ನಕಲಿ ನಾಣ್ಯಗಳಿಗಾಗಿ ಹಣಾ-ಹಣಿ: ಕಳ್ಳರು, ರೌಡಿಗಳಾದ ಮನೆ ಮಂದಿ

Bigg Boss Kannada season 12: ಬಿಗ್​​ಬಾಸ್ ಕನ್ನಡ ಸೀಸನ್ 12 ಪ್ರಾರಂಭವಾಗಿ ಮೂರು ವಾರ ಆಗುತ್ತಾ ಬಂದಿದ್ದು ಈ ವರೆಗೆ ಯಾರೂ ಕ್ಯಾಪ್ಟನ್ ಆಗಿಲ್ಲ. ಇದೀಗ ಬಿಗ್​​ಬಾಸ್ ಮನೆಗೆ ಕ್ಯಾಪ್ಟನ್ ಆಯ್ಕೆ ಮಾಡಲು ಟಾಸ್ಕ್ ನೀಡಿದ್ದು, ಮೊದಲ ಕ್ಯಾಪ್ಟೆನ್ಸಿ ಟಾಸ್ಕ್ ಆಗಿ ನಾಣ್ಯಗಳನ್ನು ಸಂಗ್ರಹಿಸುವ ಟಾಸ್ಕ್ ನೀಡಿದ್ದಾರೆ. ಈ ಟಾಸ್ಕ್ ಆಡಲು ಸ್ಪರ್ಧಿಗಳು ರೌಡಿಗಳಾಗಿ, ಕಳ್ಳರಾಗಿ ಬದಲಾಗಿದ್ದಾರೆ.

ನಕಲಿ ನಾಣ್ಯಗಳಿಗಾಗಿ ಹಣಾ-ಹಣಿ: ಕಳ್ಳರು, ರೌಡಿಗಳಾದ ಮನೆ ಮಂದಿ
Bigg Boss Kannada

Updated on: Oct 22, 2025 | 10:58 PM

ಬಿಗ್​​ಬಾಸ್ (Bigg Boss) ಮನೆಯಲ್ಲಿ ಕ್ಯಾಪ್ಟೆನ್ಸಿ ಟಾಸ್ಕ್ ಶುರುವಾಗಿದೆ. ಮನೆಯ ಮೊದಲ ಕ್ಯಾಪ್ಟನ್​ ಅನ್ನು ಆಯ್ಕೆ ಮಾಡಲು ಬುಧವಾರ ಬಿಗ್​​ಬಾಸ್ ಮೊದಲ ಟಾಸ್ಕ್​ ಅನ್ನು ನೀಡಿದರು. ಮನೆಯಲ್ಲಿರುವ ಸದಸ್ಯರನ್ನು ಮೂರು ತಂಡಗಳಾಗಿ ವಿಂಗಡಿಸಿದರು. ಕ್ಯಾಪ್ಟೆನ್ಸಿ ಟಾಸ್ಕ್ ಆಡಲು ಅವಕಾಶ ಸಿಗದ ಕಾಕ್ರೂಚ್ ಸುಧಿ ಮತ್ತು ಅಶ್ವಿನಿ ಅವರನ್ನು ಉಸ್ತುವಾರಿಗಳನ್ನಾಗಿ ನೇಮಿಸಿದರು. ನಕಲಿ ನಾಣ್ಯಗಳ ಆಟವನ್ನು ಬಿಗ್​​ಬಾಸ್ ಸ್ಪರ್ಧಿಗಳಿಗೆ ನೀಡಿದರು. ಸಾಧ್ಯವಾದಷ್ಟು ಹೆಚ್ಚು ನಾಣ್ಯಗಳನ್ನು ಸಂಗ್ರಹಿಸಬೇಕು ಎಂಬುದು ಆಟದ ನಿಯಮ.

ಅದರಂತೆ ಮೂರು ತಂಡದ ಸದಸ್ಯರು ನಾಣ್ಯಗಳನ್ನು ಸಂಗ್ರಹಿಸಲು ಆರಂಭಿಸಿದರು. ಪರಸ್ಪರ ಸ್ಪರ್ಧಿಗಳಿಂದ ನಾಣ್ಯಗಳನ್ನು ಕಿತ್ತುಕೊಳ್ಳಬಹುದು ಎಂದು ಸಹ ಬಿಗ್​​ಬಾಸ್ ಹೇಳಿದ್ದರು. ಹೀಗಾಗಿ ಮನೆಯ ಬಲಾಢ್ಯರಾದ ರಘು, ಗಿಲ್ಲಿ ಇನ್ನೂ ಕೆಲವರನ್ನು ಎಳೆದೆಳೆದು ಬಿಸಾಡಿ ನಾಣ್ಯಗಳನ್ನು ಬಾಚಿಕೊಂಡರು. ಆದರೂ ಸಹ ಗಿಲ್ಲಿ, ಧ್ರುವಂತ್, ಅವಿನಾಶ್ ಇನ್ನೂ ಕೆಲವರು ಸಾಕಷ್ಟು ನಾಣ್ಯಗಳನ್ನು ಬಾಚಿಕೊಂಡರು.

