ಬಿಗ್ ಬಾಸ್​ನಲ್ಲಿ​ ಮುನಾವರ್​ಗೆ ‘ಜೈ ಶ್ರೀರಾಮ್’ ಎಂದು ಗ್ರೀಟ್ ಮಾಡಿದ ತಾನ್ಯಾ; ಸಲ್ಲು ರಿಯಾಕ್ಷನ್ ಏನು?

‘ಬಿಗ್ ಬಾಸ್ ಕನ್ನಡ ಸೀಸನ್ 19’ರಲ್ಲಿ ಮುನಾವರ್ ಫಾರೂಕಿ ಅತಿಥಿಯಾಗಿ ತೆರಳಿದ್ದರು. ತಾನ್ಯಾ ಅವರು ‘ಜೈ ಶ್ರೀರಾಮ್’ ಎಂದು ವಿಶ್ ಮಾಡಿದ್ದಾರೆ. ಸಲ್ಮಾನ್ ಖಾನ್ ಅವರ ಪ್ರತಿಕ್ರಿಯೆ ಕೂಡ ಚರ್ಚೆಗೆ ಗ್ರಾಸವಾಗಿವೆ. ವಿವಿಧ ಕ್ಷೇತ್ರಗಳ ಸ್ಪರ್ಧಿಗಳ ಭಾಗವಹಿಸುವಿಕೆಯು ಶೋಗೆ ಹೊಸ ಆಯಾಮವನ್ನು ನೀಡಿದೆ.

ಬಿಗ್ ಬಾಸ್​ನಲ್ಲಿ​ ಮುನಾವರ್​ಗೆ ‘ಜೈ ಶ್ರೀರಾಮ್’ ಎಂದು ಗ್ರೀಟ್ ಮಾಡಿದ ತಾನ್ಯಾ; ಸಲ್ಲು ರಿಯಾಕ್ಷನ್ ಏನು?
ತಾನ್ಯಾ

Updated on: Sep 11, 2025 | 8:59 AM

‘ಹಿಂದಿ ಬಿಗ್ ಬಾಸ್ ಸೀಸನ್ 19’ (Bigg Boss) ಆರಂಭ ಆಗಿದೆ. ಈ ಬಾರಿ ವಿವಿಧ ಕ್ಷೇತ್ರದ ಸ್ಪರ್ಧಿಗಳು ಶೋಗೆ ಆಗಮಿಸಿದ್ದಾರೆ. ಪ್ರತಿ ವೀಕೆಂಡ್​ನಲ್ಲಿ ಸಲ್ಮಾನ್ ಖಾನ್ ಬಂದು ಎಲ್ಲಾ ಸ್ಪರ್ಧಿಗಳನ್ನು ರೋಸ್ಟ್ ಮಾಡಿ ಹೋಗುತ್ತಾರೆ. ಇತ್ತೀಚೆಗೆ ಬಿಗ್ ಬಾಸ್​ನಲ್ಲಿ ನಡೆದ ಘಟನೆ ಒಂದು ಸಾಕಷ್ಟು ಚರ್ಚೆ ಆಗುತ್ತಾ ಇದೆ. ಕಾಮಿಡಿಯನ್ ಮುನಾವರ್ ಫಾರೂಕಿ ಅವರು ಅತಿಥಿಯಾಗಿ ಬಂದಿದ್ದರು. ಅವರಿಗೆ ತಾನ್ಯಾ ಹೆಸರಿನ ಸ್ಪರ್ಧಿ ‘ಜೈ ಶ್ರೀರಾಮ್’ ಎಂದು ಗ್ರೀಟ್ ಮಾಡಿದ್ದಾರೆ. ಆ ವಿಡಿಯೋ ವೈರಲ್ ಆಗಿದೆ.

