ಬಿಗ್ ಬಾಸ್: ವೋಟ್ ಮಾಡಲು ಭಾನುವಾರದವರೆಗೆ ಅವಕಾಶ; ಗಮನಿಸಬೇಕಾದ ವಿಷಯಗಳಿವು

ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆಗೆ ಕ್ಷಣಗಣನೆ ಆರಂಭವಾಗಿದ್ದು, ಜನವರಿ 18ರಂದು ವಿಜೇತರ ಘೋಷಣೆಯಾಗಲಿದೆ. ವೀಕ್ಷಕರು ತಮ್ಮ ನೆಚ್ಚಿನ ಸ್ಪರ್ಧಿಗೆ ಜಿಯೋ ಹಾಟ್‌ಸ್ಟಾರ್ ಮೂಲಕ ಮತ ಚಲಾಯಿಸಬಹುದು. ಜನವರಿ 14ರ ನಂತರದ ಮತಗಳು ಮಾತ್ರ ಫಿನಾಲೆಗೆ ಪರಿಗಣಿಸಲ್ಪಡುತ್ತವೆ. ಪ್ರತಿ ಖಾತೆಗೆ 99 ಮತ ಹಾಕುವ ಅವಕಾಶವಿದೆ.

ಬಿಗ್ ಬಾಸ್: ವೋಟ್ ಮಾಡಲು ಭಾನುವಾರದವರೆಗೆ ಅವಕಾಶ; ಗಮನಿಸಬೇಕಾದ ವಿಷಯಗಳಿವು
ಬಿಗ್ ಬಾಸ್

Updated on: Jan 16, 2026 | 12:47 PM

‘ಬಿಗ್ ಬಾಸ್ ಕನ್ನಡ ಸೀಸನ್ 12’ರ (BBK 12) ಫಿನಾಲೆಗೆ ಕ್ಷಣಗಣನೆ ಶುರುವಾಗಿದೆ. ಭಾನುವಾರ (ಜನವರಿ 18) ಒಬ್ಬರು ಕಪ್ ಎತ್ತಲಿದ್ದಾರೆ. ಈ ಸೀಸನ್ ಸಾಕಷ್ಟು ಏರಿಳಿತಗಳನ್ನು ಕಂಡಿದೆ. ಭಾನುವಾರದವರೆಗೆ ವೋಟ್ ಮಾಡಲು ಅವಕಾಶ ಇದೆ. ವೋಟ್ ಮಾಡೋದು ಹೇಗೆ? ಎಲ್ಲಿಯವರೆಗೆ ಇದಕ್ಕೆ ಅವಕಾಶ ಇದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಬಿಗ್ ಬಾಸ್ ಫಿನಾಲೆಯಲ್ಲಿ ರಕ್ಷಿತಾ ಶೆಟ್ಟಿ, ಗಿಲ್ಲಿ ನಟ, ಕಾವ್ಯಾ ಶೈವ, ಅಶ್ವಿನಿ ಗೌಡ, ರಘು, ಧನುಶ್ ಇದ್ದಾರೆ. ಇವರ ಪೈಕಿ ಒಬ್ಬರಿಗೆ ವಿಜಯಲಕ್ಷ್ಮೀ ಒಲಿಯಲಿದೆ. ಆ ವ್ಯಕ್ತಿ ಯಾರು ಎಂಬ ಕುತೂಹಲ ಮೂಡಿದೆ. ಇದನ್ನು ತಿಳಿಯಲು ಭಾನುವಾರದವರೆಗೆ ಕಾಯಲೇಬೇಕು. ಆದರೆ, ನೀವು ನಿಮ್ಮ ಮತ ಹಾಕಿ ವಿನ್ನರ್ ಯಾರು ಎಂಬುದನ್ನು ನಿರ್ಧರಿಸಬಹುದು.

