ಗಿಲ್ಲಿ ತಪ್ಪಿನಿಂದ ಇಡೀ ಮನೆಗೆ ಶಿಕ್ಷೆ; ಕಾವ್ಯಾ ಹಿಂದೆ ಬಿದ್ದಿದ್ದೇ ಮುಳುವಾಯ್ತು

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ಉತ್ತಮ ಪ್ರದರ್ಶನ ನೀಡಿದರೂ, ಇತ್ತೀಚೆಗೆ ಟ್ರ್ಯಾಕ್ ತಪ್ಪಿದ್ದಾರೆ. ಕಾವ್ಯಾ ಜೊತೆಗಿನ ಅವರ ಜಗಳದಿಂದ ಇಡೀ ಮನೆಗೆ ಶಿಕ್ಷೆಯಾಗಿ ರೇಷನ್ ನಷ್ಟವಾಯಿತು. ಕಾವ್ಯಾ 'ಅಣ್ಣ' ಎಂದಿದ್ದಕ್ಕೆ ಗಿಲ್ಲಿ ಕೋಪಗೊಂಡು ಕೆಲಸ ನಿಲ್ಲಿಸಿದರು. ಇದರಿಂದ ಬಿಗ್ ಬಾಸ್ ಇಡೀ ಮನೆಗೆ ಶಿಕ್ಷೆ ವಿಧಿಸಿತು. ಮನೆಯವರೆಲ್ಲಾ ಗಿಲ್ಲಿಯ ವಿರುದ್ಧ ತಿರುಗಿಬಿದ್ದರು.

ಗಿಲ್ಲಿ ತಪ್ಪಿನಿಂದ ಇಡೀ ಮನೆಗೆ ಶಿಕ್ಷೆ; ಕಾವ್ಯಾ ಹಿಂದೆ ಬಿದ್ದಿದ್ದೇ ಮುಳುವಾಯ್ತು
ಗಿಲ್ಲಿ-ಕಾವ್ಯಾ

Updated on: Nov 18, 2025 | 6:50 AM

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಒಳ್ಳೆಯ ರೀತಿಯಲ್ಲಿ ಆಟ ಪ್ರದರ್ಶನ ಮಾಡುತ್ತಿರುವವರ ಪೈಕಿ ಗಿಲ್ಲಿ ಮುಂಚೂಣಿಯಲ್ಲಿ ಇದ್ದಾರೆ. ಅವರೇ ವಿನ್ನರ್ ಅನ್ನೋದು ವೀಕ್ಷಕರಿಗೆ ಸ್ಪಷ್ಟವಾಗುತ್ತಿದೆ. ಆದರೆ, ಇತ್ತೀಚೆಗೆ ಗಿಲ್ಲಿ ಟ್ರ್ಯಾಕ್ ತಪ್ಪುತ್ತಿರುವ ಭಾವನೆ ವೀಕ್ಷಕರಿಗೆ ಕಾಡುತ್ತಿದೆ. ಹೀಗಿರುವಾಗಲೇ ಗಿಲ್ಲಿ ತಪ್ಪಿನಿಂದ ಇಡೀ ಮನೆಗೆ ಶಿಕ್ಷೆ ನೀಡಲಾಗಿದೆ. ಕಾವ್ಯಾ ಹಿಂದೆ ಹೋಗಿದ್ದೇ ಈ ಶಿಕ್ಷೆಗೆ ಕಾರಣ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಬಿಗ್ ಬಾಸ್ ಮನೆಯಲ್ಲಿ ಸೋಮವಾರ (ನವೆಂಬರ್ 17) ಒಂದು ಚಟುವಟಿಕೆ ನೀಡಲಾಯಿತು. ಈ ಚಟುವಟಿಕೆ ಪ್ರಕಾರ ಮನೆಯಲ್ಲಿ ಕೆಲಸಕ್ಕೆ ಗೈರಾಗಿ ಊಟಕ್ಕೆ ಹಾಜರಿ ಹಾಕುವವರು ಯಾರು ಎಂಬುದನ್ನು ಹೇಳಬೇಕಿತ್ತು. ಇದಕ್ಕೆ ಮನೆ ಮಂದಿ ಗಿಲ್ಲಿ ಹೆಸರನ್ನು ತೆಗೆದುಕೊಂಡರು. ಇದಕ್ಕೆ ಪ್ರತಿಯಾಗಿ ಬಿಗ್ ಬಾಸ್ ಗಿಲ್ಲಿಗೆ ಶಿಕ್ಷೆ ನೀಡಿದರು. ಇಡೀ ಮನೆಯವರು ಹೇಳಿದಂತೆ ಅವರು ಕೇಳಬೇಕು. ಮನೆಯವರ ಕೆಲಸ ಮಾಡಿಕೊಡಬೇಕು. ಒಂದೊಮ್ಮೆ ತಪ್ಪಿದರೆ ರೇಷನ್ ಮಿಸ್ ಆಗುತ್ತದೆ ಎಂದು ಬಿಗ್ ಬಾಸ್ ತಿಳಿಸಿದರು. ಇದಕ್ಕೆ ಗಿಲ್ಲಿ ಕೂಡ ಒಪ್ಪಿಕೊಂಡರು.