ಕಳೆದ ವಾರ ಈ ಶೋಗೆ 18ನೇ ಸೀಸನ್ ವಿನ್ನರ್ ಮುನಾವರ್ ಆಗಮಿಸಿದ್ದಾರೆ. ಅವರು ಎಲ್ಲಾ ಸ್ಪರ್ಧಿಗಳನ್ನು ಸಾಕಷ್ಟು ರೋಸ್ಟ್ ಮಾಡಿದ್ದಾರೆ. ಅವರು ಎಲ್ಲರಿಗೂ ಪರೋಕ್ಷವಾಗಿ ಪಾಠ ಮಾಡಿದ್ದಾರೆ. ‘ಇಶಾನ್ ಭಾಯ್’ ಎಂದು ಮುನಾವರ್ ಅವರು ಮಾತನಾಡಿಸಿದರು. ‘ಅಸ್-ಸಲಾಮು ಅಲೈಕುಮ್’ ಎಂದು ಇಶಾನ್ ಮಾತನಾಡಿಸಿದ್ದಾರೆ.

ಇದನ್ನೂ ಓದಿ
ಹಠ ಮಾಡಿ ವಿಷ್ಣುವರ್ಧನ್ ಸಿನಿಮಾದಲ್ಲಿ ನಟಿಸಿದ್ದ ನಟ ಅಕ್ಷಯ್ ಕುಮಾರ್
ಲೂಸಿಯಾದಲ್ಲಿ ರಿಷಬ್ ಶೆಟ್ಟಿ ಮಾಡಿದ ಪಾತ್ರ ನೆನಪಿದೆಯೇ? ಅದೆಷ್ಟು ಬದಲಾವಣೆ
‘ಹಳ್ಳಿ ಪವರ್​’ನಲ್ಲಿ 1 ವಾರಕ್ಕೆ 4 ಮಂದಿ ವೈಲ್ಡ್​ ಕಾರ್ಡ್ ಮೂಲಕ ಎಂಟ್ರಿ
ಸು ಫ್ರಮ್ ಸೋಗೆ OTTಯಲ್ಲಿ ಬೇರೆಯದೇ ರೀತಿಯ ವಿಮರ್ಶೆ; ಸಮಸ್ಯೆ ಆಗಿದ್ದೆಲ್ಲಿ?

ಇದನ್ನೂ ಓದಿ: ಸುಧಾರಾಣಿ ಬಿಗ್ ಬಾಸ್​ಗೆ ಬರ್ತಾರೆ ಎಂದ ಟ್ರೋಲ್​ ಪೇಜ್​ಗಳಿಗೆ ಮೀಮ್​ ಸ್ಟೈಲ್​ನಲ್ಲಿ ಉತ್ತರಿಸಿದ ನಟಿ

ಇದೇ ವೇಳೆ ತಾನ್ಯಾ ಅವರನ್ನು ಮುನಾವರ್ ಮಾತನಾಡಿಸಿದರು. ತಾನ್ಯಾ ಅವರು, ‘ಜೈ ಶ್ರೀರಾಮ್’ ಎಂದು ಗ್ರೀಟ್ ಮಾಡಿದರು. ತಾನ್ಯಾ ಉತ್ತರ ನೋಡಿ ಸಲ್ಮಾನ್ ಖಾನ್ ಮೊಗದಲೂ ನಗು ಬಂತು. ಅವರು ಖುಷಿಯಿಂದ ನಕ್ಕಿದ್ದಾರೆ. ಅನೇಕರು ತಾನ್ಯಾ ಅವರನ್ನು ಹೊಗಳಿದ್ದಾರೆ. ‘ತಾನ್ಯಾ ಮೇಳೆ ಇರೋ ಗೌರವ ಹೆಚ್ಚಾಯಿತು’ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.

ಸಲ್ಮಾನ್ ಖಾನ್ ಅವರು ಸರ್ವ ಧರ್ಮವನ್ನೂ ಬೆಂಬಲಿಸುವವರು. ಅವರು ಮುಸ್ಲಿಂ ಆಗಿದ್ದರೂ ಮನೆಯಲ್ಲಿ ಗಣೇಶ ಚತುರ್ಥಿ ಹಬ್ಬವನ್ನು ಆಚರಿಸುತ್ತಾ ಬರುತ್ತಿದ್ದಾರೆ. ಅವರ ತಂದೆ ಸಲೀಮ್ ಮುಸ್ಲಿಂ. ಅವರ ತಾಯಿ ಹಿಂದೂ ಆಗಿದ್ದರು. ಸಲೀಮ್ ಕೂಡ ಎಲ್ಲಾ ಧರ್ಮವನ್ನು ಗೌರವಿಸುತ್ತಾ ಬರುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.