
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ (BBK 12) ಫ್ಯಾಮಿಲಿ ವೀಕ್ ನಡೆಯುತ್ತಿದೆ. ಎಲ್ಲಾ ಸ್ಪರ್ಧಿಗಳ ಕುಟುಂಬದವರು ಬಂದು ಸ್ಪರ್ಧಿಗಳಿಗೆ ಹೊಸ ಹುರುಪು ನೀಡುತ್ತಿದ್ದಾರೆ. ಗಿಲ್ಲಿ ತಂದೆ ಕುಳ್ಳಯ್ಯ ಹಾಗೂ ತಾಯಿ ಸವಿತಾ ಕೂಡ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಅವರು ಗಿಲ್ಲಿ ಅಷ್ಟೇ ಎಲ್ಲರನ್ನೂ ನಗಿಸಿದ್ದಾರೆ. ಗಿಲ್ಲಿ ರೀತಿಯೇ ಅವರು ನ್ಯಾಚುರಲ್ ಆಗಿ ಇದ್ದರು. ಗಿಲ್ಲಿ ಕೂಡ ಹೆಚ್ಚು ಎಮೋಷನ್ ತೋರಿಸಿಕೊಳ್ಳದೆ ಅವರನ್ನು ಸ್ವಾಗತಿಸಿಕೊಂಡರು. ಈ ವೇಳೆ ಗಿಲ್ಲಿ ಬಗ್ಗೆ ಒಂದು ಅಚ್ಚರಿಯ ಮಾಹಿತಿಯನ್ನು ಸವಿತಾ ನೀಡಿದ್ದಾರೆ.
ಕುಳ್ಳಯ್ಯ ಅವರು ಒಂದು ದೊಣ್ಣೆ ಹಿಡಿದು ಬಿಗ್ ಬಾಸ್ ಮನೆ ಒಳಗೆ ಬಂದರು. ಅವರು ಗಿಲ್ಲಿಗೆ ಏಟು ಹೊಡೆದಂತೆ ನಟಿಸಿದರು. ಈ ದೊಣ್ಣೆಯನ್ನು ತೆಗೆದುಕೊಂಡು ರಘು ಹಾಗೂ ಕಾವ್ಯಾ ಅವರು ಗಿಲ್ಲಿಗೆ ಹೊಡೆಯುವಾಗ ಅವರ ಮನಸ್ಸಿಗೆ ನೋವಾಯಿತು. ಈ ವೇಳೆ ರಘು ಅವರು, ‘ನಾನು ಗಟ್ಟಿಯಾಗಿ ಹೊಡೆದಿಲ್ಲ’ ಎಂದು ಸ್ಪಷ್ಟನೆ ಕೊಟ್ಟರು.
ಗಿಲ್ಲಿಗೆ ತೆಂಗಿನ ಎಣ್ಣೆಯನ್ನು ತಲೆಗೆ ಹಾಕಿ, ಆ ಬಳಿಕ ಸ್ನಾನ ಮಾಡಿಸಿಕೊಟ್ಟರು ತಾಯಿ ಸವಿತಾ. ಗಿಲ್ಲಿ ತಲೆಗೆ ಎಣ್ಣೆ ಹಚ್ಚುವಾಗ, ‘ನೀನು ಹೊರಗೆ ಹೇಗೆ ಇರ್ತಿದ್ಯೋ ಇಲ್ಲಿಯೂ ಹಾಗೆ ಇರ್ತೀಯಾ. ನನಗೆ ಅದು ಖುಷಿ ಕೊಟ್ಟಿದೆ. ನಿಮ್ಮ ಅಪ್ಪ ತುಂಬಾನೇ ಖುಷಿಯಾದರು’ ಎಂದರು ಸವಿತಾ. ‘ಹೊರಗೆ ಯಾವ ರೀತಿ ಇದೀನೋ ಇಲ್ಲಿಯೂ ಅದೇ ರೀತಿ ಇರಬೇಕು. ಆಗಲೇ ಉತ್ತಮವಾಗಿರುತ್ತದೆ’ ಎಂದರು ಗಿಲ್ಲಿ.
ಈ ಮತುಗಳನ್ನು ಅಶ್ವಿನಿ ಕೇಳಿಸಿಕೊಳ್ಳುತ್ತಿದ್ದರು. ‘ಹೊರಗೂ ಹೀಗೆಯೇ ಇರ್ತಾನಾ? ನಾನೆಲ್ಲೋ ಇಲ್ಲಿ ಮಾತ್ರ ಅವನು ಹಾಗೆ ಆಡೋದು ಎಂದುಕೊಂಡಿದ್ದೆ’ ಎಂದಿದ್ದಾರೆ. ಆಗ ಸವಿತಾ ಅವರು, ‘ಇಲ್ಲ, ಅವನು ಎಲ್ಲ ಕಡೆಗಳಲ್ಲೂ ಹೀಗೆಯೇ ಇರೋದು’ ಎಂದು ಸ್ಪಷ್ಟನೆ ಕೊಟ್ಟರು.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿರುವಾಗಲೇ ಅಬ್ಬರದಲ್ಲಿ ರಿಲೀಸ್ ಆಯ್ತು ರಘು ನಟನೆಯ ಸಿನಿಮಾ
ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಾಟಕ ಮಾಡುತ್ತಿದ್ದಾರೆ ಎಂದು ಅನೇಕರು ಭಾವಿಸಿದ್ದು ಇದೆ. ಈಗ ಅವರೆಲ್ಲರಿಗೂ ಸ್ಪಷ್ಟನೆ ಸಿಕ್ಕಂತೆ ಆಗಿದೆ. ಗಿಲ್ಲಿ ಅವರು ನ್ಯಾಚುರಲ್ ಆಗಿದ್ದಾರೆ. ಇದು ಕೆಲವರಿಗೆ ನಾಟಕದ ರೀತಿ ಅನಿಸುತ್ತಿದೆ. ಗಿಲ್ಲಿ ಏನೇ ಮಾಡಿದರೂ ಅದನ್ನು ಕೆಲವರು ಸಹಿಸಿಕೊಳ್ಳುತ್ತಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.