ಬಿಗ್ ಬಾಸ್ ಕನ್ನಡ 12ರಲ್ಲಿ ಐತಿಹಾಸಿಕ ಜಯ ಕಂಡ ಗಿಲ್ಲಿ ನಟ; ರಕ್ಷಿತಾ ರನ್ನರ್ ಅಪ್
Bigg Boss Kannada 12 Winner: ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ನಟ ಐತಿಹಾಸಿಕ ವಿಜಯ ಸಾಧಿಸಿದ್ದಾರೆ. 23 ಸ್ಪರ್ಧಿಗಳನ್ನು ಹಿಂದಿಕ್ಕಿ, ಕೋಟಿ ಮತಗಳನ್ನು ಪಡೆದು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಈ ಮೊದಲಿನ ಶೋಗಳಲ್ಲಿ ರನ್ನರ್ ಅಪ್ ಸ್ಥಾನದಿಂದ ಬೇಸರಗೊಂಡಿದ್ದ ಗಿಲ್ಲಿ, ಈ ಬಾರಿ ಗೆಲುವಿನ ನಗೆ ಬೀರಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ 23 ಸ್ಪರ್ಧಿಗಳನ್ನು ಹಿಂದಿಕ್ಕಿ ಗಿಲ್ಲಿ ನಟ ವಿನ್ ಆಗಿದ್ದಾರೆ. ಗಿಲ್ಲಿ ಕೈನ ಎತ್ತೋ ಮೂಲಕ ಸುದೀಪ್ ವಿನ್ನರ್ ಘೋಷಣೆ ಮಾಡಿದರು. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ. 40 ಕೋಟಿಗೂ ಅಧಿಕ ವೋಟ್ ಪಡೆದು ಗೆಲುವು ಸಾಧಿಸಿದ್ದಾರೆ ಗಿಲ್ಲಿ ನಟ. ಅವರ ಅಭಿಮಾನಿಗಳ ಆಸೆ ಈಡೇರಿದೆ. ರಕ್ಷಿತಾಗೆ ರನ್ನರ್ ಅಪ್ ಸ್ಥಾನ ಸಿಕ್ಕಿದೆ.
ಈ ಮೊದಲು ಹಲವು ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಸಿ ಗಿಲ್ಲಿ ನಟ ಗಮನ ಸೆಳೆದರು. ಎಲ್ಲಾ ಶೋಗಲ್ಲಿ ಅವರು ರನ್ನರ್ ಅಪ್ ಸ್ಥಾನಕ್ಕೆ ಖುಷಿಪಟ್ಟುಕೊಳ್ಳಬೇಕಿತ್ತು.ಇದನ್ನು ಗಿಲ್ಲಿ ಕೂಡ ಹೇಳಿಕೊಂಡಿದ್ದರು. ಅವರಿಗೆ ಈ ವಿಷಯದಲ್ಲಿ ತುಂಬಾನೇ ಬೇಸರ ಇತ್ತು. ಕೊನೆಗೂ ಗಿಲ್ಲಿಗೆ ಗೆಲುವು ಸಿಕ್ಕಿದೆ. ಅವರು ಬರೋಬ್ಬರಿ 40 ಕೋಟಿಗೂ ಅಧಿಕ ಮತ ಪಡೆದಿದ್ದಾರೆ.
ಕಳೆದ ಬಾರಿಯ ವಿನ್ನರ್ ಹನುಮಂತ 5 ಕೊಟಿ ವೋಟ್ ಪಡೆದಿದ್ದರು. ಇದಕ್ಕಿಂತ ಹತ್ತು ಪಟ್ಟು ವೋಟ್ನ ಗಿಲ್ಲಿ ಪಡೆದುಕೊಂಡಿದ್ದಾರೆ ಎಂಬುದು ವಿಶೇಷ. ಗಿಲ್ಲಿ ಕ್ರೇಜ್ಗೆ ವೋಟಿಂಗ್ ಲೈನ ಶೇಕ್ ಆಗಿದೆ. ಗಿಲ್ಲಿ ಫ್ಯಾನ್ಸ್ ಕ್ರೇಜ್ ಏನು ಎಂಬುದು ಗೊತ್ತಾಗಿದೆ.
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ನಟ ಅವರು ಎಂಟ್ರಿ ಕೊಟ್ಟಾಗಲೇ ಕ್ರೇಜ್ ನಿಧಾನಕ್ಕೆ ಆರಂಬ ಆಯಿತು. ಯಾವಾಗ ಅಶ್ವಿನಿ ಜೊತೆ ಅವರು ಸೆಣೆಸಾಟಕ್ಕೆ ಇಳಿದರೋ ಆಗ ಅವರ ಕ್ರೇಜ್ ಹೆಚ್ಚುತ್ತಾ ಹೋಯಿತು. ಅವರು ಕೊಡೋ ತಿರುಗೇಟಿಗೆ ಎಲ್ಲರೂ ಫಿದಾ ಆದರು. ಪ್ರತಿ ಹಂತದಲ್ಲೂ ಹಾಸ್ಯ ಮಾಡುತ್ತಾ ಮನರಂಜನೆ ನೀಡಿದರು. ಈ ಕಾರಣದಿಂದ ಗಿಲ್ಲಿ ನಟ ಎಲ್ಲರಿಗೂ ಇಷ್ಟ ಆದರು. ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಎಲ್ಲರೂ ಗಿಲ್ಲಿಯ ಅಭಿಮಾನಿ ಆದರು. ನಂತರದಲ್ಲಿ ಅವರಿಗೆ ಕಾಂಪಿಟೇಟರ್ ಇಲ್ಲ ಎಂಬಂತಾಯಿತು. ಕೊನೆಗೂ ಅವರು ಗೆದ್ದು ಬೀಗಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಫಿನಾಲೆ ಸಮಯದಲ್ಲಿ ಜಾನ್ವಿ ಎಡವಟ್ಟು; ಇದೆಲ್ಲಾ ಬೇಕಿತ್ತಾ?
ಗಿಲ್ಲಿಗೆ 50 ಲಕ್ಷ ಕ್ಯಾಶ್ ಪ್ರೈಸ್ ಸಿಕ್ಕಿದೆ. ಇದರ ಜೊತೆಗೆ ಮಾರುತಿ ಸುಜುಕಿ ವಿಕ್ಟರಿಸ್ ಕಾರ್ ಅವರ ಕೈ ಸೇರಿದೆ. ಇದು ಅವರ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಗಿಲ್ಲಿ ಜೀವನ ಇದರಿಂದ ಮತ್ತಷ್ಟು ಸುಧಾರಿಸಲಿದೆ ಎಂಬುದು ಅಭಿಮಾನಿಗಳ ಆಶಯ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:35 pm, Sun, 18 January 26




