AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾವ್ಯಾನ ಅಳಿಸೋ ಸಂಚಿಗೆ ಅಶ್ವಿನಿ ಜೊತೆ ಕೈ ಜೋಡಿಸಿದ ಗಿಲ್ಲಿ

ಬಿಗ್ ಬಾಸ್ ಕನ್ನಡ 12ರಲ್ಲಿ ಗಿಲ್ಲಿ ಹಾಗೂ ಕಾವ್ಯಾ ಗೆಳೆತನಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ವಿಲನ್ ಕೊಟ್ಟ ಸೀಕ್ರೆಟ್ ಟಾಸ್ಕ್​ನಿಂದ ಗಿಲ್ಲಿ ಮತ್ತು ಅಶ್ವಿನಿಗೆ ಕ್ಯಾಪ್ಟನ್ಸಿ ಅವಕಾಶ ನೀಡಲಿದೆ. ಆದರೆ, ಕಾವ್ಯಾನ ಅಳಿಸುವ ಈ ಟಾಸ್ಕ್ ಗೆಳೆತನದಲ್ಲಿ ಬಿರುಕು ಮೂಡಿಸುವ ಸಾಧ್ಯತೆ ಇದೆ. ಈ ಸಂಚು ಮನೆಯಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ.

ಕಾವ್ಯಾನ ಅಳಿಸೋ ಸಂಚಿಗೆ ಅಶ್ವಿನಿ ಜೊತೆ ಕೈ ಜೋಡಿಸಿದ ಗಿಲ್ಲಿ
ಗಿಲ್ಲಿ-ಅಶ್ವಿನಿ
ರಾಜೇಶ್ ದುಗ್ಗುಮನೆ
|

Updated on: Dec 10, 2025 | 7:07 AM

Share

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ (BBK 12) ಗಿಲ್ಲಿ ನಟ ಹಾಗೂ ಕಾವ್ಯಾ ಶೈವ ಮಧ್ಯೆ ಒಳ್ಳೆಯ ಗೆಳೆತನ ಇದೆ. ಈ ಗೆಳೆತನವನ್ನು ಬ್ರೇಕ್ ಮಾಡಲು ಅನೇಕರು ಪ್ರಯತ್ನಿಸಿದ್ದು ಇದೆ. ಆದರೆ, ಯಶಸ್ಸು ಕಂಡಿಲ್ಲ. ಈಗ ಇವರನ್ನು ಬೇರೆ ಮಾಡಲು ದೊಡ್ಡ ಸಂಚು ನಡೆದಿದೆ. ಬಿಗ್ ಬಾಸ್ ನಡೆಸಿಕೊಡುತ್ತಿರುವ ವಿಲನ್ ಈ ರೀತಿಯ ಕೆಲಸಕ್ಕೆ ಕೈ ಹಾಕಿದ್ದಾರೆ. ಒಂದೊಮ್ಮೆ ಇದರಲ್ಲಿ ಯಶಸ್ಸು ಕಂಡರೆ ಗಿಲ್ಲಿ ಹಾಗೂ ಅಶ್ವಿನಿಗೆ ದೊಡ್ಡ ಲಾಭ ಸಿಗಲಿದೆ.

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಈ ವಾರ ಹೊಸ ರೀತಿಯ ಕಾನ್ಸೆಪ್ಟ್ ತರಲಾಗಿದೆ. ಇಡೀ ಬಿಗ್ ಬಾಸ್ ಭೂತ ಬಂಗಲೆ ಆಗಿದೆ. ಆ್ಯಕ್ಟಿವಿಟಿ ಏರಿಯಾ ವಿಲನ್ ಅಡ್ಡ ಆಗಿದೆ. ಘೋಷಣೆಗಳು ತುಂಬಾನೇ ಭಿನ್ನವಾಗಿರುತ್ತವೆ. ಚಿತ್ರ ವಿಚಿತ್ರ ಧ್ವನಿ ಬರುತ್ತದೆ. ಹೊಸ ಹೊಸ ರೀತಿಯ ಟಾಸ್ಕ್​ಗಳನ್ನು ನೀಡಲಾಗುತ್ತಿದೆ. ಈಗ ವಿಲನ್ ಗಿಲ್ಲಿ ಹಾಗೂ ಅಶ್ವಿನಿ ಗೌಡಗೆ ಟಾಸ್ಕ್ ಒಂದನ್ನು ನೀಡಿದರು. ಇದರ ಪ್ರಕಾರ ಇಬ್ಬರೇ ಅಡುಗೆ ಮಾಡಬೇಕು. ಹಾಗೆ ಮಾಡಿದರೆ ಮನೆಯವರಿಗೆ ಲಕ್ಷುರಿ ಐಟಂ ಸಿಗುತ್ತದೆ. ಗಿಲ್ಲಿ ಅಡುಗೆ ಮಾಡಿದವರೇ ಅಲ್ಲ. ಆದಾಗ್ಯೂ ಈಗ ಅಂಥದ್ದೊಂದು ಸಾಹಸಕ್ಕೆ ಕೈ ಹಾಕಬೇಕಿದೆ.

