Bigg Boss: ಹಿಂದಿ ಬಿಗ್ ಬಾಸ್ ಗೆದ್ದವರಿಗೆ ಸಿಗೋ ಹಣ ಇಷ್ಟೊಂದಾ?

Bigg Boss Hindi: ಬಿಗ್ ಬಾಸ್ ಹಿಂದಿ ಸೀಸನ್ 18ರ ಗ್ರ್ಯಾಂಡ್ ಫಿನಾಲೆ ಜನವರಿ 19 ರಂದು ರಾತ್ರಿ 9 ಗಂಟೆಗೆ ಕಲರ್ಸ್ ಟಿವಿ ಮತ್ತು ಜಿಯೋ ಸಿನಿಮಾದಲ್ಲಿ ಪ್ರಸಾರವಾಗಲಿದೆ. ಕರಣ್ವೀರ್, ವಿವಿಯನ್, ಅವಿನಾಶ್ ಮುಂತಾದ 8 ಸ್ಪರ್ಧಿಗಳು ಟ್ರೋಫಿಗಾಗಿ ಸ್ಪರ್ಧಿಸುತ್ತಿದ್ದಾರೆ. ವಿಜೇತರಿಗೆ ಭಾರಿ ಮೊತ್ತದ ಬಹುಮಾನ ಸಿಗಲಿದೆ.

Bigg Boss: ಹಿಂದಿ ಬಿಗ್ ಬಾಸ್ ಗೆದ್ದವರಿಗೆ ಸಿಗೋ ಹಣ ಇಷ್ಟೊಂದಾ?
Bigg Boss Hindi 18
Updated By: ಮಂಜುನಾಥ ಸಿ.

Updated on: Jan 13, 2025 | 5:46 PM

‘ಬಿಗ್ ಬಾಸ್’ ಹದಿನೆಂಟನೇ ಸೀಸನ್ ಶೀಘ್ರದಲ್ಲೇ ಕೊನೆಯಾಗಲಿದೆ. ಈ ವಾರಾಂತ್ಯಕ್ಕೆ ಫಿನಾಲೆ ನಡೆಯಲಿದೆ. ಕರಣ್ವೀರ್ ಮೆಹ್ರಾ, ವಿವಿಯನ್ ದ್ಸೇನಾ, ಚುಮ್ ದರಾಂಗ್, ಶಿಲ್ಪಾ ಶಿರೋಡ್ಕರ್, ಅವಿನಾಶ್ ಮಿಶ್ರಾ, ಇಶಾ ಸಿಂಗ್, ಚಾಹತ್ ಪಾಂಡೆ ಮತ್ತು ರಾಜಲ್ ದಲಾಲ್ ಸೇರಿದಂತೆ ಪ್ರಸ್ತುತ ಎಂಟು ಸ್ಪರ್ಧಿಗಳು ಬಿಗ್ ಬಾಸ್ ಮನೆಯಲ್ಲಿದ್ದಾರೆ. ಈ ಎಂಟು ಜನರ ನಡುವೆ ‘ಬಿಗ್ ಬಾಸ್ 18′ ಟ್ರೋಫಿ ಗೆಲ್ಲುವ ಸ್ಪರ್ಧೆ ಏರ್ಪಡುತ್ತಿದೆ. ಬಿಗ್ ಬಾಸ್‌ನ ಈ ಹೊಸ ಸೀಸನ್ ಕಳೆದ ವರ್ಷ ಅಕ್ಟೋಬರ್ 6ರಿಂದ ಪ್ರೇಕ್ಷಕರಿಗೆ ಬಂದಿದೆ. ಈ ಸೀಸನ್‌ನ ಗ್ರ್ಯಾಂಡ್ ಫಿನಾಲೆ ಯಾವಾಗ ಮತ್ತು ಯಾವ ಸಮಯದಲ್ಲಿ ನಡೆಯಲಿದೆ, ಈ ಫಿನಾಲೆಯನ್ನು ಪ್ರೇಕ್ಷಕರು ಎಲ್ಲಿ ವೀಕ್ಷಿಸಬಹುದು, ವಿಜೇತರಿಗೆ ಬಹುಮಾನದ ಮೊತ್ತ ಎಷ್ಟು ಎಂಬ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ತಿಳಿಯೋಣ.

