
ಬಿಗ್ ಬಾಸ್ ಕನ್ನಡ ಸೀಸನ್ 12ರ ವಿನ್ನರ್ ಆಗಿ ಗಿಲ್ಲಿ ನಟ (Gilli Nata) ಹೊರ ಹೊಮ್ಮಿದ್ದಾರೆ. ಅದ್ದೂರಿ ವೇದಿಕೆ ಮೇಲೆ ಅವರ ಹೆಸರನ್ನು ಘೋಷಣೆ ಮಾಡಲಾಯಿತು ಎಂಬುದು ವಿಶೇಷ. ಗಿಲ್ಲಿ ನಟನಿಗೆ ಎಲ್ಲ ಕಡೆಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಇದರ ಜೊತೆಗೆ ಗಿಲ್ಲಿ ನಟನ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.
112 ದಿನಗಳ ಬಿಗ್ ಬಾಸ್ ಜರ್ನಿಯಲ್ಲಿ ಕಿಚ್ಚ ಸುದೀಪ್ ಅವರು ಗಿಲ್ಲಿಯನ್ನು ಅನೇಕ ಬಾರಿ ತಿದ್ದಿದ್ದಾರೆ. ತಪ್ಪಾದಾಗ ತಪ್ಪು ಎಂದು ಹೇಳಿದ್ದಾರೆ. ಉತ್ತಮವಾಗಿ ಆಡಿದಾಗ ಚಪ್ಪಾಳೆ ನೀಡಿದ್ದಾರೆ. ಇದೆಲ್ಲವನ್ನೂ ಗಿಲ್ಲಿ ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ. ‘ಸಾಯೋವರೆಗೂ ನಿಮ್ಮನ್ನು ಮರೆಯಲ್ಲ’ ಎಂದು ಗಿಲ್ಲಿ ಹೇಳಿದ್ದಾರೆ. ಈ ಮೂಲಕ ಕಿಚ್ಚನಿಗೆ ವಿಶೇಷ ಗೌರವ ನೀಡಿದ್ದಾರೆ.
ಗಿಲ್ಲಿ ಬಿಗ್ ಬಾಸ್ ಮನೆಯಲ್ಲಿ ತಮ್ಮದೇ ಆದ ಗ್ಯಾಂಗ್ ಕಟ್ಟಿಕೊಂಡಿದ್ದರು. ಇದರಲ್ಲಿ ರಕ್ಷಿತಾ ಶೆಟ್ಟಿ, ರಜತ್, ರಘು ಹಾಗೂ ಕಾವ್ಯಾ ಪ್ರಮುಖರು. ಇವರಿಗೆ ವೇದಿಕೆ ಮೇಲೆಯೇ ಸುದೀಪ್ ಧನ್ಯವಾದ ಹೇಳಿದ್ದಾರೆ. ‘ನನ್ನ ಜರ್ನಿಯಲ್ಲಿ ಹೊರಗೆ ಅಭಿಮಾನಿಗಳು ಹೇಗೆ ಬೆಂಬಲವಾಗಿ ನಿಂತರೋ ಮನೆ ಒಳಗೆ ರಘು ಅಣ್ಣ, ರಕ್ಷಿತಾ, ರಜತ್ ಹಾಗೂ ಕಾವ್ಯಾ ಬೆಂಬಲವಾಗಿ ನಿಂತರು. ಅವರಿಗೂ ಧನ್ಯವಾದ’ ಎಂದು ಗಿಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಸುದೀಪ್ ಹೃದಯ ವೈಶಾಲ್ಯತೆ ನೋಡಿ; ವೇದಿಕೆ ಮೇಲೆ ಗಿಲ್ಲಿಗೆ 10 ಲಕ್ಷ ಬಹುಮಾನ ಘೋಷಿಸಿದ ಕಿಚ್ಚ
ಜೀ ಕನ್ನಡ ವಾಹಿನಿಯಲ್ಲಿ ಹಲವು ಶೋಗಳನ್ನು ಮಾಡಿದವರು ಗಿಲ್ಲಿ ನಟ. ಅವರ ಪ್ರತಿಭೆಯನ್ನು ಮೊದಲು ಗುರುತಿಸಿದ್ದು ಜೀ ಕನ್ನಡ. ಹೀಗಾಗಿ, ಜೀ ಶುಭಾಶಯ ತಿಳಿಸಿ ಪೋಸ್ಟ್ ಒಂದನ್ನು ಹಂಚಿಕೊಂಡಿದೆ. ‘ತನ್ನ ಕಾಮಿಡಿ ಟೈಮಿಂಗ್, ಅಮೋಘ ಪ್ರತಿಭೆಯ ಮೂಲಕ ವಿಜೇತನಾಗಿ ಕರುನಾಡಿನ ಮನಗೆದ್ದ ನಮ್ಮ ಗಿಲ್ಲಿಗೆ ಅಭಿನಂದನೆ’ ಎಂದಿದೆ ಜೀ. ಈ ಪೋಸ್ಟ್ನ ಗಿಲ್ಲಿ ನಟ ಖುಷಿಯಿಂದ ಹಂಚಿಕೊಂಡಿದ್ದಾರೆ. ಅವರು ಏರಿದ ಏಣಿಯನ್ನು ಮರೆತಿಲ್ಲ ಎಂಬುದಕ್ಕೆ ಈ ಘಟನೆಗಳೇ ಸಾಕ್ಷಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:32 am, Mon, 19 January 26