ಇನ್ನು ವಿಲನ್ ಕಡೆಯಿಂದ ಸೀಕ್ರೆಟ್ ಟಾಸ್ಕ್ ಒಂದು ಸಿಕ್ಕಿದೆ. ಈ ಟಾಸ್ಕ್ ಅನುಸಾರ ಕಾವ್ಯಾನ ಅಶ್ವಿನಿ ಹಾಗೂ ಗಿಲ್ಲಿ ಸೇರಿಕೊಂಡು ಅಳಿಸಬೇಕು. ಇಷ್ಟೇ ಅಲ್ಲ, ಕಿಚ್ಚನ ಚಪ್ಪಾಳೆ ಬೋರ್ಡ್​ನಲ್ಲಿರುವ ಮೂರು ಬೋರ್​​ಡ್​​ಗಳನ್ನು ತಂದು ಸ್ಟೋ ರೂಂನಲ್ಲಿ ಇಡಬೇಕು. ಇದೆಲ್ಲವೂ ರಹಸ್ಯ ಟಾಸ್ಕ್​ಗಳನ್ನು ಇದನ್ನು ಪೂರ್ಣಗೊಳಿಸಿದರೆ ಗಿಲ್ಲಿ ಹಾಗೂ ಅಶ್ವಿನಿಗೆ ಕ್ಯಾಪ್ಟನ್ಸಿ ಓಟದಲ್ಲಿ ಅವಕಾಶ ಸಿಗಲಿದೆ.

ಇದನ್ನೂ ಓದಿ: ರಜತ್ ಬರೆಯುತ್ತಿರುವ ಪುಸ್ತಕ: ನಾ ಕಂಡ ಗಿಲ್ಲಿ, ಯಾಕೋದೆ ಅಲ್ಲಿ

ಗಿಲ್ಲಿ ಹಾಗೂ ಕಾವ್ಯಾ ಗೆಳೆತನದ ಮಧ್ಯೆ ಸಣ್ಣದಾಗಿ ಬಿರುಕು ಮೂಡುತ್ತಿದೆ. ಈಗ ಗಿಲ್ಲಿ ಅವರು ಕಾವ್ಯಾ ವಿರುದ್ಧ ತಿರುಗಿಬಿದ್ದರೆ ಅವರಿಗೆ ಮತ್ತಷ್ಟು ಬೇಸರ ಆಗಬಹುದು. ಇದರಿಂದ ಗೆಳೆತನ ಮತ್ತಷ್ಟು ಹಳಸುವ ಸಾಧ್ಯತೆ ಇದೆ. ಈ ಸೀಕ್ರೆಟ್ ಟಾಸ್ಕ್ ವಿಷಯ ತಿಳಿಯಲು ಸ್ವಲ್ಪ ದಿನಗಳೇ ಬೇಕಾಗಬಹುದು. ಈಗಾಗಲೇ ಟ್ವಿಸ್ಟ್​ನಲ್ಲಿ ಸ್ಪಂದನಾ ಅವರ ಬದಲು ಚೈತ್ರಾ ಕ್ಯಾಪ್ಟನ್ ಆಗಿದ್ದಾರೆ. ಮುಂದೆ ಮತ್ತಷ್ಟು ಟ್ವಿಸ್ಟ್ ಬರಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ
ರಾಮನಗರ: ನಡುರಸ್ತೆಯಲ್ಲೇ ವಾಮಾಚಾರ; ನ್ಯೂಇಯರ್​ ಸಂಭ್ರಮದಲ್ಲಿದ್ದವರಿಗೆ ಶಾಕ್
ರಾಮನಗರ: ನಡುರಸ್ತೆಯಲ್ಲೇ ವಾಮಾಚಾರ; ನ್ಯೂಇಯರ್​ ಸಂಭ್ರಮದಲ್ಲಿದ್ದವರಿಗೆ ಶಾಕ್
ಮನೆಯ ಎದುರು ಕುರ್ಚಿ ಮೇಲೆ ಕುಳಿತಿದ್ಧ ವೃದ್ಧೆ ಮೇಲೆ ಕೋತಿಗಳ ದಾಳಿ
ಮನೆಯ ಎದುರು ಕುರ್ಚಿ ಮೇಲೆ ಕುಳಿತಿದ್ಧ ವೃದ್ಧೆ ಮೇಲೆ ಕೋತಿಗಳ ದಾಳಿ
Video: ತಂದೆ ತಾಯಿ ಜಗಳದಲ್ಲಿ ಮಗಳು ಸತ್ತೇ ಹೋದಳು!
Video: ತಂದೆ ತಾಯಿ ಜಗಳದಲ್ಲಿ ಮಗಳು ಸತ್ತೇ ಹೋದಳು!
ಎಣ್ಣೆ ನಶೆಯಲ್ಲಿ ನಾಯಿ ಜೊತೆ ಯುವಕನ ಡ್ಯಾನ್ಸ್​​: ವಿಡಿಯೋ ವೈರಲ್​
ಎಣ್ಣೆ ನಶೆಯಲ್ಲಿ ನಾಯಿ ಜೊತೆ ಯುವಕನ ಡ್ಯಾನ್ಸ್​​: ವಿಡಿಯೋ ವೈರಲ್​
‘ನಗ್ತಾ ಇರಿ, ಖುಷಿಯಾಗಿರಿ’; ಮಾತಿನ ಮೂಲಕ ವಿಶ್ ಮಾಡಿದ ಸುದೀಪ್
‘ನಗ್ತಾ ಇರಿ, ಖುಷಿಯಾಗಿರಿ’; ಮಾತಿನ ಮೂಲಕ ವಿಶ್ ಮಾಡಿದ ಸುದೀಪ್
ನಮಗೊಂದು ಟ್ವೀಟ್ ಮಾಡಿಕೊಡಿ: ಕೇರಳ ಸಿಎಂಗೆ ದುಂಬಾಲು ಬಿದ್ದ ಬಿಜೆಪಿ!
ನಮಗೊಂದು ಟ್ವೀಟ್ ಮಾಡಿಕೊಡಿ: ಕೇರಳ ಸಿಎಂಗೆ ದುಂಬಾಲು ಬಿದ್ದ ಬಿಜೆಪಿ!