AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಜಕ್ಕೂ ಮೋಸ ಮಾಡಿ ಕ್ಯಾಪ್ಟನ್ ಆದ್ರಾ ಭವ್ಯಾ? ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಆಗಿದ್ದೇನು?

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಭವ್ಯಾ ಗೌಡ ಮೂರನೇ ಬಾರಿ ಕ್ಯಾಪ್ಟನ್ ಆಗಿದ್ದಾರೆ. ಆದರೆ, ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ನಿಯಮ ಉಲ್ಲಂಘನೆ ಆರೋಪ ಕೇಳಿಬಂದಿದೆ. ಭವ್ಯಾ ಅವರು ಬಾಲ್ ಅನ್ನು ಅನುಮತಿಯಿಲ್ಲದೆ ತೆಗೆದುಕೊಂಡರು ಎಂಬ ಆರೋಪವಿದೆ. ರಜತ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ವಿವಾದ ವೀಕೆಂಡ್ ಭರ್ಜರಿಯಲ್ಲಿ ಚರ್ಚೆಗೆ ಬರಲಿದೆ.

ನಿಜಕ್ಕೂ ಮೋಸ ಮಾಡಿ ಕ್ಯಾಪ್ಟನ್ ಆದ್ರಾ ಭವ್ಯಾ? ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಆಗಿದ್ದೇನು?
ಭವ್ಯಾ
ರಾಜೇಶ್ ದುಗ್ಗುಮನೆ
|

Updated on: Dec 28, 2024 | 7:30 AM

Share

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಭವ್ಯಾ ಗೌಡ ಅವರು ಸತತ ಎರಡನೇ ಬಾರಿ ಹಾಗೂ ಈ ಸೀಸನ್​ನಲ್ಲಿ ಮೂರನೇ ಬಾರಿ ಅವರು ಕ್ಯಾಪ್ಟನ್ಸಿ ಪಡೆದುಕೊಂಡಿದ್ದಾರೆ. ಈ ಮೂಲಕ ಫಿನಾಲೆ ತಲುಪೋದು ಮತ್ತಷ್ಟು ಸಲೀಸಾಗಿದೆ. ಈಗ ಭವ್ಯಾ ಅವರು ಮೋಸದಿಂದ ಕ್ಯಾಪ್ಟನ್ ಆದ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಇದರಿಂದ ಭವ್ಯಾಗೆ ಕ್ಯಾಪ್ಟನ್ ಆದರೂ ನೆಮ್ಮದಿ ಇಲ್ಲದಂತೆ ಆಗಿದೆ.

ಈ ಬಾರಿ ಕ್ಯಾಪ್ಟನ್ಸಿ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್​ನಲ್ಲಿ ತ್ರಿವಿಕ್ರಂ, ಭವ್ಯಾ, ರಜತ್, ಮೋಕ್ಷಿತಾ, ಧನರಾಜ್ ಇದ್ದರು. ಕ್ಯಾಪ್ಟನ್ಸಿ ಟಾಸ್ಕ್ ವೇಳೆ ಮೇಲೆ ಹಗ್ಗಕ್ಕೆ ಬಾಲ್​ಗಳ ಗೊಂಚಲನ್ನು ಹಾಕಿ ಪ್ರತಿಯೊಂದಕ್ಕೂ ನಂಬರ್ ನೀಡಲಾಗಿತ್ತು. ಬಿಗ್ ಬಾಸ್ ಹೇಳಿದ ನಂಬರ್​ಗಳ ಗೊಂಚಲ ಬಾಲ್​ಗಳನ್ನು ಕಿತ್ತುಕೊಂಡು ಅದನ್ನು ಎದುರಿರುವ ಬಾಸ್ಕೆಟ್​ಗೆ ಹಾಕಬೇಕು.

ಮೊದಲ ಸುತ್ತಿನಲ್ಲಿ ರಜತ್, ತ್ರಿವಿಕ್ರಂ ಮೊದಲಾದವರಿಗೆ ಬಾಲ್ ಸಿಕ್ಕಿತ್ತು. ಆದರೆ, ಮೋಕ್ಷಿತಾ ಹಾಗೂ ಭವ್ಯಾ ಕೈಗೆ ಯಾವುದೇ ಬಾಲ್ ಸಿಕ್ಕಿರಲಿಲ್ಲ. ಈ ಸಂದರ್ಭದಲ್ಲಿ ಬಾಲ್ ಒಂದು ಉರುಳಿಕೊಂಡು ಭವ್ಯಾ ಕಾಲ ಬಳಿ ಬಂತು. ಇದನ್ನು ಭವ್ಯಾ ತೆಗೆದುಕೊಂಡು ಸೂಚಿಸಿದ ಬುಟ್ಟಿಗೆ ಹಾಕಿದರು. ಈ ಮೂಲಕ ಅವರು ಸೇಫ್ ಆದರು. ಬಾಲ್ ಸಿಗದೇ ಇದ್ದ ಮೋಕ್ಷಿತಾ ಅವರು ಆಟದಿಂದ ಔಟ್ ಆದರು.

