ಬಿಗ್ ಬಾಸ್ ಆದೇಶಕ್ಕೆ ನಲುಗಿ ಹೋದ ಗಿಲ್ಲಿ ನಟ; ಇದಕ್ಕೆ ಕಾರಣ ರಘು-ಸೂರಜ್?

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ನಟರು ತಾವು ಈ ವಾರ ಕ್ಯಾಪ್ಟನ್ ಎಂದು ಭಾವಿಸಿದ್ದರು. ಫ್ಯಾಮಿಲಿ ವೀಕ್‌ನಲ್ಲಿ ಅವರಿಗೆ ಹೆಚ್ಚು ವೋಟ್ ಬಿದ್ದಿದ್ದವು. ಆದರೆ, ಬಿಗ್ ಬಾಸ್ ಅನಿರೀಕ್ಷಿತ ಟ್ವಿಸ್ಟ್ ನೀಡಿದ್ದು, ಗಿಲ್ಲಿಗೆ ಮತ್ತೊಬ್ಬ ಸ್ಪರ್ಧಿಯೊಂದಿಗೆ ಟಾಸ್ಕ್ ಆಡಿ ಕ್ಯಾಪ್ಟನ್ ಆಗುವ ಸವಾಲು ಎದುರಾಯಿತು. ಅಂತಿಮವಾಗಿ ಗಿಲ್ಲಿ ಟಾಸ್ಕ್ ಗೆದ್ದು ಕ್ಯಾಪ್ಟನ್ ಆದರು.

ಬಿಗ್ ಬಾಸ್ ಆದೇಶಕ್ಕೆ ನಲುಗಿ ಹೋದ ಗಿಲ್ಲಿ ನಟ; ಇದಕ್ಕೆ ಕಾರಣ ರಘು-ಸೂರಜ್?
ಗಿಲ್ಲಿ

Updated on: Dec 27, 2025 | 9:42 PM

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ (BBK 12) ಗಿಲ್ಲಿ ನಟ ಅವರು ಈ ವಾರ ತಾವೇ ಕ್ಯಾಪ್ಟನ್ ಎಂದು ಬೀಗಿದ್ದರು. ಈ ವಾರ ಫ್ಯಾಮಿಲಿ ವೀಕ್ ಆಗಿತ್ತು. ಈ ಪೈಕಿ ಬಹುತೇಕರು ಗಿಲ್ಲಿ ಕ್ಯಾಪ್ಟನ್ ಆಗಬೇಕು ಎಂದು ಬಯಸಿದ್ದರು. ಗಿಲ್ಲಿಗೆ ಹೆಚ್ಚು ವೋಟ್ ಬಿದ್ದಿದ್ದರಿಂದ ಅವರು ತಾವೇ ಕ್ಯಾಪ್ಟನ್ ಎಂದುಕೊಂಡಿದ್ದರು. ಆದರೆ, ಬಿಗ್ ಬಾಸ್ ಕೊಟ್ಟ ಟ್ವಿಸ್ಟ್​​ಗೆ ಗಿಲ್ಲಿ ನಲುಗಿ ಹೋದರು. ಆ ಬಗ್ಗೆ ಇಲ್ಲಿದೆ ವಿವರ.

ಈ ವಾರ ಗಿಲ್ಲಿ ನಟ ಅವರಿಗೆ ತುಂಬಾನೇ ಹೈಪ್ ಸಿಕ್ಕಿತು. ಮನೆಯಿಂದ ಬಂದ ಸ್ಪರ್ಧಿಗಳ ಕುಟುಂಬದವರು ಗಿಲ್ಲಿಯನ್ನು ಮೆಚ್ಚಿಕೊಂಡರು. ಹೀಗಾಗಿ, ಅವರಿಗೆ ಕ್ಯಾಪ್ಟನ್ ಆಗಬೇಕು ಎಂದು ಸಾಕಷ್ಟು ವೋಟ್​​ಗಳು ಬಿದ್ದವು. ಅತ್ಯಧಿಕ ವೋಟ್ ಪಡೆದಿದ್ದರಿಂದ ತಾವೇ ಕ್ಯಾಪ್ಟನ್ ಎಂದು ಅವರು ಭಾವಿಸಿದ್ದರು. ಉಳಿದ ಸ್ಪರ್ಧಿಗಳಿಗೂ ಅದೇ ರೀತಿಯ ಊಹೆ ಇತ್ತು. ಆದರೆ, ಆ ಊಹೆ ತಪ್ಪಾಗಿದೆ.

