
‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಸಾಕಷ್ಟು ಭಿನ್ನ ತಿರುವುಗಳು ಬಂದಿವೆ. ಕಳೆದ ವಾರ ರಕ್ಷಿತಾ ಹಾಗೂ ಧ್ರುವಂತ್ ಅವರನ್ನು ಫೇಕ್ ಎಲಿಮಿನೇಷನ್ ಅಲ್ಲಿ ಹೊರಗೆ ತಂದು ಸೀಕ್ರೆಟ್ ರೂಂನಲ್ಲಿ ಇಡಲಾಗಿದೆ. ಬಿಗ್ ಬಾಸ್ ಆಟವನ್ನು ಅವರು ಸೀಕ್ರೆಟ್ ರೂಂನಿಂದ ನೋಡುತ್ತಿದ್ದಾರೆ. ಈ ವಾರ ರಕ್ಷಿತಾ (Rakshitha Shetty) ಹಾಗೂ ಧ್ರುವಂತ್ ದೊಡ್ಮನೆ ಒಳಗೆ ಬರಲಿದ್ದು, ಮತ್ತಿಬ್ಬರು ಹೊರ ಹೋಗಲಿದ್ದಾರೆ ಎಂದು ಹೇಳಲಾಗುತ್ತಾ ಇದೆ. ಆ ಬಗ್ಗೆ ಇಲ್ಲಿದೆ ವಿವರ.
ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ಸ್ಪಂದನಾ, ಮಾಳು ಸೇರಿದಂತೆ ಕೆಲವರು ನಾಮಿನೇಟ್ ಆಗಿದ್ದಾರೆ. ಆದರೆ, ಈ ವಾರ ವೋಟಿಂಗ್ ಲೈನ್ ಓಪನ್ ಆಗಿಲ್ಲ. ಹೀಗಾಗಿ, ನಾಮಿನೇಟ್ ಆದವರ ಪೈಕಿ ಯಾರೊಬ್ಬರೂ ಮನೆಯಿಂದ ಹೊರ ಹೋಗುವುದು ಅನುಮಾನ ಎಂದು ಹೇಳಲಾಗುತ್ತಾ ಇದೆ. ಆದರೆ, 58ನೇ ದಿನಕ್ಕೆ ಅತಿಥಿಗಳಾಗಿ ಬಂದು ನಂತರ ವೈಲ್ಡ್ ಕಾರ್ಡ್ ಸ್ಪರ್ಧಿಗಳಾದ ರಜತ್ ಹಾಗೂ ಚೈತ್ರಾ ಕುಂದಾಪುರ ಈ ಬಾರಿ ಬಿಗ್ ಬಾಸ್ನಿಂದ ಹೊರ ಹೋಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಚೈತ್ರಾ ಹಾಗೂ ರಜತ್ ಸ್ಪರ್ಧಿಗಳಲ್ಲ, ಅವರನ್ನು ಕೆಲವೇ ವಾರಕ್ಕೆ ಮನೆಯಿಂದ ಕಳುಹಿಸಲಾಗುತ್ತದೆ ಎಂಬ ಟಾಕ್ ಮೊದಲಿನಿಂದಲೂ ಇದೆ. ಆದರೆ, ಅದು ಈವರೆಗೆ ನಿಜವಾಗಿಲ್ಲ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ಚರ್ಚೆ ಆಗಿದೆ. ಈ ವಾರ ಇವರಿಬ್ಬರೂ ಹೊರ ಹೋಗೋದು ಖಚಿತ ಎನ್ನಲಾಗುತ್ತಿದೆ.
ಕಳೆದ ವಾರ ಯಾರನ್ನೂ ಎಲಿಮಿನೇಟ್ ಮಾಡಿಲ್ಲ. ಈ ವಾರವೂ ಎಲಿಮಿನೇಷ ಮಾಡದೆ ಸುಮ್ಮನೆ ಕೂರೋದು ಅನುಮಾನವೇ. ಏಕೆಂದರೆ ಬಿಗ್ ಬಾಸ್ ಪೂರ್ಣಗೊಳ್ಳಲು ಇನ್ನು ಕೆಲವೇ ವಾರ ಇದೆ. ಆದರೆ, ಸ್ಪರ್ಧಿಗಳ ಸಂಖ್ಯೆ ಮಾತ್ರ 13 ಇದೆ. ಇದನ್ನು ಕಡಿಮೆ ಮಾಡಲಬೇಕಾದ ಅನಿವಾರ್ಯತೆ ಇದೆ. ಹೀಗಾಗಿ, ಚೈತ್ರಾ ಹಾಗೂ ರಜತ್ನ ಮನೆಯಿಂದ ಹೊರ ಹಾಕೋ ಸಾಧ್ಯತೆ ಇದೆ.
ಇದನ್ನೂ ಓದಿ: ಸೈಲೆಂಟ್ ಆಗಿ ಬಿಗ್ ಬಾಸ್ ಮನೆ ಒಳಗೆ ಬಂದು ಅಧ್ವಾನ ಮಾಡಿದ ರಕ್ಷಿತಾ ಶೆಟ್ಟಿ
ವೀಕ್ಷಕರ ಊಹೆಗೆ ವಿರುದ್ಧವಾಗಿಯೇ ಈ ಸೀಸನ್ ನಡೆಯುತ್ತಾ ಇದೆ. ಈಗ ವೋಟಿಂಗ್ ಲೈನ್ ಓಪನ್ ಆಗದೆ ಇರುವುದನ್ನು ನೋಡಿ ಚೈತ್ರಾ ಹಾಗೂ ರಜತ್ ಹೋಗಬಹುದು ಎಂದು ಊಹಿಸಲಾಗಿದೆ. ಆದರೆ, ಇದಕ್ಕೆ ಮತ್ತೊಂದು ಟ್ವಿಸ್ಟ್ನ ಬಿಗ್ ಬಾಸ್ ನೀಡಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.