‘ಕರ್ಣ’ ಧಾರವಾಹಿಯಲ್ಲಿ ಕಿರಣ್ ರಾಜ್​ಗೆ ನಾಯಕಿ ಆದ ‘ಬಿಗ್ ಬಾಸ್ ಕನ್ನಡ 11’ರ ಸ್ಪರ್ಧಿ

| Updated By: ಮಂಜುನಾಥ ಸಿ.

Updated on: Apr 04, 2025 | 6:54 PM

Bhavya Gowda: ಕಿರಣ್ ರಾಜ್ ಅವರು ‘ಕರ್ಣ’ ಹೆಸರಿನ ಧಾರಾವಾಹಿ ಮಾಡುತ್ತಾ ಇದ್ದಾರೆ. ಈ ಧಾರಾವಾಹಿಗೆ ನಾಯಕಿ ಯಾರು ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿತ್ತು. ಕೊನೆಗೂ ಅದಕ್ಕೆ ಉತ್ತರ ಸಿಕ್ಕಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಸ್ಪರ್ಧಿಗೆ ಈ ಅವಕಾಶ ಸಿಕ್ಕಿದೆ ಅನ್ನೋದು ವಿಶೇಷ.

‘ಕರ್ಣ’ ಧಾರವಾಹಿಯಲ್ಲಿ ಕಿರಣ್ ರಾಜ್​ಗೆ ನಾಯಕಿ ಆದ ‘ಬಿಗ್ ಬಾಸ್ ಕನ್ನಡ 11’ರ ಸ್ಪರ್ಧಿ
Bhavya Gowda
Follow us on

ಕಿರಣ್ ರಾಜ್ (Kiran Raj) ಅವರು ಕಲರ್ಸ್​ ಕನ್ನಡದಲ್ಲಿ ಈ ಮೊದಲು ಪ್ರಸಾರ ಕಂಡ ‘ಕನ್ನಡತಿ’ ಧಾರಾವಾಹಿಯಲ್ಲಿ ಹರ್ಷ ಹೆಸರಿನ ಪಾತ್ರ ಮಾಡಿ ಗಮನ ಸೆಳೆದಿದ್ದು ಗೊತ್ತೇ ಇದೆ. ಈ ಮಧ್ಯೆ ಕಿರಣ್ ರಾಜ್ ಅವರು ಸಿನಿಮಾ ಕೆಲಸಗಳನ್ನು ಮಾಡಿದ್ದರು. ಈಗ ಕಿರಣ್ ರಾಜ್ ಅವರು ‘ಕರ್ಣ’ ಹೆಸರಿನ ಧಾರಾವಾಹಿ ಮಾಡುತ್ತಾ ಇದ್ದಾರೆ. ಈ ಧಾರಾವಾಹಿಗೆ ನಾಯಕಿ ಯಾರು ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿತ್ತು. ಕೊನೆಗೂ ಅದಕ್ಕೆ ಉತ್ತರ ಸಿಕ್ಕಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಸ್ಪರ್ಧಿಗೆ ಈ ಅವಕಾಶ ಸಿಕ್ಕಿದೆ ಅನ್ನೋದು ವಿಶೇಷ.

ಕಲರ್ಸ್ ಕನ್ನಡದಲ್ಲಿ ಈ ಮೊದಲು ‘ಗೀತಾ’ ಧಾರಾವಾಹಿ ಮಾಡಿದ್ದ ಭವ್ಯಾ ಗೌಡ ಅವರು ಈಗ ಜೀ ಕನ್ನಡದಲ್ಲಿ ಕಾಣಿಸಿಕೊಂಡಿದ್ದಾರೆ. ‘ಕರ್ಣ’ ಧಾರಾವಾಹಿಗೆ ಇವರೇ ನಾಯಕಿ ಎಂದು ವರದಿ ಆಗಿದೆ! ಈ ಧಾರಾವಾಹಿ ಸಂದರ್ಭದ ಶೂಟಿಂಗ್​ ವಿಡಿಯೋಗಳು ಎಲ್ಲ ಕಡೆಗಳಲ್ಲಿ ವೈರಲ್ ಆಗಿ ಗಮನ ಸೆಳೆದಿವೆ. ಇದರಲ್ಲಿ ಭವ್ಯಾ ಗೌಡ ಅವರು ನಟಿಸುತ್ತಿರುವುದು ಇದೆ. ಇನ್​​ಸ್ಟಾಗ್ರಾಮ್​ ರಿಲ್ಸ್​ನಲ್ಲಿ ವಿಡಿಯೋ ಹರಿದಾಡುತ್ತಿದೆ.

ಭವ್ಯಾ ಗೌಡ ಅವರು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದವರು. ‘ಗೀತಾ’ ಧಾರಾವಾಹಿಯಲ್ಲಿ ಗೀತಾ ಪಾತ್ರ ಮಾಡಿ ಗಮನ ಸೆಳೆದರು. ಈ ಧಾರಾವಾಹಿ ಯಶಸ್ವಿ ಆದ ಬಳಿಕ ಅವರಿಗೆ ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಅವಕಾಶ ಸಿಕ್ಕಿತು. ಈ ಅವಕಾಶವನ್ನು ಅವರು ಸದ್ಬಳಕೆ ಮಾಡಿದರು. ಅವರು ‘ಬಾಯ್ಸ್ vs ಗರ್ಲ್ಸ್​’ ಶೋನಲ್ಲಿ ಕಾಣಿಸಿಕೊಳ್ಳಬೇಕಿತ್ತು. ಆದರೆ, ಅನಾರೋಗ್ಯದ ಕಾರಣ ಅವರು ಇಲ್ಲಿಗೆ ಹೋಗಲಿಲ್ಲ.

ಇದನ್ನೂ ಓದಿ:ಜೀ ಕನ್ನಡದಲ್ಲಿ ‘ಕರ್ಣ’ ಧಾರಾವಾಹಿ ಯಾವಾಗಿನಿಂದ; ಕೊನೆ ಆಗಲಿರೋ ಧಾರಾವಾಹಿ ಯಾವುದು?

ಈಗ ಅವರಿಗೆ ‘ಕರ್ಣ’ ಧಾರಾವಾಹಿಗೆ ಭವ್ಯಾ ಗೌಡ ನಾಯಕಿ ಆಗಿದ್ದಾರೆ. ಕಿರಣ್ ರಾಜ್ ಜೊತೆ ಅವರು ತೆರೆ ಹಂಚಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಕೇಳಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಭವ್ಯಾ ಗೌಡ ಅವರಿಗೆ ಸಂಬಂಧಿಸಿದ ಪ್ರೋಮೋ ರಿಲೀಸ್ ಆಗಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. ಈ ಧಾರಾವಾಹಿಯ ರಿಲೀಸ್ ದಿನಾಂಕ ಇನ್ನಷ್ಟೇ ರಿವೀಲ್ ಆಗಬೇಕಿದೆ.  ಜೀ ಕನ್ನಡದಲ್ಲಿ ಧಾರಾವಾಹಿ ಪ್ರಸಾರ ಕಾಣಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:46 pm, Fri, 4 April 25