ಜಿಯೋ ಹಾಟ್​​ಸ್ಟಾರ್​ನಲ್ಲಿ ವೋಟಿಂಗ್ ಲೈನ್ ಆರಂಭ ಆಗಿದೆ. ಭಾನುವಾರದ (ಜನವರಿ 11)ಎಲಿಮಿನೇಷನ್ ಬಳಿಕ ಓಪನ್ ಆಗಿದ್ದು ಮಧ್ಯವಾರದ ಎಲಿಮಿನೇಷನ್​ ವೋಟಿಂಗ್ ಲೈನ್. ಈ ಮತಗಳನ್ನು ಫಿನಾಲೆಗೆ ಪರಿಗಣನೆ ಮಾಡಲಾಗುವುದಿಲ್ಲ. ಬುಧವಾರ (ಜನವರಿ 14) ಹೊಸ ವೋಟಿಂಗ್ ಲೈನ್ ಓಪನ್ ಆಗಿದ್ದು, ಇದನ್ನು ಮಾತ್ರ ಫಿನಾಲೆಗೆ ಪರಿಗಣಿಸಲಾಗುತ್ತದೆ. ಹೀಗಾಗಿ, ನಾನು ಸೋಮವಾರವೇ ವೋಟ್ ಹಾಕಿದ್ದೇನೆ, ಮಂಗಳವಾರವೇ ವೋಟ್ ಹಾಕಿದ್ದೇನೆ ಎಂದರೆ ಅದು ಪರಿಗಣನೆಗೆ ಬರೋದಿಲ್ಲ. ಇದು ಮೊದಲು ಗಮನಿಸಬೇಕಾದ ವಿಷಯ.

ಇನ್ನು, ಭಾನುವಾರ ಮುಂಜಾನೆ 10 ಗಂಟೆವರೆಗೆ ವೋಟ್ ಮಾಡಲು ಅವಕಾಶ ಇದೆ. ಪ್ರತಿ ಖಾತೆಗೆ 99 ಮತ ಹಾಕಲು ಅವಕಾಶ ಇದೆ. ಆರು ಜನರ ಪೈಕಿ ಓರ್ವ ಸ್ಪರ್ಧಿಗೆ 99 ಮತ ಹಾಕಬಹುದು. ಅಥವಾ ಎಲ್ಲಾ ಸ್ಪರ್ಧಿಗಳಿಗೂ ಸ್ವಲ್ಪ ಸ್ವಲ್ಪ ಮತ ಹಾಕಬಹುದು. ಒಮ್ಮೆ ವೋಟ್ ಸಲ್ಲಿಕೆ ಮಾಡಿದ ಬಳಿಕ ಮತ್ತೆ ಅದನ್ನು ಹಿಂಪಡೆಯಲು ಸಾಧ್ಯವಿಲ್ಲ. ಹೀಗಾಗಿ, ಆ ಬಗ್ಗೆ ಗಮನ ಬೇಕು.

ಇದನ್ನೂ ಓದಿ: ‘ಹೊರ ಹೋದ್ಮೇಲೆ ಬ್ಲಾಕ್ ಮಾಡ್ತೀನಿ’; ಬ್ಲ್ಯಾಕ್​​ಮೇಲ್ ಮಾಡಿದ ಕಾವ್ಯಾಗೆ ತಿರುಗೇಟು ಕೊಟ್ಟ ಗಿಲ್ಲಿ

ಭಾನುವಾರದವರೆಗೆ ವೋಟ್ ಮಾಡಲು ಅವಕಾಶ ಕೊಟ್ಟಿರುವುದರಿಂದ ಶನಿವಾರ ಎಲಿಮಿನೇಷನ್ ನಡೆಯುವುದು ಅನುಮಾನ ಎಂದು ಹೇಳಲಾಗುತ್ತಾ ಇದೆ. ಈ ಬಗ್ಗೆ ಶನಿವಾರವರೇ ಘೋಷಣೆ ಆಗುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.