ಸುದೀಪ್ ಬಗ್ಗೆ ಕೇಳಿದ ಆ ಒಂದು ಪ್ರಶ್ನೆಗೆ ಕಂಗಾಲಾದ ಚೈತ್ರಾ ಕುಂದಾಪುರ

|

Updated on: Oct 28, 2024 | 6:57 AM

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಚೈತ್ರಾ ಕುಂದಾಪುರ ಅವರ ಆಟ ವಿವಾದಕ್ಕೆ ಕಾರಣವಾಗಿದೆ. ಸುದೀಪ್ ಅವರು ಜಗದೀಶ್ ಅವರನ್ನು ಬೆಂಬಲಿಸಿದ್ದಾರೆ ಎಂದು ಚೈತ್ರಾ ಆರೋಪಿಸಿದ್ದರು. ನಂತರ ಯೋಗರಾಜ್ ಭಟ್ ಅವರು ಚೈತ್ರಾ ಅವರನ್ನು ಪ್ರಶ್ನಿಸಿದಾಗ ಅವರು ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಲು ಹೆಣಗಾಡಿದರು. ಸುದೀಪ್ ಅವರ ಹೇಳಿಕೆಗಳ ಬಗ್ಗೆ ಚರ್ಚೆಗಳು ತೀವ್ರಗೊಂಡಿವೆ.

ಸುದೀಪ್ ಬಗ್ಗೆ ಕೇಳಿದ ಆ ಒಂದು ಪ್ರಶ್ನೆಗೆ ಕಂಗಾಲಾದ ಚೈತ್ರಾ ಕುಂದಾಪುರ
ಚೈತ್ರಾ ಕುಂದಾಪುರ
Follow us on

ಚೈತ್ರಾ ಕುಂದಾಪುರ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಸಾಕಷ್ಟು ಗಮನ ಸೆಳೆಯುತ್ತಿದ್ದಾರೆ. ಅವರ ಆಟ ಕೆಲವರಿಗೆ ಇಷ್ಟ ಆಗುತ್ತಿಲ್ಲ. ಇನ್ನೂ ಕೆಲವರಿಗೆ ಅವರ ಆಟದ ಬಗ್ಗೆ ಮೆಚ್ಚುಗೆ ಇದೆ. ಈಗ ಚೈತ್ರಾ ಕುಂದಾಪುರ ಅವರಿಗೆ ಒಂದು ಪ್ರಶ್ನೆ ಎದುರಾಗಿದೆ. ದೊಡ್ಮನೆಗೆ ಅತಿಥಿಯಾಗಿ ಬಂದಿದ್ದ ಅವರು ಚೈತ್ರಾಗೆ ನೇರ ಪ್ರಶ್ನೆ ಒಂದನ್ನು ಹಾಕಿದ್ದರು. ಇದರಿಂದ ಚೈತ್ರಾ ಕಂಗಾಲಾಗಿದ್ದಾರೆ. ಉತ್ತರಿಸಲಾಗದೆ ಬಡಬಡಿಸಿದ್ದಾರೆ.

ಕಳೆದ ವಾರದ ಎಪಿಸೋಡ್​ನಲ್ಲಿ ಸುದೀಪ್ ಅವರು ಕೆಲ ವಿಚಾರಗಳನ್ನು ಮಾತನಾಡಿದ್ದರು. ಜಗದೀಶ್ ಅವರನ್ನು ಮನೆಯವರೇ ಕೆರಳಿಸಿದ್ದು, ಅವರು ಮಾಡಿದ ತಪ್ಪನ್ನೇ ಮನೆಯವರು ಮಾಡಿದ್ದಾರೆ ಎಂಬರ್ಥದಲ್ಲಿ ಮಾತನಾಡಿದ್ದರು. ಇದು ಅನೇಕರಿಗೆ ಬೇಸರ ಮೂಡಿಸಿತ್ತು. ಪ್ರಮುಖವಾಗಿ ಚೈತ್ರಾ ಅವರು ಸುದೀಪ್ ಬಗ್ಗೆ ಅಸಮಾಧಾನ ಹೊರಹಾಕಿದ್ದರು.

