ಬಿಗ್ ಬಾಸ್ನಲ್ಲಿ ಬದಲಾಯ್ತು ಚೈತ್ರಾ ಲಕ್; ಈಗ ಎಲ್ಲವೂ ಅವರು ಹೇಳಿದಂತೆ
ಬಿಗ್ ಬಾಸ್ ಕನ್ನಡ 12ರಲ್ಲಿ ಚೈತ್ರಾ ಕುಂದಾಪುರ ಅದೃಷ್ಟ ಬದಲಾಗಿದೆ. ಅತಿಥಿಯಾಗಿ ಬಂದವರು ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ, ಈಗ ನೇರವಾಗಿ ಮನೆಯ ಕ್ಯಾಪ್ಟನ್ ಆಗಿದ್ದಾರೆ. ವಿಲನ್ ಕೊಟ್ಟ ಆಫರ್ ಒಪ್ಪಿ, ಸ್ಪಂದನಾ ಕ್ಯಾಪ್ಟನ್ ಸ್ಥಾನ ಕಸಿದುಕೊಂಡರು. ಈಗ ನಾಮಿನೇಷನ್ ಪ್ರಕ್ರಿಯೆ ಸಂಪೂರ್ಣವಾಗಿ ಅವರ ನಿಯಂತ್ರಣದಲ್ಲಿದ್ದು, ಈ ವಾರದ ನಾಮಿನೇಷನ್‌ನಿಂದ ಬಚಾವ್ ಆಗಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 12ರ ಮನೆಗೆ ಅತಿಥಿಯಾಗಿ ಬಂದಿದ್ದ ಚೈತ್ರಾ ಕುಂದಾಪುರ ಅವರು ನಂತರ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಅಲ್ಲಿಯೇ ಉಳಿದುಕೊಂಡರು. ಈ ವಾರ ಅವರ ಅದೃಷ್ಟ ಸಂಪೂರ್ಣವಾಗಿ ಬದಲಾಗಿದೆ. ಅವರು ಏಕಾಏಕಿ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಈಗ ಅವರು ಹೇಳಿದ ಪ್ರಕಾರ ನಾಮಿನೇಷನ್ ನಡೆಯುತ್ತಿದೆ. ಅಲ್ಲದೆ, ಈ ವಾರದ ನಾಮಿನೇಷನ್ ಇಂದ ಅವರು ಬಚಾವ್ ಕೂಡ ಆಗಿದ್ದಾರೆ. ಈ ಎಲ್ಲಾ ಟ್ವಿಸ್ಟ್ಗಳು ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೆ ಶಾಕಿಂಗ್ ಎನಿಸಿದೆ.
‘ಬಿಗ್ ಬಾಸ್ ಕನ್ನಡ ಸೀಸನ 12’ರಲ್ಲಿ ಕಳೆದ ವಾರ ಸ್ಪಂದನಾ ಸೋಮಣ್ಣ ಅವರು ಅದೃಷ್ಟದಲ್ಲಿ ಕ್ಯಾಪ್ಟನ್ ಆದರು. ಇದಕ್ಕೆ ಕಾರಣ ಆಗಿದ್ದು ಚೈತ್ರಾ. ಸ್ಪಂದನಾ ಕಾಲಿಗೆ ಪೆಟ್ಟಾಗಿದ್ದರಿಂದ ಚೈತ್ರಾ ಅವರು ಸ್ಪಂದನಾ ಪರವಾಗಿ ಆಡಿ ಗೆಲ್ಲಿಸಿದರು. ಸ್ಪಂದನಾ ಪರವಾಗಿ ಆಡಿದ್ದರಿಂದ ಚೈತ್ರಾಗೆ ಕ್ಯಾಪ್ಟನ್ ಪಟ್ಟ ಸಿಗಲಿಲ್ಲ. ಸ್ಪಂದನಾ ಅವರೇ ಕ್ಯಾಪ್ಟನ್ ಆದರು. ಆದರೆ, ಈ ವಾರ ಆ ಪಟ್ಟ ಸ್ಪಂದನಾ ಕೈ ತಪ್ಪಿದೆ.
ಬಿಗ್ ಬಾಸ್ ಮನೆಯಲ್ಲಿ ಈಗ ವಿಲನ್ ಆಡಳಿತ ಬಂದಿದೆ. ಆ್ಯಕ್ಟಿವಿಟಿ ರೂಂನ ವಿಲನ್ ತನ್ನ ಅಡ್ಡೆಯಾಗಿ ಮಾಡಿಕೊಂಡಿದ್ದಾನೆ. ಚೈತ್ರಾನ ಅಲ್ಲಿ ಕರೆದು ಆಫರ್ ನೀಡಿದ. ‘ನೀವು ಕಳೆದವಾರ ಆಟ ಆಡಿ ಸ್ಪಂದನಾನ ಕ್ಯಾಪ್ಟನ್ ಮಾಡಿದಿರಿ. ಇದಕ್ಕೆ ಪ್ರತಿಯಾಗಿ ನಿಮಗೇ ಏನೂ ಸಿಕ್ಕಿಲ್ಲ. ಈಗ ನಾನು ನಿಮಗೆ ಆಫರ್ ಒಂದನ್ನು ನೀಡಿತ್ತಿದ್ದೇನೆ. ನೀವು ಕ್ಯಾಪ್ಟನ್ ಆಗಬಹುದು. ಇದರಿಂದ ಕ್ಯಾಪ್ಟನ್ ರೂಂ ಬಾಗಿಲು ಕೂಡ ಓಪನ್ ಆಗುತ್ತದೆ. ಸ್ಪಂದನಾ ಕ್ಯಾಪ್ಟನ್ ಪಟ್ಟ ಕಳೆದುಕೊಳ್ಳುತ್ತಾರೆ’ ಎಂದರು ವಿಲನ್.
ಇದನ್ನೂ ಓದಿ: ಗಿಲ್ಲಿ ವಿರುದ್ಧ ಸಮರ ಸಾರಿದ ಚೈತ್ರಾ ಕುಂದಾಪುರ: ಮಾತಿಗೆ ಮಾತು ಬೆಳೆದು ಮನೆ ರಣರಂಗ
ಇದಕ್ಕೆ ಚೈತ್ರಾ ಒಪ್ಪಿಗೆ ಕೊಟ್ಟಿದ್ದಾರೆ. ಆ ಕ್ಷಣದಿಂದ ಅವರು ಕ್ಯಾಪ್ಟನ್ ಆಗಿದ್ದಾರೆ. ಇದರಿಂದ ಅವರಿಗೆ ವಿಶೇಷ ಅಧಿಕಾರ ಸಿಕ್ಕಿದೆ. ಮನೆಯಲ್ಲಿ ಯಾರು ಎಷ್ಟು ಮಂದಿಯನ್ನು ನಾಮಿನೇಟ್ ಮಾಡಬೇಕು, ಯಾರಿಗೆ ನಾಮಿನೇಷನ್ ಅಧಿಕಾರ ನೀಡಬಾರದು ಎಂಬುದನ್ನು ಚೈತ್ರಾ ಅವರೇ ನಿರ್ಧರಿಸಬೇಕಿದೆ. ಈ ವೇಳೆ ಅಶ್ವಿನಿ ಹಾಗೂ ರಕ್ಷಿತಾ ಅವರ ನಾಮಿನೇಷನ್ ಅಧಿಕಾರವನ್ನು ಚೈತ್ರಾ ಕಿತ್ತುಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




