
ಬಿಗ್ ಬಾಸ್ ಎಂದಾಕ್ಷಣ ನೆನಪಿಗೆ ಬರೋದು ಕಾಂಟ್ರವರ್ಸಿ. ಮನೆ ಸೇರಿದ ನಂತರ ಎಲ್ಲರೂ ತಮ್ಮ ತನವನ್ನು ಮರೆತು, ಹೊಡೆದಾಡಿಕೊಳ್ಳಲು, ಕೈಕೈ ಮಿಲಾಯಿಸಿಕೊಳ್ಳಲು ಮುಂದಾಗುತ್ತಾರೆ. ಈ ವಿಚಾರದಲ್ಲಿ ಬಿಗ್ ಬಾಸ್ ಪ್ರತಿ ಬಾರಿಯೂ ಹೈಲೈಟ್ ಆಗುತ್ತದೆ. ಈ ಬಾರಿಯ ಬಿಗ್ ಬಾಸ್ ಸೀಸನ್ 15ರಲ್ಲಿಯೂ ಇದು ಮುಂದುವರಿದಿದೆ. ದೊಡ್ಮನೆ ಆಟ ಶುರುವಾದ ಕೆಲವೇ ದಿನಗಳಲ್ಲಿ ಹೊಡೆದಾಟ-ಬಡಿದಾಟ ಆರಂಭವಾಗಿದೆ.
ಈ ಬಾರಿಯ ‘ಬಿಗ್ ಬಾಸ್ 15’ ಕಾಡಿನ ಥೀಮ್ನೊಂದಿಗೆ ಮೂಡಿ ಬರುತ್ತಿದೆ. ಈ ಕಾರಣಕ್ಕೆ ಬಿಗ್ ಬಾಸ್ ಮನೆಯನ್ನು ಕಾಡಿನ ರೀತಿಯಲ್ಲೇ ಸಿದ್ಧಮಾಡಲಾಗಿದೆ. ಇಡೀ ಮನೆಗೆ ವಿಶೇಷ ಲುಕ್ ನೀಡಲಾಗಿದೆ. ಇದು ವೀಕ್ಷಕರಿಗೆ ಸಾಕಷ್ಟು ಖುಷಿ ನೀಡಿದೆ. ಬಿಗ್ ಬಾಸ್ ಮನೆ ಬದಲಾದರೂ ಮನೆಗೆ ತೆರಳುವವರ ಮನಸ್ಥಿತಿ ಬದಲಾಗಿಲ್ಲ. ಮನೆಗೆ ತೆರಳಿದ ನಂತರ ಅವರು ಹೊಡೆದುಕೊಂಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ನಡೆದ ಫೈಟ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಎಲ್ಲರೂ ಮುಖಮೂತಿ ನೋಡದೇ ಹೊಡೆದುಕೊಂಡಿದ್ದಾರೆ. ಹೆಣ್ಣು ಮಕ್ಕಳಿಗೂ ಹೊಡೆತಗಳು ಬಿದ್ದಿವೆ. ಇದನ್ನು ನೋಡಿ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಇದು ಅತಿಯಾಯಿತು ಎಂದು ಹೇಳಿಕೊಂಡಿದ್ದಾರೆ. ಸದ್ಯ ವಿಡಿಯೋ ವೈರಲ್ ಆಗಿದೆ.
ಅಕ್ಟೋಬರ್ 3ರಂದು ಬಿಗ್ ಬಾಸ್ ಪ್ರಾರಂಭವಾಗಿತ್ತು. ಮೊದಲ ದಿನವೇ ಈ ರಿಯಾಲಿಟಿ ಶೋಗೆ ಅದ್ದೂರಿ ಸ್ವಾಗತ ಸಿಕ್ಕಿತ್ತು. ಸಲ್ಮಾನ್ ಖಾನ್ ಶೋ ನಡೆಸಿಕೊಟ್ಟಿದ್ದರು. ಬಾಲಿವುಡ್ನ ಖ್ಯಾತ ನಟ ರಣವೀರ್ ಸಿಂಗ್ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ನಟಿ ಮೌನಿ ರಾಯ್ ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದರು. ವಿಧಿ ಪಾಂಡ್ಯಾ, ವಿಶಾಲ್ ಕೋಟಿಯಾನ್, ಶಮಿತಾ ಶೆಟ್ಟಿ, ಕರಣ್ ಕುಂದ್ರಾ, ತೇಜಸ್ವಿ ಪ್ರಕಾಶ್, ಸಿಂಬಾ ನಾಗ್ಪಾಲ್, ಮೀಶಾ ಅಯ್ಯರ್, ಐಶಾನ್ ಸೆಹಗಾಲ್, ದೋನಲ್ ಬಿಶ್ಟ್, ಸಾಹಿಲ್ ಶ್ರಾಫ್, ಆಕಾಶಾ ಸಿಂಗ್, ಉಮರ್ ರಿಯಾಜ್ ಮೊದಲಾದವರು ಬಿಗ್ ಬಾಸ್ ಮನೆಯಲ್ಲಿದ್ದಾರೆ.
ಇದನ್ನೂ ಓದಿ: ನನಗೆ ಸುಕೃತಾ ಜತೆ ಮದುವೆ ಫಿಕ್ಸ್ ಆಗಿದೆ ಎಂದ ಬಿಗ್ ಬಾಸ್ ಶೈನ್ ಶೆಟ್ಟಿ
ಬಿಗ್ ಬಾಸ್ನಲ್ಲಿ ರಾಜ್ ಕುಂದ್ರಾ ಬಗ್ಗೆ ಜೋಕ್ ಮಾಡಿದ ಸಲ್ಮಾನ್; ಮುಜುಗರಕ್ಕೊಳಗಾದ ಶಮಿತಾ ಶೆಟ್ಟಿ
Published On - 3:37 pm, Fri, 15 October 21