‘ಬಿಗ್ ಬಾಸ್’ಗೆ (Bigg Boss) ಎಂಟ್ರಿ ಕೊಟ್ಟ ಬಳಿಕ ಹಲವರ ಜೀವನ ಬದಲಾಗುತ್ತದೆ. ಹೊಸ ಹೊಸ ಆಫರ್ಗಳು ಸೆಲೆಬ್ರಿಟಿಗಳನ್ನು ಹುಡುಕಿ ಬರುತ್ತವೆ. ಆದರೆ, ಕೆಲವೊಮ್ಮೆ ಅಂದಕೊಂಡ ರೀತಿಯಲ್ಲಿ ಬದಲಾವಣೆ ಆಗುವುದಿಲ್ಲ. ನಿರೀಕ್ಷೆ ಹೆಚ್ಚಿರುತ್ತದೆ. ಆ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಆಫರ್ಗಳು ಬರೋದಿಲ್ಲ. ತುಕಾಲಿ ಸಂತೋಷ್ ಅವರಿಗೂ ಈಗ ಹಾಗೆಯೇ ಆಗಿದೆ. ಈ ಬಗ್ಗೆ ಅವರು ‘ಟಿವಿ9 ಕನ್ನಡ ಡಿಜಿಟಲ್’ ಜೊತೆ ಮಾತನಾಡಿದ್ದಾರೆ.
ತುಕಾಲಿ ಸಂತೋಷ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ ಮೂಲಕ ದೊಡ್ಡ ಜನಪ್ರಿಯತೆ ಪಡೆದರು. ಅಲ್ಲಿ ಸಿಕ್ಕ ಜನಪ್ರಿಯತೆಗೆ ತಕ್ಕಂತೆ ಸಿನಿಮಾ ಆಫರ್ಗಳು ಬರುತ್ತಿಲ್ಲ ಅನ್ನೋ ಬಗ್ಗೆ ಅವರಿಗೆ ಸ್ವಲ್ಪ ಬೇಸರ ಇದೆ. ‘ಜೀವನ ಚೆನ್ನಾಗಿದೆ. ಸಣ್ಣ ಪುಟ್ಟ ಏರಿಳಿತ ಇದೆ. ಬಿಗ್ ಬಾಸ್ ಮುಗಿದ ಬಳಿಕ ಅದ್ಭುತ ಎನ್ನುವ ರೀತಿಯಲ್ಲಿ ಜೀವನ ಏನೂ ಬದಲಾಗಿಲ್ಲ. ಹಿಂದಿನ ಜೀವನಕ್ಕಿಂತ ಸ್ವಲ್ಪ ಬದಲಾಗಿದೆ’ ಎಂದಿದ್ದಾರೆ ತುಕಾಲಿ ಸಂತೋಷ್.
‘ಬಿಗ್ ಬಾಸ್ ಮುಗಿದ ಬಳಿಕ ಕೆಟಿಎಂ ಸಿನಿಮಾ ರಿಲೀಸ್ ಆಯ್ತು. ಈಗ ಮೂರನೇ ಕೃಷ್ಣಪ್ಪ ಸಿನಿಮಾ ಬಿಡುಗಡೆ ಆಗಿದೆ. ಮುಂದಿನ ತಿಂಗಳು ಗಜರಾಮ ರಿಲೀಸ್ ಆಗುತ್ತಿದೆ. ನಾನು ನಿರೀಕ್ಷೆ ಮಾಡಿದಂತೆ ದೊಡ್ಡ ಸ್ಟಾರ್ಗಳ ಜೊತೆ ಸಿನಿಮಾ ಮಾಡಬೇಕು ಎನ್ನುವ ಆಸೆ ಇದೆ. ಆದರೆ, ಆಫರ್ ಬಂದಿಲ್ಲ’ ಎಂದಿದ್ದಾರೆ ಅವರು.
ಬಿಗ್ ಬಾಸ್ನಲ್ಲಿ ಕಾಣಿಸಿಕೊಂಡ ಬಳಿಕ ಕಲರ್ಸ್ನಲ್ಲಿ ನಟಿಸೋಕೆ ಅವಕಾಶ ಸಿಗುತ್ತದೆ. ತುಕಾಲಿ ಸಂತೋಷ್ಗೂ ಈ ಆಫರ್ ಬಂದಿದೆ. ‘ನನಗೆ ಕಲರ್ಸ್ ಕಡೆಯಿಂದಲೇ ಆಫರ್ ಬಂದಿತ್ತು. ಆದರೆ, ಗಿಚ್ಚಿ ಗಿಲಿಗಿಲಿಯಲ್ಲಿ ಬ್ಯುಸಿ ಇರುವುದರಿಂದ ಧಾರಾವಾಹಿ ಹೋಲ್ಡ್ ಮಾಡಲಾಗಿದೆ. ಡೇಟ್ ಕ್ಲ್ಯಾಶ್ ಆಗುತ್ತದೆ. ಗಿಚ್ಚಿ ಗಿಲಿಗಿಲಿ ಮುಗಿದ ಬಳಿಕ ಆಫರ್ ಬಂದ್ರೆ ಒಪ್ಪಿಕೊಳ್ಳುತ್ತೇನೆ’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ‘22 ಸಿನಿಮಾಗಳಲ್ಲಿ ನಟಿಸಿದ ಬಳಿಕ ನನಗೂ ಕಟೌಟ್ ನಿಲ್ಲಿಸಿದರು’; ಖುಷಿಯಿಂದ ಹೇಳಿದ ತುಕಾಲಿ ಸಂತೋಷ್
ತುಕಾಲಿ ಸಂತೋಷ್ ಹಾಗೂ ಅವರ ಪತ್ನಿ ಮಾನಸಾ ಇಬ್ಬರೂ ‘ಗಿಚ್ಚಿ ಗಿಲಿ ಗಿಲಿ ಸೀಸನ್ 3’ನಲ್ಲಿ ಬ್ಯುಸಿ ಆಗಿದ್ದಾರೆ. ಕಲರ್ಸ್ ಕನ್ನಡದಲ್ಲಿ ವೀಕೆಂಡ್ನಲ್ಲಿ ಈ ಎಪಿಸೋಡ್ಗಳು ಪ್ರಸಾರ ಕಾಣುತ್ತಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.