ಬಿಗ್ ಬಾಸ್ ಮನೆಯ ಸ್ಪರ್ಧಿಗಳು ಗಿಲ್ಲಿಗೆ ವಿವಿಧ ರೀತಿಯ ಕೆಲಸ ನೀಡಿದರು. ಇದೆಲ್ಲವನ್ನೂ ಗಿಲ್ಲಿ ಕಷ್ಟಪಟ್ಟು ಮಾಡಿದರು. ಈ ಸಂದರ್ಭದಲ್ಲೇ ಕಾವ್ಯಾ ಶೈವ ಅವರು ಗಿಲ್ಲಿಯನ್ನು ಅಣ್ಣ ಎಂದು ಕರೆದರು. ಇದರಿಂದ ಗಿಲ್ಲಿ ಕೋಪ ನೆತ್ತಿಗೇರಿತು. ಈ ಕಾರಣದಿಂದಲೇ ತಾವು ಕೆಲಸ ಮಾಡೋದಿಲ್ಲ ಎಂದು ಕುಳಿತರು. ಅವರನ್ನು ಸಮಾಧಾನ ಮಾಡಲು ಸಾಕಷ್ಟು ಸಮಯವೇ ಬೇಕಾಯಿತು.

‘ಕಾವ್ಯಾ ಕ್ಷಮೆ ಕೇಳಿದರೆ ನಾನು ಕೆಲಸ ಮಾಡುತ್ತೇನೆ’ ಎಂದು ಗಿಲ್ಲಿ ಪಟ್ಟು ಹಿಡಿದರು. ‘ಕಾವ್ಯಾ.. ಕಾವ್ಯಾ..’ ಎಂದು ಮಾತನಾಡುತ್ತಾ ಹೋದರೂ ಅವರು ಸೊಪ್ಪು ಹಾಕಲೇ ಇಲ್ಲ. ಇಡೀ ಮನೆ ಅವರ ವಿರುದ್ಧ ತಿರುಗಿ ಬಿತ್ತು. ಆಗ ಗಿಲ್ಲಿ ಅವರು, ‘ನಾನು ಕಾವ್ಯಾ ಜೊತೆ ಇಡೀ ಜೀವಮಾನದಲ್ಲಿ ಮಾತನಾಡಲ್ಲ’ ಎಂದು ಶಪಥ ಮಾಡಿದರು.

ಇದನ್ನೂ ಓದಿ: ಸುದೀಪ್ ಮಾತಿಗೂ ಬೆಲೆ ಕೊಡದ ಜಾಹ್ನವಿ, ಅಶ್ವಿನಿ ಗೌಡ: ಮನೆ ದಾರಿ ನೆನಪಿಸಿದ ಬಿಗ್ ಬಾಸ್

ಗಿಲ್ಲಿ ಸರಿಯಾಗಿ ಕೆಲಸ ನಿರ್ವಹಿಸದ ಕಾರಣಕ್ಕೆ ಬಿಗ್ ಬಾಸ್ ಇಡೀ ಮನೆಗೆ ಶಿಕ್ಷೆ ನೀಡಿದರು. ‘ಹಲವು ದಿನಸಿ ಐಟಂಗಳನ್ನು ಈ ಕೂಡಲೇ ಹಿಂದಿರುಗಿಸಿ’ ಎಂದು ಬಿಗ್ ಬಾಸ್ ಸೂಚಿಸಿದರು. ಇದರಿಂದ ಇಡೀ ಮನೆ ಗಿಲ್ಲಿಯನ್ನು ಶಪಿಸುವಂತೆ ಆಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.