AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​​ಬಾಸ್​​ ಇಂದ ಸಿನಿಮಾ ಅವಕಾಶಗಳು ಬರುವುದಿಲ್ಲ: ನಟಿ ಬೇಸರ

ಬಿಗ್​​ಬಾಸ್ ಸೀಸನ್ ಮತ್ತೆ ಪ್ರಾರಂಭ ಆಗಿದೆ. ಒಟ್ಟಿಗೆ ಹಲವು ಭಾಷೆಗಳಲ್ಲಿ ಬಿಗ್​​ಬಾಸ್ ಚಾಲ್ತಿಯಲ್ಲಿದೆ. ಹಲವಾರು ನಟ-ನಟಿಯರು ಬಿಗ್​​ಬಾಸ್ ಮನೆಗೆ ಪ್ರವೇಶ ಮಾಡಿದ್ದಾರೆ. ನಟನಾ ವೃತ್ತಿಗೆ ಬೂಸ್ಟ್ ಸಿಗುತ್ತದೆ, ಹೊಸ ಅವಕಾಶಗಳು ಸಿಗುತ್ತವೆ ಎಂಬ ಕಾರಣಕ್ಕೆ ಹಲವು ನಟ-ನಟಿಯರು ಬಿಗ್​​ಬಾಸ್ ಮನೆಗೆ ಹೋಗುತ್ತಾರೆ. ಆದರೆ ಇಲ್ಲೊಬ್ಬ ನಟಿ, ಬಿಗ್​​ಬಾಸ್​​ನಿಂದ ಸಿನಿಮಾ ಅವಕಾಶ ಸಿಗುವುದಿಲ್ಲ ಎಂದಿದ್ದಾರೆ.

ಬಿಗ್​​ಬಾಸ್​​ ಇಂದ ಸಿನಿಮಾ ಅವಕಾಶಗಳು ಬರುವುದಿಲ್ಲ: ನಟಿ ಬೇಸರ
Inaya Sultana
ಮಂಜುನಾಥ ಸಿ.
|

Updated on: Sep 09, 2026 | 6:48 PM

Share

ಬಿಗ್​​ಬಾಸ್ ಹೊಸ ಸೀಸನ್ ಶುರುವಾಗಿದೆ. ಈ ಬಾರಿ ವಿಶೇಷವಾಗಿ ಆರು ಪ್ರಮುಖ ಭಾಷೆಗಳಲ್ಲಿ ಏಕಕಾಲಕ್ಕೆ ಬಿಗ್​​ಬಾಸ್ ಹೊಸ ಸೀಸನ್​​ಗೆ ಚಾಲ್ತಿ ನೀಡಲಾಗಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಬಿಗ್​​ಬಾಸ್ ಏಕಕಾಲಕ್ಕೆ ಚಾಲ್ತಿಯಾಗಿದೆ. ಹಲವಾರು ಸಿನಿಮಾ, ಟಿವಿ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದ ಇನ್​​ಫ್ಲ್ಯುಯೆನ್ಸರ್​​ಗಳು ಈ ಬಾರಿ ಬಿಗ್​​ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಅದರಲ್ಲೂ ಸಿನಿಮಾ ಮತ್ತು ಟಿವಿ ಕಲಾವಿದರು ತಮ್ಮ ನಟನಾ ವೃತ್ತಿಗೆ ಸಹಾಯವಾಗಲೆಂದೇ ಬಿಗ್​​ಬಾಸ್​​ಗೆ ಪ್ರವೇಶ ಮಾಡುತ್ತಾರೆ. ಕನ್ನಡ ಬಿಗ್​​ಬಾಸ್ ವೇದಿಕೆಯಲ್ಲಿ ಕೆಲವು ನಟ-ನಟಿಯರು ಈ ಬಗ್ಗೆ ಮುಕ್ತವಾಗಿ ಹೇಳಿಕೊಂಡಿದ್ದಾರೆ. ಆದರೆ ಇಲ್ಲೊಬ್ಬ ನಟಿ, ಬಿಗ್​​ಬಾಸ್​​ ಇಂದ ಸಿನಿಮಾ ಅವಕಾಶಗಳು ಬರುವುದಿಲ್ಲ ಎಂದಿದ್ದಾರೆ.

ಇನಾಯಾ ಸುಲ್ತಾನಾ, ತೆಲುಗು ಚಿತ್ರರಂಗದ ನಟಿ. ತೆಲುಗಿನ ಬಿಗ್​​ಬಾಸ್ ಸೀಸನ್ 6ರಲ್ಲಿ ಅವರು ಸ್ಪರ್ಧಿಯಾಗಿ ಭಾಗಿ ಆಗಿದ್ದರು. ಬಿಗ್​​ಬಾಸ್ ಮನೆಗೆ ಹೋಗುವಾಗ ತಮ್ಮ ನಟನಾ ವೃತ್ತಿಗೆ ದೊಡ್ಡ ಸಹಾಯ ಆಗಲಿದೆ ಎಂಬ ನಿರೀಕ್ಷೆಯಿಂದಲೇ ಬಿಗ್​​ಬಾಸ್ ಮನೆಗೆ ಇನಾಯಾ ಸುಲ್ತಾನಾ ಹೋಗಿದ್ದರಂತೆ. ಆದರೆ ‘ನಾನು ನಿರೀಕ್ಷಿಸಿದಂತೆ ಅದು ಆಗಲಿಲ್ಲ’ ಎಂದು ನಟಿ ಇನಾಯಾ ಸುಲ್ತಾನಾ ಹೇಳಿದ್ದಾರೆ.