‘ಅತಿ ಹೆಚ್ಚು ವೋಟ್ ಪಡೆದ ಗಿಲ್ಲಿ ಎಂದು ಪಾಸ್ ಕೊಟ್ಟ ಬಿಗ್ ಬಾಸ್ ಅಶ್ವಿನಿ ಹೆಸರನ್ನು ಕೂಡ ಸೇರಿಸಿದರು. ಆ ಬಳಿಕ ಗಿಲ್ಲಿ ಶಾಕ್ ಆಗಿ ಕೈ ಎತ್ತಿದರು. ‘ಅವರಿಗೆ ಬಂದಿದ್ದು ಕೇವಲ ಎರಡು ವೋಟ್ ಮಾತ್ರ ಅಲ್ಲವೇ’ ಎಂದು ಪ್ರಶ್ನೆ ಮಾಡಿದರು. ಆದರೆ, ಬಿಗ್ ಬಾಸ್ ಇದಕ್ಕೆ ಸೊಪ್ಪು ಹಾಕಿಲ್ಲ. ‘ಅಶ್ವಿನಿ ಹಾಗೂ ಗಿಲ್ಲಿ ಕ್ಯಾಪ್ಟನ್ಸಿ ಟಾಸ್ಕ್​​ಗೆ ಆಯ್ಕೆ ಆಗಿದ್ದಾರೆ’ ಎಂದು ಘೋಷಿಸಿದರು. ಗಿಲ್ಲಿ ಆಟವನ್ನು ಗೆದ್ದು ಕ್ಯಾಪ್ಟನ್ ಆದರು.

ಇದನ್ನೂ ಓದಿ: ಟಾಸ್ಕ್ ಆಡಿಯೇ ಕ್ಯಾಪ್ಟನ್ ಆದ ಗಿಲ್ಲಿ; ಆರಂಭದಲ್ಲೇ ನಿಯಮ ಮುರಿದಿದ್ದಕ್ಕೆ ಬಿಗ್ ಬಾಸ್ ಎಚ್ಚರಿಕೆ

ಬಿಗ್ ಬಾಸ್​​ಗೆ ಟಾಸ್ಕ್ ಕೊಡೋಕೆ ರಘು ಹಾಗೂ ಸೂರಜ್ ಆಡಿದ ಮಾತು ಕಾರಣವೇ ಎನ್ನುವ ಪ್ರಶ್ನೆ ಮೂಡಿದೆ. ಈ ಮೊದಲು ಮಾತನಾಡಿದ ರಘು, ‘ಗಿಲ್ಲಿ ಇವತ್ತು ಮಲಗೋದಿಲ್ಲ. ಈಗಾಗಲೇ ನಾಲ್ಕು ವೋಟ್ ಸಿಕ್ಕಿದೆ. ಅವನು ಗೇಮ್ ಆಡಿಯಂತೂ ಕ್ಯಾಪ್ಟ್ ಆಗಲ್ಲ, ಹೀಗಾದರೂ ಮಾಡೋಣ ಅಂತ’ ಎಂದು ರಘು ಹೇಳಿದ್ದರು. ‘ಬಿಗ್ ಬಾಸ್​ ಪ್ಲ್ಯಾನ್ ಹಾಕಿದಾರೆ’ ಎಂದು ಸೂರಜ್ ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:41 pm, Sat, 27 December 25