‘ಸುದೀಪ್ ಮಾತನಾಡಿದ್ದು ಜಗದೀಶ್ ಅವರಿಗೆ ಕ್ಲೀನ್ ಚಿಟ್ ಕೊಡುವ ರೀತಿಯಲ್ಲಿ ಇತ್ತು’ ಎಂದು ನೇರವಾಗಿ ಆರೋಪಿಸಿದ್ದರು ಚೈತ್ರಾ. ಇದು ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು. ಈಗ ಇದೇ ಪ್ರಶ್ನೆಯನ್ನು ಚೈತ್ರಾಗೆ ಕೇಳಲಾಗಿದೆ. ‘ಸುದೀಪ್ ಸ್ಪಷ್ಟವಾಗಿ ಹೇಳಿದ್ದರು, ಜಗದೀಶ್ ಮಾಡಿದ ತಪ್ಪಿಗೆ ಮನೆಯಿಂದ ಹೊರ ಹೋಗಿದ್ದಾರೆ ಎಂದು ಸುದೀಪ್ ಹೇಳಿದ್ದಾರೆ. ಅವರನ್ನು ವಹಿಸಿಕೊಂಡು ಮಾತನಾಡಿದರು ಎಂದು ನಾನು ಎಂದಿಗೂ ಹೇಳಿಲ್ಲ’ ಎಂದಿದ್ದಾರೆ ಚೈತ್ರಾ.

‘ಒಂದು ಮನೆಯ ಸ್ಥಾಪನೆ ಮಾಡಿ, ಮನೆಯವರ ಹಿರಿಯವನಾಗಿ ಅವನಿಗೆ ಈ ರೀತಿ ಮಾಡುವ ಅಗತ್ಯ ಏನಿರುತ್ತದೆ. ನಿಮ್ಮನ್ನು ವಿಲನ್ ಮಾಡೋದ್ರಿಂದ ಏನು ಸಿಗುತ್ತದೆ’ ಎಂದು ಯೋಗರಾಜ್ ಭಟ್ ಕೇಳುತ್ತಿದ್ದಂತೆ ಚೈತ್ರಾ ಕುಂದಾಪುರ ಅವರು ಉತ್ತರ ಕೊಟ್ಟರು. ‘ನಾನು ಆ ಅರ್ಥದಲ್ಲಿ ಹೇಳಿಲ್ಲ. ಅವರು ಹೇಳಿದ ಯಾವ ವಿಚಾರಕ್ಕೂ ನನ್ನ ವಿರೋಧ ಇಲ್ಲ’ ಎಂದು ಚೈತ್ರಾ ಕುಂದಾಪುರ ಹೇಳಿದರು. ‘ಇದು ಸ್ಪಷ್ಟನೆ ಕೊಡುವ ವಿಚಾರ ಅಲ್ಲ’ ಎಂದು ಸುದೀಪ್ ಹೇಳಿದರು.

ಇದನ್ನೂ ಓದಿ: ಬಿಗ್ ಬಾಸ್ ಮನೆಯ ಮಂದಿಗೂ ಗೊತ್ತಾಯ್ತು ಸುದೀಪ್ ತಾಯಿ ನಿಧನದ ಸುದ್ದಿ

ಸುದೀಪ್ ಅವರು ಕಳೆದ ವಾರ ಜಗದೀಶ್ ಪರ ಮಾತನಾಡಿದ್ದರು ಎಂಬುದು ಮನೆಯವರ ಆರೋಪ ಆಗಿತ್ತು. ಸುದೀಪ್ ಅವರೇ ಬಿಗ್ ಬಾಸ್ ಮನೆಗೆ ಬಂದಿದ್ದರೆ ಈ ಬಾರಿ ಚೈತ್ರಾಗೆ ಕ್ಲಾಸ್ ತೆಗೆದುಕೊಳ್ಳುತ್ತಿದ್ದರೇನೋ. ಎಲ್ಲವನ್ನೂ ಯೋಗರಾಜ್ ಭಟ್ ಲೈಟ್ ಆಗಿ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.