
ಬಿಗ್ಬಾಸ್ (Bigg Boss) ಮನೆಯಲ್ಲಿ ಭಾನುವಾರದ ಎಪಿಸೋಡ್ ಸದಾ ಮಜವಾಗಿರುತ್ತದೆ. ಸುದೀಪ್ ಅವರು ಸ್ಪರ್ಧಿಗಳೊಟ್ಟಿಗೆ ತಮಾಷೆ ಮಾಡುತ್ತಾ, ನಗುತ್ತಾ, ನಗಿಸುತ್ತಾ ಭಾನುವಾರದ ಎಪಿಸೋಡ್ ನಡೆಸಿಕೊಡುತ್ತಾರೆ. ಈ ಭಾನುವಾರವೂ ಸಹ ಹೀಗೆಯೇ ಇತ್ತು. ಭಾನುವಾರ ಎಪಿಸೋಡ್ ಪ್ರಾರಂಭ ಆಗುತ್ತಲೇ ಸುದೀಪ್ ಅವರು ಸ್ಪರ್ಧಿಗಳಿಂದ ಆಟ ಆಡಿಸಿದರು. ಜೋಡಿಗಳಾಗಿ ಆಟ ಆಡಿದರು. ಆಟದಲ್ಲಿ ರಾಶಿಕಾ ಮತ್ತು ಸೂರಜ್ ಗೆದ್ದರು.
ಆದರೆ ಆಟದ ನಂತರ ಆಕ್ಟಿವಿಟಿ ರೂಂಗೆ ಸ್ಪರ್ಧಿಗಳನ್ನು ಕರೆಸಿ ಒಂದು ಆಕ್ಟಿವಿಟಿ ಮಾಡಿಸಿದರು. ಆಕ್ಟಿವಿಟಿ ರೂಂನಲ್ಲಿ ಒಂದು ಏಣಿ ಮತ್ತು ಒಂದು ಹಾವಿನ ದೊಡ್ಡ ಬೊಂಬೆ ಇತ್ತು. ಪ್ರತಿ ಸ್ಪರ್ಧಿಗಳು ಅವರ ಈ ವರೆಗಿನ ಬಿಗ್ಬಾಸ್ ಜರ್ನಿಯಲ್ಲಿ ಯಾರು ಅವರಿಗೆ ಏಣಿ ಆಗಿದ್ದರು, ಯಾರು ಹಾವಾಗಿದ್ದರು ಎಂಬುದನ್ನು ಹೇಳಬೇಕಿತ್ತು. ಮನೆಯಲ್ಲಿ ಹೆಚ್ಚಿನ ಮಂದಿ ಗಿಲ್ಲಿಯನ್ನು ಹಾವು, ವಿಷಕಾರಿ ಎಂದು ಕರೆದರು. ಕಡೆಗೆ ಕಾವ್ಯಾ ಸಹ ಗಿಲ್ಲಿಯನ್ನು ವಿಷಕಾರಿ ಎಂದು ಕರೆದರು.
ರಘು, ಧ್ರುವಂತ್, ಧನುಶ್, ರಾಶಿಕಾ, ಸೂರಜ್, ಕಾವ್ಯಾ, ಅಶ್ವಿನಿ ಅವರುಗಳೆಲ್ಲ ಗಿಲ್ಲಿಯನ್ನು ತಮ್ಮ ಬಿಗ್ಬಾಸ್ ಪಯಣದ ಹಾವು ಎಂದು ಕರೆದರು. ಕಾವ್ಯಾ ಅಂತೂ ಗಿಲ್ಲಿಯಿಂದಾಗಿ ನನಗೆ ಸಾಕಷ್ಟು ಹಿನ್ನಡೆ ಆಗಿದೆ. ಅದರಲ್ಲೂ ನಾನು ಏನು ಮಾಡಬೇಡ ಎನ್ನುತ್ತೀನೋ ಅದನ್ನೇ ಮಾಡುತ್ತಾನೆ. ಇದರಿಂದಾಗಿ ಮನೆ ಮಂದಿಯ ಎದುರು ನಾನು ಟಾರ್ಗೆಟ್ ಆಗುತ್ತೀದ್ದೀನಿ ಎಂದರು. ವಿಶೇಷವೆಂದರೆ ಏಣಿ ಸಹ ಅವರು ಗಿಲ್ಲಿಗೆ ನೀಡಿದರು.
