AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏರಿದ ಏಣಿಯನ್ನು ಒದೆಯಲಿಲ್ಲ ಗಿಲ್ಲಿ ನಟ; ಬಿಗ್ ಬಾಸ್ ವಿನ್ನರ್ ನಡೆಗೆ ಮೆಚ್ಚುಗೆ

ಬಿಗ್ ಬಾಸ್ ಕನ್ನಡ ಸೀಸನ್ 12 ವಿಜೇತರಾಗಿ ಗಿಲ್ಲಿ ಹೊರಹೊಮ್ಮಿದ್ದಾರೆ. ಕಿಚ್ಚ ಸುದೀಪ್ ಅವರ ಮಾರ್ಗದರ್ಶನ ಮತ್ತು ಬೆಂಬಲವನ್ನು ಗಿಲ್ಲಿ ಸ್ಮರಿಸಿದ್ದಾರೆ. ತಮ್ಮ ಗೆಳೆಯರಾದ ರಕ್ಷಿತಾ ಶೆಟ್ಟಿ, ರಘು, ಕಾವ್ಯಾ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಜೀ ಕನ್ನಡ ವಾಹಿನಿಯು ಗಿಲ್ಲಿ ಅವರ ಪ್ರತಿಭೆಯನ್ನು ಗುರುತಿಸಿ, ವಿಜಯಕ್ಕೆ ಅಭಿನಂದನೆ ಸಲ್ಲಿಸಿದೆ. ಗಿಲ್ಲಿ ತಮ್ಮ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದು, ಈ ಮೂಲಕ ವಿನಮ್ರತೆಯನ್ನು ಮೆರೆದಿದ್ದಾರೆ.

ಏರಿದ ಏಣಿಯನ್ನು ಒದೆಯಲಿಲ್ಲ ಗಿಲ್ಲಿ ನಟ; ಬಿಗ್ ಬಾಸ್ ವಿನ್ನರ್ ನಡೆಗೆ ಮೆಚ್ಚುಗೆ
ಗಿಲ್ಲಿ
ರಾಜೇಶ್ ದುಗ್ಗುಮನೆ
|

Updated on:Jan 19, 2026 | 9:41 AM

Share

ಬಿಗ್ ಬಾಸ್ ಕನ್ನಡ ಸೀಸನ್ 12ರ ವಿನ್ನರ್ ಆಗಿ ಗಿಲ್ಲಿ ನಟ ಹೊರ ಹೊಮ್ಮಿದ್ದಾರೆ. ಅದ್ದೂರಿ ವೇದಿಕೆ ಮೇಲೆ ಅವರ ಹೆಸರನ್ನು ಘೋಷಣೆ ಮಾಡಲಾಯಿತು ಎಂಬುದು ವಿಶೇಷ. ಗಿಲ್ಲಿ ನಟನಿಗೆ ಎಲ್ಲ ಕಡೆಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಇದರ ಜೊತೆಗೆ ಗಿಲ್ಲಿ ನಟನ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ಕಿಚ್ಚನಿಗೆ ಧನ್ಯವಾದ

112 ದಿನಗಳ ಬಿಗ್ ಬಾಸ್ ಜರ್ನಿಯಲ್ಲಿ ಕಿಚ್ಚ ಸುದೀಪ್ ಅವರು ಗಿಲ್ಲಿಯನ್ನು ಅನೇಕ ಬಾರಿ ತಿದ್ದಿದ್ದಾರೆ. ತಪ್ಪಾದಾಗ ತಪ್ಪು ಎಂದು ಹೇಳಿದ್ದಾರೆ. ಉತ್ತಮವಾಗಿ ಆಡಿದಾಗ ಚಪ್ಪಾಳೆ ನೀಡಿದ್ದಾರೆ. ಇದೆಲ್ಲವನ್ನೂ ಗಿಲ್ಲಿ ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ. ‘ಸಾಯೋವರೆಗೂ ನಿಮ್ಮನ್ನು ಮರೆಯಲ್ಲ’ ಎಂದು ಗಿಲ್ಲಿ ಹೇಳಿದ್ದಾರೆ. ಈ ಮೂಲಕ ಕಿಚ್ಚನಿಗೆ ವಿಶೇಷ ಗೌರವ ನೀಡಿದ್ದಾರೆ.

