‘ನಾನು ಮೊದಲು ಕೆಲಸ ಕೇಳಿಕೊಂಡು ಕನ್ನಡದ ಈ ನಟರ ಬಳಿ ಹೋಗಿದ್ದೆ’; ಛಾಯಾ ಸಿಂಗ್
ಛಾಯಾ ಸಿಂಗ್ 'ಜೀ ಕನ್ನಡ ಕುಟುಂಬ ಅವಾರ್ಡ್ಸ್' ವೇದಿಕೆಯಲ್ಲಿ ನಟ ಉಪೇಂದ್ರ ಬಳಿ ಸಹಾಯಕ ನಿರ್ದೇಶಕಿಯಾಗಿ ಅವಕಾಶ ನೀಡುವಂತೆ ವಿಶೇಷ ಕೋರಿಕೆ ಇಟ್ಟರು. ಇದಕ್ಕೆ ಉಪೇಂದ್ರ ಕೂಡ ಒಪ್ಪಿಕೊಂಡಿದ್ದು, ಅವರ ಬಹುಕಾಲದ ಕನಸು ನನಸಾಗುವ ಸಮಯ ಹತ್ತಿರವಾಗಿದೆ. 'ಅಮೃತಧಾರೆ' ಧಾರಾವಾಹಿಯಲ್ಲಿ ಮಿಂಚುತ್ತಿರುವ ಛಾಯಾ, ಶಿವಣ್ಣ-ಉಪೇಂದ್ರರನ್ನು ಸಿನಿಮಾ ವಿಶ್ವವಿದ್ಯಾಲಯಗಳೆಂದು ಬಣ್ಣಿಸಿದರು.

ಛಾಯಾ ಸಿಂಗ್ (Chaya Singh) ಅವರು ಕನ್ನಡ, ತಮಿಳು ಮೊದಲಾದ ಭಾಷೆಗಳಲ್ಲಿ ನಟಿಸಿ ಫೇಮಸ್ ಆದವರು. ಅವರಿಗೆ ಚಿತ್ರರಂಗದಲ್ಲಿ ನಟಿಯಾಗಿ ಸಾಕಷ್ಟು ಬೇಡಿಕೆ ಇದೆ. ಅವರು ಕಿರುತೆರೆ ಲೋಕದಲ್ಲೂ ಸಾಕಷ್ಟು ಫೇಮಸ್ ಆಗಿದ್ದಾರೆ. ‘ಅಮೃತಧಾರೆ’ ಧಾರಾವಾಹಿಯಲ್ಲಿ ಭೂಮಿಕಾ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ಈಗ ಛಾಯಾ ಸಿಂಗ್ ಅವರು ‘ಜೀ ಕನ್ನಡ ಕುಟುಂಬ ಅವಾರ್ಡ್ಸ್’ ವೇದಿಕೆ ಮೇಲೆ ಒಂದು ವಿಶೇಷ ಕೋರಿಕೆ ಇಟ್ಟರು. ಈ ಬಗ್ಗೆ ಅವರೇ ವಿವರಿಸಿದ್ದಾರೆ.
‘ಜೀ ಕನ್ನಡ ಕುಟುಂಬ ಅವಾರ್ಡ್ಸ್’ ವೇದಿಕೆ ಮೇಲೆ ಶಿವರಾಜ್ಕುಮಾರ್ ಹಾಗೂ ಉಪೇಂದ್ರ ಅವರು ಒಟ್ಟಾಗಿ ಬಂದರು. ಈ ವೇಳೆ ಛಾಯಾ ಸಿಂಗ್ ಅವರಿಗೆ ಅವಾರ್ಡ್ ಕೂಡ ಸಿಕ್ಕಿತ್ತು. ಅವಾರ್ಡ್ ಪಡೆದ ಛಾಯಾ ಸಿಂಗ್ ಅವರು ಹಳೆಯ ಘಟನೆ ಬಗ್ಗೆ ಹೇಳಿದ್ದಾರೆ. ತಾವು ಕೆಲಸ ಕೇಳಿಕೊಂಡು ಹೋಗಿದ್ದಾಗಿ ಅವರು ವಿವರಿಸಿದರು. ಅದು ಕೂಡ ಶಿವರಾಜ್ಕುಮಾರ್ ಹಾಗೂ ಉಪೇಂದ್ರ ಬಳಿ ಅನ್ನೋದು ವಿಶೇಷ.
