
‘ಬಿಗ್ ಬಾಸ್ ಕನ್ನಡ ಸೀಸನ್ 12’ರ (BBK 12) ಫಿನಾಲೆ ಇಂದು (ಜನವರಿ 17) ಹಾಗೂ ನಾಳೆ (ಜನವರಿ 18) ನಡೆಯಬೇಕಿತ್ತು. ಆದರೆ, ಸುದೀಪ್ ಇಂದು ಆಗಮಿಸಲು ಸಾಧ್ಯವಾಗದ ಕಾರಣ ಭಾನುವಾರ ಮಾತ್ರ ಬಿಗ್ ಬಾಸ್ ಫಿನಾಲೆ ಎಪಿಸೋಡ್ ನಡೆಸಿಕೊಡುತ್ತಿದ್ದಾರೆ. ಇದು ಅಭಿಮಾನಿಗಳ ಬೇಸರಕ್ಕೆ ಕಾರಣ ಆಗಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿವೆ.
ಬಿಗ್ ಬಾಸ್ ಕನ್ನಡದ ಎಪಿಸೋಡ್ ನಡೆಸಿಕೊಡೋದನ್ನು ಸುದೀಪ್ ವಿವಿಧ ಕಾರಣದಿಂದ ಕೆಲವು ಬಾರಿ ಮಿಸ್ ಮಾಡಿಕೊಂಡಿದ್ದು ಇದೆ. ಆದರೆ, ಇದೇ ಮೊದಲ ಬಾರಿಗೆ ಸುದೀಪ್ ಅವರು ಬಿಗ್ ಬಾಸ್ ಫಿನಾಲೆಯನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಪ್ರತಿ ಬಾರಿ ಬಿಗ್ ಬಾಸ್ ಫಿನಾಲೆ ಎರಡು ದಿನ ನಡೆಯುತ್ತಿತ್ತು. ಆದರೆ, ಈ ಸೀಸನ್ ಅಲ್ಲಿ ಒಂದೇ ದಿನ ಫಿನಾಲೆ ನಡೆಯುವಂತೆ ಆಗಿದೆ.
ಸುದೀಪ್ ಗೈರಾಗಲು ಕಾರಣವೂ ಇದೆ. ಸುದೀಪ್ ಅವರು ಸಿಸಿಎಲ್ನಲ್ಲಿ ಬ್ಯುಸಿ ಇದ್ದಾರೆ. ಜನವರಿ 16ರಂದು ‘ಪಂಜಾಬ್ ದೆ ಶೇರ್’ ವಿರುದ್ಧ ಮೊದಲ ಪಂದ್ಯವನ್ನಾಡಿರೋ ಕರ್ನಾಟಕ ಬುಲ್ಡೋಜರ್ ತಂಡ ಗೆಲುವು ಸಾಧಿಸಿದೆ. ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ಈ ಪಂದ್ಯ ನಡೆದಿದೆ. ಆಟ ಮುಗಿದ ಬಳಿಕ ರಾತ್ರೋ ರಾತ್ರಿ ಬೆಂಗಳೂರಿಗೆ ಬಂದು ಬೆಳಿಗ್ಗೆ ಬಿಗ್ ಬಾಸ್ ನಡೆಸಿಕೊಡೋದು ಎಂದರೆ ಅದು ಅಸಾಧ್ಯವಾದ ಮಾತು. ಈ ಕಾರಣದಿಂದಲೇ ಒಂದು ದಿನ ಬಿಡುವು ಪಡೆದು ಸುದೀಪ್ ‘ಬಿಗ್ ಬಾಸ್ 12’ ಫಿನಾಲೆ ನಡೆಸಿಕೊಡುತ್ತಿದ್ದಾರೆ ಎಂದು ವರದಿ ಆಗಿದೆ. ಇಂದು ಪ್ರೀ ಫಿನಾಲೆ ಇರುತ್ತದೆ. ಅದಕ್ಕೆ ಸುದೀಪ್ ಬರುತ್ತಾರೆ ಎಂಬ ಮಾತುಗಳು ಕೇಳಲ್ಪಟ್ಟಿವೆ.
ಇದನ್ನೂ ಓದಿ: ಬಿಗ್ ಬಾಸ್ ಕನ್ನಡ ಸೀಸನ್ 1 To 11: ಗೆದ್ದ ಬೀಗಿದವರ ಹೆಸರು, ವಿವರ ಇಲ್ಲಿದೆ
ಹಾಗಾದರೆ ಇಂದಿನ ವಿಶೇಷತೆ ಏನು? ಮೂಲಗಳ ಪ್ರಕಾರ ಇಂದು ಸಾಮಾನ್ಯ ಎಪಿಸೋಡ್ ಪ್ರಸಾರ ಕಾಣಲಿದೆಯಂತೆ. ವಿಶೇಷ ಡ್ಯಾನ್ಸ್ಗಳು ಇಂದು ಪ್ರಸಾರ ಕಾಣುವ ಸಾಧ್ಯತೆ ಇದೆ. ಭಾನುವಾರ 10 ಗಂಟೆವರೆಗೆ ವೋಟಿಂಗ್ಗೆ ಅವಕಾಶ ಇದೆ. ಹೀಗಾಗಿ, ಆರು ಜನರ ಪೈಕಿ ನಾಲ್ವರ ಎಲಿಮಿನೇಷನ್, ಒಬ್ಬರು ವಿನ್ನರ್ ಹಾಗೂ ರನ್ನರ್ ಅಪ್ ಎಂದು ಘೋಷಿಸೋದು ಭಾನುವಾರವೇ ನಡೆಯಲಿದೆ. ಭಾನುವಾರ ಸಂಜೆ 6 ಗಂಟೆಗೆ ಎಪಿಸೋಡ್ ಪ್ರಸಾರ ಕಾಣಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:04 am, Sat, 17 January 26