‘ಈಗ ಶನಿ ದಶಾ, ಪ್ರೀತಿ-ಮೋಹವೇ ಅಪಾಯ’; ಭವ್ಯಾ ಬಗ್ಗೆ ಗುರೂಜಿ ಭವಿಷ್ಯ

| Updated By: ರಾಜೇಶ್ ದುಗ್ಗುಮನೆ

Updated on: Jan 22, 2025 | 7:11 AM

ಬಿಗ್ ಬಾಸ್ ಕನ್ನಡ ಸೀಸನ್ 11ರ ಫೈನಲ್ ಹಂತದಲ್ಲಿ, ವಿದ್ಯಾಶಂಕರಾನಂದ ಸರಸ್ವತಿ ಅವರು ಸ್ಪರ್ಧಿಗಳ ಭವಿಷ್ಯ ಹೇಳಿದ್ದಾರೆ. ಭವ್ಯಾ ಅವರಿಗೆ ಆರೋಗ್ಯ ಸಮಸ್ಯೆಗಳ ಬಗ್ಗೆ ಎಚ್ಚರಿಕೆ ನೀಡಿದ್ದು, 2027 ರಿಂದ ಸುವರ್ಣಯುಗ ಆರಂಭವಾಗುವುದಾಗಿ ತಿಳಿಸಿದ್ದಾರೆ. ಕಳೆದ ವರ್ಷದಂತೆ, ಈ ವರ್ಷವೂ ವಿದ್ಯಾಶಂಕರಾನಂದ ಸರಸ್ವತಿ ಅವರ ಭವಿಷ್ಯವಾಣಿಗಳು ಸಾಕಷ್ಟು ಚರ್ಚೆಗೆ ಕಾರಣವಾಗಿವೆ.

‘ಈಗ ಶನಿ ದಶಾ, ಪ್ರೀತಿ-ಮೋಹವೇ ಅಪಾಯ’; ಭವ್ಯಾ ಬಗ್ಗೆ ಗುರೂಜಿ ಭವಿಷ್ಯ
ಗುರೂಜಿ-ಭವ್ಯಾ
Follow us on

‘ಬಿಗ್ ಬಾಸ್ ಕನ್ನಡ ಸೀಸನ್ 11’ ಕೊನೆಯ ಹಂತ ತಲುಪಿದೆ. ಇನ್ನು ಬಿಗ್ ಬಾಸ್ ಪೂರ್ಣಗೊಳ್ಳಲು ಇರೋದು ಕೆಲವೇ ದಿನಗಳು ಮಾತ್ರ. ಟಾಪ್ 6 ಫಿನಾಲೆ ತಲುಪಿದ್ದು, ಶನಿವಾರ (ಜನವರಿ 25) ಮೂವರು ಎಲಿಮಿನೇಟ್ ಆಗಿ ಉಳಿದ ಮೂವರ ಭವಿಷ್ಯ ಭಾನುವಾರದ (ಜನವರಿ 26) ಎಪಿಸೋಡ್​ನಲ್ಲಿ ನಿರ್ಧಾರ ಆಗುವ ಸಾಧ್ಯತೆ ಇದೆ. ಹೀಗಿರುವಾಗಲೇ ದೊಡ್ಮನೆಗೆ ‘ಮಹರ್ಷಿ ದರ್ಶನ’ ಖ್ಯಾತಿಯ ವಿದ್ಯಾಶಂಕರಾನಂದ ಸರಸ್ವತಿ ಆಗಮಿಸಿ ಸ್ಪರ್ಧಿಗಳ ಭವಿಷ್ಯ ಹೇಳಿದ್ದಾರೆ.