ಇದನ್ನೂ ಓದಿ:ರಜನೀಕಾಂತ್-ಕಮಲ್ ಹಾಸನ್ ಸಿನಿಮಾನಲ್ಲಿ ನಟಿಸಲಿದ್ದಾರೆ ಸಾಯಿ ಪಲ್ಲವಿ?
ಅಶ್ವಿನಿ ಅವರು ಗಿಲ್ಲಿಗೆ ವಿಷಕಾರಿ ಎಂದು ನೀಡಿದ್ದು ಮಾತ್ರವೇ ಅಲ್ಲದೆ, ಗಿಲ್ಲಿ ಬಹಳ ಕುತಂತ್ರಿ ಎಂದೂ ಸಹ ಕರೆದರು. ಇನ್ನು ರಾಶಿಕಾ ಹಾಗೂ ಸೂರಜ್ ಇಬ್ಬರೂ ಸಹ ಗಿಲ್ಲಿಯನ್ನೇ ವಿಷಕಾರಿ ಎಂದು ಕರೆದರು. ಇಬ್ಬರೂ ಸಹ ಗಿಲ್ಲಿ ಆಡುವ ಮಾತುಗಳು ಸರಿಯಾಗಿರುವುದಿಲ್ಲ, ವೈಯಕ್ತಿಕ ವಿಷಯಗಳನ್ನು ಇರಿಸಿಕೊಂಡು ತಮಾಷೆ ಮಾಡುವುದು ಸರಿಯಲ್ಲ ಎಂದು ಇಬ್ಬರೂ ಅಭಿಪ್ರಾಯ ವ್ಯಕ್ತಪಡಿಸಿದರು. ಇನ್ನು ಧನುಶ್ ಸಹ ಇದೇ ವಿಷಯಕ್ಕೆ ಗಿಲ್ಲಿಗೆ ವಿಷಕಾರಿ ನೀಡಿದರು. ರಘು ಮತ್ತು ಧ್ರುವಂತ್ ಸಹ ಗಿಲ್ಲಿಯ ಮಾತುಗಳಿಂದಾಗಿಯೇ ಅವರಿಗೆ ವಿಷಕಾರಿ ನೀಡಿದರು.
ವಿಶೇಷವೆಂದರೆ ರಕ್ಷಿತಾ ಶೆಟ್ಟಿ ಮಾತ್ರ ಗಿಲ್ಲಿಗೆ ಏಣಿ ಕೊಟ್ಟರು. ಮಾತ್ರವಲ್ಲದೇ ಗಿಲ್ಲಿಯಿಂದ ತನಗೆ ಸಹಾಯ ಆಗಿದೆ ಎಂದರು. ಇನ್ನು ಗಿಲ್ಲಿ, ಕಾವ್ಯಾಗೆ ಏಣಿ ಕೊಟ್ಟರು. ಕಾವ್ಯಾ ಇಂದಲೇ ಬಿಗ್ಬಾಸ್ ಮನೆಯಲ್ಲಿ ನಾನು ಈ ವರೆಗೆ ಮುಂದೆ ಬಂದಿದ್ದೀನಿ ಎಂದರು. ಗಿಲ್ಲಿ, ಅಶ್ವಿನಿ ಅವರಿಗೆ ವಿಷಕಾರಿ ನೀಡಿದರು. ಅಶ್ವಿನಿ ಅವರು ಮೊದಲಿನಿಂದಲೂ ನನ್ನನ್ನು ಕೆಳಗೆ ತುಳಿಯಲು ಪ್ರಯತ್ನ ಮಾಡುತ್ತಲೇ ಇದ್ದಾರೆ ಎಂದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