
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ (BBK 12) ಗಿಲ್ಲಿ ನಟ ಹಾಗೂ ಕಾವ್ಯಾ ಶೈವ ಮಧ್ಯೆ ಒಳ್ಳೆಯ ಗೆಳೆತನ ಇದೆ. ಈ ಗೆಳೆತನವನ್ನು ಬ್ರೇಕ್ ಮಾಡಲು ಅನೇಕರು ಪ್ರಯತ್ನಿಸಿದ್ದು ಇದೆ. ಆದರೆ, ಯಶಸ್ಸು ಕಂಡಿಲ್ಲ. ಈಗ ಇವರನ್ನು ಬೇರೆ ಮಾಡಲು ದೊಡ್ಡ ಸಂಚು ನಡೆದಿದೆ. ಬಿಗ್ ಬಾಸ್ ನಡೆಸಿಕೊಡುತ್ತಿರುವ ವಿಲನ್ ಈ ರೀತಿಯ ಕೆಲಸಕ್ಕೆ ಕೈ ಹಾಕಿದ್ದಾರೆ. ಒಂದೊಮ್ಮೆ ಇದರಲ್ಲಿ ಯಶಸ್ಸು ಕಂಡರೆ ಗಿಲ್ಲಿ ಹಾಗೂ ಅಶ್ವಿನಿಗೆ ದೊಡ್ಡ ಲಾಭ ಸಿಗಲಿದೆ.
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಈ ವಾರ ಹೊಸ ರೀತಿಯ ಕಾನ್ಸೆಪ್ಟ್ ತರಲಾಗಿದೆ. ಇಡೀ ಬಿಗ್ ಬಾಸ್ ಭೂತ ಬಂಗಲೆ ಆಗಿದೆ. ಆ್ಯಕ್ಟಿವಿಟಿ ಏರಿಯಾ ವಿಲನ್ ಅಡ್ಡ ಆಗಿದೆ. ಘೋಷಣೆಗಳು ತುಂಬಾನೇ ಭಿನ್ನವಾಗಿರುತ್ತವೆ. ಚಿತ್ರ ವಿಚಿತ್ರ ಧ್ವನಿ ಬರುತ್ತದೆ. ಹೊಸ ಹೊಸ ರೀತಿಯ ಟಾಸ್ಕ್ಗಳನ್ನು ನೀಡಲಾಗುತ್ತಿದೆ. ಈಗ ವಿಲನ್ ಗಿಲ್ಲಿ ಹಾಗೂ ಅಶ್ವಿನಿ ಗೌಡಗೆ ಟಾಸ್ಕ್ ಒಂದನ್ನು ನೀಡಿದರು. ಇದರ ಪ್ರಕಾರ ಇಬ್ಬರೇ ಅಡುಗೆ ಮಾಡಬೇಕು. ಹಾಗೆ ಮಾಡಿದರೆ ಮನೆಯವರಿಗೆ ಲಕ್ಷುರಿ ಐಟಂ ಸಿಗುತ್ತದೆ. ಗಿಲ್ಲಿ ಅಡುಗೆ ಮಾಡಿದವರೇ ಅಲ್ಲ. ಆದಾಗ್ಯೂ ಈಗ ಅಂಥದ್ದೊಂದು ಸಾಹಸಕ್ಕೆ ಕೈ ಹಾಕಬೇಕಿದೆ.
ಇನ್ನು ವಿಲನ್ ಕಡೆಯಿಂದ ಸೀಕ್ರೆಟ್ ಟಾಸ್ಕ್ ಒಂದು ಸಿಕ್ಕಿದೆ. ಈ ಟಾಸ್ಕ್ ಅನುಸಾರ ಕಾವ್ಯಾನ ಅಶ್ವಿನಿ ಹಾಗೂ ಗಿಲ್ಲಿ ಸೇರಿಕೊಂಡು ಅಳಿಸಬೇಕು. ಇಷ್ಟೇ ಅಲ್ಲ, ಕಿಚ್ಚನ ಚಪ್ಪಾಳೆ ಬೋರ್ಡ್ನಲ್ಲಿರುವ ಮೂರು ಬೋರ್ಡ್ಗಳನ್ನು ತಂದು ಸ್ಟೋ ರೂಂನಲ್ಲಿ ಇಡಬೇಕು. ಇದೆಲ್ಲವೂ ರಹಸ್ಯ ಟಾಸ್ಕ್ಗಳನ್ನು ಇದನ್ನು ಪೂರ್ಣಗೊಳಿಸಿದರೆ ಗಿಲ್ಲಿ ಹಾಗೂ ಅಶ್ವಿನಿಗೆ ಕ್ಯಾಪ್ಟನ್ಸಿ ಓಟದಲ್ಲಿ ಅವಕಾಶ ಸಿಗಲಿದೆ.
ಇದನ್ನೂ ಓದಿ: ರಜತ್ ಬರೆಯುತ್ತಿರುವ ಪುಸ್ತಕ: ನಾ ಕಂಡ ಗಿಲ್ಲಿ, ಯಾಕೋದೆ ಅಲ್ಲಿ
ಗಿಲ್ಲಿ ಹಾಗೂ ಕಾವ್ಯಾ ಗೆಳೆತನದ ಮಧ್ಯೆ ಸಣ್ಣದಾಗಿ ಬಿರುಕು ಮೂಡುತ್ತಿದೆ. ಈಗ ಗಿಲ್ಲಿ ಅವರು ಕಾವ್ಯಾ ವಿರುದ್ಧ ತಿರುಗಿಬಿದ್ದರೆ ಅವರಿಗೆ ಮತ್ತಷ್ಟು ಬೇಸರ ಆಗಬಹುದು. ಇದರಿಂದ ಗೆಳೆತನ ಮತ್ತಷ್ಟು ಹಳಸುವ ಸಾಧ್ಯತೆ ಇದೆ. ಈ ಸೀಕ್ರೆಟ್ ಟಾಸ್ಕ್ ವಿಷಯ ತಿಳಿಯಲು ಸ್ವಲ್ಪ ದಿನಗಳೇ ಬೇಕಾಗಬಹುದು. ಈಗಾಗಲೇ ಟ್ವಿಸ್ಟ್ನಲ್ಲಿ ಸ್ಪಂದನಾ ಅವರ ಬದಲು ಚೈತ್ರಾ ಕ್ಯಾಪ್ಟನ್ ಆಗಿದ್ದಾರೆ. ಮುಂದೆ ಮತ್ತಷ್ಟು ಟ್ವಿಸ್ಟ್ ಬರಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.