‘ಬಿಗ್ ಬಾಸ್ 18′ ರ ಗ್ರ್ಯಾಂಡ್ ಫಿನಾಲೆ ಜನವರಿ 19 ರಂದು ನಡೆಯಲಿದೆ. ‘ಬಿಗ್ ಬಾಸ್ 18’ರ ಸಂಚಿಕೆಗಳು ಮತ್ತು ಗ್ರ್ಯಾಂಡ್ ಫಿನಾಲೆಯನ್ನು ಕಲರ್ಸ್ ಟಿವಿ ಮತ್ತು ಒಟಿಟಿ ಪ್ಲಾಟ್‌ಫಾರ್ಮ್ ಜಿಯೋ ಸಿನಿಮಾದಲ್ಲಿ ವೀಕ್ಷಿಸಬಹುದು. ಗ್ರ್ಯಾಂಡ್ ಫಿನಾಲೆ ಸಂಚಿಕೆ ರಾತ್ರಿ 9 ಗಂಟೆಗೆ ಪ್ರಾರಂಭವಾಗುತ್ತದೆ.ಬಿಗ್ ಬಾಸ್ 18′ ವಿಜೇತರಿಗೆ ಸಿಗುವ ಬಹುಮಾನದ ಮೊತ್ತದ ಬಗ್ಗೆ ಇನ್ನೂ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಆದರೆ ಕೆಲವು ವರದಿಗಳ ಪ್ರಕಾರ ಈ ಮೊತ್ತ 50 ಲಕ್ಷ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ರೂಪೇಶ್-ಆರ್ಯವರ್ಧನ್: ಒಟ್ಟಿಗೆ ಕುಣಿದ ಬಿಗ್​ಬಾಸ್ ಗೆಳೆಯರು

ಗ್ರ್ಯಾಂಡ್ ಫಿನಾಲೆಗೂ ಮೊದಲು ಬ್ರೀಫ್‌ಕೇಸ್ ಟಾಸ್ಕ್ ಅನ್ನು ಪೂರ್ಣಗೊಳಿಸಿದರೆ ಮತ್ತು ಸ್ಪರ್ಧಿಯು 15 ಲಕ್ಷ ರೂಪಾಯಿ ಮೊತ್ತದೊಂದಿಗೆ ಕಾರ್ಯಕ್ರಮವನ್ನು ತೊರೆಯಲು ನಿರ್ಧರಿಸಬಹುದು ಎನ್ನಲಾಗಿದೆ. ‘ಬಿಗ್ ಬಾಸ್’ ಅಭಿಮಾನಿಗಳ ಸಂಘದ ಪ್ರಕಾರ, ಕರಣ್ವೀರ್ ಮೆಹ್ರಾ, ವಿವಿಯನ್ ದ್ಸೇನಾ ಮತ್ತು ಅವಿನಾಶ್ ಮಿಶ್ರಾ ಅವರು ಟ್ರೋಫಿಗೆ ಅಂತಿಮ ಆಟಗಾರರಾಗಬಹುದು. ಮೂವರೂ ವಿಜೇತರಾಗಲು ಸಮಾನ ಅರ್ಹರು ಎಂದು ಪ್ರೇಕ್ಷಕರು ಭಾವಿಸುತ್ತಾರೆ.

ಬಿಗ್ ಬಾಸ್ 18 ರ ಕೊನೆಯ ಎಲಿಮಿನೇಷನ್

ಗ್ರ್ಯಾಂಡ್ ಫಿನಾಲೆಗೆ ಒಂದು ವಾರ ಮೊದಲು, ಶ್ರುತಿಕಾ ಅರ್ಜುನ್ ಬಿಗ್ ಬಾಸ್ ಮನೆಯಿಂದ ಹೊರನಡೆದರು. ಪ್ರೇಕ್ಷಕರ ಸಮೀಕ್ಷೆಯ ಪ್ರಕಾರ, ಅವರು ಕಡಿಮೆ ಮತಗಳನ್ನು ಪಡೆದರು. ರಜತ್ ಮತ್ತು ಚಾಹತ್ ಅವರೊಂದಿಗೆ ಶ್ರುತಿಕಾ ಎಲಿಮಿನೇಷನ್‌ಗೆ ನಾಮನಿರ್ದೇಶನಗೊಂಡರು. ಆ ಬಳಿಕ ಅವರು ಎಲಿಮಿನೇಟ್ ಆಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