್ರಗೀತೆ ಹಾಡಲಿ: ಹರಿಪ್ರಸಾದ್
RSS ಶಾಖೆಯಲ್ಲಿ ಸಂಘದ ಗೀತೆ ಬಿಟ್ಟು ರಾಷ್ಟ್ರಗೀತೆ ಹಾಡಲಿ: ಹರಿಪ್ರಸಾದ್
ಸಚಿವ ಮಧು ಬಂಗಾರಪ್ಪ ಕ್ಷೇತ್ರದಲ್ಲೇ ತಪ್ಪದ ಬಸ್ ಗೋಳು
ಸಚಿವ ಮಧು ಬಂಗಾರಪ್ಪ ಕ್ಷೇತ್ರದಲ್ಲೇ ತಪ್ಪದ ಬಸ್ ಗೋಳು
ಕೆಎಂಎಫ್ ಪಶು ಆಹಾರ ಕಲಬೆರಕೆ ಹಗರಣ: ನಾಲ್ವರು ಅಧಿಕಾರಿಗಳ ಅಮಾನತು
ಕೆಎಂಎಫ್ ಪಶು ಆಹಾರ ಕಲಬೆರಕೆ ಹಗರಣ: ನಾಲ್ವರು ಅಧಿಕಾರಿಗಳ ಅಮಾನತು
440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428 ರಲ್ಲಿ ಪ್ರಾಂಶುಪಾಲರೇ ಇಲ್ಲ
440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428 ರಲ್ಲಿ ಪ್ರಾಂಶುಪಾಲರೇ ಇಲ್ಲ
ದೆಹಲಿಯಲ್ಲಿರುವ ಪಾಕ್ ಹೈಕಮಿಷನ್ ಹೊರಗಿನ ಬ್ಯಾರಿಕೇಡ್‌ಗಳ ತೆರವು
ದೆಹಲಿಯಲ್ಲಿರುವ ಪಾಕ್ ಹೈಕಮಿಷನ್ ಹೊರಗಿನ ಬ್ಯಾರಿಕೇಡ್‌ಗಳ ತೆರವು
ಚಿಕ್ಕಮಗಳೂರು: 3000 ಅಡಿ ಪ್ರಪಾತದ ಅಂಚಿನಲ್ಲಿ ಥಾರ್ ಜೀಪ್ ಓಡಿಸಿ ಹುಚ್ಚಾಟ
ಚಿಕ್ಕಮಗಳೂರು: 3000 ಅಡಿ ಪ್ರಪಾತದ ಅಂಚಿನಲ್ಲಿ ಥಾರ್ ಜೀಪ್ ಓಡಿಸಿ ಹುಚ್ಚಾಟ
ರಾಜ್ಯಾದ್ಯಂತ ಮೆಡಿಕಲ್ ಸ್ಟೋರ್‌ಗಳ ಪರಿಶೀಲನೆಗೆ ಮಹತ್ವದ ಆದೇಶ
ರಾಜ್ಯಾದ್ಯಂತ ಮೆಡಿಕಲ್ ಸ್ಟೋರ್‌ಗಳ ಪರಿಶೀಲನೆಗೆ ಮಹತ್ವದ ಆದೇಶ
ವಿಶೇಷ ಭೂಸ್ವಾಧೀನಾಧಿಕಾರಿ ಮನೆಯಲ್ಲಿ ಕೋಟಿಗಟ್ಟಲೆ ಆಸ್ತಿ ಪತ್ತೆ!
ವಿಶೇಷ ಭೂಸ್ವಾಧೀನಾಧಿಕಾರಿ ಮನೆಯಲ್ಲಿ ಕೋಟಿಗಟ್ಟಲೆ ಆಸ್ತಿ ಪತ್ತೆ!
ವರಮಹಾಲಕ್ಷ್ಮೀ ಹಬ್ಬದ ಖರೀದಿಗೆ ಮಾರ್ಕೆಟ್‌ನಲ್ಲಿ ಜನಸಾಗರ: ಟ್ರಾಫಿಕ್ ಜಾಮ್
ವರಮಹಾಲಕ್ಷ್ಮೀ ಹಬ್ಬದ ಖರೀದಿಗೆ ಮಾರ್ಕೆಟ್‌ನಲ್ಲಿ ಜನಸಾಗರ: ಟ್ರಾಫಿಕ್ ಜಾಮ್
ಈ ರಾಶಿಯವರಿಗೆ ಗಜಕೇಸರಿ ಯೋಗ, ವೃಶ್ಚಿಕಕ್ಕೆ ಧನಯೋಗ
ಈ ರಾಶಿಯವರಿಗೆ ಗಜಕೇಸರಿ ಯೋಗ, ವೃಶ್ಚಿಕಕ್ಕೆ ಧನಯೋಗ