ಬಿಗ್​​ಬಾಸ್​​ ಮನೆಯಿಂದ ಹೊರ ಬಂದ ಬಳಿಕ ಸಾಕಷ್ಟು ಜನಪ್ರಿಯತೆ ಸಿಕ್ಕಿತ್ತು. ಸಾಕಷ್ಟು ಇನ್ಯಾಗುರೇಷನ್ ಕಾರ್ಯಕ್ರಮಗಳಿಗೆ ಇನ್ನಿತರೆ ಕಾರ್ಯಕ್ರಮಗಳಿಗೆ ಜನ ಕರೆಯುತ್ತಿದ್ದರು ಆದರೆ ಸಿನಿಮಾ ಅವಕಾಶಗಳು ಮಾತ್ರ ಬರಲಿಲ್ಲ. ಎಷ್ಟೋ ಮಂದಿ, ಸಿನಿಮಾ ಅವಕಾಶ, ಟಿವಿ ಅವಕಾಶಗಳು ಬರುತ್ತವೆ ಎಂಬ ಆಸೆಯಿಂದಾಗಿ ಬಿಗ್​​ಬಾಸ್ ಮನೆಗೆ ಹೋಗುತ್ತಾರೆ ಆದರೆ ಅದ್ಯಾವುದೂ ಆಗುವುದಿಲ್ಲ ಬಿಗ್​​ಬಾಸ್ ಮನೆಯಿಂದ ಜನಪ್ರಿಯತೆ ಸಿಗಬಹುದೇನೋ ಆದರೆ ಸಿನಿಮಾ ಅವಕಾಶ ಸಿಗುವುದಿಲ್ಲ ಎಂದಿದ್ದಾರೆ ಇನಾಯಾ.

ಇದನ್ನೂ ಓದಿ:ಬಿಗ್‌ಬಾಸ್ ‘ಅಗ್ನಿಪರೀಕ್ಷೆ’ಯಲ್ಲಿ ಗಲಾಟೆ: ‘ವಿನಯ್ ಗೌಡ ಅಲ್ಲಿರೋದಕ್ಕೆ ಲಾಯಕ್ಕಿಲ್ಲ’ ಎಂದ ಸ್ಪರ್ಧಿ

ಬಿಗ್​​ಬಾಸ್​​ ನಿಂದ ಹೊರಬಂದ ಬಳಿಕ ಸಾಕಷ್ಟು ಜನಪ್ರಿಯತೆ ಧಕ್ಕಿತ್ತು, ಆದರೆ ನಾನು ಆ ಜನಪ್ರಿಯತೆಯನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ಅದೇ ಸಮಯದಲ್ಲಿ ನನಗೊಬ್ಬ ಬಾಯ್​​ಫ್ರೆಂಡ್ ಇದ್ದ, ಅವನು ನನ್ನ ಜನಪ್ರಿಯತೆ ಬಳಸಿಕೊಂಡು ಲಕ್ಷಾಂತರ ರೂಪಾಯಿ ಹಣ ದೋಚಿದ. ನಾನು ನನ್ನ ಸರ್ವಸ್ವವನ್ನೂ ಅವನಿಗೆ ಕೊಟ್ಟಿದ್ದೆ ಆದರೆ ಅವನು ನನಗೆ ಮೋಸ ಮಾಡಿದ ಎಂದು ಇನಾಯಾ ಆರೋಪ ಮಾಡಿದ್ದಾರೆ.

ಬಿಗ್​​ಬಾಸ್ ಬಳಿಕ ಹಲವು ನಿರ್ಮಾಣ ಸಂಸ್ಥೆಗಳಿಗೆ ನಾನೇ ಖುದ್ದಾಗಿ ಹೋಗಿ ಅವಕಾಶಗಳಿಗಾಗಿ ಕೇಳಿ ಕೊಂಡೆ ಆದರೆ ಯಾರೂ ನೀಡಲಿಲ್ಲ. ಈಗ ಕೆಲ ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಇದೀಗ ಹಲವು ಭಾಷೆಗಳಲ್ಲಿ ಬಿಗ್​​ಬಾಸ್ ಪ್ರಾರಂಭವಾಗಿದ್ದು, ಹಲವು ನಟ-ನಟಿಯರು ಸಿನಿಮಾ ಅವಕಾಶಗಳ ಆಸೆಗಾಗಿ ಬಿಗ್​​ಬಾಸ್ ಮನೆ ಸೇರಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್