ಈಗ ಇರುವ ವಾದ ಏನೆಂದರೆ ಆ ಬಾಲ್​ನ ಭವ್ಯಾ ಅವರು ಕಿತ್ತುಕೊಂಡೇ ಇರಲಿಲ್ಲ. ಉಸ್ತುವಾರಿಗಳಾದ ಮಂಜು ಹಾಗೂ ಚೈತ್ರಾ ಅವರು ಮಾಡಿದ ನಿಯಮದ ಪ್ರಕಾರ ಸ್ಪರ್ಧಿಗಳು ಗೊಂಚಲಿಂದ ತೆಗೆದುಕೊಂಡ ಬಾಲ್​ನ ಮಾತ್ರ ಹಾಕಬೇಕು ಅಥವಾ ಬೇರೆ ಯಾವುವಾದರೂ ಸ್ಪರ್ಧಿಗಳು ಬಾಲ್​ನ ನೀಡಿದರೆ ಅದನ್ನು ತೆಗೆದುಕೊಂಡು ಹಾಕಬಹುದು. ಆದರೆ, ಇಲ್ಲಿ ಭವ್ಯಾ ಅವರು ಯಾವುದೇ ಬಾಲ್​ನ ತೆಗೆದುಕೊಂಡೇ ಇರಲಿಲ್ಲ. ಹೀಗಾಗಿ, ಅವರು ಮೊದಲ ಸುತ್ತಲ್ಲೇ ಹೊರಹೋಗಬೇಕಿತ್ತು. ಆದರೆ, ಅವರು ತಮಗೆ ಸಿಕ್ಕ ಬಾಲ್​ನ ಟಾರ್ಗೆಟ್​ಗೆ ಹಾಕಿ ಸೇವ್ ಆದರು.

