AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಗೆಳೆಯರ ಕೈಬಿಡಲ್ಲ’ ಸ್ನೇಹಿತ್ ಎಲ್ಲಿ ಎಂದವರಿಗೆ ವಿನಯ್ ಉತ್ತರ

Bigg Boss: ಬಿಗ್​ಬಾಸ್ ಕನ್ನಡ ಸೀಸನ್ 10ರ ವಿನಯ್ ಗ್ಯಾಂಗ್ ಇತ್ತೀಚೆಗೆ ಪಾರ್ಟಿ ಮಾಡಿತ್ತು, ಆದರೆ ಪಾರ್ಟಿಯಲ್ಲಿ ಸ್ನೇಹಿತ್ ಇರಲಿಲ್ಲ, ಇದರ ಬಗ್ಗೆ ಹಲವರು ಪ್ರಶ್ನೆ ಮಾಡಿದ್ದರು. ಈಗ ವಿನಯ್ ವಿಡಿಯೋ ಒಂದು ಅಪ್​ಲೋಡ್ ಮಾಡಿ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.

‘ಗೆಳೆಯರ ಕೈಬಿಡಲ್ಲ’ ಸ್ನೇಹಿತ್ ಎಲ್ಲಿ ಎಂದವರಿಗೆ ವಿನಯ್ ಉತ್ತರ
Follow us
ಮಂಜುನಾಥ ಸಿ.
|

Updated on: Feb 09, 2024 | 6:48 PM

ಬಿಗ್​ಬಾಸ್ ಕನ್ನಡ ಸೀಸನ್ 10 (BiggBoss) ಮುಗಿದು ಎರಡು ವಾರವಾಗುತ್ತಾ ಬಂದಿದೆ. ಈ ಬಾರಿಯ ಬಿಗ್​ಬಾಸ್​ನಲ್ಲಿ ಹಲವು ವಿಶೇಷತೆಗಳಿದ್ದವು. ಸಂಗೀತಾ-ವಿನಯ್ ದ್ವೇಷ, ಕಾರ್ತಿಕ್-ಸಂಗೀತಾ ದ್ವೇಷ. ವರ್ತೂರು-ತುಕಾಲಿ ಗೆಳೆತನ. ಇದೆಲ್ಲದರ ಜೊತೆಗೆ ವಿನಯ್​ರ ‘ಗ್ಯಾಂಗ್’ ಬಗ್ಗೆಯೂ ಹಲವು ಬಾರಿ ಚರ್ಚೆ ಆಗಿತ್ತು. ಮನೆಯೊಳಗೆ ಇದ್ದಾಗ ವಿನಯ್, ಸ್ನೇಹಿತ್, ಮೈಖಲ್, ನಮ್ರತಾ, ಇಶಾನಿ, ರಕ್ಷಕ್ ಇವರೆಲ್ಲ ಒಂದು ಗ್ಯಾಂಗ್ ಆಗಿದ್ದರು. ಈಗ ಹೊರಗೆ ಬಂದ ಮೇಲೆ ಈ ಗ್ಯಾಂಗ್​ನಿಂದ ಸ್ನೇಹಿತ್ ಹೊರಗುಳಿದಿದ್ದಾರೆ ಎಂಬ ಅನುಮಾನ ಮೂಡಿತ್ತು.

ಬಿಗ್​ಬಾಸ್​ ಮನೆಯಿಂದ ಹೊಗೆ ಬಂದ ಬಳಿಕ ವಿನಯ್ ಮತ್ತು ಗ್ಯಾಂಗ್​ ಪಾರ್ಟಿಗಳನ್ನು ಮಾಡಿತ್ತಿದೆ. ಎರಡು ದಿನ ಹಿಂದಷ್ಟೆ ಮೈಖಲ್, ನಮ್ರತಾ, ಪವಿ, ವಿನಯ್, ರಕ್ಷಕ್, ಇಶಾನಿ ಅವರುಗಳು ಒಟ್ಟಿಗೆ ಸೇರಿ ಪಾರ್ಟಿ ಮಾಡಿದ್ದರು. ಈ ಪಾರ್ಟಿಗೆ ಸ್ನೇಹಿತ್ ಬಂದಿರಲಿಲ್ಲ. ಇದು ಹಲವರನ್ನು ಗೊಂದಲಕ್ಕೆ ತಳ್ಳಿತ್ತು. ವಿನಯ್​ ಗ್ಯಾಂಗ್​ನಿಂದ ಸ್ನೇಹಿತ್ ಹೊರಗುಳಿದಿದ್ದಾರೆ ಅಥವಾ ನಮ್ರತಾಗಾಗಿ ಸ್ನೇಹಿತ್​ ಅನ್ನು ಹೊರಗಿಡಲಾಗಿದೆ ಎಂಬ ಮಾತುಗಳು ಹರಿದಾಡಿದ್ದವು. ಆ ಊಹಾಪೋಹಕ್ಕೆಲ್ಲ ವಿನಯ್ ವಿಡಿಯೋ ಮೂಲಕ ಉತ್ತರ ನೀಡಿದ್ದಾರೆ.

