ಬಿಗ್ ಬಾಸ್ ಮನೆಯಿಂದ ಐಶ್ವರ್ಯಾ ಶಿಂಧೋಗಿ ಅವರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಅವರು ಅಲ್ಲಿ ಸಾಕಷ್ಟು ಏರಿಳಿತ ಕಂಡರು. 90 ದಿನಗಳ ಬಿಗ್ ಬಾಸ್ ಜರ್ನಿಯಲ್ಲಿ ಅವರು ಸಾಕಷ್ಟು ನೆನಪುಗಳೊಂದಿಗೆ ದೊಡ್ಮನೆಯಿಂದ ಹೊರ ಬಂದಿದ್ದಾರೆ. ಈಗ ಅವರಿಗೆ ಕಪ್ ಗೆದ್ದಷ್ಟೇ ಖುಷಿ ಆಗಿದೆ. ಈ ಬಗ್ಗೆ ಅವರು ಟಿವಿ9 ಕನ್ನಡ ಜೊತೆ ಮಾತನಾಡಿದ್ದಾರೆ. ಬಿಗ್ ಬಾಸ್ ಜರ್ನಿಯನ್ನು ಅವರು ನೆನಪಿಸಿಕೊಂಡಿದ್ದಾರೆ.
ಐಶ್ವರ್ಯಾಗೆ ತಂದೆ-ತಾಯಿ ಇಲ್ಲ. ಹೀಗಾಗಿ, ಅವರು ಎಲಿಮಿನೇಟ್ ಆಗುವಾಗ ಬಿಗ್ ಬಾಸ್ ಭಾವುಕ ಸಾಲುಗಳನ್ನು ಬರೆದಿದ್ದರು. ಈ ಬಗ್ಗೆ ಐಶ್ವರ್ಯಾ ಮಾತನಾಡಿದ್ದಾರೆ. ‘ಬಿಗ್ ಬಾಸ್ ವೀಕೆಂಡ್ ಒಬ್ಬರು ಎಲಿಮಿನೇಟ್ ಆಗುತ್ತಾರೆ. ಈ ವಾರದ ಎಲಿಮಿನೇಷನ್ ಕಾಲೇಜುಗಳಲ್ಲಿ ನಡೆಸುವ ಒಂದು ಫೇರ್ವೆಲ್ ರೀತಿಯೇ ಇತ್ತು. ಬಿಗ್ ಬಾಸ್ ಪ್ರೀತಿ ಹಾರೈಕೆ ಮೂಲಕ ನನ್ನನ್ನು ಕಳುಹಿಸಿದ್ದಾರೆ. ಒಂದು ಕಡೆ ಬೇಸರ ಇದೆ, ಮತ್ತೊಂದು ಕಡೆ ಖುಷಿ ಇದೆ’ ಎಂದಿದ್ದಾರೆ ಐಶ್ವರ್ಯಾ ಅವರು.
‘ನನ್ನ ಎಲಿಮಿನೇಷನ್ ವೇಳೆ ಬಿಗ್ ಬಾಸ್ ವಿಶೇಷ ಲೆಟರ್ ಕಳುಹಿಸಿದ್ದರು. ನಿಮ್ಮ ನವರಸಗಳನ್ನು ಬಿಗ್ ಬಾಸ್ ಮನೆ ನೋಡಿದೆ ಎಂದು ಲೆಟರ್ನಲ್ಲಿ ಬರೆಯಲಾಗಿತ್ತು. ಡೋರ್ ಹತ್ತಿರ ನಿಲ್ಲುವಾಗ ಬಿಗ್ ಬಾಸ್ ಮಾತನಾಡಿದರು. ತವರನ್ನು ಬಿಟ್ಟು ಹೋಗುತ್ತಿದ್ದೀಯಾ, ಹೋಗಿ ಬಾ ಮಗಳೆ ಎಂದರು. ಇದರಿಂದ ಕಪ್ ಗೆದ್ದಷ್ಟೇ ಖುಷಿ ಆಗಿದೆ. ಬಿಗ್ ಬಾಸ್ ಇತಿಹಾಸದಲ್ಲಿ ಇಷ್ಟು ಎಮೋಷನಲ್ ಫೇರ್ವೆಲ್ ಯಾರಿಗೂ ಸಿಕ್ಕಿರುವುದಿಲ್ಲ ಎಂಬುದು ನನ್ನ ಭಾವನೆ. ಎಲಿಮಿನೇಷನ್ ಪ್ರಕ್ರಿಯೆ ಕೂಡ ಇಷ್ಟು ಬ್ಯೂಟಿಫುಲ್ ಇರುತ್ತದೆ ಎಂಬುದು ಗೊತ್ತಿರಲಿಲ್ಲ. ಬಿಗ್ ಬಾಸ್ ಸಾಕಷ್ಟು ನೀತಿ ಪಾಠಗಳನ್ನು ಕಲಿಸಿದೆ’ ಎಂದಿದ್ದಾರೆ ಅವರು.
ಇದನ್ನೂ ಓದಿ: ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
‘ಬಿಗ್ ಬಾಸ್ ಮನೇನ ನಾನು ಮನೆಯ ರೀತಿ ನೋಡಿಲ್ಲ. ಅದುವೇ ನನ್ನ ಮನೆ ಆಯ್ತು. ಎಲ್ಲವೂ ಕಂಫರ್ಟ್ಜೋನ್ ತರ ಫೀಲ್ ಆಯ್ತು. ಅಲ್ಲಿ ಹೋಗಾದ ಬಳಿಕ ಅದು ನನ್ನ ಮನೆ ಆಯ್ತು. ಬಾಂಡ್ ಶೇರ್ ಮಾಡಿಕೊಂಡಿದ್ದೆ. ಒಬ್ಬರು ಅಣ್ಣ ಆಗಿದ್ದರು, ಒಬ್ಬರು ತಂಗಿ ಆಗಿದ್ದರು. ಎಷ್ಟೇ ಕಿತ್ತಾಡಿದರೂ ಮತ್ತೆ ಹೋಗಿ ಮಾತನಾಡಬೇಕಿತ್ತು’ ಎಂದು ಬಿಗ್ ಬಾಸ್ ಮನೆಯ ದಿನಗಳನ್ನು ಐಶ್ವರ್ಯಾ ನೆನಪಿಸಿಕೊಂಡರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.