ಬಿಗ್​ಬಾಸ್ ಸ್ಪರ್ಧಿ ಮೈಖಲ್ ಅಜಯ್​ರ ಈ ಬೈಕ್​ನ ಬೆಲೆ ಎಷ್ಟು ಲಕ್ಷ ಗೊತ್ತೆ?

Bigg Boss Kannada: ಬಿಗ್​ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿಯಾಗಿದ್ದ ಮೈಖಲ್ ಓಡಿಸುವ ಈ ಬೈಕ್​ನ ಬೆಲೆ ಎಷ್ಟು ಲಕ್ಷ ರೂಪಾಯಿಗಳು ಗೊತ್ತೆ? ಏನು ಈ ಬೈಕ್​ನ ವಿಶೇಷತೆ?

ಬಿಗ್​ಬಾಸ್ ಸ್ಪರ್ಧಿ ಮೈಖಲ್ ಅಜಯ್​ರ ಈ ಬೈಕ್​ನ ಬೆಲೆ ಎಷ್ಟು ಲಕ್ಷ ಗೊತ್ತೆ?
ಮೈಖಲ್ ಅಜಯ್

Updated on: Feb 16, 2024 | 4:59 PM

ಬಿಗ್​ಬಾಸ್ ಕನ್ನಡ ಸೀಸನ್ 10 (BiggBoss) ಮುಗಿದು ಮೂರು ವಾರಗಳಾಗಿವೆ. ಹಿಂದಿನ ಎಲ್ಲ ಬಿಗ್​ಬಾಸ್ ಕನ್ನಡ ಸೀಸನ್​ಗಳಿಗಿಂತಲೂ ಈ ಸೀಸನ್ ಭಾರಿ ದೊಡ್ಡ ಯಶಸ್ಸು ಗಳಿಸಿದೆ. ಶೋನಲ್ಲಿ ಭಾಗವಹಿಸಿದ ಹಲವರು ಸೆಲೆಬ್ರಿಟಿಗಳಾಗಿ ಹೊರಬಂದಿದ್ದಾರೆ. ಈಗಾಗಲೇ ನಟರಾಗಿ ಹೆಸರು ಗಳಿಸಿದ್ದವರು, ತಮ್ಮ ಜನಪ್ರಿಯತೆಯನ್ನು ಮೂರು ಪಟ್ಟು ಮಾಡಿಕೊಂಡಿದ್ದಾರೆ. ಶೋನಿಂದಾಗಿ ಭಾರಿ ಸಂಖ್ಯೆಯ ಜನಪ್ರಿಯತೆ, ಅಭಿಮಾನಿಗಳನ್ನು ಗಳಿಸಿದವರಲ್ಲಿ ಮೈಖಲ್ ಅಜಯ್ ಸಹ ಒಬ್ಬರು.

ಬಿಗ್​ಬಾಸ್ ಮುಗಿದ ಬಳಿಕ ಮೈಖಲ್ ಅಜಯ್ ಸಖತ್ ಜನಪ್ರಿಯರಾಗಿದ್ದಾರೆ. ತಮ್ಮದೇ ಯೂಟ್ಯೂಬ್ ಚಾನೆಲ್ ತೆರೆದು ವ್ಲೋಗಿಂಗ್ ಮಾಡುತ್ತಿದ್ದಾರೆ. ತಮ್ಮ ಐಶಾರಾಮಿ ಬೈಕ್​ನಲ್ಲಿ ರೋಡ್​ ಟ್ರಿಪ್​ಗಳನ್ನು ಮಾಡುತ್ತಿದ್ದಾರೆ. ಮೈಖಲ್​ರ ವೇಷ-ಭೂಷಣ ಹಲವರಿಗೆ ಇಷ್ಟವಾಗುತ್ತದೆ. ಅವರ ಕೇಶವಿನ್ಯಾಸಕ್ಕೂ ಅಭಿಮಾನಿಗಳಿದ್ದಾರೆ. ಇದೀಗ ಅವರ ಬೈಕ್ ಮೇಲೆ ಅಭಿಮಾನಿಗಳಿಗೆ ಕಣ್ಣು ಬಿದ್ದಿದೆ. ಮೈಖಲ್​ರ ವ್ಲಾಗ್​ಗಳಲ್ಲಿ ಅವರ ಬೈಕ್​ ಬಗ್ಗೆ ಕಮೆಂಟ್​ಗಳು ತುಸು ಹೆಚ್ಚಿಗೆ ಬರುತ್ತಿವೆ.