ಇದನ್ನೂ ಓದಿ: ಬಿಗ್ ಬಾಸ್​ ಕ್ಯಾಮೆರಾದಲ್ಲಿ ಸೆರೆ ಆಯ್ತು ಮೋಸದ ಆಟ; ಭವ್ಯಾ ಮೇಲೆ ಅನುಮಾನ

ಆ ಬಳಿಕ ರಜತ್ ಮತ್ತೊಂದು ವಿಚಾರ ರಿವೀಲ್ ಮಾಡಿದರು. ‘ಅದು ಬಿಗ್ ಬಾಸ್ ಹೇಳಿದ ನಂಬರ್​ನ ಗೊಂಚಲ ಬಾಲ್ ಅಲ್ಲವೇ ಅಲ್ಲ. ಬೇರೆಯ ಗೊಂಚಲಿಂದ ಬಿದ್ದ ಬಾಲ್ ಅದು. ನನಗೆ ಕಂಡಿದೆ. ಆದರೆ, ಅಲ್ಲಿ ಅರಚಾಡಿಕೊಂಡು ನನ್ನ ಆಟ ಹಾಳು ಮಾಡಲು ನನಗೆ ಇಷ್ಟ ಇರಲಿಲ್ಲ’ ಎಂದು ರಜತ್ ಹೇಳಿದ್ದಾರೆ. ಇದನ್ನು ಉಸ್ತುವಾರಿಗಳು ಸರಿಯಾಗಿ ನೋಡಿಕೊಂಡಿಲ್ಲ ಎಂದು ಆರೋಪಿಸಲಾಗುತ್ತಿದೆ. ಈಗ ಭವ್ಯಾ ಅವರಿಗೆ ಈ ಬಾರಿ ಕ್ಯಾಪ್ಟನ್ ಆದರೂ ‘ಮೋಸಗಾರ್ತಿ’ ಎಂಬ ಪಟ್ಟ ಸಿಕ್ಕಿರುವುದರಿಂದ ಸಾಕಷ್ಟು ನೋವಿದೆ. ಒಂದೊಮ್ಮೆ ಮೋಸ ನಡೆದಿದ್ದರೆ ಉಸ್ತುವಾರಿಗಳು ಏಕೆ ಬಾಯ್ಮುಚ್ಚಿಕೊಂಡಿದ್ದರು ಎನ್ನುವ ಪ್ರಶ್ನೆಯೂ ಎದ್ದಿದೆ. ಈ ವಿಚಾರ ವೀಕೆಂಡ್​ನಲ್ಲಿ ಚರ್ಚೆಗೆ ಬರೋ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಬಿಜೆಪಿಯಲ್ಲಿ ಮೊದಲ ಹಂತದ ಶುದ್ಧೀಕರಣ ಕಾರ್ಯ ಮುಗಿದಿದೆ: ಸದಾನಂದಗೌಡ
ಬಿಜೆಪಿಯಲ್ಲಿ ಮೊದಲ ಹಂತದ ಶುದ್ಧೀಕರಣ ಕಾರ್ಯ ಮುಗಿದಿದೆ: ಸದಾನಂದಗೌಡ
ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿರುವಾಗಲೇ ಹೃದಯಾಘಾತದಿಂದ ವ್ಯಕ್ತಿ ಸಾವು
ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿರುವಾಗಲೇ ಹೃದಯಾಘಾತದಿಂದ ವ್ಯಕ್ತಿ ಸಾವು
ಶಾಸಕರ ಆಹ್ವಾನ ಬೇಕಿಲ್ಲ, ಮಂಡ್ಯ ಜನ ಜವಾಬ್ದಾರಿ ನೀಡಿದ್ದಾರೆ: ಹೆಚ್​ಡಿಕೆ
ಶಾಸಕರ ಆಹ್ವಾನ ಬೇಕಿಲ್ಲ, ಮಂಡ್ಯ ಜನ ಜವಾಬ್ದಾರಿ ನೀಡಿದ್ದಾರೆ: ಹೆಚ್​ಡಿಕೆ
ಡಿಕೆಶಿ ಪರವೋ, ಸಿದ್ದರಾಮಯ್ಯ ಪರವೋ? ಲಕ್ಷ್ಮೀ ಹೆಬ್ಬಾಳ್ಕರ್ ಏನಂದರು ನೋಡಿ!
ಡಿಕೆಶಿ ಪರವೋ, ಸಿದ್ದರಾಮಯ್ಯ ಪರವೋ? ಲಕ್ಷ್ಮೀ ಹೆಬ್ಬಾಳ್ಕರ್ ಏನಂದರು ನೋಡಿ!
ಪ್ರಯತ್ನಗಳಿಗಿಂತ ಪ್ರಾರ್ಥನೆ ಫಲ ನೀಡುತ್ತದೆ ಎಂದು ನಂಬಿದ್ದೇನೆ: ಶಿವಕುಮಾರ್
ಪ್ರಯತ್ನಗಳಿಗಿಂತ ಪ್ರಾರ್ಥನೆ ಫಲ ನೀಡುತ್ತದೆ ಎಂದು ನಂಬಿದ್ದೇನೆ: ಶಿವಕುಮಾರ್
ಹೊತ್ತಿ ಉರಿದ ಮೈಸೂರು-ಉದಯ್​ಪುರ ಪ್ಯಾಲೇಸ್ ಕ್ವೀನ್ ಎಕ್ಸ್​ಪ್ರೆಸ್​ ರೈಲು
ಹೊತ್ತಿ ಉರಿದ ಮೈಸೂರು-ಉದಯ್​ಪುರ ಪ್ಯಾಲೇಸ್ ಕ್ವೀನ್ ಎಕ್ಸ್​ಪ್ರೆಸ್​ ರೈಲು
ರಂದೀಪ್ ಸುರ್ಜೇವಾಲಾ ಭೇಟಿಯ ನಂತರ ಕೊಂಚ ಖಿನ್ನರಾಗಿರುವ ಡಿಸಿಎಂ
ರಂದೀಪ್ ಸುರ್ಜೇವಾಲಾ ಭೇಟಿಯ ನಂತರ ಕೊಂಚ ಖಿನ್ನರಾಗಿರುವ ಡಿಸಿಎಂ
ರಾಯಚೂರು: ಕಾಂಗ್ರೆಸ್ ನಾಯಕಿ ಮನೆ ರಸ್ತೆಗೇ ಇಲ್ಲ ಕಾಂಕ್ರೀಟ್ ಭಾಗ್ಯ!
ರಾಯಚೂರು: ಕಾಂಗ್ರೆಸ್ ನಾಯಕಿ ಮನೆ ರಸ್ತೆಗೇ ಇಲ್ಲ ಕಾಂಕ್ರೀಟ್ ಭಾಗ್ಯ!
ಆತ್ಮಹತ್ಯೆಗೆ ಯತ್ನ: ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ಯುವತಿ ರಕ್ಷಣೆ
ಆತ್ಮಹತ್ಯೆಗೆ ಯತ್ನ: ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ಯುವತಿ ರಕ್ಷಣೆ
ಕಳೆದ ಶುಕ್ರವಾರ ಹಲವಾರು ಸಮಸ್ಯೆಗಳನ್ನು ಭಕ್ತರು ಟಿವಿ9 ಗಮನಕ್ಕೆ ತಂದಿದ್ದರು
ಕಳೆದ ಶುಕ್ರವಾರ ಹಲವಾರು ಸಮಸ್ಯೆಗಳನ್ನು ಭಕ್ತರು ಟಿವಿ9 ಗಮನಕ್ಕೆ ತಂದಿದ್ದರು