View this post on Instagram

A post shared by Zee Kannada (@zeekannada)

ಗ್ಯಾಂಗ್​​ನ ಮರೆತಿಲ್ಲ ಗಿಲ್ಲಿ

ಗಿಲ್ಲಿ ಬಿಗ್ ಬಾಸ್ ಮನೆಯಲ್ಲಿ ತಮ್ಮದೇ ಆದ ಗ್ಯಾಂಗ್ ಕಟ್ಟಿಕೊಂಡಿದ್ದರು. ಇದರಲ್ಲಿ ರಕ್ಷಿತಾ ಶೆಟ್ಟಿ, ರಜತ್, ರಘು ಹಾಗೂ ಕಾವ್ಯಾ ಪ್ರಮುಖರು. ಇವರಿಗೆ ವೇದಿಕೆ ಮೇಲೆಯೇ ಸುದೀಪ್ ಧನ್ಯವಾದ ಹೇಳಿದ್ದಾರೆ. ‘ನನ್ನ ಜರ್ನಿಯಲ್ಲಿ ಹೊರಗೆ ಅಭಿಮಾನಿಗಳು ಹೇಗೆ ಬೆಂಬಲವಾಗಿ ನಿಂತರೋ ಮನೆ ಒಳಗೆ ರಘು ಅಣ್ಣ, ರಕ್ಷಿತಾ, ರಜತ್ ಹಾಗೂ ಕಾವ್ಯಾ ಬೆಂಬಲವಾಗಿ ನಿಂತರು. ಅವರಿಗೂ ಧನ್ಯವಾದ’ ಎಂದು ಗಿಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಸುದೀಪ್ ಹೃದಯ ವೈಶಾಲ್ಯತೆ ನೋಡಿ; ವೇದಿಕೆ ಮೇಲೆ ಗಿಲ್ಲಿಗೆ 10 ಲಕ್ಷ ಬಹುಮಾನ ಘೋಷಿಸಿದ ಕಿಚ್ಚ

ಜೀ ಕನ್ನಡದ ಪೋಸ್ಟ್

ಜೀ ಕನ್ನಡ ವಾಹಿನಿಯಲ್ಲಿ ಹಲವು ಶೋಗಳನ್ನು ಮಾಡಿದವರು ಗಿಲ್ಲಿ ನಟ. ಅವರ ಪ್ರತಿಭೆಯನ್ನು ಮೊದಲು ಗುರುತಿಸಿದ್ದು ಜೀ ಕನ್ನಡ. ಹೀಗಾಗಿ, ಜೀ ಶುಭಾಶಯ ತಿಳಿಸಿ ಪೋಸ್ಟ್ ಒಂದನ್ನು ಹಂಚಿಕೊಂಡಿದೆ. ‘ತನ್ನ ಕಾಮಿಡಿ ಟೈಮಿಂಗ್, ಅಮೋಘ ಪ್ರತಿಭೆಯ ಮೂಲಕ ವಿಜೇತನಾಗಿ ಕರುನಾಡಿನ ಮನಗೆದ್ದ ನಮ್ಮ ಗಿಲ್ಲಿಗೆ ಅಭಿನಂದನೆ’ ಎಂದಿದೆ ಜೀ. ಈ ಪೋಸ್ಟ್​​ನ ಗಿಲ್ಲಿ ನಟ ಖುಷಿಯಿಂದ ಹಂಚಿಕೊಂಡಿದ್ದಾರೆ. ಅವರು ಏರಿದ ಏಣಿಯನ್ನು ಮರೆತಿಲ್ಲ ಎಂಬುದಕ್ಕೆ ಈ ಘಟನೆಗಳೇ ಸಾಕ್ಷಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:32 am, Mon, 19 January 26