ಅಂದಹಾಗೆ ಮೈಖಲ್ ಬಿಎಂಡಬ್ಲ ಬ್ರ್ಯಾಂಡ್​ನ ಆರ್​1200 ಬೈಕ್ ಹೊಂದಿದ್ದಾರೆ. ಇದು ಸಾಮಾನ್ಯ ಬೈಕ್ ಅಲ್ಲ. ಈ ಬೈಕ್​ನ ಬೆಲೆ ಬೆಂಗಳೂರಿನಲ್ಲಿ ಬರೋಬ್ಬರಿ 15.85 ಲಕ್ಷ ರೂಪಾಯಿಗಳು. ಹಲವು ವೈಶಿಷ್ಟ್ಯತೆಗಳನ್ನು ಈ ಬೈಕ್ ಒಳಗೊಂಡಿದೆ. ಕೆಲವೇ ಸೆಕೆಂಡುಗಳಲ್ಲಿ 0 ಇಂದ 150 ಕಿ.ಮೀ ವೇಗವನ್ನು ಪಡೆದುಕೊಳ್ಳುವ ತಾಕತ್ತು ಈ ಬೈಕ್​ಗೆ ಇದೆ. ಹಲವು ಅತ್ಯಾಧುನಿಕ ತಂತ್ರಜ್ಞಾನ, ಭದ್ರತೆ, ಅತ್ಯಾಧುನಿಕ ವಿನ್ಯಾಸ ಈ ಬೈಕ್​ಗೆ ಇದೆ. ಹಾಗಾಗಿಯೇ ಈ ಬೈಕ್ ಇಷ್ಟು ದುಬಾರಿ. ಇತ್ತೀಚೆಗೆ ವರ್ತೂರು ಸಂತೋಷ್ ಅವರ ಮನೆಯ ಕಾರ್ಯಕ್ರಮಕ್ಕೆ ಇದೇ ಬೈಕ್​ನಲ್ಲಿ ಆಗಮಿಸಿದ್ದರು ಮೈಖಲ್.

ಇದನ್ನೂ ಓದಿ:‘ಗೆಳೆಯರ ಕೈಬಿಡಲ್ಲ’ ಸ್ನೇಹಿತ್ ಎಲ್ಲಿ ಎಂದವರಿಗೆ ವಿನಯ್ ಉತ್ತರ

ನೈಜೀರಿಯನ್ ಕನ್ನಡಿಗ ಮೈಖಲ್ ಅಜಯ್ ಈ ಹಿಂದೆ ಹಿಂದಿ ರಿಯಾಲಿಟಿ ಶೋ ಒಂದರಲ್ಲಿ ಭಾಗವಹಿಸಿದ್ದರಾದರೂ ಅದರಿಂದ ದೊಡ್ಡ ಮಟ್ಟದ ಜನಪ್ರಿಯತೆ ಅವರಿಗೆ ಧಕ್ಕಿರಲಿಲ್ಲ. ಹಿಂಜರಿಯುತ್ತಲೇ ಮೈಖಲ್, ಬಿಗ್​ಬಾಸ್ ಕನ್ನಡ ಪ್ರವೇಶಿಸಿದ್ದರು. ಆದರೆ ಅಲ್ಲಿ ಕೆಲವೇ ದಿನಗಳಲ್ಲಿ ಪ್ರೇಕ್ಷಕರ ಮೆಚ್ಚಿನ ಸ್ಪರ್ಧಿಯಾದರು. ಬೇಗನೆ ಕನ್ನಡ ಕಲಿತು, ಕನ್ನಡದಲ್ಲಿಯೇ ಸಂವಹನೆ ಮಾಡಿ ಸುದೀಪ್ ಕಡೆಯಿಂದ ಮಣ್ಣಿನ ಮಗ ಬಿರುದು ಪಡೆದುಕೊಂಡರು. ಹೊರಗೆ ಬಂದ ಬಳಿಕವೂ ಸಹ ‘ಮಣ್ಣಿನ ಮಗ’ ಎಂದು ಹಚ್ಚೆ ಹಾಕಿಸಿಕೊಂಡರು.

ಮೈಖಲ್​ ಎಚ್​ಎಸ್​ಆರ್​ ಲೇಔಟ್​ನಲ್ಲಿ ಗೆಳೆಯರೊಟ್ಟಿಗೆ ಸೇರಿ ಬರ್ಗರ್ ಶಾಪ್ ಒಂದನ್ನು ತೆರೆದಿದ್ದಾರೆ. ಇದೀಗ ಬ್ಲಾಗಿಂಗ್ ಸಹ ಪ್ರಾರಂಭ ಮಾಡಿದ್ದಾರೆ. ಬಿಗ್​ಬಾಸ್​ ಮನೆಯಲ್ಲಿ ಗೆಳೆಯರಾಗಿರುವ ವಿನಯ್ ಗೌಡ ಜೊತೆಗೂ ಸಹ ಹೊಸದೊಂದು ಬ್ಯುಸಿನೆಸ್ ಪ್ರಾರಂಭ ಮಾಡುವ ಯೋಚನೆಯಲ್ಲಿದ್ದಾರೆ ಮೈಖಲ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