ಸುದೀಪ್ ಹೃದಯ ವೈಶಾಲ್ಯತೆ ನೋಡಿ; ವೇದಿಕೆ ಮೇಲೆ ಗಿಲ್ಲಿಗೆ 10 ಲಕ್ಷ ಬಹುಮಾನ ಘೋಷಿಸಿದ ಕಿಚ್ಚ
ಬಿಗ್ ಬಾಸ್ ಕನ್ನಡ ಸೀಸನ್ 12 ಫಿನಾಲೆಯಲ್ಲಿ ಗಿಲ್ಲಿ ವಿಜೇತರಾದರು. ವಿವಾದಗಳ ನಡುವೆಯೂ ಕಿಚ್ಚ ಸುದೀಪ್ ಅವರು ಗಿಲ್ಲಿಗೆ ಸ್ವತಃ 10 ಲಕ್ಷ ರೂ. ಬಹುಮಾನ ಘೋಷಿಸಿ ತಮ್ಮ ಹೃದಯ ವೈಶಾಲ್ಯತೆಯನ್ನು ಮೆರೆದರು. ಈ ಮೂಲಕ ಗಿಲ್ಲಿ ಬಗ್ಗೆ ಸುದೀಪ್‌ಗೆ ಆಗಲ್ಲ ಎಂಬ ಮಾತುಗಳಿಗೆ ತೆರೆ ಬಿದ್ದಿತು. ಇದು ಅವರ ವೇದಿಕೆಯ ಮೇಲಿನ ಪ್ರೀತಿಗೆ ಸಾಕ್ಷಿ. ಗಿಲ್ಲಿ 50 ಲಕ್ಷ ರೂ. ಮತ್ತು ಕಾರನ್ನೂ ಪಡೆದರು.

‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಫಿನಾಲೆ ಪೂರ್ಣಗೊಂಡಿದೆ. ಕಿಚ್ಚ ಸುದೀಪ್ ಅವರು ಗಿಲ್ಲಿನ ವಿನ್ನರ್ ಎಂದು ಘೋಷಣೆ ಮಾಡಿದರು. 112 ದಿನಗಳ ಕಾಲ ಎಲ್ಲರನ್ನೂ ರಂಜಿಸಿದ ಗಿಲ್ಲಿ ಗೆಲುವಿಗೆ ಅರ್ಹರು ಎಂದು ವೀಕ್ಷಕರು ಹೇಳುತ್ತಿದ್ದಾರೆ. ವಿನ್ನರ್ ಆದ ಗಿಲ್ಲಿಗೆ ಕಿಚ್ಚ ಸುದೀಪ್ ಅವರು ಬಹುಮಾನ ಘೋಷಣೆ ಮಾಡಿದರು. ಇದು ಸುದೀಪ್ ಹೃದಯ ವೈಶಾಲ್ಯತೆಯನ್ನು ತೋರಿಸುತ್ತದೆ.
ಕಿಚ್ಚ ಸುದೀಪ್ ಅವರು ಸೀಸನ್ ಚಪ್ಪಾಳೆಯನ್ನು ಧ್ರುವಂತ್ ಅವರಿಗೆ ನೀಡಿದರು. ಇದು ಚರ್ಚೆಗೆ ಕಾರಣ ಆಯಿತು. ಗಿಲ್ಲಿಗೆ ಇದು ಸೇರಬೇಕಿತ್ತು ಎಂಬುದು ಎಲ್ಲರ ಕೋರಿಕೆ ಆಗಿತ್ತು. ಆದರೆ, ಇದನ್ನು ಧ್ರುವಂತ್ಗೆ ನೀಡಿದ್ದು ಸರಿ ಅಲ್ಲ ಎಂಬ ಮಾತುಗಳು ವ್ಯಕ್ತವಾದವು. ಈ ವಿಷಯದಲ್ಲಿ ಸುದೀಪ್ ಅವರು ಸಾಕಷ್ಟು ದ್ವೇಷವನ್ನು ಕಟ್ಟಿಕೊಳ್ಳಬೇಕಾಯಿತು. ‘ಸುದೀಪ್‌ಗೆ ಗಿಲ್ಲಿಯನ್ನು ಕಂಡರೆ ಆಗೊಲ್ಲ’ ಎಂಬ ಮಾತುಗಳು ಕೇಳಿ ಬಂದವು. ಆದರೆ, ಹೃದಯದಿಂದ ಸುದೀಪ್ ಆ ರೀತಿ ಅಲ್ಲ ಎಂಬುದು ಸಾಬೀತಾಗಿದೆ.
View this post on Instagram
ಕಿಚ್ಚ ಸುದೀಪ್ ಅವರು ಗಿಲ್ಲಿನ ವಿನ್ನರ್ ಎಂದು ಘೋಷಣೆ ಮಾಡಿದರು. ಆ ಬಳಿಕ ಗಿಲ್ಲಿಗೆ ಅಶ್ವಸೂರ್ಯ ರಿಯಾಲಿಟೀಸ್ ಕಡೆಯಿಂದ 50 ಲಕ್ಷ ರೂಪಾಯಿ ಹಣ ಸಿಕ್ಕಿತು. ಮಾರುತಿ ಸುಜುಕಿ ಕಡೆಯಿಂದ ವಿಕ್ಟೋರಿಸ್ ಕಾರು ಕೂಡ ದೊರೆಯಿತು. ಇಷ್ಟೇ ಅಲ್ಲ, ಸುದೀಪ್ ತಾವು 10 ಲಕ್ಷ ರೂಪಾಯಿ ನೀಡೋದಾಗಿ ಹೇಳಿದರು. ಕಿಚ್ಚನ ನಡೆಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ: ಬಿಗ್ ಬಾಸ್ ಕನ್ನಡ 12ರಲ್ಲಿ ಐತಿಹಾಸಿಕ ಜಯ ಕಂಡ ಗಿಲ್ಲಿ ನಟ; ರಕ್ಷಿತಾ ರನ್ನರ್ ಅಪ್ ಸುದೀಪ್ ಅವರು ಬಿಗ್ ಬಾಸ್ ವೇದಿಕೆಯನ್ನು ತುಂಬಾನೇ ಪ್ರೀತಿ ಮಾಡುತ್ತಾರೆ. ವೇದಿಕೆ ಏರುವ ಸ್ಪರ್ಧಿಗಳಿಗೂ ಸಾಕಷ್ಟು ಪ್ರೀತಿ ಕೊಡುತ್ತಾರೆ. ಅದಕ್ಕೆ ಈ ಘಟನೆ ಒಳ್ಳೆಯ ಉದಾಹರಣೆ. ಸುದೀಪ್ ನಡೆಯನ್ನು ಎಲ್ಲರೂ ಶ್ಲಾಘಿಸಿದ್ದಾರೆ. ಗಿಲ್ಲಿ ಅವರು ಬಿಗ್ ಬಾಸ್ ವಿನ್ನರ್ ಆದರೆ, ರಕ್ಷಿತಾ ಶೆಟ್ಟಿ ರನ್ನರ್ ಅಪ್ ಆಗಿದ್ದಾರೆ. ಅವರಿಗೆ 25 ಲಕ್ಷ ರೂಪಾಯಿ ಹಣ ಸಿಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




