
‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಮೂರನೇ ವಾರದಲ್ಲೇ ಒಂದು ಫಿನಾಲೆ ನಡೆಯಲಿದೆ ಎಂದು ಬಿಗ್ ಬಾಸ್ ಘೋಷಣೆ ಮಾಡಿದ್ದರು. ಇದರಲ್ಲಿ ಇರೋ ವಿಶೇಷತೆ ಏನು ಎಂಬ ಬಗ್ಗೆ ಅನೇಕರಿಗೆ ಕುತೂಹಲ ಮೂಡಿತ್ತು. ಇದಕ್ಕೆ ಸುದೀಪ್ ಕಡೆಯಿಂದ ಉತ್ತರ ಸಿಕ್ಕಿದೆ. ಅರ್ಧದಷ್ಟು ಮಂದಿ ‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಮೊದಲ ಫಿನಾಲೆಯಿಂದ ಔಟ್ ಆಗಲಿದ್ದಾರಂತೆ.
ಪ್ರತಿ ಬಾರಿ ಬಿಗ್ ಬಾಸ್ ಆರಂಭ ಆದ ಬಳಿಕ 100 ದಿನಗಳ ಬಳಿಕವೇ ಫಿನಾಲೆ ನಡೆಯುತ್ತಿತ್ತು. ಆದರೆ, ಈ ಬಾರಿ ಸಾಕಷ್ಟು ಟ್ವಿಸ್ಟ್ಗಳನ್ನು ಇಡಲು ವಾಹಿನಿ ನಿರ್ಧರಿಸಿದೆ. ಈ ಕಾರಣದಿಂದಲೇ ಬಿಗ್ ಬಾಸ್ ಆರಂಭ ಆದ ಮೂರನೇ ವಾರಕ್ಕೆ ಒಂದು ಫಿನಾಲೆ ನಡೆಯಲಿದೆ. ಈಗ ಇರುವ 17 ಸ್ಪರ್ಧಿಗಳ ಪೈಕಿ ಅರ್ಧದಷ್ಟು ಮಂದಿ ಔಟ್ ಆಗುವ ಸೂಚನೆಯನ್ನು ಸುದೀಪ್ ನೀಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿರುವ 17 ಮಂದಿ ಪೈಕಿ ಎಲ್ಲರೂ ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಇದು ಸುದೀಪ್ ಬೇಸರಕ್ಕೆ ಕಾರಣ ಆಗಿದೆ. ಸ್ಪರ್ಧಿಗಳು ನಿತ್ಯ ಜಗಳದಲ್ಲೇ ಸಮಯ ಕಳೆಯುತ್ತಿದ್ದಾರೆ. ಯಾರೊಬ್ಬರೂ ಆಟವನ್ನು ಸರಿಯಾಗಿ ಆರಂಭಿಸಿಲ್ಲ ಎಂಬುದು ಸುದೀಪ್ ಅಭಿಪ್ರಾಯ. ಹೀಗಾಗಿ, ಸ್ಪರ್ಧಿಗಳಿಗೆ ಎಚ್ಚರಿಕೆ ನೀಡುವಾಗ ಅವರು ದೊಡ್ಡ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಈ ವಾರ ಬಿಗ್ ಬಾಸ್ನಿಂದ ಎಲಿಮಿನೇಟ್ ಆಗಿದ್ದು ಯಾರು? ಕಾದಿದೆ ದೊಡ್ಡ ಟ್ವಿಸ್ಟ್
‘ಬಿಗ್ ಬಾಸ್ ಫಿನಾಲೆ ನಡೆಯೋಕೆ ಒಂದೇ ವಾರ ಇದೆ. ಈ ಫಿನಾಲೆಯಲ್ಲಿ ಅರ್ಧದಷ್ಟು ಮಂದಿ ಔಟ್ ಆಗಬುದು’ ಎಂದು ಸುದೀಪ್ ಎಚ್ಚರಿಸಿದ್ದಾರೆ. ಈ ಮೊದಲು ಕೂಡ ಸುದೀಪ್ ಈ ಬಗ್ಗೆ ಪರೋಕ್ಷವಾಗಿ ಹೇಳಿದ್ದರು. ಔಟ್ ಆದವರ ಜಾಗಕ್ಕೆ ಬರೋಕೆ ಮತ್ತೊಂದು ಬ್ಯಾಚ್ ರೆಡಿ ಇದೆ ಎಂದು ಹೇಳಿದ್ದರು. ಅವರು ಹೇಳುವುದನ್ನು ನೋಡಿದರೆ ಫಿನಾಲೆಯಲ್ಲಿ ಒಂದಷ್ಟು ಮಂದಿ ಔಟ್ ಆಗೋದು ಪಕ್ಕಾ ಎನ್ನಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 3:02 pm, Sun, 12 October 25