ಆದರೆ ಗಿಲ್ಲಿ ತಮಾಷೆ ಮಾಡುತ್ತಾ ತಮ್ಮಲ್ಲಿರುವ ನಾಣ್ಯಗಳನ್ನು ರಘುಗೆ ತೋರಿಸಿದರು. ಬಳಿಕ ರಘು ಅವರ ತಂಡದವರು ಗಿಲ್ಲಿಯನ್ನು ಬಲವಂತವಾಗಿ ಹಿಡಿದುಕೊಂಡು ಅವರ ಬಳಿ ಇದ್ದ ನಾಣ್ಯಗಳನ್ನೆಲ್ಲ ದೋಚಿದರು. ಬಳಿಕ ನಾಣ್ಯಗಳ ಸಂಗ್ರಹಿಸುವ ಆಟ ಪರಸ್ಪರ ಕಿತ್ತಾಡುವ, ದೋಚಿಕೊಳ್ಳುವ ಆಟವಾಗಿ ಬದಲಾಯ್ತು. ಸ್ಪರ್ಧಿಗಳು ಗುಂಪು-ಗುಂಪಾಗಿ ಇತರೆ ಗುಂಪಿನವರುಗಳ ಮೇಲೆ ದಾಳಿ ಮಾಡಿದರು. ರಘು ಅಂತೂ ತಮ್ಮ ದೈತ್ಯ ದೇಹ ಬಳಸಿ ಹಲವರನ್ನು ದೋಚಿದರು. ಈ ವೇಳೆ ರಿಶಾ, ರಘು ವಿರುದ್ಧ ಕೂಗಾಡಿದರು ಸಹ.

ಇದನ್ನೂ ಓದಿ:ಬಿಗ್​ಬಾಸ್ ವೇದಿಕೆ ಮೇಲೆ ಪ್ರಿಯಾ ಸುದೀಪ್: ಸೊಸೆಯ ಬಗ್ಗೆ ಕಿಚ್ಚನ ತಂದೆಯ ಭಾವುಕ ಮಾತು

ಈ ದೋಚುವಿಕೆಯಿಂದ ಪಾರಾಗಲು ಸ್ಪರ್ಧಿಗಳು ಗುಟ್ಟಾಗಿ ನಾಣ್ಯಗಳನ್ನು ಅಡಗಿಸಿಡಲು ಮುಂದಾದರು. ಹಲವರು ಹಲವು ಕಡೆಗಳಲ್ಲಿ ನಾಣ್ಯಗಳನ್ನು ಅಡಗಿಸಿಟ್ಟರು. ಆದರೆ ಆ ನಂತರ ಸ್ಪರ್ಧಿಗಳು ಕಳ್ಳರಾಗಿ ಬದಲಾದರು. ರಶಿಕಾ ಇಟ್ಟ ನಾಣ್ಯವನ್ನು ಚಂದ್ರಪ್ರಭ ಕದ್ದರು. ಧನುಶ್ ಜೇಬಿನಲ್ಲಿದ್ದ ನಾಣ್ಯಗಳನ್ನು ಅವರು ಮಲಗಿದ್ದಾಗ ರಕ್ಷಿತಾ ಕದ್ದು ತಮ್ಮ ಖಾತೆಗೆ ಹಾಕಿಕೊಂಡರು. ಈ ನಾಣ್ಯಗಳನ್ನು ಕಾಪಾಡುವ ಭರದಲ್ಲಿ ಕೆಲ ಸ್ಪರ್ಧಿಗಳು ಊಟವನ್ನು ಸಹ ಬಿಟ್ಟರು. ನಾಣ್ಯಗಳ ಆಟ ಇನ್ನೂ ಮುಂದುವರೆದಿದ್ದು, ಯಾರು ಹೆಚ್ಚು ನಾಣ್ಯ ಸಂಪಾದಿಸಿದ್ದಾರೆ ಎಂಬುದು ನಾಳಿನ ಎಪಿಸೋಡ್​​ನಲ್ಲಿ ತಿಳಿಯಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