ಶಿವಣ್ಣ ಹಾಗೂ ಉಪೇಂದ್ರ ಬಳಿ ನಾನು ಕೆಲಸ ಕೇಳಿಕೊಂಡು ಹೋಗಿದ್ದೆ. ಶಿವಣ್ಣ ಡೈರೆಕ್ಷನ್ ಮಾಡಿ ಎಂದು ಅವರಿಗೆ ಹೇಳುತ್ತಲೇ ಇರುತ್ತೇನೆ. ಡೈರೆಕ್ಷನ್ ಅಲ್ಲಿ ನನ್ನ ಸಹಾಯಕ ನಿರ್ದೇಶಕಿ ಆಗಿ ತೆಗೆದುಕೊಳ್ಳಿ ಎಂದು ಕೇಳಿದ್ದೆ. ಇದೇ ಮಾತನ್ನು ಉಪೇಂದ್ರ ಅವರಿಗೆ ಹೇಳಿದ್ದೆ. ಅವರಿಂದ ಕಲಿಯೋದು ಸಾಕಷ್ಟು ಇದೆ. ಇವರಿಬ್ಬರೂ ಸಿನಿಮಾ ಯೂನಿವರ್ಸಿಟಿಗಳು’ ಎಂದು ಛಾಯಾ ಸಿಂಗ್ ಹೇಳಿದರು.
ಇದನ್ನೂ ಓದಿ: ಅಮೃತಧಾರೆಯಲ್ಲಿ ಛಾಯಾ ಸಿಂಗ್ ನಟನೆಗೆ ಫ್ಯಾನ್ಸ್ ಕಡೆಯಿಂದ ಫುಲ್ ಮಾರ್ಕ್ಸ್
‘ನೀವು ನಿರ್ದೇಶನ ಮಾಡುವಾಗ ನನ್ನನ್ನು ಸಹಾಯಕ ನಿರ್ದೇಶಕಿ ಆಗಿ ತೆಗದುಕೊಳ್ಳಿ’ ಎಂದು ಛಾಯಾ ಸಿಂಗ್ ಅವರು ಪರಿಪರಿಯಾಗಿ ಉಪೇಂದ್ರ ಬಳಿ ಕೇಳಿಕೊಂಡರು. ಕೊನೆಗೂ ಇದಕ್ಕೆ ಉಪೇಂದ್ರ ಅವರು ಓಕೆ ಎಂದು ಹೇಳಿದ್ದಾರೆ. ಇದರಿಂದ ಅವರ ಮುಖದಲ್ಲಿ ನಗು ಮನೆ ಮಾಡಿತು. ಇದು ಯಾವಾಗ ಸಂಭವಿಸಲಿದೆ ಎಂಬ ಕುತೂಹಲ ಮೂಡಿದೆ.
View this post on Instagram
‘ಅಮೃತಧಾರೆ’ ಧಾರಾವಾಹಿ ಸದ್ಯ ಹಲವು ಟ್ವಿಸ್ಟ್ಗಳನ್ನು ಪಡೆದು ಸಾಗುತ್ತಿದೆ. ಈ ಧಾರಾವಾಹಿ ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಧಾರಾವಾಹಿಯಲ್ಲಿ ಕಥಾ ನಾಯಕ ಹಾಗೂ ಕಥಾ ನಾಯಕಿ ಬೇರೆ ಆಗಿದ್ದು ಮತ್ತೆ ಒಂದಾಗುವ ಕ್ಷಣ ಬರುತ್ತಿದೆ. ಧಾರಾವಾಹಿ ಒಳ್ಳೆಯ ಟಿಆರ್ಪಿ ಪಡೆಯುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