ಭವ್ಯಾ ಅವರನ್ನು ಕರೆದು ವಿದ್ಯಾಶಂಕರಾನಂದ ಸರಸ್ವತಿ ಅವರು ಭವಿಷ್ಯ ಹೇಳಿದ್ದಾರೆ. ಈ ವೇಳೆ ಅವರಿಗೆ ಎಚ್ಚರಿಕೆ ನೀಡುವ ಕೆಲಸ ಆಗಿದೆ. ‘ಜಾತಕದ ಅನ್ವಯ ಪ್ರಸ್ತುತ ಶನಿ ದಶಾ ನಡೆಯುತ್ತಿದೆ. ಸಣ್ಣಪುಟ್ಟ ಅನಾರೋಗ್ಯ ಸಮಸ್ಯೆ ಕಾಡುತ್ತದೆ. ಕೂದಲು ಉದುರುವುದು, ಹಲ್ಲು ನೋವು, ಜಾಯಿಂಟ್ ಪೇನ್ ಬರುತ್ತದೆ. ಶನಿ ಸಣ್ಣಪುಟ್ಟ ಸಮಸ್ಯೆ ಕೊಡುತ್ತಾನೆ. ಇದನ್ನು ನಿರ್ಲಕ್ಷ್ಯ ಮಾಡಬಹುದು. ಶನಿ ಹೋದಮೇಲೆ ಅದೂ ಹೋಗುತ್ತದೆ’ ಎಂದಿದ್ದಾರೆ ವಿದ್ಯಾಶಂಕರಾನಂದ ಸರಸ್ವತಿ.

‘2027ರಿಂದ ನಿನ್ನ ಭವಿಷ್ಯದಲ್ಲಿ ಸುವರ್ಣಯುಗ. ನೀನು ಫ್ಯಾಷನ್ ಇಂಡಸ್ಟ್ರಿಗೆ ಸಂಬಂಧಿಸಿ ಉದ್ಯಮ ಆರಂಭಿಸುತ್ತೀಯ’ ಎಂದಿದ್ದಾರೆ ಅವರು. ಆ ಬಳಿಕ ವೀಳ್ಯದ ಎಲೆ ಎತ್ತಲು ಗುರೂಜಿ ಹೇಳಿದರು. 15 ಎಲೆಯನ್ನು ಭವ್ಯಾ ಎತ್ತಿಕೊಟ್ಟರು. ‘ನಿನಗೆ ಮೋಹ, ಪ್ರೀತಿ ಅಡ್ಡಿಯಾಗುತ್ತಿದೆ’ ಎಂದರು ಗುರೂಜಿ.

ಇದನ್ನೂ ಓದಿ: ಹನುಮಂತ, ಭವ್ಯಾ ಗೌಡ, ತ್ರಿವಿಕ್ರಮ್​ಗೆ ಬಿಗ್ ಬಾಸ್ ಟ್ರೋಫಿ ಯಾಕೆ ಮುಖ್ಯ?

ಕಳೆದ ವರ್ಷವೂ ವಿದ್ಯಾಶಂಕರಾನಂದ ಸರಸ್ವತಿ ಬಿಗ್ ಬಾಸ್ ಮನೆಗೆ ಆಗಮಿಸಿದ್ದರು. ಈ ವೇಳೆ ಡ್ರೋನ್ ಪ್ರತಾಪ್ ಅವರಿಗೆ ಕುಟುಂಬದಿಂದ ದೂರ ಇರುವಂತೆ ಎಚ್ಚರಿಕೆ ನೀಡಿದ್ದರು. ದೂರ ಇಲ್ಲದೆ ಇದ್ದರೆ ಕಂಟಕ ಎದುರಾಗುತ್ತದೆ ಎಂದು ಅವರು ಹೇಳಿದ್ದರು. ಈ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಸದ್ಯ ಡ್ರೋನ್ ಪ್ರತಾಪ್ ಕುಟುಂಬದ ಜೊತೆಯೇ ಇದ್ದಾರೆ. ಅವರು ಹಾಯಾಗಿ ಹಳ್ಳಿಯಲ್ಲಿ ಸಮಯ ಕಳೆಯುತ್ತಾ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:53 am, Wed, 22 January 25