ಇದನ್ನೂ ಓದಿ:ಗೆಳೆಯನ ‘ಮಂಡ್ಯ ಹೈದ’ ಟ್ರೈಲರ್ ವೀಕ್ಷಿಸಿ ಕೊಂಡಾಡಿದ ಬಿಗ್​ಬಾಸ್ ವಿಜೇತ ಕಾರ್ತಿಕ್

ವಿನಯ್ ತಮ್ಮ ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ಒಂದನ್ನು ಅಪ್​ಲೋಡ್ ಮಾಡಿದ್ದಾರೆ. ವಿಡಿಯೋನಲ್ಲಿ ಸ್ನೇಹಿತ್ ವರ್ಕೌಟ್ ಮಾಡುತ್ತಿದ್ದಾರೆ. ವರ್ಕೌಟ್ ಮಾಡುತ್ತಾ ಡಂಬಲ್ಸ್ ಎತ್ತಲು ಕಷ್ಟವಾದಾಗ ಹಿಂದೆಯಿಂದ ಬಂದ ವಿನಯ್, ಸ್ನೇಹಿತ್​ಗೆ ಸಹಾಯ ಮಾಡುತ್ತಾರೆ. ಆ ನಂತರ ಸ್ನೇಹಿತ್ ವರ್ಕೌಟ್ ಮುಂದುವರೆಸುತ್ತಾರೆ. ವಿನಯ್ ಸಹ ವರ್ಕೌಟ್ ಮಾಡುತ್ತಾರೆ. ಕೊನೆಗೆ ಇಬ್ಬರೂ ಪರಸ್ಪರ ತಬ್ಬಿಕೊಂಡಿರುವ ಬಿಗ್​ಬಾಸ್​ನ ಚಿತ್ರವನ್ನು ಸಹ ಹಾಕಿದ್ದಾರೆ. ಈ ವಿಡಿಯೋಕ್ಕೆ ‘ಗೆಳೆಯನ್ನು ಎಂದಿಗೂ ಬಿಡಬೇಡಿ’ ಎಂದು ಕ್ಯಾಪ್ಷನ್ ನೀಡಿದ್ದಾರೆ.

ಬಿಗ್​ಬಾಸ್ ಮನೆಯಲ್ಲಿದ್ದಾಗ ಸ್ನೇಹಿತ್​, ನಮ್ರತಾಗೆ ಪ್ರೊಪೋಸ್ ಮಾಡಿದ್ದರು. ನಮ್ರತಾ ಅದನ್ನು ಒಪ್ಪಿಕೊಂಡಿರಲಿಲ್ಲ. ಆದರೆ ನಮ್ರತಾ, ಕಾರ್ತಿಕ್​ಗೆ ಹತ್ತಿರವಾದಾಗ ಅವರ ಬಗ್ಗೆ ಹೊರಗೆ ಕೆಲವು ಋಣಾತ್ಮಕ ಅಭಿಪ್ರಾಯ ಹರಿದಾಡಿತು. ಆಗ ಸ್ನೇಹಿತ್ ವಿಡಿಯೋ ಮೂಲಕ ಮನವಿ ಮಾಡಿ ನಮ್ರತಾ ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿ ಎಂದಿದ್ದರು. ಬಳಿಕ ಸ್ನೇಹಿತ್ ಮತ್ತೆ ಮನೆಗೆ ಹೋದಾಗ, ನಮ್ರತಾಗೆ ಇರುವ ವಿಷಯವನ್ನು ತುಸು ಹೆಚ್ಚು ಮಾಡಿ ಹೇಳಿ ಗೊಂದಲ ಮೂಡಿಸಿದ್ದರು. ಇದು ನಮ್ರತಾಗೆ ತೀವ್ರ ಬೇಸರ ತರಿಸಿತ್ತು. ಸ್ನೇಹಿತ್ ಮೇಲೆ ಸಿಟ್ಟಾಗುವಂತೆ ಮಾಡಿತ್ತು. ಹೊರಗೆ ಬಂದ ಬಳಿಕವೂ ಸಹ ನಮ್ರತಾ, ಸ್ನೇಹಿತ್​ ವರ್ತನೆ ಬಗ್ಗೆ ಅಸಮಾಧಾನದಿಂದ ಮಾತನಾಡಿದ್ದರು.

ನಮ್ರತಾಗೆ ಬೇಸರವಾಗಬಾರದು ಎಂಬ ಕಾರಣಕ್ಕೆ ಸ್ನೇಹಿತ್​ ಅನ್ನು ಗ್ಯಾಂಗ್​ನಿಂದ ಹೊರಗೆ ಇಡಲಾಗಿದೆ ಎಂಬ ಮಾತು ಕೇಳಿ ಬಂದಿತ್ತು. ಆದರೆ ವಿನಯ್​ ಈಗ ಸ್ನೇಹಿತ್ ಜೊತೆ ವಿಡಿಯೋ ಹಾಕುವ ಮೂಲಕ ತಾವು ಇನ್ನೂ ಗೆಳೆಯರಾಗಿಯೇ ಇದ್ದೇವೆ ಎಂದು ಸಾರಿದ್ದಾರೆ. ಅಂದಹಾಗೆ ಈ ವಿಡಿಯೋಕ್ಕೆ ಬಿಗ್​ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ ಹಾಗೂ ಮೈಖಲ್ ಅಜಯ್ ಸಹ ಕಮೆಂಟ್ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗುರು ಸಂಚಾರ; ಧನು ರಾಶಿಯವರಿಗೆ ಅದೃಷ್ಟ,ಐಶ್ವರ್ಯ ಕೂಡಿ ಬರಲಿದೆ
ಗುರು ಸಂಚಾರ; ಧನು ರಾಶಿಯವರಿಗೆ ಅದೃಷ್ಟ,ಐಶ್ವರ್ಯ ಕೂಡಿ ಬರಲಿದೆ
ಡಿಸ್​ಪ್ಲೇ ಬೋರ್ಡಲ್ಲಿ ಕನ್ನಡಿಗರನ್ನು ಅವಹೇಳನ ಮಾಡುವ ಪದ ಬಳಕೆ
ಡಿಸ್​ಪ್ಲೇ ಬೋರ್ಡಲ್ಲಿ ಕನ್ನಡಿಗರನ್ನು ಅವಹೇಳನ ಮಾಡುವ ಪದ ಬಳಕೆ
ಹೆಂಡತಿಯೊಂದಿಗೆ ಕಾರಲ್ಲಿ ಪ್ರಯಾಣಿಸುತ್ತಿದ್ದ ಸೇಲ್ಸ್ ಮ್ಯಾನೇಜರ್
ಹೆಂಡತಿಯೊಂದಿಗೆ ಕಾರಲ್ಲಿ ಪ್ರಯಾಣಿಸುತ್ತಿದ್ದ ಸೇಲ್ಸ್ ಮ್ಯಾನೇಜರ್
ಗುರು ಸಂಚಾರದಿಂದ ವೃಶ್ಚಿಕ ರಾಶಿಯವರಲ್ಲಿ ಭಯದ ವಾತಾವಾರಣ ನಿರ್ಮಾಣವಾಗಲಿದೆ!
ಗುರು ಸಂಚಾರದಿಂದ ವೃಶ್ಚಿಕ ರಾಶಿಯವರಲ್ಲಿ ಭಯದ ವಾತಾವಾರಣ ನಿರ್ಮಾಣವಾಗಲಿದೆ!
ತುಲಾ ರಾಶಿಗೆ ಭಾಗ್ಯ ಸ್ಥಾನದಲ್ಲಿ ಗುರು ಸಂಚಾರ; ಅದೃಷ್ಟವೋ ಅದೃಷ್ಟ
ತುಲಾ ರಾಶಿಗೆ ಭಾಗ್ಯ ಸ್ಥಾನದಲ್ಲಿ ಗುರು ಸಂಚಾರ; ಅದೃಷ್ಟವೋ ಅದೃಷ್ಟ
2025ರ ಗುರು ಸಂಚಾರ ಕನ್ಯಾ ರಾಶಿಯವರ ಮೇಲೆ ಹೇಗೆ ಪ್ರಭಾವ ಬೀರಲಿದೆ?
2025ರ ಗುರು ಸಂಚಾರ ಕನ್ಯಾ ರಾಶಿಯವರ ಮೇಲೆ ಹೇಗೆ ಪ್ರಭಾವ ಬೀರಲಿದೆ?
ದಲಿತರಿಗೆ ಮೀಸಲಾತಿ ಸಿಕ್ಕಿದ್ದು ಡಾ ಅಂಬೇಡ್ಕರ್ ಪ್ರಯತ್ನಗಳಿಂದ: ಯತ್ನಾಳ್
ದಲಿತರಿಗೆ ಮೀಸಲಾತಿ ಸಿಕ್ಕಿದ್ದು ಡಾ ಅಂಬೇಡ್ಕರ್ ಪ್ರಯತ್ನಗಳಿಂದ: ಯತ್ನಾಳ್
ಬರೋಬ್ಬರಿ 90.23 ಮೀಟರ್: ಹೊಸ ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ
ಬರೋಬ್ಬರಿ 90.23 ಮೀಟರ್: ಹೊಸ ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ
ಸೂರ್ಯ ವೃಷಭ ರಾಶಿಯಲ್ಲಿ, ಚಂದ್ರ ಧನುಸ್ಸು ರಾಶಿಯಲ್ಲಿ ಸಂಚಾರ
ಸೂರ್ಯ ವೃಷಭ ರಾಶಿಯಲ್ಲಿ, ಚಂದ್ರ ಧನುಸ್ಸು ರಾಶಿಯಲ್ಲಿ ಸಂಚಾರ
‘ನನ್ನ ಹೇರ್​ ಕಟಿಂಗ್​ ಬಜೆಟ್ ಒಂದು ಲಕ್ಷ ರೂಪಾಯಿ’: ನಟ ಪ್ರಥಮ್
‘ನನ್ನ ಹೇರ್​ ಕಟಿಂಗ್​ ಬಜೆಟ್ ಒಂದು ಲಕ್ಷ ರೂಪಾಯಿ’: ನಟ ಪ್ರಥಮ್